For Quick Alerts
ALLOW NOTIFICATIONS  
For Daily Alerts

ಕೆಲಸದ ಸಂದರ್ಶನಕ್ಕೆ ಹೋಗುವಾಗ ಮೇಕಪ್ ಹೇಗೆ ಮಾಡಿಕೊಳ್ಳಬೇಕು

|

ನಿಮಗೆ ಹೊಸ ಕೆಲಸದ ಸಂದರ್ಶನವೊಂದು ಕಾದಿದ್ದು ನೀವು ಬಹಳವೇ ಉತ್ಸುಕರಾಗಿರಬಹುದು. ಈ ಶುಭ ದಿನಕ್ಕಾಗಿ ನೀವು ತೊಡಬೇಕಾದ ಬಟ್ಟೆ ಹಾಗೂ ಎಲ್ಲಾ ದಾಖಲೆಗಳನ್ನು ಸಿದ್ಧಪಡಿಸಿಯೂ ಇರಬಹುದು. ಆದರೆ ಆ ದಿನ ನಿರ್ವಹಿಸಬೇಕಾದ ಮುಖ್ಯ ಕೆಲಸವೊಂದನ್ನು ನೀವು ಇದುವರೆಗೆ ಪರಿಗಣಿಸಿರಲಿಕ್ಕಿಲ್ಲ ಅದೆಂದರೆ ಅಂದಿನ ದಿನ ನೀವು ಮಾಡಿಕೊಳ್ಳಬೇಕಾದ ಮುಖಶೃಂಗಾರ ಅಥವಾ ಮೇಕಪ್.

ನಮ್ಮಲ್ಲಿ ಹೆಚ್ಚಿನವರು ಸಂದರ್ಶನ ಅಥವಾ ಇತರ ಮುಖ್ಯ ಸಂದರ್ಭ ಎದುರಾಗುವ ಕೊಂಚ ಹೊತ್ತಿನ ಮುನ್ನಾಸಮಯದವರೆಗೂ ಗಂಭೀರವಾಗಿ ಪರಿಗಣಿಸಿಯೇ ಇರುವುದಿಲ್ಲ. ಆ ದಿನ ಮೇಕಪ್ ಗೆ ಇರಬೇಕಾದ ಮುಖ್ಯ ಪರಿಕರವೊಂದು ಇಲ್ಲದೇ ಹೋದರೆ ಎದುರಾಗುವ ಮಾನಸಿಕ ತೊಳಲಾಟ ಮಾತ್ರ ವಿವರಿಸಲು ಸಾಧ್ಯವಿಲ್ಲ ಅಲ್ಲದೇ ಈ ಮಾನಸಿಕ ಒತ್ತಡ ನಿಮ್ಮ ಸಂದರ್ಶನದ ಮೇಲೂ ಋಣಾತ್ಮಕ ಪ್ರಭಾವ ಬೀರಬಹುದು.

