For Quick Alerts
ALLOW NOTIFICATIONS  
For Daily Alerts

ಶೇವಿಂಗ್ ಮಾಡಿಕೊಳ್ಳುವ ಮುನ್ನ, ಇಂತಹ ತಪ್ಪನ್ನು ಮಾಡದಿರಿ

By Arshad
|

ವಾರಕ್ಕೊಂದು ಬಾರಿ ಶೇವಿಂಗ್, ತಿಂಗಳಿಗೊಂದು ಬಾರಿ ಕಟಿಂಗ್ ಎಂಬ ಕಾಲ ಈಗ ಸರಿದು ಹೋಗಿದೆ. ಇಂದು ಸೌಂದರ್ಯಪ್ರಜ್ಞೆ ಪುರುಷರಲ್ಲಿಯೂ ಹೆಚ್ಚುತ್ತಿದ್ದು ನಿತ್ಯವೂ ಮುಖ ಕ್ಷೌರ ಮಾಡಿಕೊಂಡೇ ಮನೆಯಿಂದ ಹೊರಡುವುದು ಯುವಜನತೆ ಅನುಸರಿಸುತ್ತಿರುವ ನೀತಿಯಾಗಿದೆ. ಆದರೆ ಹಿಂದಿನಂತೆ ಇವರಾರೂ ನಾಪಿತನ ಹಂಗಿಗೆ ಒಳಗಾಗಿ ಕ್ಷೌರದಂಗಡಿಯ ಮುಂದೆ ಕಾಯುತ್ತಾ ಕುಳಿತಿರುವುದಿಲ್ಲ, ಬದಲಿಗೆ ಮಾರುಕಟ್ಟೆಯಲ್ಲಿ ದೊರಕುವ ಉತ್ತಮ ಗುಣಮಟ್ಟದ ರೇಜರ್ ಅಥವಾ ಟ್ರಿಮ್ಮರುಗಳನ್ನೇ ಮನೆಯಲ್ಲಿ ಬಳಸಿ ಹೊರಡುತ್ತಾರೆ.

ಹರಿತ ವಸ್ತುಗಳ ಬಳಕೆಯಾದ ಕಾರಣ ಇದರಿಂದಾಗುವ ಸೂಕ್ಷ್ಮ ಗಾಯ ಮತ್ತು ಗೀರುಗಳಿಂದ ಚರ್ಮವನ್ನು ರಕ್ಷಿಸಲು ಆಫ್ಟರ್ ಶೇವ್ ಲೋಶನ್ ನಂತಹ ದ್ರಾವಣಗಳಿವೆ. ಆಫ್ಟರ್ ಶೇವ್ ಮಿಲ್ಕ್, ಸೂಥಿಂಗ್ ಜೆಲ್ ಎಂಬ ಹೊಸತಾದ ಪ್ರಸಾಧನಗಳೂ ಮಾರುಕಟ್ಟೆಗೆ ಲಗ್ಗೆಯಿಡುತ್ತಿವೆ. ಆದರೆ ಸ್ವಂತವಾಗಿ ಶೇವ್ ಮಾಡುವ ಭರದಲ್ಲಿ ನಾವೆಲ್ಲಾ ಕೆಲವು ಚಿಕ್ಕಪುಟ್ಟ ತಪ್ಪುಗಳನ್ನು ಮಾಡುತ್ತಿದ್ದೇವೆ. ಆದರೆ ಹೆಚ್ಚಾಗಿ ನಾವು ಬೆಳಗ್ಗಿನ ಹೊರಡುವ ಧಾವಂತದಲ್ಲಿ ಇವನ್ನು ಗಮನಿಸುವುದೇ ಇಲ್ಲ. ಇವನ್ನು ನಿರ್ಲಕ್ಷಿಸುವ ಮೂಲಕ ನಿಧಾನವಾಗಿ ಚರ್ಮಕ್ಕೆ ಹಾನಿಯನ್ನುಂಟುಮಾಡಿಕೊಳ್ಳುತ್ತೇವೆ. ಗಡ್ಡ ಬೆಳೆಸಲು ನೀರು-ಗೊಬ್ಬರದ ಅಗತ್ಯವಿಲ್ಲ..!

