For Quick Alerts
ALLOW NOTIFICATIONS  
For Daily Alerts

ತುಟಿ ಹಾಗೂ ಕೆನ್ನೆಯ ಪಿಂಕಿಶ್ ಹೊಳಪಿಗಾಗಿ ಬಳಸಿ, ಈ ಹೋಮ್ಮೇಡ್ ಲಿಪ್ ಹಾಗೂ ಚೀಕ್ಸ್ ಟಿಂಟ್ಸ್ಗಳನ್ನು..

|

ಇತ್ತೀಚಿನ ದಿನಗಳಲ್ಲಿ ರಾಸಾಯನಿಕಯುಕ್ತ ಮೇಕಪ್ ವಸ್ತುಗಳಿಗಿಂತ ಸಾವಯವ ಅಥವಾ ನೈಸರ್ಗಿಕವಾಗಿ ತಯಾರಿಸಿದ ವಸ್ತುಗಳಿಗೆ ಹೆಚ್ಚು ಮಹತ್ವ ಸಿಗುತ್ತಿದೆ. ಇವುಗಳ ಫಲಿತಾಂಶ ವಿಳಂಬವಾದರೂ, ದೀರ್ಘಕಾಲ ಬಳಕೆಯಿಂದ ಯಾವುದೇ ಅಡ್ಡಪರಿಣಾಮಗಳಾಗುವುದಿಲ್ಲ. ಅದೇ ಕಾರಣಕ್ಕೆ ಹೆಚ್ಚಿನವರು ಹೋಮ್ಮೇಡ್ ಉತ್ಪನ್ನಗಳ ಮೊರೆ ಹೋಗುತ್ತಿರುವುದು. ಇದರಿಂದ ಲಿಪ್ ಅಥವಾ ಚೀಕ್ ಟಿಂಟ್ಗಳು ಕೂಡ ಹೊರತಾಗಿಲ್ಲ.

ಹೌದು, ಮಾರುಕಟ್ಟೆಗಿಂತ ನಾವೇ ಮನೆಯಲ್ಲಿ ತಯಾರಿಸಿದ ಟಿಂಟ್ಗಳು ಹೆಚ್ಚು ಸುರಕ್ಷಿತ ಹಾಗೂ ಪರಿಣಾಮಕಾರಿ ಕೂಡ. ಆದ್ದರಿಂದ ನಾವಿಂದು ಕೆನ್ನೆ ಮತ್ತು ತುಟಿಗಳ ಪಿಂಕಿಶ್ ಹೊಳಪಿಗಾಗಿ ಮನೆಯಲ್ಲಿಯೇ ತಯಾರಿಸಬಹುದಾದ ಕೆಲವು ಟಿಂಟ್ಗಳ ಬಗ್ಗೆ ಮಾಹಿತಿ ನೀಡಲಿದ್ದೇವೆ. ಇದು ಬಳಕೆಗೆ ಸೇಫ್ ಜೊತೆಗೆ ಹೆಚ್ಚು ಖರ್ಚಿಲ್ಲದೇ ತಯಾರಿಸಬಹುದು.

ನೈಸರ್ಗಿಕವಾಗಿ ತಯಾರಿಸಬಹುದಾದ ಟಿಂಟ್ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ನೈಸರ್ಗಿಕವಾಗಿ ತಯಾರಿಸಬಹುದಾದ ಟಿಂಟ್ಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ದಾಸವಾಳದ ಟಿಂಟ್ಸ್:

ಬೇಕಾಗುವ ಪದಾರ್ಥಗಳು:

ದಾಸವಾಳದ ಪುಡಿ

ಒಂದು ಚಮಚ ಗ್ಲಿಸರಿನ್

ಶಿಯಾಬೆಣ್ಣೆ

ತಯಾರಿಸುವ ವಿಧಾನ:

ಒಂದು ಬೌಲ್ನಲ್ಲಿ ಒಂದು ಟೀಚಮಚ ಗ್ಲಿಸರಿನ್ ಸೇರಿಸಿ, ಸ್ಥಿರತೆಯನ್ನು ಕಾಪಾಡಿಕೊಳ್ಳಲು ಕೆಲವು ಹನಿ ನೀರನ್ನು ಸೇರಿಸಿ. ಇದಕ್ಕೆ ದಾಸವಾಳದ ಪುಡಿ ಅಥವಾ ಸಾರವನ್ನು ಸೇರಿಸಿ ಮಿಕ್ಸ್ ಮಾಡಿ, ಮುಂದೆ ಇದಕ್ಕೆ ಕಾಲು ಟೀಚಮಚ ಶಿಯಾ ಬೆಣ್ಣೆಯನ್ನು ಸೇರಿಸಿ, ಮಿಶ್ರಣ ಮಾಡಿ, 2-3 ಗಂಟೆಗಳ ಕಾಲ ಫ್ರಿಜ್ನಲ್ಲಿ ಇಟ್ಟರೆ, ತುಟಿ ಹಾಗೂ ಕೆನ್ನೆಗೆ ಬಳಸಲು ನೈಸರ್ಗಿಕ ಟಿಂಟ್ಸ್ ಬಳಸಲು ಸಿದ್ಧ.

