For Quick Alerts
ALLOW NOTIFICATIONS  
For Daily Alerts

ಬೆಳಿಗ್ಗೆ ಹಚ್ಚಿದ ಐಲೈನರ್ ಸಂಜೆವರೆಗೂ ಉಳಿಯಬೇಕಾ? ಇಲ್ಲಿದೆ ಟ್ರಿಕ್ಸ್

|

ಕಣ್ಣಿನ ನೋಟವನ್ನು ಹೆಚ್ಚಿಸಲು ಐಲೈನರ್ ಬಳಸುವುದು ಸಾಮಾನ್ಯ. ಅದರೆ, ಐಲೈನರ್ ಹಚ್ಚಿಕೊಂಡ ಕೆಲವೇ ಸಮಯದಲ್ಲಿ, ಬೆವರಿನಿಂದಲೋ ಅಥವಾ ಇನ್ನಾವುದೋ ಕಾರಣದಿಂದಲೋ ಅದು ಒಂದು ಬದಿಯಿಂದ ಕರಗುತ್ತಾ ಬರುತ್ತದೆ. ಇದು ಮೇಕಪ್ ಇಷ್ಟಪಡುವ ಹೆಂಗಳೆಯರನ್ನು ನೋವುಗೆ ದೂಡುವ ಸಂಗತಿಯಾಗಿದೆ.

ಕಷ್ಟಪಟ್ಟು, ಆಸೆಯಿಂದ ಹಚ್ಚಿಕೊಂಡ ಐಲೈನರ್ ಹಾಳಾದಾಗ ಅಗುವ ನೋವು ಅಷ್ಟಷ್ಟಲ್ಲ, ಅದನ್ನ ಅನುಭವಿಸಿದವರಿಗೇ ಗೊತ್ತು. ಅದಕ್ಕಾಗಿ ನಾವಿಂದು ಐಲೈನರ್ ದಿನವಿಡೀ ಇರುವಂತೆ ಅದನ್ನು ಹೇಗೆ ಬಳಸಬಹುದು ಎಂಬುದನ್ನು ಕೆಲವೊಂದು ಟ್ರಿಕ್ಗಳನ್ನು ಹೇಳಲಿದ್ದೇವೆ. ಈ ಮೂಲಕ ಇಷ್ಟಪಟ್ಟು ಹಾಕಿಕೊಂಡ ಐಲೈನರ್ ಹೆಚ್ಚುಕಾಲ ಇರುವಂತೆ ಮಾಡಬಹುದು.

ಐಲೈನರ್ ಹೆಚ್ಚುಕಾಲ ಉಳಿಯಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಐಲೈನರ್ ಹೆಚ್ಚುಕಾಲ ಉಳಿಯಲು ಕೆಲವೊಂದು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಕಣ್ಣಿನ ರೆಪ್ಪೆಗಳ ಸುತ್ತ ಮಾಯಿಶ್ಚರೈಸರ್ ಬಳಸಬೇಡಿ :

ನಿಮ್ಮ ಕಣ್ಣುರೆಪ್ಪೆಗಳ ಸುತ್ತಲೂ ಕ್ರೀಮ್ ಬಳಸುವುದರಿಂದ ನಿಮ್ಮ ಐಲೈನರ್ ಕರಗಿ ಹೋಗಬಹುದು. ಆದ್ದರಿಂದ ನೀವು ಮೇಕಪ್ ಮಾಡುವಾಗ ನಿಮ್ಮ ಕಣ್ಣಿನ ರೆಪ್ಪೆಗಳ ಸುತ್ತಲೂ ಕ್ರೀಮ್ ಅಥವಾ ಮಾಯಿಶ್ಚರೈಸರ್ ಬಳಸುವುದನ್ನು ತಪ್ಪಿಸಿ. ಮಾಯಿಶ್ಚರೈಸರ್ ಬಳಸುವುದರಿಂದ ನಿಮ್ಮ ಐಲೈನರ್ ದಿನವಿಡೀ ಇರುವುದನ್ನು ತಡೆಯುತ್ತದೆ.

