For Quick Alerts
ALLOW NOTIFICATIONS  
For Daily Alerts

ಇತ್ತೀಚೆಗೆ ಪುರುಷರಲ್ಲಿ ಮೇಕಪ್‌ ಟ್ರೆಂಡ್‌ ಹೆಚ್ಚಾಗಿದೆ, ಗಮನಿಸಿದ್ದೀರಾ?

|

ಮೇಕಪ್‌ ಮಹಿಳೆಯರಷ್ಟೇ ಮಾಡಬೇಕು, ಪುರುಷರು ಮಾಡಲೇಬಾರದು ಎಂಬ ಅಲಿಖಿತ ನಿಯಮವೊಂದು ಈ ಸಮಾಜದಲ್ಲಿದೆ. ಸ್ವಲ್ಪ ಬ್ಯೂಟಿ ಕಾನ್ಷಿಯಸ್ ಇರುವ ಪುರುಷರನ್ನು ನೀನೇಕೆ ಒಳ್ಳೇ ಹಡುಗಿ ತರ ಮೇಕಪ್‌ ಮಾಡುತ್ತೀಯ ಅಂತ ಕೇಳುವುದರಿಂದ ಮುಖಕ್ಕೆ ಕ್ರೀಮ್‌ ಹಚ್ಚಿಕೊಳ್ಳಲೂ ಹಿಂಜರಿಯುತ್ತಾರೆ.

ಎಲ್ಲಿ ನನ್ನನ್ನು ನೋಡಿ ಆಡಿಕೊಳ್ಳುತ್ತಾರೋ ಎಂಬ ಹಿಂಜರಿಕೆಯಿಂದ ಎಷ್ಟೋ ಪುರುಷರು ಸೆಲ್ಫ್‌ ಗ್ರೂಮಿಂಗ್‌ ಬಗ್ಗೆ ಗಮನನೇ ಹರಿಸುವುದಿಲ್ಲ, ರಗಡ್‌ ಲುಕ್ಕೇ ಪುರುಷ ಲಕ್ಷಣ ಎಂದು ಭಾವಿಸಿದ್ದಾರೆ, ಈ ರೀತಿಯ ಟ್ಯಾಬೂ ಅಥವಾ ನಿಷೇಧ ಎಲ್ಲಾ ಸಮಾಜದಲ್ಲಿಯೂ ಇದೆ.

ಕೆಲ ಪುರುಷರು ಕ್ರೀಮ್‌ ಹಾಗೂ ತುಟಿಗೆ ಲಿಪ್‌ ಬಾಮ್‌ ಬಳಸುತ್ತಾರೆ, ಇನ್ನು ಕೆಲವರು ಕಣ್ಣಿಗೆ ಕಾಡಿಗೆ ಹಚ್ಚಿಕೊಳ್ಳುತ್ತಾರೆ, ಕೆಲವರು ಹಣೆಗೆ ಕುಂಕುಮ ಧರಿಸುತ್ತಾರೆ, ಮೇಕಪ್‌ ಅಂತ ಮಾಡುವುದಿಲ್ಲ, ಆದರೆ ಇತ್ತೀಚೆಗೆ ನಿಧಾನಕ್ಕೆ ಟ್ರೆಂಡ್‌ ಬದಲಾಗುತ್ತಿರುವುದನ್ನು ನೀವು ಗಮನಿಸಿರಬಹುದು, ಹೌದು ಪುರುಷರು ಮೇಕಪ್ ಕಡೆ ಗಮನ ನೀಡುತ್ತಿದ್ದಾರೆ.
ಪುರುಷರು ಕಿವಿಗೆ, ಮೂಗಿಗೆ, ಗಲ್ಲಕ್ಕೆ ಪಿಯರ್ಸ್‌ ಮಾಡಿ ನಡೆಯುವ ಫ್ಯಾಷನ್‌ ಇತ್ತು, ಅದರ ಜೊತೆ ಲಿಪ್‌ಸ್ಟಿಕ್‌ ಮತ್ತಿತರ ಅಲಂಕಾರಿಕ ವಸ್ತುಗಳನ್ನು ಬಳಸುತ್ತಿದ್ದಾರೆ.

