For Quick Alerts
ALLOW NOTIFICATIONS  
For Daily Alerts

ಪುರುಷರ ಮುಖದ ಅಂದ ಚೆಂದಕ್ಕೆ ಒಂದಿಷ್ಟು ಟಿಪ್ಸ್

By Arshad
|

ಸೌಂದರ್ಯಪಜ್ಞೆ ಇಂದಿನ ಪೀಳಿಗೆಯಲ್ಲಿ ಹಿಂದಿಂದೆಗಿಂತಲೂ ಹೆಚ್ಚಾಗಿದ್ದು ಪುರುಷರಲ್ಲಿಯೂ ಹೆಚ್ಚುತ್ತಿರುವುದು ಕಂಡುಬರುತ್ತಿದೆ. ಮುಖದ ಸೌಂದರ್ಯ ವೃದ್ದಿಸಲು ಪುರುಷರು ಸಾಮಾನ್ಯವಾಗಿ ಹೆಚ್ಚಿನ ಪ್ರಸಾಧನಗಳ ಮೊರೆ ಹೋಗುತ್ತಿರಲಿಲ್ಲ. ಆದರೆ ಇಂದು ಸುಮಾರು ಹತ್ತು ಪ್ರತಿಶತ ಪುರುಷರು ಆಗಾಗ ಮಹಿಳೆಯರಷ್ಟೇ ಮೇಕಪ್ ಮೊರೆ ಹೋಗುತ್ತಿರುವುದು ಕಂಡುಬರುತ್ತಿದೆ. ಹತ್ತರಲ್ಲಿ ಒಬ್ಬರು ಕೂದಲು ನಿವಾರಿಸುವ ಕ್ರೀಮ್, ಮೇಣವನ್ನು ಬಳಸಿದರೆ ಹತ್ತರಲ್ಲಿ ಏಳು ಜನರು ತಮ್ಮ ಪತ್ನಿಯರು ಉಪಯೋಗಿಸುವ ಕೂದಲು ನೇರವಾಗಿಸುವ ಸಲಕರಣೆಯನ್ನು ಬಳಸುತ್ತಾರೆ.

Steps to cover up spots with makeup for men

ಮುಖದ ಮೇಕಪ್‌ನ ಪ್ರಮುಖ ಉದ್ದೇಶವೆಂದರೆ ಮುಖದ ಕಲೆಗಳನ್ನು ಮರೆಮಾಚುವುದು. ಪುರುಷರಿಗೇ ಆಗಲಿ, ಮಹಿಳೆಯರಿಗೇ ಆಗಲಿ, ಈ ಕಲೆಗಳನ್ನು ತೋರ್ಪಡಿಸಿಕೊಳ್ಳಲು ಇಚ್ಛಿಸುವುದಿಲ್ಲ. ಇಂದು ಲಭ್ಯವಿರುವ ಕಂಸೀಲರ್ ಪ್ರಸಾಧನ ಈ ಕಲೆಗಳನ್ನು ಮರೆಮಾಚಲು ಸಮರ್ಥವಾಗಿದ್ದು ಪುರುಷರೂ ಇದನ್ನು ಬಳಸಲು ತೊಡಗುತ್ತಿದ್ದಾರೆ. ಇವುಗಳನ್ನು ಪ್ರಮುಖವಾಗಿ ಮೊಡವೆಗಳ ಕಲೆ, ಮಚ್ಚೆ, ಕಣ್ಣ ಕೆಳಗಿನ ಕಪ್ಪು ವರ್ತುಲಗಳನ್ನು ಮರೆಮಾಚಲು ಬಳಸಲಾಗುತ್ತಿದೆ. ಬ್ಯೂಟಿ ಟಿಪ್ಸ್- ಇದು ಸೌಂದರ್ಯ ಪ್ರಿಯ ಪುರುಷರಿಗೆ ಮಾತ್ರ!

