For Quick Alerts
ALLOW NOTIFICATIONS  
For Daily Alerts

ಗಡ್ಡ ಬೆಳೆಸಲು ನೀರು-ಗೊಬ್ಬರದ ಅಗತ್ಯವಿಲ್ಲ..!

|

ಗಂಡಸರಿಗೆ ಸೌಂದರ್ಯದ ಬಗ್ಗೆ ಸಲಹೆಗಳು ಕೊಡಲು ಏನಿರುತ್ತದೆ. ಅವರ ಸೌಂದರ್ಯದ ಬಗ್ಗೆ ಹೆಚ್ಚಿನ ಸಲಹೆಗಳನ್ನು ನೀಡಲು ಆಗುವುದಿಲ್ಲ ಎಂದು ಕಾಲೆಳೆಯುವ ಮಾತುಗಳನ್ನು ನೀವು ಕೇಳಿಯೇ ಇರುತ್ತೀರಿ. ತಡೆಯಿರಿ ಸ್ವಾಮಿ ಗಂಡಸರು ಸಹ ಸುರಸುಂದರಾಂಗರೇ. ಅವರಿಗು ಸಹ ಸೌಂದರ್ಯ ಪ್ರಜ್ಞೆ ಇರುತ್ತದೆ. ಅವರು ಸಹ ತಮಗೆ ಸಿಕ್ಕುವ ಅವಕಾಶಗಳಲ್ಲಿ ಸೌಂದರ್ಯವನ್ನು ಇಮ್ಮಡಿಗೊಳಿಸಬೇಕು ಎಂದು ಬಯಸುತ್ತಾರೆ. ಬನ್ನಿ ಅಂತಹ ಗಂಡಸರಿಗಾಗಿ ನಮ್ಮ ಕೆಲವೊಂದು ಸಲಹೆಗಳು. ಅದರಲ್ಲಿ ನಾವು ಇಂದು ಗಂಡಸರ ಆ ಸುಂದರವಾದ ಗಡ್ಡವನ್ನು ಬೇಗ ಬೆಳೆಸಿಕೊಳ್ಳಲು ಬೇಕಾದ ಸಲಹೆಗಳನ್ನು ನೀಡುತ್ತೇವೆ. ಫ್ಯಾಷನ್ ಬದಲಾಗಿದೆ, ಇನ್ನು ಎರ್ರಾಬಿರ್ರಿ ಗಡ್ಡ ಬೆಳೆಸಿಕೊಳ್ಳಬೇಡಿ!

ಗಡ್ಡವು ಗಂಡಸರ ಒಂದು ಹೆಮ್ಮೆಯ ಸಂಕೇತ, ಹಲವಾರು ಮಹನೀಯರು ತಮ್ಮ ಗಡ್ಡಗಳಿಂದಲೆ ಗುರುತಿಸಲ್ಪಡುತ್ತಿದ್ದರು. ಇದು ನಿಮಗೆ ಒಳ್ಳೆಯ ಲುಕ್ ಜೊತೆಗೆ ಅದ್ಭುತವಾದ ಐಡೆಂಟಿಟಿಯನ್ನು ಸಹ ಕೊಡುತ್ತದೆ. ನಿಮಗೆ ಇದ್ದಕ್ಕಿದ್ದಂತೆ ಗಡ್ಡ ಬೆಳೆಸುವ ಕುರಿತು ಆಸಕ್ತಿ ಮೂಡಿದರೆ, ಅದಕ್ಕಾಗಿ ಸಹಾಯ ಮಾಡಲು ನಾವಿದ್ದೇವೆ. ಬನ್ನಿ ಗಡ್ಡವನ್ನು ಬೇಗ ಬೆಳೆಸಲು ಬೇಕಾಗಿರುವ ಸಲಹೆಗಳು ಯಾವುದು ಎಂದು ತಿಳಿದುಕೊಂಡು ಬರೋಣ...

ಸಲಹೆ #1

ಸಲಹೆ #1

ವಾರಕ್ಕೊಮ್ಮೆ ನಿಮ್ಮ ತ್ವಚೆಯನ್ನು ಎಕ್ಸ್‌ಫೋಲಿಯೇಟ್ ಮಾಡಿ. ಇದು ನಿಮ್ಮ ಮುಖದಲ್ಲಿರುವ ನಿರ್ಜೀವ ಕೋಶಗಳನ್ನು ತೆಗೆದುಹಾಕಿ, ಗಡ್ಡವು ಬೇಗ ಬೆಳೆಯಲು ಸಹಾಯ ಮಾಡುತ್ತದೆ.

 ಸಲಹೆ #2

ಸಲಹೆ #2

ಒಂದು ಮೆದುವಾದ ಕ್ಲೀನ್ಸರ್ ಮತ್ತು ಬೆಚ್ಚಗಿನ ಜೊತೆಗೆ ನಿಮ್ಮ ತ್ವಚೆಯನ್ನು ದಿನಕ್ಕೆ ಎರಡು ಬಾರಿ ತೊಳೆಯಿರಿ. ಇದು ನಿಮ್ಮ ಮುಖದಲ್ಲಿ ಕೂದಲು ಬೇಗ ಬೆಳೆಯಲು ಸಹಾಯ ಮಾಡುತ್ತದೆ.