ಬೀಟ್ರೂಟ್ ಟಿಂಟ್:

ಬೀಟ್ರೂಟ್ ಟಿಂಟ್:

ಬೇಕಾಗುವ ಪದಾರ್ಥಗಳು;

ಬೀಟ್ರೂಟ್

ಅಲೋವೆರಾ ಜೆಲ್

ಬಾದಾಮಿ ಎಣ್ಣೆ

ತಯಾರಿಸುವ ವಿಧಾನ:

ಮೊದಲು ಒಂದು ಬೀಟ್ರೂಟ್ ಅನ್ನು ತುರಿದು ಅದರ ರಸವನ್ನು ತೆಗೆಯಿರಿ. ನಂತರ ಬಾಣಲೆಗೆ, 10 ಚಮಚ ರಸವನ್ನು ಸೇರಿಸಿ, ಕಡಿಮೆ ಉರಿಯನ್ನಿಟ್ಟು, ದ್ರಾವಣವು ದಪ್ಪವಾಗಲು ಬಿಡಿ. ಅದು ಕುದಿದು, ಅರ್ಧದಷ್ಟು ಆದಾಗ ಸ್ಟವ್ ಆಫ್ ಮಾಡಿ, ಅದಕ್ಕೆ ಅಲೋವೆರಾ ಜೆಲ್ , ಬಾದಾಮಿ ಎಣ್ಣೆಯ ಕೆಲವು ಹನಿಗಳನ್ನು ಸೇರಿಸಿ ಸಂಗ್ರಹಿಸಿಟ್ಟರೆ ಟಿಂಟ್ ರೆಡಿ.

ಫುಡ್ ಕಲರ್ ಟಿಂಟ್:

ಫುಡ್ ಕಲರ್ ಟಿಂಟ್:

ಬೇಕಾಗುವ ಪದಾರ್ಥ:

ಫುಡ್ ಕಲರ್

ಐದು ಚಮಚ ಕೋಕೋ ಪೌಡರ್

ಗ್ಲಿಸರಿನ್

ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ

ಮೂರು ಹನಿ ವಿಟಮಿನ್ ಇ ಆಯಿಲ್

ತಯಾರಿಸುವ ವಿಧಾನ:

ತಯಾರಿಸುವ ವಿಧಾನ:

ಮೊದಲಿಗೆ, ಐದು ಚಮಚ ಕೋಕೋ ಪೌಡರ್ಗೆ ಗ್ಲಿಸರಿನ್ ಸೇರಿಸಿ, ಚೆನ್ನಾಗಿ ಮಿಶ್ರಣ ಮಾಡಿ. ನಂತರ ಈ ಮಿಶ್ರಣಕ್ಕೆ ಸ್ವಲ್ಪ ಪೆಟ್ರೋಲಿಯಂ ಜೆಲ್ಲಿ ಮತ್ತು ಮೂರು ಹನಿ ವಿಟಮಿನ್ ಇ ಎಣ್ಣೆಯನ್ನು ಸೇರಿಸಿ. ಈ ಮಿಶ್ರಣಕ್ಕೆ ಎರಡು ಹನಿ ರೆಡ್ ಫುಡ್ ಕಲರ್ ಸೇರಿಸಿ ಚೆನ್ನಾಗಿ ಮಿಶ್ರಣ ಮಾಡಿ, ಅರ್ಧ ಗಂಟೆ ಫ್ರಿಜ್ನಲ್ಲಿಟ್ಟರೆ ಟಿಂಟ್ ಬಳಕೆಗೆ ರೆಡಿ.

ನೀವು ಮನೆಯಲ್ಲಿ ಮಾಡಿದ ಯಾವುದೇ ಟಿಂಟ್ಗಳನ್ನು ಹಚ್ಚುವ ಮೊದಲು, ಅನುಸರಿಸಬೇಕಾದ ಕೆಲವು ಹಂತಗಳು ಇಲ್ಲಿವೆ:

ನಿಮ್ಮ ಮುಖವನ್ನು ಸ್ವಚ್ಛಗೊಳಿಸಿ ಮತ್ತು ಸ್ವಲ್ಪ ಮಾಯಿಶ್ಚರೈಸರ್ ಹಚ್ಚಿ. ಆದಾಗ್ಯೂ, ನಿಮ್ಮ ಚರ್ಮವು ಎಣ್ಣೆಯುಕ್ತವಾಗಿದ್ದರೆ ಮಾಯಿಶ್ಚರೈಸರ್ ಅನ್ನು ಬಿಟ್ಟುಬಿಡಿ. ಈಗ, ಪಿಂಕ್ ಗ್ಲೋಗಾಗಿ ನಿಮ್ಮ ಕೆನ್ನೆ ಮತ್ತು ತುಟಿಗಳ ಮೇಲೆ ಮನೆಯಲ್ಲಿ ತಯಾರಿಸಿದ ಟಿಂಟ್ ಹಚ್ಚಿ ಮಸಾಜ್ ಮಾಡಿ.

English summary

Home-made Lip and Cheeks Tint to Get Glowing Look on your Face

Here we talking about Home-made lip and cheeks tint to get glowing look on your face, read on
Story first published: Monday, November 29, 2021, 13:30 [IST]
X
Desktop Bottom Promotion