Interview

ಸಂದರ್ಶನಕ್ಕೆ ಹೋಗುವಾಗ ಮೇಕಪ್ ಹೀಗಿರಲಿ

ಸಂದರ್ಶನಕ್ಕೆ ಹಾಜರಾದ ಅಭ್ಯರ್ಥಿ ಸಂದರ್ಭಾನುಸಾರ ಅತ್ಯುತ್ತಮ ಉಡುಗೆ ಮತ್ತು ಮೇಕಪ್ ನೊಂದಿಗೆ ಬಂದರೆ ಸಂದರ್ಶನ ಪಡೆಯುವವರಲ್ಲಿ ಧನಾತ್ಮಕ ಅನಿಸಿಕೆಯನ್ನು ಮೂಡಿಸಲು ಸಾಧ್ಯವಾಗುತ್ತದೆ. ಈ ಸಂದರ್ಭದಲ್ಲಿ ನೀವು ನೆನಪಿಟ್ಟುಕೊಳ್ಳಬೇಕಾದ ಅತಿ ಮುಖ್ಯ ಸಂಗತಿ ಎಂದರೆ ನಿಮ್ಮ ಮೇಕಪ್ ಮೃದು, ತಟಸ್ಥ ಮತ್ತು ನೈಸರ್ಗಿಕವಾಗಿರಬೇಕು. ನಿಮ್ಮ ತ್ವಚೆಯ ಸಹಜವರ್ಣಕ್ಕೆ ಹೊಂದುವಂತಹ ವರ್ಣಗಳನ್ನೇ ನೀವು ಮೇಕಪ್ ಗಾಗಿ ಆರಿಸಿಕೊಳ್ಳಬೇಕು. ಮುಖದ ಮೇಲೆ ಮೇಕಪ್ ನ ಹಲವರು ಪದರಗಳಿರಬಾರದು. ಏಕೆಂದರೆ ದಿನದ ಕೊನೆಯಲ್ಲಿ ಈ ಪದರ ಒಣಗಿ ಹಪ್ಪಳದಂತೆ ಸಿಪ್ಪೆಯೇಳಬಹುದು ಹಾಗೂ ಯಾರಿಗೂ ಈ ಸಂದರ್ಭ ಎದುರಾಗುವುದು ಸರ್ವಥಾ ಇಷ್ಟವಾಗುವುದಿಲ್ಲ, ನಿಮಗೂ ಸಹಾ! ಒಂದು ವೇಳೆ ಸಂದರ್ಶನಕ್ಕೆ ಹೋಗುವಾಗ ಯಾವ ಬಗೆಯ ಮೇಕಪ್ ಮಾಡಿಕೊಳ್ಳಬೇಕು ಎಂಬ ದ್ವಂದ್ವ ನಿಮಗಿದ್ದರೆ ಇಂದಿನ ಲೇಖನದಲ್ಲಿ ಹಂತಹಂತವಾಗಿ ವಿವರಿಸಿರುವ ಸರಳ ವಿಧಾನವನ್ನು ಅನುಸರಿಸಬಹುದು. ಬನ್ನಿ, ನೋಡೋಣ

ಹಂತ 1: ಪ್ರೈಮರ್

ಮೊದಲಾಗಿ ನೀವು ತಳಹದಿ ಅಥವಾ ಪ್ರೈಮ ಪ್ರಸಾದನವನ್ನು ಬಳಸಬೇಕು. ಈ ಪ್ರಸಾದನ ತ್ವಚೆಯ ಸೂಕ್ಷ್ಮರಂಧ್ರಗಳನ್ನು ಮುಚ್ಚಿ ಇದರ ಮೇಲೆ ಪಸರಿಸುವ ಇತರ ಮೇಕಪ್ ಪ್ರಸಾದನಗಳು ಯಾವುದೇ ಉಬ್ಬು ತಗ್ಗಿಲ್ಲದೇ ನಯವಾಗಿ ಹರಡಿಕೊಳ್ಳಲು ಸಾಧ್ಯವಾಗುತ್ತದೆ. ಸಾಮಾನ್ಯವಾಗಿ ಸಂದರ್ಶನದ ಅವಧಿ ದೀರ್ಘವೇ ಆಗಿದ್ದು ದಿನದ ಹೆಚ್ಚಿನ ಹೊತ್ತನ್ನು ಕಬಳಿಸಲಿರುವ ಕಾರಣ ನಿಮ್ಮ ಪ್ರೈಮರ್ ಅಷ್ಟೂ ಹೊತ್ತು ತಾಳಿಕೊಳ್ಳುವಂತದ್ದಾಗಿರಬೇಕು. ಇದಕ್ಕಾಗಿ ಸ್ವಲ್ಪವೇ ಪ್ರಮಾಣದಲ್ಲಿ ತ್ವಚೆಗೆ ಹಚ್ಚಿಕೊಳ್ಳಿ, ವಿಶೇಷವಾಗಿ ಹಣೆನ ನಡುವಿನಿಂದ ತುಟಿಗಳ ಅಂಚುಗಳವರೆಗಿನ ತ್ರಿಕೋನ (ಅಥವಾ T-zone)ಭಾಗಕ್ಕೆ ನಡುನಡುವೆ ನಯವಾಗಿ ಹೊಡೆದುಕೊಂಡು ಹಚ್ಚಿಕೊಳ್ಳಿ.

