For Quick Alerts
ALLOW NOTIFICATIONS  
For Daily Alerts

ಶೇವಿಂಗ್ ಬಳಿಕ ಕಾಡುವ ತ್ವಚೆಯ ಸಮಸ್ಯೆಗೆ ಏನು ಮಾಡಲಿ?

|

ಹುಡುಗಿಯರಿಗೆ ಮೇಕಪ್ ಎಷ್ಟು ಅಗತ್ಯವೋ ಅಂತೆಯೇ ಹುಡುಗರಿಗೆ ಕೂಡ ಶೇವಿಂಗ್ ಅಷ್ಟೇ ಪ್ರಾಮುಖ್ಯತೆಯನ್ನು ಹೊಂದಿದೆ. ಪುರುಷರ ಮುಖ ಆಕರ್ಷಕವಾಗಿ ಕಾಣಲು ನೀಟಾಗಿ ಶೇವ್ ಮಾಡಿರಬೇಕು, ಯಾವುದೇ ಮೀಟಿಂಗ್ ಅಥವಾ ಡೇಟಿಂಗ್ ಆಗಿರಲಿ, ಆಫೀಸ್‌, ಸಮಾರಂಭ ಯಾವುದೇ ಇರಲಿ ಆತ 3- 4 ದಿನಗಳವರೆಗೆ ನೀಟಾಗಿ ಶೇವ್ ಮಾಡಿಕೊಂಡಿಲ್ಲದಿದ್ದರೆ ಜಂಟಲ್ ಮ್ಯಾನ್ ಆಗಿ ಕಾಣಿಸಿಕೊಳ್ಳುವುದು ತುಂಬಾ ಮುಖ್ಯ ಪುರುಷರ ಮುಖ ಆಕರ್ಷಕವಾಗಿ ಕಾಣಲು ನೀಟಾಗಿ ಶೇವ್ ಮಾಡಿರಬೇಕು.

ಆದರೆ ಈ ಶೇವಿಂಗ್ ಬಗ್ಗೆ ಎರಡು ಅಭಿಪ್ರಾಯಗಳಿವೆ. ಪ್ರತಿದಿನ ಶೇವ್ ಮಾಡಿದರೆ ಒಳ್ಳೆಯದು ಎಂದು ಕೆಲವರು ಹೇಳಿದರೆ, ಇನ್ನು ಕೆಲವರು ಪ್ರತಿದಿನ ಶೇವ್ ಮಾಡಿದರೆ ಮುಖ ತುಂಬಾ ಒರಟಾಗುತ್ತದೆ ಹಾಗೂ ತ್ವಚೆಗೆ ಅಷ್ಟು ಒಳ್ಳೆಯದಲ್ಲ ಎನ್ನುವ ಅಭಿಪ್ರಾಯ ಹೇಳುತ್ತಾರೆ. ಆದರೆ ಕೆಲವೊಮ್ಮೆ ಶೇವಿಂಗ್ ನಂತರ ಎಷ್ಟೇ ಜಾಗೃತೆ ವಹಿಸಿ ಅಥವಾ ಇದಕ್ಕೆ ತಯಾರಿ ನಡೆಸಿದರೂ ನಿಮ್ಮ ಕಣ್ಣಿಗೆ ಕಾಣದಂತಹ ಕೆಲವೊಂದು ಗಾಯ, ಗೆರೆಗಳು, ಮೊಡವೆ, ತ್ವಚೆಯ ಸಮಸ್ಯೆ ಇದ್ದೇ ಇರುತ್ತದೆ. ಬನ್ನಿ ಶೇವಿಂಗ್ ನಂತರ ಕಂಡುಬರುವ ಇಂತಹ ಸಮಸ್ಯೆಗಳಿಗೆ ಹಾಗೂ ಮುನ್ನೆಚ್ಚರಿಕೆ ಕ್ರಮಗಳೇನು ಎಂಬುದನ್ನು ನೋಡೋಣ.... ಇಷ್ಟಪಟ್ಟು ಬಲು ಕಷ್ಟದಿ೦ದ ಬೆಳೆಸಿಕೊ೦ಡ ಗಡ್ಡದ ಆರೈಕೆ ಹೇಗಿರಬೇಕು?