ಸಲಹೆ #3

ಸಲಹೆ #3

ನೀಲಗಿರಿಯು ಗಡ್ಡವನ್ನು ಬೆಳೆಯಲು ಸಹಾಯ ಮಾಡುತ್ತದೆ. ನೀಲಗಿರಿ ತೈಲವಿರುವ ಒಂದು ಮಾಯಿಶ್ಚರೈಸರ್ ಅನ್ನು ಬಳಸಿ. ಇದು ನಿಮ್ಮ ಮುಖದಲ್ಲಿ ಗಡ್ಡವು ಶೀಘ್ರವಾಗಿ ಬೆಳೆಯಲು ಸಹಕರಿಸುತ್ತದೆ.

ಸಲಹೆ #4

ಸಲಹೆ #4

ಗಡ್ಡವು ಚೆನ್ನಾಗಿ ಬೆಳೆಯಬೇಕೆಂದರೆ ನೀವು ಚೆನ್ನಾಗಿ ನಿದ್ದೆ ಮಾಡಬೇಕು. ನಿದ್ದೆಯು ನಿಮ್ಮ ಗಡ್ಡವಷ್ಟೆ ಅಲ್ಲ, ಇಡೀ ದೇಹ ಸುಸ್ಥಿತಿಯಲ್ಲಿರಲು ಸಹಾಯ ಮಾಡುತ್ತದೆ. ಹಾಗಾಗಿ ಚೆನ್ನಾಗಿ, ನಿಶ್ಚಿಂತೆಯಿಂದ ನಿದ್ದೆ ಮಾಡಿ.

ಸಲಹೆ #5

ಸಲಹೆ #5

ಕೆಲವೊಂದು ವಿಟಮಿನ್‌ಗಳು ಮತ್ತು ಖನಿಜಾಂಶಗಳು ಮುಖದಲ್ಲಿ ಗಡ್ಡವನ್ನು ಬೇಗ ಬೆಳೆಸಲು ಸಹಾಯ ಮಾಡುತ್ತವೆ. ಅದಕ್ಕಾಗಿ ನಿಮ್ಮ ಆಹಾರದಲ್ಲಿ ವಿಟಮಿನ್ ಎ,ಬಿ,ಸಿ ಮತ್ತು ಇ ಯನ್ನು ಸೇರಿಸಲು ಮರೆಯಬೇಡಿ. ಈ ವಿಟಮಿನ್‌ಗಳು ಕೂದಲು ಬೆಳೆಯಲು ಸಹಾಯ ಮಾಡುತ್ತವೆ.

ಸಲಹೆ #6

ಸಲಹೆ #6

ಬೆಳೆಯುವ ಕೂದಲುಗಳ ಮೇಲೆ ನಿಗಾ ಇರಿಸಿ; ಗಡ್ಡವು ಎಂದಿಗೂ ಸಮಪ್ರಮಾಣದಲ್ಲಿ, ಸುಂದರವಾಗಿ ಬೆಳೆಯುವುದಿಲ್ಲ. ಅದಕ್ಕಾಗಿ ಬೆಳೆಯುವ ಗಡ್ಡವನ್ನು ಸರಿಯಾದ ರೀತಿ ಬೆಳೆಯುತ್ತಿವೆ ಎಂದು ಪರಿಶೀಲಿಸಿ.

ಸಲಹೆ #7

ಸಲಹೆ #7

ಪ್ರತಿದಿನ 2.5 ಮಿ.ಗ್ರಾಂ ಬಯೋಟೀನ್ ಅನ್ನು ಸೇವಿಸಿ. ಇದು ನಿಮ್ಮ ಗಡ್ಡವು ಬೇಗ ಬೆಳೆಯಲು ಸಹಾಯ ಮಾಡುತ್ತದೆ.

ಸಲಹೆ #8

ಸಲಹೆ #8

ಗಡ್ಡಗಳು ನೀವು ವಿಶ್ರಾಂತ ಮನಸ್ಥಿತಿಯನ್ನು ಹೊಂದಿರುವಾಗ ಬೇಗ ಬೆಳೆಯುತ್ತವೆ. ಆದ್ದರಿಂದ ಒತ್ತಡಕ್ಕೆ ಒಳಗಾಗದೆ ಆರಾಮವಾಗಿ ಇರಿ, ಆಗ ಗಡ್ಡ ಬೇಗ ಬೆಳೆಯುತ್ತದೆ. ಇದಕ್ಕಾಗಿ ಯೋಗ ಮತ್ತು ಧ್ಯಾನವನ್ನು ಮಾಡಿ.

