For Quick Alerts
ALLOW NOTIFICATIONS  
For Daily Alerts

ಮಾಸ್ಕ್‌ ಧರಿಸಿದಾಗ ಮೇಕಪ್ ಹಾಳಾಗದಿರಲು ಈ ಟಿಪ್ಸ್ ಅನುಸರಿಸಿ

|

ಕೊರೋನಾ ಮತ್ತೊಮ್ಮೆ ತನ್ನ ಕಬಂದ ಬಾಹುಗಳನ್ನ ಎಲ್ಲೆಡೆ ಚಾಚಿದೆ. ನೂರಾರು ಜನರು ಮಹಾಮಾರಿಗೆ ಬಲಿಯಾಗುತ್ತಿದ್ದಾರೆ. ಸರಕಾರವಂತೂ ಮಾಸ್ಕ್‌ನ ಧಾರಣೆಯನ್ನು ಕಡ್ಡಾಯಗೊಳಿಸಿದೆ. ಈ ಮಾಸ್ಕ್‌ನ ಧಾರಣೆ ಅನ್ನೋದು ಬಹುತೇಕರ ಪಾಲಿಗೆ ತಲೆನೋವಿನ ಸಂಗತಿ ಆಗಿದೆ ಅನ್ನೋ ವಿಚಾರ ಬಹುತೇಕ ಮಂದಿಯ ವರ್ತನೆಯನ್ನ ನೋಡಿದರೇನೇ ಗೊತ್ತಾಗಿಬಿಡುತ್ತೆ. ಅಷ್ಟರಮಟ್ಟಿಗೆ ಜನರಿಗೆ ಮಾಸ್ಕ್ ಅನ್ನು ಧರಿಸೋದೆಂದರೆ ಒಂದು ಕಿರಿಕಿರಿಯ ಅನುಭವ. ಇದಕ್ಕೆ ಕಾರಣ, ವ್ಯಕ್ತಿಯ ಗುರುತಿನ ಭಾಗವಾಗಿರುವ ಮುಖದ ಬಹುತೇಕ ಭಾಗವನ್ನ ಈ ಮಾಸ್ಕ್ ಆವರಿಸಿಕೊಳ್ಳುವುದು.

Ways To Make Wearing Makeup With A Mask Mess Proof In Kannada

ಅದರಲ್ಲೂ ಲಲನೆಯರಿಗಂತೂ ಈ ಮಾಸ್ಕ್‌ನ ಧಾರಣೆ ನಿಜಕ್ಕೂ ಬೇಡವಾದದ್ದೇ. ಯಾಕೆಂದರೆ, ಅವರು ಕಷ್ಟಪಟ್ಟು ಮಾಡಿಕೊಳ್ಳುವ ಮುಖದ ಮೇಕಪ್ ಅನ್ನೇ ಈ ಮಾಸ್ಕ್ ಮರೆಯಾಗಿಸಿಬಿಡುತ್ತದೆ! ಆದರೇನು ಮಾಡುವುದು ?!! ಸದ್ಯದ ಪರಿಸ್ಥಿತಿಯಲ್ಲಂತೂ ಮಾಸ್ಕ್ ಅನ್ನು ಧರಿಸುವುದು ಅನಿವಾರ್ಯ. ಮಾಸ್ಕ್ ಅನ್ನು ಧರಿಸಿಕೊಳ್ಳಲೇಬೇಕಾಗಿರುವ ಇಂತಹ ಪರಿಸ್ಥಿತಿಯಲ್ಲಿ ಬಹುತೇಕ ಫ಼್ಯಾಷನ್ ಪ್ರಿಯ ಮಹಿಳೆಯರಿಗೆ ಮೇಕಪ್‍ನ ಚಿಂತೆ ಕಾಡೋದು ಸಹಜ.