ವಾಟರ್ ರೆಸಿಸ್ಟೆಂಟ್ ಐಲೈನರ್ ಬಳಸಿ:

ವಾಟರ್ ರೆಸಿಸ್ಟೆಂಟ್ ಐಲೈನರ್ ಬಳಸಿ:

ನಿಮ್ಮ ಐಲೈನರ್ ದಿನವಿಡೀ ಉಳಿಯಬೇಕಾದರೆ, ಸರಿಯಾದ ಐಲೈನರ್ ಅನ್ನು ಆಯ್ಕೆ ಮಾಡುವುದು ಬಹಳ ಮುಖ್ಯ. ನೀರು ನಿರೋಧಕ ಅಂದರೆ ವಾಟರ್ ಪ್ರೂಫ್ ಹಾಗೂ ಬೆವರು ನಿರೋಧಕ ಐಲೈನರ್ ಅನ್ನು ಆರಿಸಿ. ಸಾಮಾನ್ಯ ಪೆನ್ಸಿಲ್ ಅಥವಾ ಪೆನ್ ಐಲೈನರ್ಗಳಿಗಿಂತ ಹೆಚ್ಚು ಕಾಲ ಉಳಿಯುವ ಲಿಕ್ವಿಡ್ ಅಥವಾ ಜೆಲ್ ರೂಪದ ಐಲೈನರ್ ಬಳಸಿ.

ಐ ಪ್ರೈಮರ್ ಬಳಸಿ:

ಐ ಪ್ರೈಮರ್ ಬಳಸಿ:

ನಿಮ್ಮ ಮುಖದಂತೆಯೇ, ನಿಮ್ಮ ಕಣ್ಣುಗಳಿಗೂ ಸ್ವಲ್ಪ ಪೂರ್ವಸಿದ್ಧತೆಯ ಅಗತ್ಯವಿದೆ. ಅದಕ್ಕಾಗಿ ಐ ಪ್ರೈಮರ್ ಅನ್ನು ಬಳಸಿ ಏಕೆಂದರೆ ಅದು ನಿಮ್ಮ ಐಲೈನರ್ ಅನ್ನು ಸ್ಥಳದಲ್ಲಿ ಇಡಲು ಸಹಾಯ ಮಾಡುತ್ತದೆ. ಐ ಪ್ರೈಮರ್ ಯಾವುದೇ ಮೇಕಪ್ ಬಳಸುವ ಮೊದಲು ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಬಳಸಬೇಕಾದ ಕ್ರೀಮ್ ಆಗಿದೆ. ಆದರೆ, ಸ್ವಲ್ಪ ಪ್ರಮಾಣದ ಪ್ರೈಮರ್ ಅಷ್ಟೇ ಬಳಸಿ, ಹೆಚ್ಚು ಬೇಡ.

ಅರೆಪಾರದರ್ಶಕ ಪೌಡರ್ ಹಚ್ಚಿ:

ಅರೆಪಾರದರ್ಶಕ ಪೌಡರ್ ಹಚ್ಚಿ:

ನಿಮ್ಮ ಐಲೈನರ್ ಕರಗಿ ಹೋಗಬಾರದೆಂದರೆ, ಅದರ ಮೇಲೆ ಅರೆಪಾರದರ್ಶಕ ಪುಡಿಯನ್ನು ಬಳಸಿ. ಅರೆಪಾರದರ್ಶಕ ಅಥವಾ ಲೂಸ್ ಪೌಡರ್ ಪುಡಿಯು ಐಲೈನರ್ನ ಹೊಳಪನ್ನು ಕಾಪಾಡಿಕೊಳ್ಳಲು ಸಹಾಯ ಮಾಡುವುದಲ್ಲದೇ, ಅದು ದಿನವಿಡೀ ಉಳಿಯುವಂತೆ ಮಾಡುತ್ತದೆ.

ಬ್ರಷ್ನಲ್ಲಿ ಸ್ವಲ್ಪ ಅರೆಪಾರದರ್ಶಕ ಪುಡಿಯನ್ನು ತೆಗೆದುಕೊಂಡು ಐಲೈನರ್ ಹಚ್ಚಿದ ನಂತರ ಅದನ್ನು ನಿಮ್ಮ ಕಣ್ಣುರೆಪ್ಪೆಗಳ ಮೇಲೆ ಹಚ್ಚಿ. ಕಣ್ಣುರೆಪ್ಪೆಗಳ ಮೇಲೆ ಯಾವುದೇ ಗೋಚರ ರೇಖೆಗಳಿಲ್ಲದಂತೆ ಅದನ್ನು ಚೆನ್ನಾಗಿ ಮಿಶ್ರಣ ಮಾಡಿ.

