For Quick Alerts
ALLOW NOTIFICATIONS  
For Daily Alerts

ಫ್ಯಾಷನ್ ಬದಲಾಗಿದೆ, ಇನ್ನು ಎರ್ರಾಬಿರ್ರಿ ಗಡ್ಡ ಬೆಳೆಸಿಕೊಳ್ಳಬೇಡಿ!

|

ಒಮ್ಮೆ ಒಬ್ಬ ಹುಡುಗ ಒಂದು ಜೊತೆ ಪಾದರಕ್ಷೆಯನ್ನು ಎತ್ತಿಕೊಂಡು ಓಡುತ್ತಾ ಹೋಗುತ್ತಿದ್ದನಂತೆ. ಅನುಮಾನದಿಂದ ಪೋಲೀಸ್ ಹಿಡಿದು ವಿಚಾರಿಸಿದಾಗ ನಿಜವಾಗಿಯೂ ಆತ ಹಣ ಕೊಟ್ಟು ಕೊಂಡೇ ಹೋಗುತ್ತಿದ್ದನಂತೆ. ಓಡುತ್ತಿದ್ದುದು ಏಕೆಂದರೆ ಫ್ಯಾಷನ್ ಬದಲಾಗುವ ಮೊದಲು ಇವನ್ನು ತೊಟ್ಟುಕೊಳ್ಳಬೇಕೆಂದು ಓಡುತ್ತಿದ್ದನಂತೆ! ನಗು ಬರಿಸುವ ಈ ಜೋಕು ವಾಸ್ತವಕ್ಕೆ ನಿಜವಾಗಿಯೂ ಹತ್ತಿರವಾಗಿದೆ. ಏಕೆಂದರೆ

ಫ್ಯಾಷನ್ ಯಾವ ರೀತಿ ಬದಲಾಗುತ್ತದೆ ಎಂದು ಹೇಳಲು ಬರುವುದಿಲ್ಲ. ಅಂತೆಯೇ ಇಂದು ಫ್ಯಾಷನ್ ಆಗಿರುವುದು ವಿವಿಧ ರೀತಿಯಲ್ಲಿ ಗಡ್ಡ ಬೆಳೆಸಿಕೊಳ್ಳುವುದು. ಕೆಲವರು ಪೂರ್ಣಪ್ರಮಾಣದಲ್ಲಿ ಗಡ್ಡ ಬಿಡಲು ಇಚ್ಛಿಸಿದರೆ ಕೆಲವರು ಅಮಿತಾಭ್‌ರ ತರಹದ ಫ್ರೆಂಚಿ ಗಡ್ಡ ಬಿಡಲು ಇಚ್ಛಿಸುತ್ತಾರೆ. ಗಡ್ಡವೊಂದಿದ್ದರೆ ಸಾಕು, ಇದಕ್ಕೆ ಯಾವ ರೂಪ ಕೊಡಬೇಕೆಂದು ಐಡಿಯಾಗಳು ತನ್ನಿಂತಾನೇ ಹೊಳೆಯುತ್ತವೆ. ಗಡ್ಡ ಆಕರ್ಷಕವಾಗಿ ಬೆಳೆಯಲು ಈ ಚಿಕಿತ್ಸೆ ಮಾಡಿ

