For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಅಂದ ಹೆಚ್ಚಿಸಲು ಈ ಮೇಕಪ್ ಟಿಪ್ಸ್

|

ಮಳೆಗಾಲದಲ್ಲಿ ಮೇಕಪ್ ಮಾಡಿಕೊಳ್ಳುವುದು ಒಂದು ಸಾಹಸವೇ ಸರಿ. ಯಾಕಂದ್ರೆ, ತೇವಾಂಶ ಹೆಚ್ಚಾಗಿರುವ ಈ ಕಾಲದಲ್ಲಿ ಮೇಕಪ್ ಹೆಚ್ಚು ಕಾಲ ಉಳಿಯೋದು ಕಷ್ಟ. ಇದ್ರಿಂದ ಆಗಾಗ ಮೇಕಪ್ ಮಾಡಿಕೊಳ್ಳೋದು ಅಥವಾ ಟಚಪ್ ಅವಶ್ಯಕತೆ ಇರುತ್ತೆ. ಆದ್ದರಿಂದ ಮಳೆಗಾಲಕ್ಕೆ ಸರಿಹೊಂದುವ ರೀತಿ ಮೇಕಪ್ ಮಾಡಿಕೊಳ್ಳಬೇಕಾಗುತ್ತೆ. ಹಾಗಾದ್ರೆ, ಮಳೆಗಾಲದಲ್ಲಿ ಚೆನ್ನಾಗಿ ಕಾಣಿಸಲು ನಾವು ಯಾವ ರೀತಿ ಮೇಕಪ್ ಮಾಡಿಕೊಳ್ಳಬೇಕು ಅಂತ ಯೋಚನೆ ಮಾಡ್ತಾ ಇದ್ದೀರಾ? ಈ ಸ್ಟೋರಿ ನೋಡಿ, ನಿಮಗೆ ಗೊತ್ತಾಗುತ್ತೆ!

ಮಳೆಗಾಲದಲ್ಲಿ ಮೇಕಪ್ ಮಾಡಿಕೊಳ್ಳಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಪ್ರೈಮರ್ ಬಳಸಿ:

ಪ್ರೈಮರ್ ಬಳಸಿ:

ನೀವು ಈ ಹಿಂದೆ ಪ್ರೈಮರ್ ಬಳಕೆ ಮಾಡದಿದ್ದರೆ, ಮಳೆಗಾಲವು ಪ್ರೈಮರ್ ಬಳಸಲು ಸೂಕ್ತ ಸಮಯವಾಗಿದೆ. ಇದಕ್ಕಾಗಿ ಸ್ವಲ್ಪ ಪ್ರಮಾಣದ ಪ್ರೈಮರ್ ತೆಗೆದುಕೊಂಡು, ಮುಖದ ಮೇಲೆ ಟ್ಯಾಪ್ ಮಾಡಿ. ಇದು, ನಿಮ್ಮ ತ್ವಚೆಯನ್ನು ನಯವಾಗಿಸುವುದಲ್ಲದೇ, ನಿಮ್ಮ ಮೇಕಪ್ ದಿನವಿಡೀ ಇರುವುದಕ್ಕೆ ಸಹಾಯ ಮಾಡುತ್ತದೆ.

ಸರಳ ದಿನಚರಿ ಫಾಲೋ ಮಾಡಿ:

ಸರಳ ದಿನಚರಿ ಫಾಲೋ ಮಾಡಿ:

ನೆನಪಿಡಿ, ಮಳೆಗಾಲದಲ್ಲಿ ಕಡಿಮೆ ಮೇಕಪ್‌ ಮಾಡಿಕೊಳ್ಳುವುದು ಮುಖ್ಯವಾಗಿದೆ. ಹೆಚ್ಚು ಮೇಕಪ್ ಬೇಡ, ಲೈಟ್ ಮೇಕಪ್ ಜೊತೆಗೆ ನ್ಯಾಚುರಲ್ ಲುಕ್ ಬರುವಂತೆ ಮಾಡಿಕೊಳ್ಳಿ. ಜೊತೆಗೆ ಮಳೆಗಾಲದಲ್ಲಿ ಹೇರ್‌ಸ್ಟೈಲ್ ಬಗ್ಗೆಯೂ ಗಮನಹರಿಸಬೇಕು. ಸರಳ ಹೇರ್‌ಸ್ಟೈಲ್ ಜೊತೆಗೆ ಸಿಂಪಲ್ ಲಿಪ್‌ಸ್ಟಿಕ್ ಆಯ್ಕೆ ಮಾಡುವುದು ಉತ್ತಮ.

ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇರ್‌ಸ್ಟೈಲ್ ಮಾಡಿ:

ನಿಮ್ಮ ಅನುಕೂಲಕ್ಕೆ ತಕ್ಕಂತೆ ಹೇರ್‌ಸ್ಟೈಲ್ ಮಾಡಿ:

ಹೌದು, ನಿಮ್ಮ ಅನುಕೂಲಕ್ಕೆ ತಕ್ಕಂತೆ ಕೂದಲನ್ನು ಸ್ಟೈಲ್ ಮಾಡಿ. ನಿಮಗೆ ಮಳೆಗಾಲದಲ್ಲೂ ಫ್ರೀ ಹೇರ್ ಬೇಕಿದ್ದರೆ, ಮಾಡಿಕೊಳ್ಳಿ ಆದರೆ, ಅದನ್ನು ಆರೈಕೆ ಮಾಡುವ ವಿಧಾನ ಸರಿಯಾಗಿ ತಿಳಿದುಕೊಳ್ಳಿ. ಸರಿಯಾದ ಉತ್ಪನ್ನವನ್ನು ಬಳಸಿ, ಕಾಲಕಾಲಕ್ಕೆ ಎಣ್ಣೆ ಮಸಾಜ್ ಜೊತೆಗೆ ಶಾಂಪೂ ಮಾಡಿಕೊಳ್ಳಬೇಕು. ನೆನಪಿಡಿ, ಕೂದಲನ್ನು ಸರಿಯಾಗಿ ಒಣಗಿಸಲು ಮರೆಯಬೇಡಿ.

ಕೂದಲನ್ನು ಸರಿಯಾಗಿ ಒಣಗಿಸಿ:

ಕೂದಲನ್ನು ಸರಿಯಾಗಿ ಒಣಗಿಸಿ:

ಈ ಹಿಂದೇನೇ ಹೇಳಿದಂತೆ ಎಲ್ಲಾ ಕಾಲದಲ್ಲೂ ಕೂದಲನ್ನು ಸರಿಯಾಗಿ ಒಣಗಿಸುವುದು ತುಂಬಾ ಮುಖ್ಯ. ಒದ್ದೆ ಕೂದಲನ್ನು ಬಾಚುವುದು, ಬೇರೆಬೇರೆ ಸ್ಟೈಲ್ ಮಾಡಿಕೊಳ್ಳುವುದು ಕೂದಲಿನ ಹಾನಿಗೆ ಕಾರಣವಾಗುವುದು. ಆದ್ದರಿಂದ ಮಳೆಗಾಲದಲ್ಲಿ ಕೂದಲನ್ನು ಚೆನ್ನಾಗಿ ಒರೆಸಿಕೊಂಡು, ಒಣಗಿಸಿಕೊಳ್ಳಿ. ಹೇರ್‌ ಡ್ರೈಯರ್ ಬಳಕೆ ಮಾಡುತ್ತಿದ್ದರೆ ಉತ್ತಮ, ನಿಮ್ಮ ಪ್ರತಿಯೊಂದು ಕೂದಲಿನ ಎಳೆಗಳನ್ನು ಒಣಗಿಸಿಕೊಳ್ಳುವುದು ತುಂಬಾ ಒಳ್ಳೆಯದು.

ಬ್ಲಶ್‌ಗೆ ಪೌಡರ್ ಬೇಡ:

ಬ್ಲಶ್‌ಗೆ ಪೌಡರ್ ಬೇಡ:

ಮಳೆಗಾಲದಲ್ಲಿ ಬ್ಲಶ್‌ಗೆ ಪೌಡರ್ ಬದಲು ಕ್ರೀಮ್ ಬಳಸುವುದು ಉತ್ತಮ ಆಯ್ಕೆಯಾಗಿದೆ. ಪೌಡರ್ ಬೇಗನೇ ಕರಗುವುದಲ್ಲದೇ, ನಿಮ್ಮನ್ನು ಕಿರಿಕಿರಿಗೆ ಒಳಪಡಿಸಬಹುದು. ಆದರೆ, ಕ್ರೀಮ್ ನಿಮ್ಮ ತ್ವಚೆಗೆ ಚೆನ್ನಾಗಿ ಹೊಂದಿಕೊಂಡು, ತೇವಾಂಶದಿಂದ ಕೂಡಿರುವ ಮಳೆಗಾಲಕ್ಕೆ ಸೂಕ್ತವಾದ ಹೊಳಪು ನೀಡುವುದು. ಆದ್ದರಿಂದ ಮಳೆಗಾಲದಲ್ಲಿ ಬ್ಲಶ್‌ಗೆ ಕ್ರೀಮ್ ಬಳಸಿ.