ಉದಾಹರಣೆಗೆ ಇಂದು ಶೇವ್ ಮಾಡುವ ಸಮಯದಲ್ಲಿಯೇ ಶೇವಿಂಗ್ ಕ್ರೀಂ ನಿನ್ನೆಯೇ ಮುಗಿದು ಹೋಗಿದ್ದು ಹೊಸತು ತರಲು ಮರೆತುಹೋಗಿ ಅನಿವಾರ್ಯವಾಗಿ ಮೈಸೋಪನ್ನೇ ಬಳಸುತ್ತೇವೆ. ಅಥವಾ ಹೊಸ ರೇಜರ್ ತರಲು ಮರೆತು ಹಳೆಯ ಮತ್ತು ಮೊಂಡಾಗಿರುವ ಬ್ಲೇಡ್ ಇರುವ ರೇಜರ್ ಬಳಸಿ ಚರ್ಮಕ್ಕೆ ಗಾಯ ಮಾಡಿಕೊಳ್ಳುತ್ತೇವೆ.

ಇಂತಹ ಚಿಕ್ಕಪುಟ್ಟ ತಪ್ಪುಗಳೇ ಮುಂದೆ ದೊಡ್ಡ ತೊಂದರೆಗೆ ಮೂಲವಾಗುತ್ತವೆ. ಪರಿಣಾಮವಾಗಿ ಗಾಯಗಳಾಗಿದ್ದಲ್ಲಿ ಕಪ್ಪು ಕಲೆಗಳು, ಒಳಮುಖ ಬೆಳೆಯುವ ಕೂದಲು, ಒರಟಾಗುವ ಚರ್ಮ ಮೊದಲಾದ ತೊಂದರೆಗಳು ಎದುರಾಗಬಹುದು. ಒಂದು ವೇಳೆ ಇಂತಹ ತಪ್ಪುಗಳು ನಮಗೆ ಅರಿವಿರದೇ ಆಗುತ್ತಿದ್ದಲ್ಲಿ ಈ ಬಗ್ಗೆ ಸೂಕ್ತ ಎಚ್ಚರಿಕೆ ವಹಿಸಿ ಸರಿಯಾದ ಕ್ರಮ ಅನುಸರಿಸಿದರೆ ಸೌಂದರ್ಯ ಮತ್ತು ಆರೋಗ್ಯವನ್ನು ಬಹುಕಾಲದವರೆಗೆ ಕಾಪಾಡಿಕೊಂಡು ಬರಬಹುದು. ಕೆಳಗಿನ ಸ್ಲೈಡ್ ಶೋ ನಿಮಗೆ ಹಲವು ರೀತಿಯಲ್ಲಿ ನೆರವಾಗಲಿದೆ... ನೈಸರ್ಗಿಕ ಶೇವಿಂಗ್ ಕ್ರೀಮ್ -ಮನೆಯಲ್ಲೇ ತಯಾರಿಸಿಕೊಳ್ಳಿ!

ತಣ್ಣೀರು ಬಳಸುವುದು

ತಣ್ಣೀರು ಬಳಸುವುದು

ಶೇವಿಂಗಿಗೆ ತಣ್ಣೀರು ಬಳಸುವುದು ಸರ್ವಥಾ ಕ್ಷೇಮವಲ್ಲ. ಟ್ರಿಮ್ಮರ್ ಉಪಯೋಗಿಸುವಾಗ ತಣ್ಣೀರು ಸಲ್ಲುವುದಾದರೂ ಶೇವ್ ಮಾಡಿಕೊಳ್ಳುವ ಸಮಯದಲ್ಲಿ ಮಾತ್ರ ಖಂಡಿತಾ ಅಲ್ಲ. ತಣ್ಣೀರಿನಿಂದ ಚರ್ಮದ ಸೂಕ್ಷ್ಮರಂಧ್ರಗಳು ಮುಚ್ಚಿ ಕೂದಲನ್ನು ಹೆಚ್ಚು ಎಳೆದಂತಾಗುತ್ತದೆ. ಮುಂದಿನ ಸ್ಲೈಡ್ ಕ್ಲಿಕ್ ಮಾಡಿ