ನಿಮ್ಮ ಆ ಚಿಂತೆಗೆ ಒಂದಿಷ್ಟು ಪರಿಹಾರಗಳನ್ನು ನಾವು ಈ ಬರಹದಲ್ಲಿ ಪ್ರಸ್ತುತಪಡಿಸಿದ್ದೇವೆ. ಇಲ್ಲಿ ನೀಡಲಾದ ಸಲಹೆಗಳನ್ನು ಅನುಸರಿಸುವುದರ ಮೂಲಕ, ಮಾಸ್ಕ್ ಧಾರಣೆಯ ನಡುವೆಯೂ ಮೇಕಪ್ ಧಾರಣೆಯ ನಿಮ್ಮ ನೆಚ್ಚಿನ ಹವ್ಯಾಸವನ್ನು ನಿಶ್ಚಿಂತೆಯಾಗಿ ಮುಂದುವರಿಸಿರಿ.

ನೀವಂತೂ ತ್ವಚೆಯ ಆರೈಕೆಗೆ ಸಂಬಂಧಿಸಿದ ಮೂಲ ತತ್ವಗಳಿಗೆ ಬದ್ಧರಾಗಿರುವವರು ಹಾಗೂ ನಿಮ್ಮ ತುಟಿಗಳನ್ನು ಬಣ್ಣಬಣ್ಣದ ಲಿಪ್ ಬಾಮ್‍ಗಳ ಬಳಕೆಯ ಮೂಲಕ ಅವುಗಳನ್ನು ಯಾವಾಗಲೂ ತೇವಾಂಶಭರಿತವಾಗಿ (ಹೈಡ್ರೇಟೆಡ್) ಇರಿಸಿಕೊಳ್ಳುವ ಅಭ್ಯಾಸ ಇರುವವರು. ಆದರೆ, ಅದೇ ವೇಳೆಗೆ, ನಿಮ್ಮ ಫುಲ್ ಕವರೇಜ್ ಫ಼ೌಂಡೇಶನ್ ಬಾಟಲಿಯಲ್ಲೇ ಒಣಗಿ ಹೋಗುತ್ತಿದೆಯಲ್ಲ ?! - ನಿಮ್ಮ ಈ ಸಮಸ್ಯೆಗೆ ನಾವು ಕಿವಿಯಾಗುತ್ತೇವೆ.

ಮೇಕಪ್ ನಿಮ್ಮ ಆದ್ಯತೆಯ ವಿಷಯವಾಗಿದೆಯೇ ? ಹೌದೆಂದಾದಲ್ಲಿ, ನೀವು ಮಾಸ್ಕ್ ಅನ್ನು ಧರಿಸಿಕೊಂಡಿರುವಾಗಲೂ ಮೇಕಪ್ ಮಾಡಿಕೊಳ್ಳಲು ಸಾಧ್ಯವೇ ? ನೀವು ಹಾಕಿಕೊಂಡಿರೋ ಫ಼ೌಂಡೇಶನ್ ದಿನವಿಡೀ ಹಾಗೆಯೇ ಇರುತ್ತದೆಯೋ ಅಥವಾ ನಿಮ್ಮ ಮಾಸ್ಕ್‌ಗೆ ಮೆತ್ತಿಕೊಂಡು, ನಿಮ್ಮ ಮುಖದ ಮೇಲೆ ವಿಕಾರ ಗುರುತುಗಳನ್ನು ಉಳಿಸಿಬಿಡುತ್ತದೆಯೋ ?