ಪುರುಷರು ಮೇಕಪ್‌ ಮಾಡುತ್ತಿರುವುದು ಹೊಸತೇನಲ್ಲ

ಪುರುಷರು ಮೇಕಪ್‌ ಮಾಡುತ್ತಿರುವುದು ಹೊಸತೇನಲ್ಲ

ಈ ಹಿಂದೆಯೂ ಪುರುಷರು ಹೊಳೆಯುವ ಮೇಕಪ್‌ನಿಂದ ಗಮನ ಸೆಳೆದಿದ್ದರು. ಈಜಿಪ್ಟ್‌ನ ಪುರುಷರು ಉರಿ ಬಿಸಿಲಿನಿಂದ ರಕ್ಷಣೆಗೆ ಎಣ್ಣೆ ಹಾಗೂ ಕೊಬ್ಬಿನಂಶಗಳನ್ನು ಮುಖಕ್ಕೆ ಹಚ್ಚುತ್ತಿದ್ದರು. ಶ್ರೀಮಂತ ವರ್ಗದ ಪುರುಷರು ತಮ್ಮ ಕಣ್ಣುಗಳನ್ನು ಅಲಂಕರಿಸುತ್ತಿದ್ದರು, ನೀವು ಈಜಿಪ್ಟ್ ರಾಜನ ಫೋಟೋಗಳಲ್ಲಿ ಈ ಬಗೆಯ ಮೇಕಪ್ ಕಾಣಬಹುದು.

ರೋಮನ್‌ ಪುರುಷರೂ ಮೇಕಪ್‌ ಮಾಡುತ್ತಿದ್ದರು. ಅವರು ಬ್ರೈಟ್‌ ಮೇಕಪ್‌ ಬಳಸದಿದ್ದರೂ ಪರ್‌ಫ್ಯೂಮ್‌ ಬಳಸುತ್ತಿದ್ದರು, ದೇಹದ ಕೆಲ ಭಾಗದ ಕೂದಲುಗಳನ್ನು ತೆಗೆಯುತ್ತಿದ್ದರು, ಎಲವೊಮ್ಮೆ ಅವರ ಮುಖಕ್ಕೆ ಬೆಳ್ಳಗಿನ ಕ್ರೀಮ್‌ ಹಚ್ಚುತ್ತಿದ್ದರು

ಎಲಿಜಬೆತ್‌ ರಾಣಿ ಸಮಯದಲ್ಲೂ ಪುರುಷರು ಮುಖಕ್ಕೆ ಪೌಡರ್ ಹಚ್ಚುತ್ತಿದ್ದರು, ಹೀಗಾಗಿ ಮೇಕಪ್ ಬಳಸುವುದು ಹೊಸತೇನಲ್ಲ.

ಈಗ ಮತ್ತೆ ಟ್ರೆಂಡ್‌ ಆಗುತ್ತಿದೆ ಪುರುಷ ಮೇಕಪ್‌

ಈಗ ಮತ್ತೆ ಟ್ರೆಂಡ್‌ ಆಗುತ್ತಿದೆ ಪುರುಷ ಮೇಕಪ್‌

ಸಿನಿಮಾ ನಟರು, ರಂಗ ಭೂಮಿ ಕಲಾವಿದರು ಮೇಕಪ್ ಬಳಸುತ್ತಾರೆ. ಸ್ಕ್ರೀನ್‌ ಮೇಲೆ, ಸ್ಟೇಜ್‌ನಲ್ಲಿ ಚೆನ್ನಾಗಿ ಕಾಣಲಿ ಎಂಬ ಉದ್ದೇಶದಿಂದ ಮೇಕಪ್‌ ಮಾಡುತ್ತಾರೆ, ಆದರೆ ಸಾಮಾನ್ಯ ಬದುಕಿನಲ್ಲಿ ಮೇಕಪ್‌ ಮಾಡುವುದು ಕಡಿಮೆ, ಆದರೆ ಆ ಮೇಕಪ್‌ ಟ್ರೆಂಡ್‌ ಇದೀಗ ಶುರುವಾಗಿದೆ.