Make-up For A Job Interview

ಹಂತ 2: ಪೌಂಡೇಶನ್ / ಬಿಬಿ ಕ್ರೀಂ

ಫೌಂಡೇಶನ್ ನಿಮ್ಮ ತ್ವಚೆಗೆ ಏಕರೂಪದ ಬಣ್ಣವನ್ನು ಪಡೆಯಲು ನೆರವಾಗುತ್ತದೆ. ಇದಕ್ಕಾಗಿ ನಿಮ್ಮ ತ್ವಚೆಯ ಸಹಜವರ್ಣವನ್ನೇ ಹೋಲುವ ವರ್ಣವನ್ನು ಆಯ್ದುಕೊಳ್ಳುವುದು ಅತಿ ಅಗತ್ಯ. ಸಾಮಾನ್ಯವಾಗಿ ಹೆಚ್ಚಿನವರು ತಮ್ಮ ಸಹಜವರ್ಣಕ್ಕೂ ಹೆಚ್ಚು ಗಾಢವಾದ ಫೌಂಡೇಶನ್ ಆಯ್ದುಕೊಳ್ಳುವ ತಪ್ಪು ಮಾಡುತ್ತಾರೆ. ಒಂದು ವೇಳೆ ನಿಮಗೆ ಹೆಚ್ಚು ಫೌಂಡೇಶನ್ ಆವರಿಸುವ ಅಗತ್ಯವಿಲ್ಲ ಎನಿಸಿದರೆ ಇದರ ಬದಲಿಗೆ ಬಿಬಿ ಕ್ರೀಂ ಬಳಸಿ. ಇದು ನಿಮಗೆ ಹೆಚ್ಚು ನೈಸರ್ಗಿಕ ರೂಪವನ್ನು ನೀಡುತ್ತದೆ. ನಿಮಗೆ ಸೂಕ್ತವೆನಿಸಿದ ಫೌಂಡೇಶನ್ ಅಥವಾ ಬಿಬಿ ಕ್ರೀಂ ಅನ್ನು ಮುಖಕ್ಕೆ ಹಚ್ಚಿಕೊಂಡು ಒದ್ದೆಯಾದ ಬ್ಯೂಟಿ ಬ್ಲೆಂಡರ್ ಬಳಸಿ ಸಮತಟ್ಟಾಗಿಸಿ.

ಹಂತ 3: ಕನ್ಸೀಲರ್

ಒಂದು ವೇಳೆ ನಿಮ್ಮ ಕಣ್ಣುಗಳ ಕೆಳಗಿನ ತ್ವಚೆ ಗಾಢವಾಗಿದ್ದು ಕಪ್ಪು ವರ್ತುಲ ಆವರಿಸಿದ್ದರೆ ಇದನ್ನು ಮರೆಮಾಚಲು ಹಾಗೂ ಈ ಭಾಗವನ್ನು ಪ್ರಜ್ವಲಿಸಲು ಕನ್ಸೀಲರ್ ಬಳಸಬೇಕು. ಇಲ್ಲಿ ಮಾತ್ರವಲ್ಲ, ಮುಖದ ಯಾವುದೇ ಭಾಗದಲ್ಲಿ ಯಾವುದೇ ಗಾಢ ಕಲೆಗಳಿದ್ದರೂ ಇದನ್ನು ಮರೆಮಾಚಲು ಉಪಯೋಗಿಸಬಹುದು. ಒಂದು ವೇಳೆ ನೀವು ಈ ಭಾಗದಲ್ಲಿ ಅಗಲವಾಗಿ ಕನ್ಸೀಲರ್ ಹಚ್ಚಿಕೊಳ್ಳುವುದು ಇಷ್ಟಪಡದೇ ಇದ್ದರೆ ಆ ಭಾಗವನ್ನಷ್ಟೇ ಮರೆಮಾಚುವ ಸ್ಪಾಟ್ ಕನ್ಸೀಲರ್ ಬಳಸಬಹುದು. ಈ ಮೂಲಕ ಕಲೆ ಮತ್ತು ಕಪ್ಪು ವರ್ತುಲಗಳನ್ನು ಮರೆಯಾಗಿಸಬಹುದು. ಕಣ್ಣುಗಳ ಕೆಳಗೆ ತಲೆಕೆಳಗಾದ ತ್ರಿಭುಭಾಕೃತಿಯಲ್ಲಿ ಕನ್ಸೀಲರ್ ಹಚ್ಚಿಕೊಂಡು ಫೌಂಡೇಶನ್ ಗೆ ಬಳಸಿದ ಬ್ಯೂಟಿ ಬ್ಲೆಂಡರ್ ಬಳಸಿ ಸುತ್ತಲ ಬಣ್ಣಕ್ಕೆ ಸರಿಹೊಂದುವಂತೆ ಪಸರಿಸಿ.