ಮಾಸ್ಕ್ ಧಾರಣೆಯ ಬಳಿಕ ಎದ್ದು ಕಾಣುವ ನಿಮ್ಮ ಕಣ್ಣುಗಳ ಹಾಗೂ ಕಣ್ರೆಪ್ಪೆಗಳ ಮೇಕಪ್‍ನ ಪ್ರಾಮುಖ್ಯತೆ ಎಷ್ಟು ? ಆರೋಗ್ಯ ತುರ್ತು ಪರಿಸ್ಥಿತಿಯ ಈ ಸಂದರ್ಭದಲ್ಲಿ, ನಿಮಗೆ ರಕ್ಷಣೆಯನ್ನೀಯುವ ಮಾಸ್ಕ್‌ನ ಅಡಿಯಲ್ಲಿ, ನೀವು ಧರಿಸಿಕೊಳ್ಳಬೇಕೆಂದಿರುವ ಮೇಕಪ್‍ನ ಕುರಿತಂತೆ ನಿಮಗಿರಬಹುದಾದ ಪ್ರತಿಯೊಂದು ಪ್ರಶ್ನೆಗೂ ಉತ್ತರಿಸಲು ಮುಂಬಯಿಯ ಮೂಲದ ಇಬ್ಬರು ಮೇಕಪ್ ತಜ್ಞರೊಡನೆ ನಾವು ಸಮಾಲೋಚಿಸಿದ್ದೇವೆ. ಅವರು ಕೊಟ್ಟ ಸಲಹೆಗಳನ್ನು ಯಥಾವತ್ತಾಗಿ ಬರಹದ ರೂಪಕ್ಕಿಳಿಸಿದ್ದೇವೆ.

1)

1) "ತುಸುವೇ ಅಧಿಕವಾಯಿತು" ಎಂಬ ಮಂತ್ರ ನಿಮ್ಮದಾಗಿರಲಿ

ಮೇಕಪ್ ಮಾಡಿಕೊಳ್ಳುವಾಗ ಬಳಸಿಕೊಳ್ಳುವ ಉತ್ಪನ್ನಗಳ ಸಂಖ್ಯೆ ಕಡಿಮೆಯೇ ಇರಲಿ. ಏಕೆಂದರೆ, ಹಾಗೆ ಕಡಿಮೆ ಉತ್ಪನ್ನಗಳಿಂದ ಮಾಡಿಕೊಂಡ ಮೇಕಪ್, ಮಾಸ್ಕ್‌ನೊಂದಿಗೆ ಒಪ್ಪವಾಗಿ ಕಾಣುವುದಷ್ಟೇ ಅಲ್ಲ, ಜೊತೆಗೆ ಅಂತಹ ಮೇಕಪ್ ದೀರ್ಘಕಾಲ ಉಳಿಯುತ್ತದೆ. ಅಗತ್ಯವಿದ್ದಾಗಲೆಲ್ಲ ಕನ್ಸೀಲರನ್ನು ಬಳಸಿರಿ ಹಾಗೂ ದಪ್ಪವಾದ ಮತ್ತು ಕಾಂತಿವರ್ಧಕ ಫ಼ೌಂಡೇಶನ್‍ನ ಅರಿವು ಸದಾ ಇರಲಿ. ಫ಼ೌಂಡೇಶನ್‍ನ ಬಳಕೆ ಆದಷ್ಟು ಕಡಿಮೆ ಇರಲಿ ಹಾಗೂ ವಿಪರೀತ ಹೊಳಪಿನಿಂದ ಮುಕ್ತವಾದ ಮ್ಯಾಟ್ (matte) ಫಿನಿಶಿಂಗ್‍ನ ಉಪಯೋಗವೇ ಎಲ್ಲ ಕಾಲದಲ್ಲಿಯೂ ಹಿತಕರ.

2) ಮಿನರಲ್ ಆಧಾರಿತ ಮೇಕಪ್ ಅನ್ನುಬಳಸಿರಿ

2) ಮಿನರಲ್ ಆಧಾರಿತ ಮೇಕಪ್ ಅನ್ನುಬಳಸಿರಿ

ಮಿನರಲ್ ಆಧಾರಿತ ಪೌಡರ್ ಉತ್ಪನ್ನಗಳು (ಫ಼ೌಂಡೇಶನ್ ಮತ್ತು ಬ್ಲಶ್‍ನಂತಹ) ಈ ವಿಚಾರದಲ್ಲಿ ಅತ್ಯುತ್ತಮ ಆಯ್ಕೆಗಳು. ಅವು ತಿಳಿಯಾಗಿರುತ್ತವೆ, ಮ್ಯಾಟ್ (matte) ಫಿನಿಶಿಂಗ್ ಅನ್ನು ಕೊಡುತ್ತವೆ ಹಾಗೂ ತ್ವಚೆಯ ಯಾವುದೇ ರಂಧ್ರವನ್ನು ಅಡ್ಡಿಪಡಿಸಲಾರವು ಇಲ್ಲವೇ ತ್ವಚೆಗೆ ಉರಿಯನ್ನುಂಟು ಮಾಡಲಾರವು.