ಮೇಕಪ್‌ ಕಂಪನಿಗಳೂ ಪುರುಷರನ್ನು ಟಾರ್ಗೆಟ್‌ ಮಾಡುತ್ತಿದೆ

ಮೇಕಪ್‌ ಕಂಪನಿಗಳೂ ಪುರುಷರನ್ನು ಟಾರ್ಗೆಟ್‌ ಮಾಡುತ್ತಿದೆ

ಮೊದಲೆಲ್ಲಾ ಮೇಕಪ್‌ಗಳನ್ನು ಮಹಿಳೆಯರಿಗಾಗಿಯೇ ತಯಾರಿಸಲಾಗುತ್ತಿತ್ತು, ಇದೀಗ ಪುರುಷರಿಗೂ ತಯಾರಿಸುತ್ತಿದ್ದಾರೆ. ಪುರುಷರಿಗಾಗಿ ಮಾಯಿಶ್ಚರೈಸರ್‌, ಫೌಂಡೇಷನ್‌, ಕನ್ಸೀಲರ್‌, ಐ ಪೆನ್ಸಿಲ್‌, ಲಿಪ್‌ ಬಾಮ್‌, ನೇಲ್‌ ಪಾಲಿಷ್ ಎಲ್ಲಾ ಬಂದಿದೆ.

 ಸ್ಟಿರಿಯೋಟೈಪ್ ಮುರಿದು ಮುಂದೆ ಬರುತ್ತಿದ್ದಾರೆ ಪುರುಷರು

ಸ್ಟಿರಿಯೋಟೈಪ್ ಮುರಿದು ಮುಂದೆ ಬರುತ್ತಿದ್ದಾರೆ ಪುರುಷರು

ಎಷ್ಟೋ ಜನ ಜನ ಏನು ಹೇಳುತ್ತಾರೆ ಎಂದು ತಲೆ ಕೆಡಿಸಿಕೊಳ್ಳುತ್ತಿಲ್ಲ, ಮೇಕಪ್‌ ಮಾಡಿದ ಫೋಟೋಗಳನ್ನು ಇನ್‌ಸ್ಟಾಗ್ರಾಮ್‌ನಲ್ಲಿ ಶೇರ್‌ ಮಾಡಿಕೊಳ್ಳುತ್ತಿದ್ದಾರೆ.

ಕಾಲಕ್ಕೆ ತಕ್ಕಂತೆ ಕೋಲ ಕಟ್ಟು

ಕಾಲಕ್ಕೆ ತಕ್ಕಂತೆ ಕೋಲ ಕಟ್ಟು

ಈ ಫ್ಯಾಷನ್‌ ಎಂಬುವುದು ಬದಲಾಗುತ್ತಾ ಇರುತ್ತದೆ, ಕೆಲವೊಂದು ಫ್ಯಾಷನ್‌ಗಳು ತುಂಬಾ ವಿಚಿತ್ರ ಅನಿಸಿದರೂ ಅದು ಟ್ರೆಂಡ್‌ ಆದರೆ ಎಲ್ಲರೂ ಮಾಡಲಾರಂಭಿಸುತ್ತಾರೆ, ಉದಾಹರಣೆಗೆ ಹರಿದ ಜೀನ್ಸ್, ಕೆಲವೊಂದು ವಿಚಿತ್ರ ಮೇಕಪ್‌ಗಳು. ಈಗ ಪುರುಷರಲ್ಲಿ ಮೇಕಪ್‌ ಟ್ರೆಂಡ್‌ ಶುರುವಾಗಿದೆ.

ಪುರುಷರ ಮೇಕಪ್‌ ಟ್ರೆಂಡ್ ಬಗ್ಗೆ ನಿಮ್ಮ ಅಭಿಪ್ರಾಯವೇನು?

English summary

Why More and More Men Are Starting to Wear Makeup

Do you notice now men are starting to wear makeup, this is a new trend? read on.....
Story first published: Thursday, July 21, 2022, 11:48 [IST]
X
Desktop Bottom Promotion