Tips for Men’s shaving Problems and Solutions

ರೇಜರ್ ಬಳಕೆ
ಹಲವಾರು ಜನರು ಎಲೆಕ್ಟ್ರಿಕ್ ರೇಜರ್ ಅನ್ನು ಬಳಸುವುದು ಸಾಮಾನ್ಯ, ಇದು ಸಮಯವನ್ನು ಉಳಿಸಿಸುವುದರೊಂದಿಗೆ, ಸುಲಭದಾಯಕವಾಗಿದೆ. ಒಂದು ವೇಳೆ ನೀವು ಎಲೆಕ್ಟ್ರಿಕ್ ರೇಜರ್ ಅನ್ನು ಬಳಸುತ್ತಿದ್ದರೆ, 2-3 ದಿನಗಳ ಶೇವಿಂಗ್‌ ನಂತರ ಬ್ಲೇಡ್ ಅನ್ನು ಬದಲಾಯಿಸುತ್ತಿರುವಿರಿ ಎಂಬುದನ್ನು ಖಚಿತಪಡಿಸಿಕೊಳ್ಳಿ. ಅದಾಗಿಯೂ, ನಿಮ್ಮ ತ್ವಚೆಯ ಚರ್ಮದ ದೃಷ್ಟಿಯಿಂದ ಪ್ರತಿಯೊಂದು ಶೇವಿಂಗ್‌ಗೆ ಕೂಡ ಬ್ಲೇಡ್ ಅನ್ನು ಬದಲಾಯಿಸುವುದು ಸೂಕ್ತದಾಯಕ.

ಸ್ವಚ್ಛತೆ
ಉತ್ತಮ ಗುಣಮಟ್ಟದ ಶೇವಿಂಗ್ ರೇಜರ್ ಅನ್ನು ಬಳಸುವುದನ್ನು ಮರೆಯಬೇಡಿ. ಸಾಮಾನ್ಯವಾಗಿ ರೇಜರ್ ಅನ್ನು 4-5 ದಿನಗಳ ಶೇವಿಂಗ್‌‌ಗೆ ಮಾತ್ರ ಬಳಸಿ. ಒಮ್ಮೆ ಶೇವಿಂಗ್ ಮಾಡಿದ ನಂತರ ರೇಜರ್ ಅನ್ನು ಚೆನ್ನಾಗಿ ಸ್ಚಚ್ಛಗೊಳಿಸುವುದನ್ನು ಮರೆಯಬೇಡಿ.

ಸೋಪ್ ಅನ್ನು ಬಳಸಬೇಡಿ
ಸಾಬೂನನ್ನು ಎ೦ದಿಗೂ ಬಳಸಿಕೊಳ್ಳಬೇಡಿರಿ ಗಡ್ಡದ ಮೇಲೆ ಸಾಬೂನನ್ನು ಬಳಸಿದಲ್ಲಿ, ನಿಮ್ಮ ಮುಖದ ಮೇಲಿನ ತ್ವಚೆಯು ಶುಷ್ಕವಾಗುತ್ತದೆ ಹಾಗೂ ತನ್ಮೂಲಕ ಅದು ನಿಮ್ಮ ಗಡ್ಡವು ಕತ್ತರಿಸಲ್ಪಟ್ಟು ಉದುರಿಹೋಗಲು ಕಾರಣವಾಗುತ್ತದೆ. ಸಾಬೂನುಗಳು ಗಡ್ಡದ೦ತಹ ಮೈಮೇಲಿನ ನಾಜೂಕಾದ ಭಾಗಗಳ ವಿಚಾರದಲ್ಲಿ ಗಡಸಾಗಿರುತ್ತವೆ. ಆದ್ದರಿ೦ದ, ಶೇವಿಂಗ್ ಮಾಡಿಕೊಳ್ಳುವಾಗ ಶೇವ್ ಮಾಡುವ ಕ್ರೀಮ್ ಮಾತ್ರವೇ ಬಳಸಿಕೊಳ್ಳಿರಿ. ಗಡ್ಡದ ಕುರಿತ ಕಾಳಜಿಗೆ ಸ೦ಬ೦ಧಿಸಿದ೦ತಹ ಅತೀ ಮಹತ್ವದ ಸಲಹೆಗಳ ಪೈಕಿ ಇದೂ ಸಹ ಒ೦ದು