ಸಲಹೆ #9

ಸಲಹೆ #9

ನಿಮ್ಮ ಆಹಾರದಲ್ಲಿ ಪ್ರೋಟಿನ್ ಅನ್ನು ಹೆಚ್ಚಾಗಿ ಸೇವಿಸುವುದರಿಂದ ಸಹ ನಿಮ್ಮ ಗಡ್ಡವನ್ನು ಬೇಗ ಬೆಳೆಸಬಹುದು. ಅದಕ್ಕಾಗಿ ಮಾಂಸ, ಮೊಟ್ಟೆ, ಮೀನು ಮತ್ತು ಒಣಹಣ್ಣುಗಳನ್ನು ಹೆಚ್ಚಾಗಿ ಸೇವಿಸಿ. ಇವು ನಿಮ್ಮ ಗಡ್ಡಕ್ಕೆ ಅಗತ್ಯವಾದ ಪೋಷಣೆಯನ್ನು ನೀಡುತ್ತವೆ.

ಸಲಹೆ #10

ಸಲಹೆ #10

ನಿಯಮಿತವಾಗಿ ಆಕಾರ ನೀಡುವುದು ಅಥವಾ ಟ್ರಿಮ್ ಮಾಡುವುದು ಒಳ್ಳೆಯದಲ್ಲ. ಆರು ವಾರಕ್ಕೊಮ್ಮೆ ನಿಮ್ಮ ಗಡ್ಡವನ್ನು ಟ್ರಿಮ್ ಮಾಡಿ ಸಾಕು. ಇದರಿಂದ ನಿಮ್ಮ ಗಡ್ಡ ಚೆನ್ನಾಗಿ ಬೆಳೆಯಲು ಕಾಲಾವಕಾಶ ದೊರೆಯುತ್ತದೆ.

ಸಲಹೆ #11

ಸಲಹೆ #11

ಮುಖಕ್ಕೆ ಮಾಡುವ ಮಸಾಜ್ ನಿಮ್ಮ ಮುಖದಲ್ಲಿ ರಕ್ತ ಸಂಚಾರವನ್ನು ಹೆಚ್ಚಿಸುತ್ತದೆ. ಹಾಗು ಇದರಿಂದ ನಿಮ್ಮ ಗಡ್ಡವು ಚೆನ್ನಾಗಿ ಮತ್ತು ಬೇಗ ಬೆಳೆಯುತ್ತದೆ.

ಸಲಹೆ #12

ಸಲಹೆ #12

ಇನ್ನೂ ಒಂದು ಸಲಹೆ ಇದೆ, ಪ್ರತಿದಿನ ಶೇವ್ ಮಾಡಿದರೆ ನಿಮ್ಮ ಮುಖದಲ್ಲಿ ಗಡ್ಡ ಬೇಗ ಬೆಳೆಯುತ್ತದೆ ಎಂದು ಹೇಳಲಾಗುತ್ತದೆ. ಆದರೆ ಇದು ಮೂಡನಂಬಿಕೆ, ಇದಕ್ಕೆ ಯಾವುದೆ ವೈಜ್ಞಾನಿಕ ಹಿನ್ನೆಲೆ ಇಲ್ಲ. ಹಾಗೆ ಮಾಡಲು ಹೋಗಬೇಡಿ.

ಸಲಹೆ #13

ಸಲಹೆ #13

ಗಡ್ಡವನ್ನು ಬೆಳೆಸಲು ಆರಂಭಿಸಿದಾಗ ಮೊದ ಮೊದಲು ಒಂದು ವೇಳೆ ನಿಮಗೆ ತುರಿಕೆ ಅಥವಾ ಗುಳ್ಳೆಗಳು ಕಂಡುಬಂದಲ್ಲಿ, ಅದಕ್ಕೆ ಹೈಡ್ರೊಕಾರ್ಟಿಸೋನ್ ಕ್ರೀಮನ್ನು ಹಚ್ಚಿಕೊಳ್ಳಿ. ಇದರಿಂದ ನಿಮಗೆ ಆರಾಮ ಸಿಗುತ್ತದೆ.

ಸಲಹೆ #14

ಸಲಹೆ #14

ಆಮ್ಲಾ ಎಣ್ಣೆಯು ಗಡ್ಡವನ್ನು ಬೆಳೆಸಲು ಹೇಳಿ ಮಾಡಿಸಿದ ಎಣ್ಣೆಯಾಗಿರುತ್ತದೆ. ಆಮ್ಲಾ ಎಣ್ಣೆಯಿಂದ ನಿಮ್ಮ ಮುಖವನ್ನು ಮಸಾಜ್ ಮಾಡಿಕೊಂಡು 15-20 ನಿಮಿಷಗಳ ಕಾಲ ಬಿಡಿ. ನಂತರ ನಿಮ್ಮ ಮುಖವನ್ನು ತಣ್ಣೀರಿನಿಂದ ತೊಳೆಯಿರಿ.

English summary

Natural Ways To Make Your Beard Grow Faster

For men, beards stand for masculinity, so a fully grown mustache and beard is a source of great pride. That is probably why 'grow beard faster' is one of the most popular search phrases on Google. We try and decode facial hair growth and list some ways to make your beard grow faster, naturally.
X
Desktop Bottom Promotion