For Quick Alerts
ALLOW NOTIFICATIONS  
For Daily Alerts

ಮಳೆಗಾಲದಲ್ಲಿ ಮೇಕಪ್ ಹೆಚ್ಚು ಕಾಲ ಉಳಿಯಬೇಕೆಂದರೆ, ಈ ಟಿಪ್ಸ್ ಅಳವಡಿಸಿಕೊಳ್ಳಿ!

|

ಮಳೆಗಾಲದಲ್ಲಿ ಮೇಕಪ್ ಮಾಡಿಕೊಳ್ಳುವುದು ಒಂದು ಸವಾಲಾದರೆ, ಅದನ್ನು ದೀರ್ಘಕಾಲ ಉಳಿಸಿಕೊಳ್ಳುವುದು ಅದಕ್ಕಿಂತ ದೊಡ್ಡ ಸವಾಲು. ಏಕೆಂದರೆ, ಈ ಕಾಲದಲ್ಲಿ ತೇವಾಂಶ ಹೆಚ್ಚಾಗಿರುವುದರಿಂದ, ಮುಖ ಬೇಗನೇ ಜಿಡ್ಡಾಗುತ್ತದೆ. ಇದರಿಂದ ಮೇಕಪ್ ಹೆಚ್ಚು ಕಾಲ ಉಳಿಯಲಾರದು.

Monsoon Makeup Tips

ಆದ್ದರಿಂದ ಕಾಲ ಬದಲಾದಂತೆ, ನಮ್ಮ ಮೇಕಪ್ ಮಾಡಿಕೊಳ್ಳುವ ವಿಧಾನ, ಮೇಕಪ್‌ಗೆ ಬಳಸುವ ಉತ್ಪನ್ನಗಳೂ ಬದಲಾಗಬೇಕು. ಹಾಗಾದರೆ, ಮಳೆಗಾಲದಲ್ಲಿ ತ್ವಚೆ ಆರೋಗ್ಯಕರ ಹಾಗೂ ತಾರುಣ್ಯಪೂರ್ಣದಿಂದ ಕೂಡಿರಲು ಹೇಗೆ ಮೇಕಪ್ ಮಾಡಿಕೊಳ್ಳಬೇಕು ಎಂಬುದನ್ನು ನೋಡೋಣ.

ಮಳೆಗಾಲದಲ್ಲಿ ಮೇಕಪ್ ಹೆಚ್ಚು ಕಾಲ ಇರಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಮೇಕಪ್ ಹಚ್ಚುವ ಮುನ್ನ:

ಮೇಕಪ್ ಹಚ್ಚುವ ಮುನ್ನ:

ನಿಮ್ಮ ಮುಖವನ್ನು ಮೊದಲು ತೊಳೆಯಿರಿ, ನಂತರ ಐಸ್ ಕ್ಯೂಬ್ ಬಳಸಿ, ಮುಖದ ಮೇಲೆ 10 ನಿಮಿಷಗಳ ಕಾಲ ಮಸಾಜ್ ಮಾಡಿ. ಇದು ಬೆವರುವಿಕೆಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ. ಇದರಿಂದ ಮೇಕಪ್ ಹೆಚ್ಚು ಕಾಲ ಉಳಿಯುತ್ತದೆ. ತದನಂತರ, ನೀವು ಎಣ್ಣೆಯುಕ್ತ ಚರ್ಮವನ್ನು ಹೊಂದಿದ್ದರೆ, ಅಸ್ಟ್ರಿಂಜೆಂಟ್, ಸಾಮಾನ್ಯ ಚರ್ಮವನ್ನು ಹೊಂದಿದ್ದರೆ, ಮೇಕಪ್ ಹಚ್ಚಿಕೊಳ್ಳುವ ಮೊದಲು ಟೋನರ್ ಬಳಸಿ. ಇದು ನಿಮ್ಮ ಮುಖದ ತೇವಾಂಶವನ್ನು ಲಾಕ್ ಮಾಡಿ, ಮೇಕಪ್ ಹೆಚ್ಚು ಕಾಲ ಉಳಿಯಲು ಸಹಾಯ ಮಾಡುವುದು.