ಯಾವುದಕ್ಕೂ ಮೊದಲಾಗಿ ಬೇಕಾಗಿರುವುದು ಪೂರ್ಣಪ್ರಮಾಣದಲ್ಲಿ ಗಡ್ಡ ಬಿಡುವುದು. ಇದಕ್ಕೆ ಎಷ್ಟು ದಿನ ಬೇಕು? ಸಾಮಾನ್ಯವಾಗಿ ಗೊಬ್ಬರ ಬೇಕಿಲ್ಲದ ಈ ಬೆಳೆ ಹುಲುಸಾಗಲು ಮೂವತ್ತರಿಂದ ನಲವತ್ತೈದು ದಿನ ಬೇಕು. ಕೆಲವರಲ್ಲಿ ಇನ್ನೂ ಶೀಘ್ರವಾಗಿ ಬೆಳೆಯಬಹುದು. ಆದರೆ ಈ ಬೆಳೆಯನ್ನು ಹುಲುಸಾಗಿಟ್ಟುಕೊಳ್ಳಲು ಕೊಂಚ ಆರೈಕೆಯ ಅಗತ್ಯವೂ ಇದೆ. ಶೇವ್ ಮಾಡುವವರಿಗಿಂತ ಹೆಚ್ಚು ಕಾಳಜಿ ವಹಿಸಬೇಕಾಗುತ್ತದೆ. ಇಲ್ಲದಿದ್ದರೆ ಕಾಂಪೌಂಡ್ ಸಂದಿಯಲ್ಲಿ ಅಡ್ಡದಿಡ್ಡಿ ಬೆಳೆದ ಹಸಿರು ಹುಲ್ಲಿನಂತೆ ಎರ್ರಾಬಿರ್ರಿ ಬೆಳೆದು ಗಡ್ಡ ಬೆಳೆಸಿರುವ ನಿಮ್ಮ ಮೂಲ ಉದ್ದೇಶವನ್ನೇ ಕೆಡಿಸುತ್ತವೆ. ಶೇವಿಂಗ್ ಬಳಿಕ ಕಾಡುವ ತ್ವಚೆಯ ಸಮಸ್ಯೆಗೆ ಏನು ಮಾಡಲಿ?

ಗಡ್ಡ ಹುಲುಸಾಗಿ ಬೆಳೆಯಲು ಗೊಬ್ಬರ ಬೇಕಿಲ್ಲದಿದ್ದರೂ ಕೆಳಗಿನ ಚರ್ಮಕ್ಕೆ ಕೆಲವು ಪೋಷಕಾಂಶಗಳು, ಆರ್ದ್ರತೆ ಮತ್ತು ಕಂಡೀಶನಿಂಗ್ ನೀಡುವುದು ಅಗತ್ಯವಾಗಿದೆ. ಒಂದು ರೀತಿಯಲ್ಲಿ ಇದಕ್ಕೆ ನಿಮ್ಮ ಪ್ರಿಯತಮೆಗೆ ನೀಡುವುದಕ್ಕಿಂತಲೂ ಸ್ವಲ್ಪ ಹೆಚ್ಚೇ ಕಾಳಜಿ ಬೇಕು. ಗಡ್ಡ ಬೆಳೆಸುವ ಸೂಕ್ತ ವಿಧಾನವನ್ನು ಕೆಳಗಿನ ಸ್ಲೈಡ್ ಶೋ ವಿವರಿಸುತ್ತದೆ...

ಮೊದಲ ಹಂತ: ಕ್ಲೀನ್ ಶೇವ್ ಮಾಡಿಕೊಂಡು ಫೇಶಿಯಲ್ ಮಾಡಿಸಿ

ಮೊದಲ ಹಂತ: ಕ್ಲೀನ್ ಶೇವ್ ಮಾಡಿಕೊಂಡು ಫೇಶಿಯಲ್ ಮಾಡಿಸಿ

ಗಡ್ಡ ಬಿಡುವ ಇರಾದೆ ಮಾಡಿಕೊಂಡ ಬಳಿಕ ಮೊತ್ತ ಮೊದಲನೆಯದಾಗಿ ಉತ್ತಮ ಸೌಂದರ್ಯ ಮಳಿಗೆಯೊಂದರಲ್ಲಿ ಕ್ಲೀನ್ ಶೇವ್ ಮಾಡಿಸಿಕೊಂಡು ಮುಖದ ಚರ್ಮದ ಫೇಶಿಯಲ್ ಮಾಡಿಸಿಕೊಳ್ಳಿ. ಇದರಿಂದ ಚರ್ಮದ ಮೇಲಿದ್ದ ಸತ್ತ ಜೀವಕೋಶಗಳು ನಿವಾರಣೆಯಾಗಿ (exfoliate) ಮುಂದೆ ಬೆಳಯುವ ಕೂದಲಿಗೆ ಭದ್ರವಾದ ಅಡಿಪಾಯ ನೀಡುತ್ತದೆ.