3) ಟಚ್-ಅಪ್‍ಗಳ ಅಗತ್ಯವನ್ನು ಬಯಸದ ಮೇಕಪ್ ಅನ್ನು ಆಯ್ದುಕೊಳ್ಳಿರಿ

3) ಟಚ್-ಅಪ್‍ಗಳ ಅಗತ್ಯವನ್ನು ಬಯಸದ ಮೇಕಪ್ ಅನ್ನು ಆಯ್ದುಕೊಳ್ಳಿರಿ

ಮೇಕಪ್‍ಗೆ ಸಂಬಂಧಿಸಿದ ಈ ಹೊಸ ಕ್ರಮವು, ಖಚಿತವಾಗಿಯೂ ಮೂಲ ವಿಚಾರಗಳನ್ನೇ ಆಧರಿಸಿರುವ ಹಾಗೂ ವಾಸ್ತವದಲ್ಲಿ ನಿಮಗೆ ಅಗತ್ಯವಿರುವಷ್ಟು ಉತ್ಪನ್ನಗಳಿಗಷ್ಟೇ ಸೀಮಿತವಾಗಿರುವ ಹಳೆಯ ವಿಸ್ತೃತ ಆವೃತ್ತಿಯ ಸಂಸ್ಕರಿತ ಆವೃತ್ತಿಯೇ ಆಗಿದೆ. ನೀವು ಕೈಗೊಳ್ಳುವ ಮೇಕಪ್‍ನ ಯಾವುದೇ ರೀತಿಯದ್ದಾದರೂ ಕೂಡ, ಅದು ಮೊದಲು ನಿಮಗೆ ಆರಾಮದಾಯಕವಾಗಿರುವುದನ್ನು ಖಚಿತಪಡಿಸಿಕೊಳ್ಳಿ. ನೀವು ಧರಿಸಿರುವ ಮಾಸ್ಕ್ ಅನ್ನು ಪದೇ ಪದೇ ಕೈಯಾಡಿಸುವ ಮೂಲಕ ಸರಿಪಡಿಸಿಕೊಳ್ಳಬೇಕಾದಂತಹ ಮುಜುಗುರದ ಸಂದರ್ಭಗಳನ್ನ ನಿಮ್ಮ ಮೇಕಪ್ ತಂದೊಡ್ಡಬಾರದು. ಹಾಗಾದಲ್ಲಿ, ಅದು ನಿಮ್ಮನ್ನು ಸೋಂಕಿನ ಅಪಾಯಕ್ಕೆ ದೂಡಬಹುದು.

ನಿಮ್ಮ ತ್ವಚೆಗೆ ಒಪ್ಪುವಂತಹ ಮಾಯ್‍ಶ್ಚರೈಸರನ್ನು ಹಾಗೂ ಅದಕ್ಕೂ ಮುಂಚೆ ಸನ್‍ಸ್ಕ್ರೀನನ್ನು ಬಳಸುವುದು ಪ್ರಶಸ್ತವಾಗಿದೆ, ಬಳಿಕ ಅಗತ್ಯವಿದ್ದಲ್ಲೆಲ್ಲ ಕನ್ಸೀಲರನ್ನು ಲೇಪಿಸಿಕೊಳ್ಳುವುದು ಹಾಗೂ ಬ್ಲೆಂಡ್ ಮಾಡುವುದು, ನಿಮಗೆ ನಿಜಕ್ಕೂ ಅಗತ್ಯವಿದ್ದೆಡೆಯಲ್ಲಿ ಮಾತ್ರ ಅತ್ಯಂತ ಕಡಿಮೆ ಪ್ರಮಾಣದಲ್ಲಿ ಫ಼ೌಂಡೇಷನ್‍ನ ಬಳಕೆ, ಹಾಗೂ ಇವೆಲ್ಲವನ್ನೂ ಮುಖದ ಮೇಲೆ ಸಮಾನವಾಗಿ ಹರಡಿಸುವುದಕ್ಕಾಗಿ ಮುಖದ ಮೇಲೆ ಸೆಟ್ಟಿಂಗ್ ಪೌಡರ್‌ನ ಲೇಪನ. ಬಳಿಕ ನಿಮ್ಮ ಮುಖಕ್ಕೆ ಬ್ಲಶ್‍ನ ಸ್ಪರ್ಶವನ್ನು ನೀಡಿ. ಖಂಡಿತವಾಗಿಯೂ ನೀವು ಕಾನ್‍ಟೌರ್‌‍ನ ಬಳಕೆಯನ್ನೂ ಹಾಗೂ ಸಾಧ್ಯವಾದಲ್ಲಿ ಹೈಲೈಟರ್‌ನ ಉಪಯೋಗವನ್ನೂ ಕೈಬಿಡಬಹುದು.