ಫೌಂಡೇಷನ್:

ಫೌಂಡೇಷನ್:

ಮಳೆಗಾಲದಲ್ಲಿ ಹೆಚ್ಚು ಫೌಂಡೇಶನ್, ವಿಶೇಷವಾಗಿ ಕ್ರೀಮ್ ಫೌಂಡೇಶನ್‌ಗಳನ್ನು ಬಳಸುವುದನ್ನು ತಪ್ಪಿಸಿ. ಅದರ ಬದಲಾಗಿ ಲೂಸ್ ಪೌಡರ್ ಅಥವಾ ಮಿನರಲೈಸ್ಡ್ ಫೌಂಡೇಷನ್ ಬಳಸಿ. ಇವು ಮುಖಕ್ಕೆ ಒಳ್ಳೆಯದು, ಆದರೆ ಮಿತವಾಗಿ ಬಳಸಬೇಕು. ಮುಖದ ಜಿಡ್ಡನ್ನು ಹೋಗಲಾಡಿಸಲು ಲೂಸ್ ಪೌಡರ್ ಬಳಸುವುದು ಉತ್ತಮ.

ಬ್ಲಶ್

ಬ್ಲಶ್

ಮಳೆಗಾಲದಲ್ಲಿ ಮೇಕಪ್ ಮಾಡಿಕೊಳ್ಳುವಾಗ ಪೌಡರ್ ಬ್ಲಶ್ ಬಳಸಿ, ಇದು ಹೆಚ್ಚು ಜಿಡ್ಡಾಗುವುದನ್ನು ತಡೆಯುವುದು. ಆದರೆ ಗಮನಿಸಿ, ಹೆಚ್ಚು ಬೇಡ. ಈ ಪೌಡರ್‌ನ್ನು ನೈಸರ್ಗಿಕವಾಗಿ ಇರಿಸಿ. ಗುಲಾಬಿ ಮತ್ತು ಪೀಚ್ ಪೌಡರ್ ಉತ್ತಮವಾಗಿ ಕಾಣುತ್ತವೆ. ಆದರೆ ಮಳೆಗಾಲದಲ್ಲಿ ಶಿಮ್ಮರ್ ಬಳಸಬೇಡಿ.

ಐಶ್ಯಾಡೋ :

ಐಶ್ಯಾಡೋ :

ಮಳೆಗಾಲದಲ್ಲಿ ಪೌಡರ್ ಐಶ್ಯಾಡೋಗಳನ್ನು ಬಳಸಿ. ಕಂದು, ಗುಲಾಬಿ, ಲ್ಯಾವೆಂಡರ್, ಶಾಂಪೇನ್ ಮತ್ತು ನೀಲಿ ಛಾಯೆಗಳು ಈ ಋತುವಿಗೆ ಒಳ್ಳೆಯದು.

ಐಲೈನರ್, ಕಾಜಲ್ ಮತ್ತು ಮಸ್ಕರಾ:

ಐಲೈನರ್, ಕಾಜಲ್ ಮತ್ತು ಮಸ್ಕರಾ:

ಮಳೆಗಾಲದಲ್ಲಿ ಜಲನಿರೋಧಕ ಅಂದರೆ ವಾಟರ್‌ಪ್ರೂಫ್ ಸೌಂದರ್ಯವರ್ಧಕಗಳನ್ನು ಬಳಸುವುದು ಬಹುಮುಖ್ಯವಾಗಿದೆ. ಏಕೆಂದರೆ ಇವು ಮಳೆಗಾಲದ ನೀರಿನಿಂದ, ಕಣ್ಣಿಗೆ ಹಚ್ಚಿದ ಐಲೈನರ್ ಕರಗಿ, ನೀರಾಗುವುದನ್ನು, ಅದರಿಂದಾಗುವ ಮುಜುಗರದಿಂದ ರಕ್ಷಣೆ ನೀಡುತ್ತವೆ.

ಲಿಪ್ಸ್ಟಿಕ್:

ಲಿಪ್ಸ್ಟಿಕ್:

ಮಳೆಗಾಲದ್ಲಲಿ ಮ್ಯಾಟ್ ಫಿನಿಶ್ ಲಿಪ್ಸ್ಟಿಕ್ಗಳನ್ನು ಬಳಸಿ. ಇವುಗಳು ಹೆಚ್ಚು ಕಾಲ ಉಳಿಯಬಲ್ಲವು. ಅಷ್ಟೇ ಅಲ್ಲ, ಹೆಚ್ಚು ಹೊಳಪಿರುವ ಅಂದರೆ ಗ್ಲಾಸಿ ಲಿಪ್‌ಸ್ಟಿಕ್ ತಪ್ಪಿಸುವುದು ಉತ್ತಮವಾಗಿದೆ.