ಎರಡನೇ ಹಂತ: ಮುಖವನ್ನು ಸ್ವಚ್ಛಗೊಳಿಸುತ್ತಿರಿ

ಎರಡನೇ ಹಂತ: ಮುಖವನ್ನು ಸ್ವಚ್ಛಗೊಳಿಸುತ್ತಿರಿ

ಗಡ್ಡದ ಬೆಳವಣಿಗೆಗೆ ಧೂಳು, ಪ್ರದೂಷಣೆ, ಪರಾಗ, ಬ್ಯಾಕ್ಟೀರಿಯಾ ಮೊದಲಾದವು ಅಡ್ಡಿಪಡಿಸುತ್ತವೆ. ನಿಮ್ಮ ತಲೆಗೂದಲಿನಂತೆಯೇ ಗಡ್ಡಕ್ಕೂ ಪೋಷಣೆಯ ಅಗತ್ಯವಿದೆ. ದಿನಕ್ಕೆ ಕನಿಷ್ಠ ಮೂರು ಬಾರಿಯಾದರೂ ಮುಖದ ಚರ್ಮವನ್ನು ಉತ್ತಮ ಮಾರ್ಜಕ ಬಳಸಿ (ಫೇಸ್ ವಾಶ್ ಉತ್ತಮ) ಸ್ವಚ್ಛಗೊಳಿಸುತ್ತಿರಿ.

ಮೂರನೆಯ ಹಂತ: ಕುರುಚಲು ಗಡ್ಡ ಬಂದಾಗ ಮಾಯಿಶ್ಚರೈಸರ್ ಬಳಸಿ

ಮೂರನೆಯ ಹಂತ: ಕುರುಚಲು ಗಡ್ಡ ಬಂದಾಗ ಮಾಯಿಶ್ಚರೈಸರ್ ಬಳಸಿ

ಒಂದು ವಾರದಲ್ಲಿಯೇ ಕುರುಚಲು ಗಡ್ಡ ಮೂಡುತ್ತದೆ. ಈ ಕೂದಲುಗಳು ದೃಢವಾಗಿರುವುದರಿಂದ ತುರಿಕೆಯ ಬಯಕೆಯನ್ನು ಹುಟ್ಟಿಸುತ್ತವೆ. ಕೂದಲ ಬುಡದಲ್ಲಿ ಆರ್ದ್ರತೆ ಕಡಿಮೆಯಾಗಿ ಚರ್ಮ ಒಣಗುವುದೇ ಇದಕ್ಕೆ ಕಾರಣ. ಈ ಹಂತದಲ್ಲಿ ಉತ್ತಮವಾದ ಆರ್ದ್ರತೆ ನೀಡುವ ಕ್ರೀಂ (moisturiser) ಬಳಸಿ ಮುಖದ ಚರ್ಮ ಮತ್ತು ಕೂದಲಿಗೆ ಆರೈಕೆ ನೀಡಿ.

ನಾಲ್ಕನೆಯ ಹಂತ: ದಿನಕ್ಕೊಂದು ಬಾರಿ ಕಂಡೀಶನರ್ ಬಳಸಿ

ನಾಲ್ಕನೆಯ ಹಂತ: ದಿನಕ್ಕೊಂದು ಬಾರಿ ಕಂಡೀಶನರ್ ಬಳಸಿ

ಒಂದು ವಾರದ ಬಳಿಕ ಕೂದಲು ಕೊಂಚ ಬಳುಕುವಷ್ಟು ಬೆಳೆಯುತ್ತದೆ. ಈ ಹಂತದಲ್ಲಿ ಕಂಡೀಶನಿಂಗ್ ಉಪಯೋಗಿಸದಿದ್ದರೆ ಗಡ್ಡ ಆಡ್ಡಾದಿಡ್ಡಿ ಬೆಳೆಯಲು ಪ್ರಾರಂಭಿಸುತ್ತದೆ. ಆದ್ದರಿಂದ ಪ್ರತಿದಿನ (ಒಂದೇ ಪ್ರತಿದಿನದ ಬೆಳಿಗ್ಗೆ ಅಥವಾ ಪ್ರತಿದಿನದ ಸಂಜೆ ನಿಯಮಿತವಾಗಿ ಅನುಸರಿಸಬೇಕು) ಉತ್ತಮ ಗುಣಮಟ್ಟದ ಕಂಡೀಶನರ್ ಉಪಯೋಗಿಸಿ ಗಡ್ಡವನ್ನು ತೊಳೆದುಕೊಳ್ಳಿ. ಇದರಿಂದ ಗಡ್ಡ ಮೃದು ಹಾಗೂ ಹೆಚ್ಚು ಶಕ್ತಿಶಾಲಿಯಾಗುತ್ತದೆ.