ಐಸ್ ಕ್ಯೂಬ್‌
ಶೇವಿಂಗ್ ಮಾಡಿದ ನಂತರ ಮುಖಕ್ಕೆ ಐಸ್ ಕ್ಯೂಬ್‌ನಿಂದ ಉಜ್ಜುವುದನ್ನು ಮರೆಯದಿರಿ. ಇದು ಸರಳ ಮೆನೆಮದ್ದು ಆಗಿದ್ದು, ಶೇವಿಂಗ್ ನಂತರ ಕಂಡುಬರುವ ಮೊಡವೆಗಳಿಂದ ಸೂಕ್ತ ಪರಿಹಾರ ದೊರೆಯಲಿದೆ, ಜೊತೆಗೆ ಶೇವಿಂಗ್ ಮಾಡಿದ ನಂತರ ಮುಖಕ್ಕೆ ಐಸ್ ಕ್ಯೂಬ್‌ನಿಂದ ಉಜ್ಜುವುದರಿಂದ ಶೇವಿಂಗ್ ನಂತರ ಕಂಡುಬರುವ ಗಾಯ, ಕೆಂಪು ಉಬ್ಬುಗಳು ಕೂಡ ಶಮನಗೊಳ್ಳುತ್ತವೆ.

ಜೇನು ತುಪ್ಪ ಹಚ್ಚಿ
ಶೇವಿಂಗ್ ಬಳಿಕ ನಿಮ್ಮ ಮುಖಕ್ಕೆ ಜೇನನ್ನು ಹಚ್ಚಿ ಮತ್ತು 20-30 ನಿಮಿಷ ಹಾಗೆ ಬಿಟ್ಟು ಬಳಿಕ ಬಿಸಿ ನೀರಿನಲ್ಲಿ ಅದನ್ನು ತೊಳೆಯಿರಿ. ಇದರ ಬಳಿಕ ಮುಖಕ್ಕೆ ತಂಪು ನೀರನ್ನು ಹಾಕಿದರೆ ಮುಖದ ಚರ್ಮಕ್ಕೆ ಪೋಷಕಾಂಶಗಳು ಸಿಗುತ್ತದೆ.

ಅರಿಶಿನ ಮಾಸ್ಕ್
ಅರಿಶಿನ ಮಾಸ್ಕ್ ನೈಸರ್ಗಿಕ ಆ್ಯಂಟಿಸೆಪ್ಟಿಕ್ ಗುಣ ಹೊಂದಿರುವ ಅರಿಶಿನವನ್ನು ಭಾರತದಲ್ಲಿ ಶತಮಾನಗಳಿಂದ ಔಷಧಿ ಹಾಗೂ ಅಡುಗೆಯಲ್ಲಿ ಬಳಸುತ್ತಾರೆ. ಕಡಲೆ ಹಿಟ್ಟು, ಬಾದಾಮಿ ಎಣ್ಣೆಯೊಂದಿಗೆ ಅರಿಶಿನದ ಪೇಸ್ಟ್ ನ್ನು ಮುಖಕ್ಕೆ ಹಚ್ಚಿಕೊಳ್ಳುವುದರಿಂದ ಶೇವಿಂಗ್ ವೇಳೆ ಆಗಿರುವ ಎಲ್ಲಾ ಗಾಯಗಳು ಮಾಯವಾಗಿ ಮುಖದ ಚರ್ಮಕ್ಕೆ ತೇವಾಂಶ ಮತ್ತು ಆರೈಕೆ ನೀಡುತ್ತದೆ.

English summary

Tips for Men’s shaving Problems and Solutions

Proper wet shaving techniques, quality products and post-shaving skin care can help you look and feel your best and help avoid razor burn, razor bumps and irritation. A good, close shave followed by the right facial wash and after shave moisturizer products go hand in hand to achieve optimum skin health.
Story first published: Saturday, May 16, 2015, 12:24 [IST]
X
Desktop Bottom Promotion