4) ಕಣ್ಣುಗಳ ಮೇಕಪ್ ನಿಮ್ಮ ಮೊದಲ ಆದ್ಯತೆಯಾಗಿರಲಿ

4) ಕಣ್ಣುಗಳ ಮೇಕಪ್ ನಿಮ್ಮ ಮೊದಲ ಆದ್ಯತೆಯಾಗಿರಲಿ

ಮಾಸ್ಕ್ ಧರಿಸಿರುವ ನಿಮ್ಮ ಮುಖದಲ್ಲಿ ಎದ್ದುಕಾಣುವಂತಹವು ನಿಮ್ಮ ಕಣ್ಣುಗಳು. ನಿಮಗೆ ಬೇಕಾದ ರೀತಿಯಲ್ಲಿ ನೀವು ಅವುಗಳನ್ನು ಅಲಂಕರಿಸಿಕೊಳ್ಳಬಹುದು. ಕಣ್ಣಿನ ಹುಬ್ಬುಗಳು ಓರಣವಾಗಿರುವುದನ್ನು ಹಾಗೂ ಒಪ್ಪುವಂತಹ ಬಣ್ಣದಿಂದ ತುಂಬಿಕೊಂಡಿರುವುದನ್ನು ಖಾತ್ರಿ ಮಾಡಿಕೊಳ್ಳುವುದರ ಮೂಲಕ ಕಣ್ಣಿನ ಹುಬ್ಬುಗಳೆಡೆಗೆ ವಿಶೇಷ ಗಮನ ಹರಿಸಿ. ಮೇಕಪ್‍ನ ಉದ್ದೇಶವು ಕೇವಲ ನಿಮ್ಮ ಬಾಹ್ಯ ಸೌಂದರ್ಯವನ್ನು ಹೆಚ್ಚು ಮಾಡುವುದಕ್ಕಷ್ಟೇ ಸೀಮಿತವಾಗಿರಬಾರದು, ಜೊತೆಗೆ ಮೇಕಪ್ ಅನ್ನು ಧರಿಸಿರುವ ನಿಮಗೂ ಕೂಡ ಅದು ಉಲ್ಲಾಸದಾಯಕ ಅನುಭವವನ್ನು ನೀಡುವಂತಿರಬೇಕು. ವಿಶೇಷ ಪರಿಸ್ಥಿತಿಯಲ್ಲಿ ಬಾಳುತ್ತಿರುವ ನಾವು ಈ ಸಂದರ್ಭದಲ್ಲಿ ನಮ್ಮ ಅಂದಚೆಂದದ ಅನಾವರಣದತ್ತ ಇನ್ನಷ್ಟು ಗಮನಹರಿಸಬೇಕಾಗಿದೆ. ನಿಮ್ಮ ಕಾಂತಿಯನ್ನು ಹೆಚ್ಚಿಸುವ ಫ಼ೇಸ್ ಪ್ರೀಮಿಯರ್ ಆಯಿಲ್ ಸಹಜವಾಗಿ ಆವಿಯಾಗುತ್ತದೆ, ಆದರೆ ಹೊಳೆಯುವ ನಿಮ್ಮ ಐ ಶ್ಯಾಡೋಗಳು ಬಹುತೇಕ ಖಚಿತವಾಗಿ ಹಾಗೆಯೇ ಉಳಿದುಕೊಳ್ಳುತ್ತವೆ.