ಐದನೆಯ ಹಂತ: ಎರಡನೆಯ ವಾರದಿಂದ ಮಸಾಮ್ ಜಾಡಿ

ಐದನೆಯ ಹಂತ: ಎರಡನೆಯ ವಾರದಿಂದ ಮಸಾಮ್ ಜಾಡಿ

ಎರಡನೆಯ ವಾರದಿಂದ ಮೂರನೆಯ ವಾರದವರೆಗೆ ನೆಲ್ಲಿಕಾಯಿ ಎಣ್ಣೆಯಿಂದ ಗಡ್ಡವನ್ನು ಸುಮಾರು ಹದಿನೈದು ನಿಮಿಷ ಮಸಾಜ್ ಮಾಡಿ. ಒಂದು ವೇಳೆ ಕಂಡೀಶನರ್ ಬೆಳಿಗ್ಗೆ ಹಚ್ಚಿಕೊಂಡಿದ್ದರೆ ಸಂಜೆ ಮಸಾಜ್ ಮಾಡಿ. ಸಂಜೆ ಹಚ್ಚಿದ್ದರೆ ಮುಂಜಾನೆ ಮಸಾಜ್ ಮಾಡಿ. ಎಂದಿಗೂ ಮಸಾಜ್ ಮತ್ತು ಕಂಡೀಶನರ್ ಜೊತೆಜೊತೆಗೆ ಆಗಬಾರದು. (ಆದರೆ ಕೂದಲು ಬಿರುಕು ಬಿಡುತ್ತದೆ). ಮಸಾಜ್ ನಿಂದ ಗಡ್ಡದ ಕೂದಲು ಹುಲುಸಾಗಿ ಬೆಳೆಯಲು ಸಾಧ್ಯವಾಗುತ್ತದೆ.

ಆರನೆಯ ಹಂತ: ತುರಿಕೆಯನ್ನು ಹತ್ತಿಕ್ಕಿಕೊಳ್ಳಿ

ಆರನೆಯ ಹಂತ: ತುರಿಕೆಯನ್ನು ಹತ್ತಿಕ್ಕಿಕೊಳ್ಳಿ

ಮೂರನೆಯ ವಾರ ದಾಟುತ್ತಿದ್ದಂತೆ ಗಡ್ಡದ ಕೂದಲು ಒಂದೆರಡು ಇಂಚಿನಷ್ಟು ಬೆಳೆದಿರುತ್ತದೆ. ನಂತರ ಚರ್ಮದ ತುರಿಕೆ ಹೆಚ್ಚುತ್ತದೆ. ಏಕೆಂದರೆ ಹುಲುಸಾಗಿರುವ ಗಡ್ಡದ ಕೂದಲ ಬುಡದಲ್ಲಿ ಬ್ಯಾಕ್ಟೀರಿಯಾಗಳಿಗೆ ಅಡಗಲು ಸಾಕಷ್ಟು ಸ್ಥಳಾವಕಾಶ ಸಿಕ್ಕಿರುತ್ತದೆ. ಒಂದು ವೇಳೆ ಚರ್ಮದ ಆರೈಕೆಯಲ್ಲಿ ಕೊರತೆಯುಂಟಾಗಿದ್ದರೆ ಅಲ್ಲಿನ ಚರ್ಮ ಒಣಗಿ ಕೂದಲು ಅಲುಗಾಡಿದಾಗಲೆಲ್ಲಾ ಚರ್ಮವನ್ನು ಸೆಳೆದಂತಾಗಿ ತುರಿಕೆಯ ಭಾವನೆ ಮೂಡುತ್ತದೆ. ಇದನ್ನು ತಡೆಯಲು ಚರ್ಮದ ಆರೈಕೆಯನ್ನು ಬಿಡದೇ ಮುಂದುವರೆಸುವುದು ಮತ್ತು ಸ್ವಚ್ಛಗೊಳಿಸುವ ಪ್ರಮಾಣವನ್ನು ದಿನಕ್ಕೆ ಮೂರರಿಂದ ಆರು ಬಾರಿಗೆ ಹೆಚ್ಚಿಸುವುದು ಮುಖ್ಯ. ಆದರೂ ತುರಿಸುವ ಬಯಕೆ ಪೂರ್ಣವಾಗಿ ಹೋಗುವುದಿಲ್ಲ. ಮನಸ್ಸನ್ನು ಗಟ್ಟಿಗೊಳಿಸಿ ತುರಿಸುವುದರಿಂದ ಹತ್ತಿಕ್ಕಿಕೊಳ್ಳುವುದು ಅಗತ್ಯ.