ಕಂಸೀಲರ್ ಎಂದರೆ ಕ್ರೀಮ್ ಅಲ್ಲ, ಬದಲಿಗೆ ಚರ್ಮದ ಮೇಲೆ ಯಾವುದೇ ಪರಿಣಾಮ ಬೀರದ ತಟಸ್ಥ ಲೇಪ. ಇದನ್ನು ಹಚ್ಚಲು ಅತಿ ಸಮರ್ಥವಾದ ವಿಧಾನವೆಂದರೆ ಇದು ಲಭ್ಯವಿರುವ ಕಡ್ಡಿಯೊಂದನ್ನು ಕಲೆಗಳ ಮೇಲೆ ಉರುಳಿಸುತ್ತಾ ಹಚ್ಚುವುದು. ಬಳಿಕ ಕಲೆಯನ್ನು ಮರೆಮಾಚುವಂತೆ ಅಕ್ಕಪಕ್ಕದ ಚರ್ಮದಮೇಲೆ ಈ ಕಡ್ಡಿಯ ತುದಿಯಿಂದ ಉರುಳಾಡಿಸುತ್ತಾ ಮರೆಯಾಗಿಸಿ. ಬಳಿಕ ಬೆರಳಿನಿಂದ ನಯವಾಗಿ ವೃತ್ತಾಕಾರದಲ್ಲಿ ಅಂಚುಗಳನ್ನು ನಯವಾಗಿಸಿ. ಬೆರಳುಗಳನ್ನು ಬಳಸುವುದು ಅಷ್ಟು ಸುಲಭವಲ್ಲ ಅನ್ನಿಸಿದರೆ ಟಿಶ್ಯೂ ಪೇಪರ್ ಒಂದನ್ನು ಸುರುಳಿ ಸುತ್ತಿಯೂ ಬಳಸಬಹುದು.

Steps to cover up spots with makeup for men

ಚರ್ಮದ ವಿಧ ಪುರುಷರಲ್ಲಿಯೂ ಮಹಿಳೆಯರಲ್ಲಿಯೂ ಭಿನ್ನವಾಗಿದೆ. ಅದೇ ಪ್ರಕಾರ ಈ ಕಂಸೀಲರ್‌ಗಳೂ ಭಿನ್ನವಾಗಿರಬೇಕು. ಆದ್ದರಿಂದ ಮಹಿಳೆಯರ ಕಂಸೀಲರ್ ಗಳನ್ನು ಪುರುಷರೂ, ಪುರುಷರ ಕಂಸೀಲರ್ ಗಳನ್ನು ಮಹಿಳೆಯರೂ ಉಪಯೋಗಿಸಬಾರದು. ಬಳಸಿದರೆ ಇದು ಚರ್ಮದ ಮೇಲೆ ಪರಿಣಾಮ ಬೀರಬಹುದು. ಪುರುಷರ ಚರ್ಮದ ಬಗ್ಗೆ ತಜ್ಞರು ಏನು ಸಲಹೆ ನೀಡುತ್ತಾರೆ?

ಬಹುತೇಕ ಪುರುಷರ ಕಂಸೀಲರ್‌ಗಳು ತೈಲಾಧಾರಿತವಾಗಿದ್ದು ಒಂದು ವೇಳೆ ಪುರುಷರಲ್ಲಿ ಪದೇ ಪದೇ ಕಾಡುವ ಮೊಡವೆಗಳ ತೊಂದರೆ ಇದ್ದರೆ ಈ ಕಂಸೀಲರ್ ಗಳು ಒಳ್ಳೆಯದಲ್ಲ, ಇವು ಮೊಡವೆಗಳನ್ನು ಇನ್ನಷ್ಟು ಹೆಚ್ಚಿಸಬಹುದು. ಬದಲಿಗೆ ತೈಲರಹಿತ ಕಂಸೀಲರ್‌ಗಳನ್ನು ಬಳಸಲು ಆದ್ಯತೆ ನೀಡಬೇಕು.