ನಿಮ್ಮ ಕಣ್ಣುಗಳು ನೈಸರ್ಗಿಕವಾಗಿ ಕಾಣಲಿ:

ನಿಮ್ಮ ಕಣ್ಣುಗಳು ನೈಸರ್ಗಿಕವಾಗಿ ಕಾಣಲಿ:

ಈಗಾಗಲೇ ಹೇಳಿದಂತೆ, ಮಳೆಗಾಲವೂ ಯಾವುದೇ ಮೇಕಪ್ ಪ್ರಯೋಗಕ್ಕೆ ಸೂಕ್ತವಾದ ಕಾಲವಲ್ಲ. ಅದು ನಿಮ್ಮ ಕಣ್ಣಿಗೂ ಅನ್ವಯವಾಗುವುದು. ನಿಮ್ಮ ಕಣ್ಣಿಗೆ ವಿವಿಧ ಮೇಕಪ್ ಮಾಡಿಕೊಳ್ಳುವುದರ ಬದಲು ಆದಷ್ಟು ನೈಸರ್ಗಿಕವಾಗಿ ಕಾಣಲು ಬಿಡಿ.ಅಗತ್ಯವಿದ್ದರೆ, ಮಸ್ಕರಾ ಜೊತೆಗೆ ವಾಟರ್‌ಪ್ರೂಫ್ ಐಲೈನರ್ ಬಳಸುವುದು ಉತ್ತಮ. ಹೆವಿ ಮೇಕಪ್ ಕಣ್ಣಿಗೆ ಮಾಡಿಕೊಂಡರೆ, ಮಳೆಗಾಲದ ನೀರಿನಿಂದ ಅದು ಹೆಚ್ಚು ಕಾಲ ಉಳಿಯದು. ಆದ್ದರಿಂದ ನೈಸರ್ಗಿಕವಾಗಿ ಬಿಡುವುದು ಒಳ್ಳೆಯದು.

ಕಾಲಕಾಲಕ್ಕೆ ಟಚಪ್ ಇರಲಿ:

ಕಾಲಕಾಲಕ್ಕೆ ಟಚಪ್ ಇರಲಿ:

ನೀವು ಮನೆಯಿಂದ ಹೊರಕ್ಕೆ ಕಾಲಿಡುವ ಮೊದಲು, ನಿಮ್ಮ ಬ್ಯಾಗ್‌ನಲ್ಲಿ ಕೆಲವು ಉತ್ಪನ್ನಗಳು ಇವೆಯೇ ಎಂಬುದನ್ನು ಖಚಿತಪಡಿಸಿಕೊಳ್ಳಿ. ಲಿಪ್ಸ್ಟಿಕ್ಸ್, ಬ್ಲೆಂಡರ್ ಸ್ಪಂಜ್, ಮೇಕಪ್ ರಿಮೂವರ್ ಟಿಶ್ಯುಗಳಂತ ವಸ್ತುಗಳನ್ನು ಜೊತೆಗೆ ಇಟ್ಟುಕೊಳ್ಳುವುದು ಮಳೆಗಾಲಕ್ಕೆ ಬಹಳ ಪ್ರಯೋಜನಕಾರಿಯಾಗಿದೆ. ಇದರಿಂದ ನಿಮ್ಮ ಮೇಕಪ್ ಹಾಳಾಗಿದದ್ರೆ ಅಥವಾ ಏನಾದರೂ ಹೆಚ್ಚು ಕಡಿಮೆಯಾದರೆ ತಕ್ಷಣವೇ ಟಚಪ್ ಮಾಡಿಕೊಳ್ಳಬಹುದು.

ಸೆಟ್ಟಿಂಗ್ ಸ್ಪ್ರೇ ಯೊಂದಿಗೆ ಮೇಕಪ್ ಮುಗಿಸಿ:

ಸೆಟ್ಟಿಂಗ್ ಸ್ಪ್ರೇ ಯೊಂದಿಗೆ ಮೇಕಪ್ ಮುಗಿಸಿ:

ಹೌದು, ನೀವು ಕೇವಲ ಮಾಯಿಶ್ಚರೈಸರ್ ಹಾಗೂ ಮಸ್ಕರಾ ಹಾಕಿದ್ದರೂ ಸಹ ನಿಮ್ಮ ಮೇಕಪ್‌ನ್ನು ಮೇಕಪ್ ಸೆಟ್ಟಿಂಗ್ ಸ್ಟ್ರೇ ಬಳಸಿ ಮುಗಿಸಬೇಕು. ಇದು ನಿಮ್ಮ ಮುಖಕ್ಕೆ ಒಂದು ಫಿನಿಶಿಂಗ್ ನೀಡುವುದು. ಜೊತೆಗೆ ಇದು ವಾತಾವರಣ ಹಾಗೂ ನಿಮ್ಮ ಮೇಕಪ್ ನಡುವೆ ಒಂದು ಗೋಡೆ ರೀತಿ ಕೆಲಸ ಮಾಡಿ, ನಿಮ್ಮ ಮೇಕಪ್ ಹಾಳಾಗದಂತೆ ತಡೆಯುತ್ತದೆ.

English summary

Tips For Looking Great When It's Raining in Kannada

Here we talking about Tips For Looking Great When It's Raining in Kannada, read on
Story first published: Monday, July 11, 2022, 9:44 [IST]
X
Desktop Bottom Promotion