ಏಳನೆಯ ಹಂತ: ಟ್ರಿಮ್ ಮಾಡಿಸಿ

ಏಳನೆಯ ಹಂತ: ಟ್ರಿಮ್ ಮಾಡಿಸಿ

ಸುಮಾರು ನಾಲ್ಕು ವಾರ ದಾಟಿದ ಬಳಿಕ ಗಡ್ಡ ನಿಮ್ಮ ಮುಖಕ್ಕೊಂದು ಕಳೆ ನೀಡಿರುತ್ತದೆ. ಈ ಹಂತದಲ್ಲಿ ನಿಮ್ಮ ನಾಪಿತನ ಬಳಿ ಟ್ರಿಮ್ ಮಾಡಿಸಿಕೊಳ್ಳುವುದು ಉತ್ತಮ. ಟ್ರಿಮ್ ಎಂದರೆ ಕೇವಲ ಗಡ್ಡದ ತುದಿಗಳನ್ನು ಮಾತ್ರ ಕತ್ತರಿಸಿಕೊಳ್ಳುವುದು. ಇದರಿಂದ ಮುಂದಿನ ದಿನಗಳಲ್ಲಿ ನಿಮಗೆ ಬೇಕಾದ ವಿನ್ಯಾಸ ಪಡೆದುಕೊಳ್ಳಲು ಸಾಧ್ಯವಾಗುತ್ತದೆ. ಟ್ರಿಮ್ ಮಾಡಿಸದ ಗಡ್ಡ ನಂತರ ನಿಮಗೆ ಬೇಕಾದ ವಿನ್ಯಾಸಕ್ಕೆ ಸುಲಭವಾಗಿ ಬಗ್ಗುವುದಿಲ್ಲ.

ಎಂಟನೆಯ ಹಂತ: ನಿಮ್ಮ ಇಷ್ಟದ ವಿನ್ಯಾಸ ಪಡೆಯಿರಿ

ಎಂಟನೆಯ ಹಂತ: ನಿಮ್ಮ ಇಷ್ಟದ ವಿನ್ಯಾಸ ಪಡೆಯಿರಿ

ಸುಮಾರು ಆರು ಅಥವಾ ಏಳು ವಾರಗಳ ನಂತರ ಗಡ್ಡ ಕಟಾವಿಗೆ ಸಿದ್ದವಾಗಿರುವಂತೆ ನಿಂತಿರುತ್ತದೆ. ನಿಮ್ಮ ನೆಚ್ಚಿನ ನಾಪಿತನ ಬಳಿ ಹೋಗಿ ನಿಮಗೆ ಇಷ್ಟವಾದ ವಿನ್ಯಾಸವನ್ನು ಮಾಡಿಸಿಕೊಳ್ಳಿ. ನಂತರ ಎಲ್ಲರ ಆಕರ್ಷಣೆಯನ್ನು ಪಡೆಯಿರಿ. ಆದರೆ ಬಳಿಕವೂ ಈ ವಿನ್ಯಾಸವನ್ನು ಉಳಿಸಿಕೊಳ್ಳಲು ಆರೈಕೆ ಮತ್ತು ಪೋಷಣೆ ನಿರಂತರವಾಗಿರುವುದು ಅಗತ್ಯ.

English summary

8 Tips To Grow A Beard

Yes, beards are in! The 'clean-shaven' look is out! Growing a beard is the best thing you can do to make yourself look 'manly'. And if you are a fitness freak or a gym rat, you can even afford to look like a warrior, thanks to your full-grown beard. Leave the 'stubble-look' for boys because men should go for the full grown beard look. Well, how long will it take? It can take around 30 to 45 days to get a full-grown beard that transforms your looks.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more