ಹಂತ 4: ಸೆಟ್ಟಿಂಗ್ ಪೌಡರ್

ಕನ್ಸೀಲರ್ ಹಚ್ಚಿಕೊಂಡ ಬಳಿಕ ಸೆಟ್ಟಿಂಗ್ ಪೌಡರ್ ನಿಂದ ಈ ಪದರವನ್ನು ಸರಿಪಡಿಸಿಕೊಳ್ಳುವುದು ಅಗತ್ಯವಾಗಿದೆ. ಈ ಮೂಲಕ ಕನ್ಸೀಲರ್ ಹಚ್ಚಿದ ಭಾಗದ ಅಂಚುಗಳು ಸ್ಪಷ್ಟವಾಗಿ ಕಾಣುವುದನ್ನು ಇಲ್ಲವಾಗಿಸಬಹುದು.

ಆದ್ದರಿಂದ ಕನ್ಸೀಲರ್ ಹಚ್ಚಿದ ತಕ್ಷಣವೇ ಸೆಟ್ಟಿಂಗ್ ಪೌಡರ್ ಹಚ್ಚಿ ಈ ಪದರವನ್ನು ಮರೆಮಾಚಬೇಕು.

ಹಂತ 5: ಬ್ಲಶ್

ಹೆಸರೇ ಸೂಚಿಸುವಂತೆ ಕೆನ್ನೆಗಳ ದುಂಡುಭಾಗದಲ್ಲಿ ಹೊಳಪನ್ನು ಮೂಡಿಸಿ ಕೆನ್ನೆ ಕೆಂಪಗಾಗಿಸುವ ಕಾರ್ಯವನ್ನು ಈ ಹಂತ ನಡೆಸಿಕೊಡುತ್ತದೆ. ಆದರೆ ಈ ಭಾಗಕ್ಕೆ ಬಳಸುವ ಬಣ್ಣ ನಿಮ್ಮ ಕೆನ್ನೆಯ ಮೂಳೆಯ ಭಾಗದ ಚರ್ಮದ ವರ್ಣಕ್ಕೆ ಸರಿಹೊಂದುವಂತಿರಬೇಕು. ಏಕೆಂದರೆ ಒಂದು ವೇಳೆ ಸಂದರ್ಭಕ್ಕನುಸಾರವಾಗಿ ನೀವು ಸಹಜವಾಗಿಯೇ ಕೆನ್ನೆ ಕೆಂಪಗಾಗಿಸಿಕೊಂಡಾಗ ಈ ಬಣ್ಣ ಮೂಲ ಬಣ್ಣಕ್ಕೆ ವಿರುದ್ದವಾಗಿರಬಾರದಲ್ಲವೇ, ಹಾಗಾಗಿ ಸಹಜವರ್ಣವೇ ಸೂಕ್ತವಾಗಿದೆ. ಬ್ಲಶ್ ಆದಷ್ಟೂ ನಸುವಾಗಿರಬೇಕು ಎಂದು ನಾವು ಸಲಹೆ ಮಾಡುತ್ತೇವೆ. ಇದಕ್ಕಾಗಿ ನಯವಾದ ಬ್ರಶ್ ಅನ್ನು ಬ್ಲಶ್ ನಲ್ಲಿ ಅದ್ದಿ ಹೆಚ್ಚುವರಿ ಪುಡಿ ಉದುರಿಹೋಗುವಂತೆ ತಟ್ಟೆ ಹೆಚ್ಚಿನ ಒತ್ತಡವಿಲ್ಲದೇ ಕೆನ್ನೆಯ ಮೂಳೆಗಳ ಚರ್ಮದ ಭಾಗಕ್ಕೆ ಕಲಾತ್ಮಕವಾಗಿ ಹಚ್ಚಿಕೊಳ್ಳಬೇಕು.

ಹಂತ 6: ಐಬ್ರೋ ಪೆನ್ಸಿಲ್

ಇವೆಲ್ಲವನ್ನೂ ಹಚ್ಚಿಕೊಂಡ ಬಳಿಕ ನಿಮ್ಮ ಹುಬ್ಬುಗಳ ಬಣ್ಣ ನಸುವಾಗಿ ಕಾಣಿಸತೊಡಗುತ್ತದೆ. ಈಗ ಹುಬ್ಬುಗಳನ್ನು ತೀಡುವ ಐಬ್ರೋ ಪೆನ್ಸಿಲ್ ಬಳಸಿ ಈ ಭಾಗದ ಕೂದಲ ಸಹಜವರ್ಣವನ್ನು ಕೊಂಚವೇ ಗಾಢಗೊಳಿಸಿ. ಈ ಪೆನ್ಸಿಲ್ ಅನ್ನು ಹುಬ್ಬಿನಲ್ಲಿರುವ ಕೂದಲ ಬೆಳವಣಿಗೆಯ ದಿಕ್ಕಿನಲ್ಲಿ, ಹುಬ್ಬಿನ ಗಾತ್ರಕ್ಕೆ ಮಾತ್ರವೇ ಸರಿಹೊಂದುವಷ್ಟು ಮಾತ್ರವೇ ಹಚ್ಚಿಕೊಳ್ಳಿ.