5) ತಿಳಿಬಣ್ಣದ ತುಟಿಗಳು ನಿಮ್ಮವಾಗಿರಲಿ

5) ತಿಳಿಬಣ್ಣದ ತುಟಿಗಳು ನಿಮ್ಮವಾಗಿರಲಿ

ನಿಮ್ಮ ಎಲ್ಲ ಲಿಪ್‍ಬಾಮ್‍ಗಳನ್ನೂ ಹಾಗೂ ಟ್ರಾನ್ಸ್‌ಫ಼ರ್ ಪ್ರೂಫ಼್ ಲಿಪ್‍ಸ್ಟಿಕ್ (ತುಟಿಬಣ್ಣ) ಗಳನ್ನೂ ಹೊರತೆಗೆಯುವ ಸಮಯವಿದು; ದ್ರವ ಹಾಗೂ ಬುಲೆಟ್ ರೂಪಗಳೆರಡರಲ್ಲೂ. ಕ್ರೀಮ್‍ನಂತಿರುವ ಯಾವುದೇ ಲಿಪ್‍ಸ್ಟಿಕ್ ಅಥವಾ ಕ್ರೀಮ್‍ನಂತಿರುವ ಮ್ಯಾಟ್ (matte) ಫ಼ಾರ್ಮುಲಾಗಳೂ ಕೂಡ ಸುಲಭವಾಗಿ ವರ್ಗಾವಣೆಗೊಳ್ಳಬಲ್ಲವು. ಲಿಪ್ ಟಿಂಟ್‍ಗಳ ಹಾಗೂ ಸ್ಟೈನ್‍ಗಳ ಬಳಕೆಯನ್ನು ಪ್ರಯತ್ನಿಸಿರಿ ಮತ್ತು ಕೇವಲ ಒಂದು ಲಿಪ್ ಪೆನ್ಸಿಲ್‍ನಿಂದ ಹಾಗೆಯೇ ಸುಮ್ಮನೇ ನಿಮ್ಮ ಪೂರ್ತಿ ತುಟಿಗಳನ್ನು ತುಂಬಿಸಿಕೊಂಡರೂ ಸಾಕು. ಏಕೆಂದರೆ, ಈ ರೀತಿ ಮಾಡಿಕೊಳ್ಳಲಾದ ತುಟಿಗಳ ಮೇಕಪ್, ದೀರ್ಘಕಾಲದವರೆಗೆ ಉಳಿಯುತ್ತದೆ.