ತಣ್ಣೀರು ಬಳಸುವುದು

ತಣ್ಣೀರು ಬಳಸುವುದು

ಇದರಿಂದ ಏರುಪೇರಾದ ಶೇವ್ ಹಾಗೂ ಕೂದಲನ್ನು ಎಳೆಯುವ ಕಾರಣ ಕೂದಲ ಬುಡಗಳೂ ಹಾನಿಗೊಳಗಾಗಿ ಚರ್ಮ ಕೆಂಪಗಾಗುತ್ತದೆ. ಆದ್ದರಿಂದ ಕಡ್ಡಾಯವಾಗಿ ಬಿಸಿನೀರನ್ನೇ ಉಪಯೋಗಿಸಬೇಕು. ಇದರಿಂದ ಕೂದಲೂ ಮೃದುವಾಗಿ ಸುಲಭವಾಗಿ ಕತ್ತರಿಸಲ್ಪಡುತ್ತವೆ.

ಬಹುಕಾಲದ ಬಳಿಕ ಶೇವ್ ಮಾಡುವುದು

ಬಹುಕಾಲದ ಬಳಿಕ ಶೇವ್ ಮಾಡುವುದು

ಕೂದಲು ಬೆಳೆಯುವ ವೇಗ ವ್ಯಕ್ತಿಯಿಂದ ವ್ಯಕ್ತಿಗೆ ಕೊಂಚ ವ್ಯತ್ಯಾಸವಿರುತ್ತದೆ. ಕೆಲವರಲ್ಲಿ ಕೆಲವು ಘಂಟೆಗಳಲ್ಲಿಯೇ ಒಂದು ದಿನದ ಗಡ್ಡ ಬೆಳೆದುಬಿಡುತ್ತದೆ. ಇಂತಹವರು ರಾತ್ರಿ ಮಲಗುವ ಮುನ್ನವೂ ಒಂದು ಬಾರಿ ಶೇವ್ ಮಾಡಿ ಮಲಗುವ ಮೂಲಕ ಮರುದಿನ ಮುಂಜಾನೆ ಮತ್ತೊಮ್ಮೆ ಹೆಚ್ಚು ಕಷ್ಟವಿಲ್ಲದೇ ಶೇವ್ ಮಾಡಿಕೊಳ್ಳಬಹುದು. ಉಳಿದವರು ನಿತ್ಯವೂ ಬೆಳಿಗ್ಗೆ ಶೇವ್ ಮಾಡಿಕೊಳ್ಳುವುದು ಉತ್ತಮ.

ಬಹುಕಾಲದ ಬಳಿಕ ಶೇವ್ ಮಾಡುವುದು

ಬಹುಕಾಲದ ಬಳಿಕ ಶೇವ್ ಮಾಡುವುದು

ಆದರೆ ಎರಡು ದಿನಗಳಿಗಿಂತ ಹೆಚ್ಚು ತಡ ಮಾಡಕೂಡದು. ಇನ್ನೊಂದು ಕಡೆ ಒಂದು ಸಂಶೋಧನೆ ರಾತ್ರಿ ಮಲಗುವ ಮುನ್ನ ಶೇವ್ ಮಾಡಿಕೊಳ್ಳುವ ಮೂಲಕ ಬೆಳಿಗ್ಗೆಗಿಂತಲೂ ಉತ್ತಮ ಶೇವ್ ಪಡೆಯಬಹುದು ಎಂದು ಹೇಳುತ್ತದೆ. ಕೂದಲು ಬೆಳೆಯುವ ವೇಗವನ್ನು ಅನುಸರಿಸಿ ತಮಗೆ ಸೂಕ್ತವಾದ ವಿಧಾನವನ್ನು ಅನುಸರಿಸಬೇಕು.