ಹಂತ 7: ಐ ಷಾಡೋ

ಕಣ್ಣುಗಳನ್ನು ಮುಚ್ಚಿಕೊಂಡಾಗ ಎದುರಿನವರಿಗೆ ಕಾಣಿಸುವ ಕಣ್ರೆಪ್ಪೆಗಳ ಭಾಗದ ಬಣ್ಣ ಕೊಂಚ ಪ್ರಜ್ವಲಿಸುವಂತಿದ್ದರೆ ಅವರ ಗಮನ ಸೆಳೆಯಲು ನೆರವಾಗುತ್ತದೆ. ಆದರೆ ಈ ಬಣ್ಣವನ್ನು ಆಯ್ದುಕೊಳ್ಳಲು ಅತಿ ಹೆಚ್ಚಿನ ಎಚ್ಚರಿಕೆ ವಹಿಸಬೇಕು. ನಿಮ್ಮ ತ್ವಚೆಯ ಸಹಜವರ್ಣವನ್ನೇ ಹೋಲುವ ಬಣ್ಣವನ್ನು ಅಥವಾ ಒಂದು ಅಥವಾ ಎರಡು ಅಂಕೆಗಳಷ್ಟು ಹೆಚ್ಚು ಗಾಢವಾದ ಬಣ್ಣವನ್ನು ಆಯ್ದುಕೊಳ್ಳಿ. ಅಪ್ಪಟ ಸಹಜವರ್ಣ ನಿಮ್ಮ ಮೊದಲ ಆಯ್ಕೆಯಾಗಬೇಕು. ತುಪ್ಪಳದಿಂದ ಮಾಡಿದ ಬ್ರಶ್ ಬಳಸಿ ಈ ಪ್ರಸಾದನವನ್ನು ಕಣ್ಣುಗಳನ್ನು ಮುಚ್ಚಿಕೊಂಡು ರೆಪ್ಪೆಯ ಹಿಂಭಾಗವಷ್ಟೂ ಆವರಿಸುವಂತೆ ಹಚ್ಚಿಕೊಳ್ಳಿ. ಈ ಭಾಗದ ಅಂಚುಗಳು ಇತರ ಭಾಗಗಳಿಗೆ ಗೆರೆಗಳಂತೆ ತೋರದಿರುವಂತೆ ನಯವಾಗಿ ಸರಿಹೊಂದಿಸಿ.

ಹಂತ 8: ಐ ಲೈನರ್

ಯಾವುದೇ ಮೇಕಪ್ ನಲ್ಲಿ ಐಲೈನರ್ ಅಥವಾ ಕಣ್ಣಿನ ಕಾಡಿಗೆ ಅತಿ ಮುಖ್ಯವಾದ ಭಾಗವಾಗಿದೆ. ಸರಿಯಾಗಿ ಮಾಡಿಕೊಂಡ ಕಾಡಿಗೆ ನಿಮ್ಮ ಕಣ್ಣುಗಳ ಸೌಂದರ್ಯವನ್ನು ಇನ್ನಿಲ್ಲದಷ್ಟು ಹೆಚ್ಚಿಸುತ್ತದೆ. ವೃತ್ತಿಪರ ಸೊಬಗು ಬರಲು ನಿಮ್ಮ ಐಲೈನರ್ ಆದಷ್ಟೂ ತೆಳುವಾಗಿರಬೇಕು ಹಾಗೂ ಸ್ವಚ್ಛವಾಗಿರಬೇಕು. ಈ ಸಾಧನ ಬಳಸಿ ಕಣ್ಣುಗಳ ಮೇಲ್ರೆಪ್ಪೆ ಮತ್ತು ಕೆಳರೆಪ್ಪೆಗಳ ಅಂಚುಗಳನ್ನು ಕಪ್ಪಗಾಗಿಸಿ. ಅಲ್ಲದೇ ಕಣ್ಣುಗಳ ಅಂಚುಗಳ ಭಾಗ ಆದಷ್ಟೂ ಚೂಪಗಾಗಿ ಸ್ಪಷ್ಟವಾಗಿರಿಸಿ.