ಐಲೈನರ್ನಲ್ಲಿ ಸ್ವಲ್ಪ ಐಶ್ಯಾಡೋವನ್ನು ಪ್ಯಾಟ್ ಮಾಡಿ :

ಐಲೈನರ್ನಲ್ಲಿ ಸ್ವಲ್ಪ ಐಶ್ಯಾಡೋವನ್ನು ಪ್ಯಾಟ್ ಮಾಡಿ :

ನೀವು ಐಲೈನರ್ ಹಚ್ಚಿದ ನಂತರ, ಫ್ಲಾಟ್ ಬ್ರಷ್ನಲ್ಲಿ ಸ್ವಲ್ಪ ಐಶ್ಯಾಡೋವನ್ನು ತೆಗೆದುಕೊಂಡು ಅದನ್ನು ಐಲೈನರ್ ಮೇಲೆ ಅದ್ದಿ. ಈ ಟ್ರಿಕ್ ನಿಮ್ಮ ಐಶ್ಯಾಡೋ ಹಾಳಾಗುವುದನ್ನು ಅನ್ನು ತಡೆಯುತ್ತದೆ.

ಬಹು ಪದರಗಳನ್ನು ಹಚ್ಚಿ:

ಬಹು ಪದರಗಳನ್ನು ಹಚ್ಚಿ:

ಒಂದೇ ಬಾರಿಗೆ ಲೈನರ್ ಎಳೆಯಲು ಸಮರ್ಥರಾಗಿದ್ದರೂ ಸಹ, ಅದನ್ನು ಮುಗಿಸಲು ಸ್ವಲ್ಪ ಸಮಯ ತೆಗೆದುಕೊಳ್ಳಿ. ಒಂದೇ ಪದರದ ಐಲೈನರ್ ಹಚ್ಚುವ ಬದಲು, ಅದರ ಮೇಲೆ ಇನ್ನೊಂದು, ಮತ್ತೊಂದು ಪದರವನ್ನು ಹಚ್ಚಿ. ಆದರೆ, ಹಚ್ಚುವಾಗ ತೆಳುವಾದ ಗೆರೆಯನ್ನು ಎಳೆಯಿರಿ, ಇಲ್ಲವಾದಲ್ಲಿ ಎಲ್ಲವನ್ನೂ ಹಾಳು ಮಾಡುವ ಸಂಭವವಿರುತ್ತದೆ.

ಸರಿಯಾದ ಮಸ್ಕರಾವನ್ನು ಆರಿಸಿ :

ಸರಿಯಾದ ಮಸ್ಕರಾವನ್ನು ಆರಿಸಿ :

ಹೌದು, ನಿಮ್ಮ ಐಲೈನರ್ ಉಳಿಯಲು ಮಸ್ಕರಾ ಪ್ರಮುಖ ಪಾತ್ರವನ್ನು ವಹಿಸುತ್ತದೆ. ನಿಮ್ಮ ರೆಪ್ಪೆಗೂದಲುಗಳ ಮೇಲೆ ಬಳಸುವ ಮಸ್ಕರಾ ನಿಮ್ಮ ಐಲೈನರ್ನ ದೀರ್ಘಾಯುಷ್ಯದಲ್ಲಿ ಪ್ರಮುಖ ಪಾತ್ರ ವಹಿಸುತ್ತದೆ. ವಾಟರ್ ಪ್ರೂಪ್ ಅಲ್ಲದ ಮಸ್ಕರಾ ಬಳಸಬೇಡಿ, ಇಲ್ಲವಾದಲ್ಲಿ ಅವುಗಳು ಕರಗಿ, ನಿಮ್ಮ ಕಣ್ಣಿಗೆ ಹಾಕಿರುವ ಐಲೈನರ್ ಯನ್ನು ಹಾಳು ಮಾಡುತ್ತದೆ. ಆದ್ದರಿಂದ ವಾಟರ್ ಫ್ರೂಪ್ ಹಾಗೂ ಹೆಚ್ಚು ಕಾಲ ಉಳಿಯುವ ಗುಣಮಟ್ಟದ ಮಸ್ಕರಾ ಬಳಸಿ.

English summary

Tips To Make Eyeliner Last All Day Long in kannada

Here we talking about Tips To Make Eyeliner Last All Day Long in kannada, read on
Story first published: Tuesday, November 23, 2021, 10:05 [IST]
X
Desktop Bottom Promotion