ರೇಜರನ್ನು ನೀರಿನಲ್ಲಿ ತೊಳೆಯದೇ ಇರುವುದು

ರೇಜರನ್ನು ನೀರಿನಲ್ಲಿ ತೊಳೆಯದೇ ಇರುವುದು

ರೇಜರನ್ನು ಚರ್ಮಕ್ಕೆ ತಾಗಿಸುವ ಮೊದಲು ಹರಿಯುವ ಬಿಸಿನೀರಿಗೆ ಒಡ್ಡಿ ಸ್ವಚ್ಛಗೊಳಿಸುವುದು ಅಗತ್ಯ. ಅಂತೆಯೇ ಶೇವ್ ಪ್ರಾರಂಭಿಸಿದ ಬಳಿಕ ಹೆಚ್ಚಿನವರು ಒಂದೇ ಓಟದಲ್ಲಿ ಇಡಿಯ ಮುಖವನ್ನೇ ಹೆರೆದುಕೊಂಡು ಬಿಡುತ್ತಾರೆ. ಇದು ಅತ್ಯಂತ ದೊಡ್ಡ ತಪ್ಪು.

ರೇಜರನ್ನು ನೀರಿನಲ್ಲಿ ತೊಳೆಯದೇ ಇರುವುದು

ರೇಜರನ್ನು ನೀರಿನಲ್ಲಿ ತೊಳೆಯದೇ ಇರುವುದು

ಒಂದು ಭಾಗವನ್ನು ಹೆರೆದ ಬಳಿಕ ನೀರಿನಲ್ಲಿ ತೋಯಿಸಿ ಅಥವಾ ಹರಿಯುವ ನೀರಿನಲ್ಲಿ ಕೂದಲನ್ನು ನಿವಾರಿಸಿ ಮುಂದುವರೆಯಬೇಕು ಇದರಿಂದ ಬ್ಲೇಡ್ ನಲ್ಲಿ ಹೆಚ್ಚಿನ ಕೂದಲಿನ ಸಾಂದ್ರತೆಯಾಗುವುದು ತಪ್ಪುತ್ತದೆ. ಹೆಚ್ಚಿನ ಸಾಂದ್ರತೆ ಇದ್ದರೆ ಶೇವ್ ಗೆ ಹೆಚ್ಚಿನ ಒತ್ತಡ ಅಗತ್ಯ ಬಿದ್ದು ಈ ಒತ್ತಡ ಚರ್ಮಕ್ಕೆ ಹಾನಿಯುಂಟುಮಾಡುತ್ತದೆ.

ಹೆಚ್ಚಿನ ಒತ್ತಡ ಬಳಸುವುದು

ಹೆಚ್ಚಿನ ಒತ್ತಡ ಬಳಸುವುದು

ಉತ್ತಮ ಶೇವ್ ಬೇಕೆಂದು ಕೆಲವರು ಚರ್ಮಕ್ಕೆ ಹೆಚ್ಚಿನ ಒತ್ತಡದಲ್ಲಿ ರೇಜರನ್ನು ಒತ್ತುತ್ತಾರೆ. ಆದರೆ ಇದರಿಂದ ಚರ್ಮವೇ ಹೆಚ್ಚು ಘಾಸಿಗೊಳಗಾಗುತ್ತದೆ. ಸೂಕ್ಷ್ಮ ಗೀರು, ಗಾಯ, ಚಿಕ್ಕ ಮೊಡವೆ ಅಥವಾ ಗುಳ್ಳೆಗಳಿದ್ದರೆ ಇವು ಬುಡಸಹಿತ ಕಿತ್ತು ರಕ್ತ ಬರುತ್ತದೆ. ಆದ್ದರಿಂದ ರೇಜರನ್ನು ಕೊಂಚವೇ ಒತ್ತಡದಿಂದ ಒತ್ತಿದರೆ ಸಾಕಾಗುತ್ತದೆ. ಅಲ್ಲದೇ ಶೇವಿಂಗ್ ಕ್ರೀಂ ಕೂದಲನ್ನು ಮೃದುಗೊಳಿಸಿರುವ ಕಾರಣ ಹೆಚ್ಚಿನ ಒತ್ತಡದ ಅಗತ್ಯವೇ ಇಲ್ಲದೇ ಸ್ವಲ್ಪವೇ ಸ್ವಲ್ಪ ಚರ್ಮದಿಂದ ಹೊರಸೆಳೆದು ಬುಡದವರೆಗೆ ಕತ್ತರಿಸಲು ಸಾಧ್ಯವಾಗುತ್ತದೆ.