Make-up For A Job Interview

ಹಂತ 9: ಮಸ್ಕಾರ

ಕಣ್ಣುಗಳ ಅಂದಗಾಣಿಸುವಿಕೆಯ ಕೊನೆಯ ಹಂತವೇ ಮಸ್ಕಾರ. ಸಂದರ್ಶನಕ್ಕೆ ಹೋಗುವಾಗ ಮಸ್ಕಾರ ಹಚ್ಚಿಕೊಳ್ಳುವುದು ಸೂಕ್ತವೇ ಹೌದು, ಆದರೆ ಅತಿ ಹೆಚ್ಚಾಗಿ ಬೇಡ. ಏಕೆಂದರೆ ಸಂದರ್ಶನದಲ್ಲಿ ಈ ಬಣ್ಣ ಹೆಚ್ಚೇ ಅಂಟಿಕೊಂಡಿರುವಂತೆ ಕಾಣಿಸಬಾರದು. ಆದರೆ ಈ ಲೇಪವನ್ನು ಹಚ್ಚಿಕೊಳ್ಳುವ ಮುನ್ನ ಮಸ್ಕಾರಾ ಹಚ್ಚಿಕೊಳ್ಳುವ ಬ್ರಶ್ ಅನ್ನು ಬಾಟಲಿಯಿಂದ ಹೊರತೆಗೆದ ಬಳಿಕ ಇದರಲ್ಲಿರುವ ಹೆಚ್ಚುವರಿ ಪ್ರಸಾದನವನ್ನು ನಿವಾರಿಸಲು ಮಸ್ಕಾರಾ ಕೊಳವೆಯೊಳಗಿನಿಂದ ಕೊಂಚವೇ ಕೋನದಲ್ಲಿ ಹೊರತೆಗೆದು ಸಿಡಿಯುವಂತೆ ಮಾಡಿ.

ಹಂತ 10: ಲಿಪ್ ಸ್ಟಿಕ್

ಮೇಕಪ್ ನ ಕೊನೆಯ ಹಂತದಲ್ಲಿ ಮಾತ್ರ ತುಟಿಗಳನ್ನು ಸಿಂಗರಿಸಿ. ನಿಮ್ಮಕಣ್ರೆಪ್ಪೆಗಳಿಗೆ ಆಯ್ದುಕೊಂಡಂತೆಯೇ ನಿಮ್ಮ ತುಟಿಗಳ ಸಹಜವರ್ಣವನ್ನೇ ಹೋಲುವ ಪ್ರಸಾದನವನ್ನು ಆಯ್ದುಕೊಳ್ಳಿ. ಈ ಮೂಲಕ ನಿಮ್ಮ ಮುಖದ ಮೇಕಪ್ ಸಹಜವಾಗಿ ಕಾಣಿಸಿಕೊಳ್ಳಲು ಸಾಧ್ಯವಾಗುತ್ತದೆ. ತುಟಿಗಳ ವರ್ಣ ಕೊಂಚವೇ ಕೊಂಚ ವ್ಯತ್ಯಾಸವಿದ್ದರೆ ಸಾಕು. ತುಟಿಗಳ ಆಕಾರವನ್ನು ಸ್ಪಷ್ಟವಾಗಿಸಲು ಅಂಚುಗಳನ್ನು ಲಿಪ್ ಲೈನರ್ ಬಳಸಿ ಹಚ್ಚಿಕೊಳ್ಳಿ. ಅಗತ್ಯವೆನಿಸಿದರೆ ಇದರ ಮೇಲೆ ನಿಮ್ಮ ಆಯ್ಕೆಯ ಬಣ್ಣದ ಲಿಪ್ ಸ್ಟಿಕ್ ಅನ್ನು ಹಚ್ಚಿಕೊಳ್ಳಬಹುದು.

English summary

How To Do Your Make-up For A Job Interview

While we don't think much about the make-up aspect of the job interview, it isn't something to be ignored or taken lightly. If you're well-dressed with professional make-up, it gives a positive impression to the interviewer. It is important to keep your make-up soft, neutral and natural for the interview. Here is a make-up look that is perfect for a job interview.
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X