6) ಸೆಟ್ಟಿಂಗ್ ಸ್ಪ್ರೇಯನ್ನು ಬಳಸುವುದರ ಮೂಲಕ ನಿಮ್ಮ ಮೇಕಪ್ ಅನ್ನು ಅಂತ್ಯಗೊಳಿಸಿರಿ

6) ಸೆಟ್ಟಿಂಗ್ ಸ್ಪ್ರೇಯನ್ನು ಬಳಸುವುದರ ಮೂಲಕ ನಿಮ್ಮ ಮೇಕಪ್ ಅನ್ನು ಅಂತ್ಯಗೊಳಿಸಿರಿ

ಮೇಕಪ್ ತಜ್ಞರು ಸಾಮಾನ್ಯವಾಗಿ ಸೆಟ್ಟಿಂಗ್ ಸ್ಪ್ರೇಗಳನ್ನು ಬಳಸುವುದಿಲ್ಲ ಅಥವಾ ಬಳಸುವಂತೆ ಸಲಹೆ ಮಾಡುವುದಿಲ್ಲ. ಆದರೆ ನಿಮ್ಮ ಮೇಕಪ್, ಮಾಸ್ಕ್‌ಗೆ ಮೆತ್ತಿಕೊಳ್ಳದಂತೆ ತಡೆಯುವುದನ್ನು ಖಾತ್ರಿ ಮಾಡಿಕೊಳ್ಳಲು ಈ ಸ್ಪ್ರೇಗಳು ತೀರಾ ಅಗತ್ಯ. ಆದ್ದರಿಂದ, ಈಗ ಸೆಟ್ಟಿಂಗ್ ಸ್ಪ್ರೇಯನ್ನೂ ಮೇಕಪ್ ತಜ್ಞರು ತಮ್ಮ ಕಿಟ್‍ನಲ್ಲಿ ಸೇರಿಸಿಕೊಂಡಿದ್ದಾರೆ. ಸೆಟ್ಟಿಂಗ್ ಸ್ಪ್ರೇಯನ್ನು ನಿಮ್ಮ ತ್ವಚೆಯ ಮೇಲೆ ಸಿಂಪಡಿಸಿಕೊಂಡಾಗ, ಅದರ ದ್ರಾವಕವು ಆವಿಯಾಗುತ್ತದೆ ಹಾಗೂ ದೀರ್ಘಕಾಲದವರೆಗೆ ಉಳಿದುಕೊಳ್ಳುವ ಪಾಲಿಮರನ್ನು ತ್ವಚೆಯ ಮೇಲೆ ಹಾಗೆಯೇ ಉಳಿಸಿ ಹೋಗುತ್ತದೆ.

ನೃತ್ಯಪಟುಗಳು (ಡ್ಯಾನ್ಸರ್ಸ್) ಹಾಗೂ ವೇದಿಕೆಯ ಮೇಲೆ ಪ್ರದರ್ಶನ ನೀಡುವ ಇತರ ಕಲಾವಿದರು ಅಕ್ವಾ ಸೀಲ್ ಎಂಬ ಹೆಸರಿನ ಸಂಯುಕ್ತ ವಸ್ತುವನ್ನು ಉಪಯೋಗಿಸುತ್ತಾರೆ. ಈ ಅಕ್ವಾ ಸೀಲ್, ಅವರ ನಿಯಮಿತ ಮೇಕಪ್ ಅನ್ನು ನೀರು ನಿರೋಧಕ (ವಾಟರ್ ಪ್ರೂಫ಼್) ಹಾಗೂ ಬೆವರು ನಿರೋಧಕ (ಸ್ವೆಟ್ ಪ್ರೂಫ಼್) ವನ್ನಾಗಿಸುತ್ತದೆ. ಅಂತೆಯೇ ನೀವೂ ಕೂಡ ಅತ್ತಿತ್ತ ಸರಿಯದ, ಮೆತ್ತಿಕೊಳ್ಳದ, ಅಥವಾ ಕಲೆಯನ್ನುಂಟು ಮಾಡದಂತಹದ್ದನ್ನೇ ನಿಜಕ್ಕೂ ಬಯಸುವಿರಾದಲ್ಲಿ, ನಿಮ್ಮ ಮೇಕಪ್ ಉತ್ಪನ್ನದೊಂದಿಗೆ ಈ ಅಕ್ವಾ ಸೀಲ್ ಅನ್ನು ಹಾಗೆಯೇ ಮಿಶ್ರಮಾಡಿ ಬಳಿಕ ನಿಮ್ಮ ತ್ವಚೆಗೆ ಲೇಪಿಸಿಕೊಳ್ಳಿರಿ. ಅದು ಬೇಗನೇ ಮುಖಕ್ಕೆ ಮೆತ್ತಿಕೊಳ್ಳುತ್ತದೆಯಾದ್ದರಿಂದ, ಚುರುಕಾಗಿ ಅದನ್ನು ಮಿಶ್ರಗೊಳಿಸುವುದನ್ನು ಖಚಿತಪಡಿಸಿಕೊಳ್ಳಿರಿ.

English summary

Ways To Make Wearing Makeup With A Mask Mess Proof In Kannada

Here are ways to make wearimg makeup with a mask mess proof read on...
Story first published: Saturday, May 22, 2021, 12:52 [IST]
X
Desktop Bottom Promotion