ಹುಬ್ಬು:

ಹುಬ್ಬು:

ಐಬ್ರೋ ಪೆನ್ಸಿಲ್ ಅನ್ನು ಹೆಚ್ಚು ಬಳಸಬೇಡಿ. ಬದಲಾಗಿ, ಕೂದಲನ್ನು ಹಿಡಿದಿಡಲು ಐಬ್ರೋ ಜೆಲ್ ಅನ್ನು ಬಳಸಲು ಪ್ರಯತ್ನಿಸಿ.

ಹಗಲು ಮತ್ತು ರಾತ್ರಿಗೆ ಮೇಕಪ್ :

ಹಗಲು- ರಾತ್ರಿಗೆ ಮೇಕಪ್ ಸಾಮಾನ್ಯವಾಗಿ ಒಂದೇ ಆಗಿರುತ್ತದೆ. ಆದಷ್ಟು ಕಡಿಮೆ ಮತ್ತು ನೈಸರ್ಗಿಕವಾಗಿ ಮೇಕಪ್ ಮಾಡಿಕೊಳ್ಳಲು ಪ್ರಯತ್ನಿಸಿ. ಆದಾಗ್ಯೂ, ಹಗಲಿಗಾಗಿ ಲೈಟ್ ಶೇಡ್, ರಾತ್ರಿಗೆ ಡೀಪ್ ಕಲರ್ ಬಳಸುವುದು ಉತ್ತಮ. ನಿಮ್ಮ ಲಿಪ್‌ಸ್ಟಿಕ್ ಆಯ್ಕೆಗೂ ಇದೇ ಅನ್ವಯವಾಗುವುದು.

ಮಳೆಗಾಲದಲ್ಲಿ ಮೇಕಪ್ ಮಾಡಿಕೊಳ್ಳುವಾಗ ಗಮನಿಸಬೇಕಾದ ವಿಚಾರ:

ನಿಮ್ಮ ಬ್ರಷ್‌ಗಳನ್ನು ಎಲ್ಲಾ ಕಾಲಕ್ಕೂ ಸ್ವಚ್ಛವಾಗಿರಿಸಿಕೊಳ್ಳುವುದು ಮುಖ್ಯ. ಅದರಲ್ಲೂ ಮಳೆಗಾಲದಲ್ಲಿ ಹೆಚ್ಚು ತೇವಾಂಶವಿರುವುದರಿಂದ, ಅವುಗಳನ್ನು ಒಣ ಸ್ಥಳದಲ್ಲಿ ಸಂಗ್ರಹಿಸಿ. ಮೇಲಾಗಿ ಅವುಗಳನ್ನು ಸಂಗ್ರಹಿಸಲು ರೋಲ್ ಅಪ್ ಪೌಚ್ ಅಥವಾ ಬಾಕ್ಸ್ ಇಟ್ಟುಕೊಳ್ಳಿ.

ಲಿಪ್ಸ್ಟಿಕ್ ಮತ್ತು ಬ್ರಷ್‌ಗಳನ್ನು ಇತರರೊಂದಿಗೆ ಹಂಚಿಕೊಳ್ಳುವುದನ್ನು ತಪ್ಪಿಸಿ.

ನಿಮ್ಮ ಮಲಗುವ ಮುನ್ನ ಮೇಕಪ್ ತೆಗೆಯಿರಿ. ಇಲ್ಲವಾದಲ್ಲಿ, ಅದು ನಿಮ್ಮ ರಂಧ್ರಗಳನ್ನು ಮುಚ್ಚಿಹಾಕುತ್ತದೆ. ಇದರಿಂದ ಬ್ರೇಕ್ಔಟ್ ಮತ್ತು ಬ್ಲ್ಯಾಕ್ ಹೆಡ್ಸ್ ಹುಟ್ಟಿಕೊಳ್ಳುತ್ತವೆ.

ಹೊಳೆಯುವ ತ್ವಚೆಗಾಗಿ ಸಾಕಷ್ಟು ನೀರು ಕುಡಿಯಿರಿ ಮತ್ತು ಆರೋಗ್ಯಕರ ಆಹಾರ ಸೇವಿಸಿ.

English summary

Monsoon Makeup Tips To Prevent Your Makeup from washed away in Kannada

Here we talking about Monsoon Makeup Tips To Prevent Your Makeup from washed away in Kannada, read on
X
Desktop Bottom Promotion