ಶೇವ್ ಬಳಿಕ ಹಾಗೇ ಓಡುವುದು

ಶೇವ್ ಬಳಿಕ ಹಾಗೇ ಓಡುವುದು

ಹೆಚ್ಚಿನವರು ಮಾಡುವ ಸಾಮಾನ್ಯ ತಪ್ಪು ಇದು. ಶೇವ್ ಮುಗಿದ ಬಳಿಕ ಚರ್ಮಕ್ಕೆ ಆಫ್ಟರ್ ಶೇವ್ ಲೋಷನ್ ಅಥವಾ ಇತರ ತೇವಕಾರಕ ಮತ್ತು ಗಾಯಗಳನ್ನು ಮಾಗಿಸುವ ಔಷಧೀಯ ಗುಣ ಇರುವ ಪ್ರಸಾಧನಗಳನ್ನು ಖಂಡಿತಾ ಹಚ್ಚಿಕೊಳ್ಳಬೇಕು. ಏಕೆಂದರೆ ಎಷ್ಟೇ ನಾಜೂಕಾಗಿ ಶೇವ್ ಮಾಡಿಕೊಂಡರೂ ಸೂಕ್ಷ್ಮವಾಗಿ ಚರ್ಮದ ಮೇಲ್ಪದರದ ಕೆಲವು ಜೀವಕೋಶಗಳನ್ನೂ ಬ್ಲೇಡ್ ಕಿತ್ತಿರುತ್ತದೆ. ಇವು ಪುನಃ ಬೆಳೆಯಲು ತೇವ ಮತ್ತು ಔಷಧಿ ಅಗತ್ಯವಾಗಿದೆ. ಇದನ್ನು ಅನುಸರಿಸದಿದ್ದರೆ ಚರ್ಮದಲ್ಲಿ ಗೀರು, ಗಾಯ, ಕಲೆ ಮೊದಲಾದವು ಎದುರಾಗಬಹುದು

ಒಂದೇ ರೇಜರ್ ನಲ್ಲಿ ಬಹಳ ಹೆಚ್ಚು ಶೇವ್ ಮಾಡುವುದು

ಒಂದೇ ರೇಜರ್ ನಲ್ಲಿ ಬಹಳ ಹೆಚ್ಚು ಶೇವ್ ಮಾಡುವುದು

ಪ್ರತಿ ರೇಜರನ್ನು ಗರಿಷ್ಟ ಎಷ್ಟು ಬಾರಿ ಬಳಸಬಹುದು ಎಂಬುದನ್ನು ತಯಾರಕರು ಶಿಫಾರಸ್ಸು ಮಾಡಿರುತ್ತಾರೆ. ಇದಕ್ಕೆ ಸರಿಯಾದ ಸಂಖ್ಯೆಯಲ್ಲಿ ಶೇವ್ ಮಾಡಿ ಮುಗಿಸಿದ ಬಳಿಕ ಇದನ್ನು ತ್ಯಜಿಸಿ ಹೊಸತನ್ನು ಬಳಸಲು ಪ್ರಾರಂಭಿಸಬೇಕು. ನನ್ನದು ಸೌಮ್ಯ ಗಡ್ಡ, ಇನ್ನೂ ನಾಲ್ಕಾರು ಶೇವ್ ಮಾಡಬಹುದು ಎಂಬೆಲ್ಲಾ ಉಢಾಪೆಯ ಉತ್ತರ ಬೇಡ.

Read more about: beauty tips
English summary

Shaving Mistakes That You’re Making Unknowingly

When it comes to shaving, we often think about using the best razor or a good trimmer. The accessories and after-shave lotions are somethings that we mostly concentrate on. In this article, we are here to share some of the shaving mistakes that you have been doing often and not realising it. These mistakes generally go unnoticed but can often have a negative impact on your skin.
X
Desktop Bottom Promotion