Steps to cover up spots with makeup for men

ತೈಲಾಧಾರಿತ ಕಂಸೀಲರ್‌ಗಳು ಚರ್ಮದ ಸೂಕ್ಷ್ಮ ರಂಧ್ರಗಳನ್ನು ಮುಚ್ಚಿ ಒಳಗಣ ಮೊಡವೆಗಳನ್ನು ಇನ್ನಷ್ಟು ಹೆಚ್ಚು ದೊಡ್ಡದಾಗುವಂತೆ ಮಾಡುತ್ತವೆ. ತೈಲವಿಲ್ಲದ್ದನ್ನು ಆಯ್ಕೆ ಮಾಡಲು ಒಂದು ಸುಲಭ ಕ್ರಮವಿದೆ. ಇದರ ಪರಿಕರಗಳಲ್ಲಿ ಸ್ಯಾಲಿಸಿಲಿಕ್ ಆಮ್ಲ (salicylic acid) ಇದೆಯೇ ನೋಡಿ. ಇದ್ದರೆ ಇದು ತೈಲರಹಿತ ಎಂದು ತಿಳಿದುಕೊಳ್ಳಬಹುದು. ಕ್ಷಣಾರ್ಧದಲ್ಲಿ ಪುರುಷರ ತ್ವಚೆಯ ಕಾಂತಿ ಹೆಚ್ಚಿಸುವ ಬಿಬಿ ಕ್ರೀಮ್!

ಈ ರಾಸಾಯನಿಕ ಸತ್ತ ಜೀವಕೋಶಗಳನ್ನು ಸಡಿಲಿಸಿ ನಿವಾರಿಸಲು ಸಕ್ಷಮವಾಗಿದೆ. ಇದು ಮೊಡವೆಗಳನ್ನು ಗುಣಪಡಿಸಲು ನೆರವಾಗುತ್ತದೆ. ಪ್ರಸ್ತುತ ಮಾರುಕಟ್ಟೆಯಲ್ಲಿ ಪುರುಷರಿಗಾಗಿ ಹದಿನೇಳು ಬಣ್ಣದ ಕಂಸೀಲರ್‌ಗಳು ಲಭ್ಯವಿವೆ. ಕಂಸೀಲರ್‌ಗಳನ್ನು ಹಚ್ಚುವ ಮುನ್ನ ಎರಡು ವಿಷಯಗಳನ್ನು ಅರಿತಿರುವುದು ಅಗತ್ಯವಾಗಿದೆ. ಮೊದಲನೆಯದಾಗಿ ತಕ್ಕನಾದ ಬಣ್ಣವನ್ನು ಆಯ್ದುಕೊಳ್ಳುವುದು. ಇದು ನಿಮ್ಮ ಚರ್ಮದ ಸಹಜವರ್ಣವನ್ನು ಹೋಲಬೇಕು.

Steps to cover up spots with makeup for men

ಇದು ಹೆಚ್ಚು ಕಡಿಮೆಯಾದರೆ ವಿದೂಷಕನಂತೆ ಕಾಣಿಸಬಹುದು. ಎರಡನೆಯದಾಗಿ ಹಚ್ಚಿದ ಬಳಿಕ ಇದನ್ನು ಚರ್ಮದ ಉಳಿದ ಭಾಗದಲ್ಲಿ ಬಣ್ಣ ಬದಲಾಗದಂತೆ ಹರಡಿಸುವುದು. ಇದಕ್ಕೆ ಕೊಂಚ ಕಲೆಗಾರಿಕೆ ಅಗತ್ಯ. ಇಲ್ಲದಿದ್ದರೆ ಹೆಬ್ಬಾವಿನ ಚರ್ಮದ ಮೇಲಿನ ಪಟ್ಟೆಗಳಂತೆ ಕಾಣಬಹುದು.

English summary

Steps to cover up spots with makeup for men

The fact that today's men too use beauty products is well-established. Nearly 10 per cent of men use make-up once in a while. One in ten men had turned to hair removal cream or wax, while seven per cent use their partner's hair straighteners. Concealing facial dark spots is the first step of beauty. Be it man or woman, both want to hide their freckled face. Thanks to the concealer, now men too can wipe off unwanted marks. Men's concealers can be used for acne, scars, mole and dark circles.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more