For Quick Alerts
ALLOW NOTIFICATIONS  
For Daily Alerts

ಮಹಿಳೆಯರಿಗೆ ಟಾಪ್‌ ಬ್ಯೂಟಿ ಸೀಕ್ರೆಟ್ ತಿಳಿಸಿದ ಮೋಹಕ ತಾರೆ ರಮ್ಯಾ

|

ಸ್ಯಾಂಡಲ್‌ವುಡ್‌ ಮೋಹಕ ತಾರೆ ರಮ್ಯಾ ಅವರ ಅಂದಕ್ಕೆ ಅವರೇ ಸಾಟಿ. ಸಿನಿಮಾ ಮಾಡದೇ ವರ್ಷಗಳೇ ಕಳೆದರೂ ಇಂದಿಗೂ ಅವರ ಅಭಿಮಾನಿಗಳ ಪಾಲಿಗೆ ಸೌಂದರ್ಯದ ಘನಿ.

39ರ ಪ್ರಾಯದ ರಮ್ಯಾ ಅಲಿಯಾಸ್ ದಿವ್ಯಾಸ್ಪಂದನ ಅವರನ್ನು ನೋಡಿದರೆ ಇಂದಿಗೂ ಆ 18ರ ಚೆಲುವು ಮಾಸಿಲ್ಲ, ಅಷ್ಟೇ ಮುದ್ದಾಗಿ ಕಾಣುತ್ತಿದ್ದಾರೆ. ಮೇಕಪ್ ಇರಲಿ, ಇಲ್ಲದಿರಲಿ ರಮ್ಯಾ ಅವರು ತುಂಬಾ ಮುದ್ದಾಗಿ ಕಾಣುತ್ತಾರೆ.

Beauty tips from sandalwood actor Ramya

ಸಾಮಾಜಿಕ ತಾಣದಲ್ಲಿ ಆ್ಯಕ್ಟಿವ್ ಆಗಿರುವ ರಮ್ಯಾ ಅವರು ಇತ್ತೀಚೆಗೆ ಮಹಿಳೆಯರ ಆರೋಗ್ಯಕ್ಕೆ, ಆರೋಗ್ಯಕರ ಲುಕ್‌ಗೆ ಕೆಲವೊಂದು ಸಲಹೆ ನೀಡಿದ್ದರು. (ಅದನ್ನು ಈಗ ತೆಗೆದಿದ್ದಾರೆ). ಆ ಟಿಪ್ಸ್‌ ತುಂಬಾನೇ ಅದ್ಭುತವಾಗಿವೆ. ಬಹುತೇಕ ಹೆಣ್ಣು ಮಕ್ಕಳು ತಮ್ಮ ಆರೋಗ್ಯದ ಬಗ್ಗೆ ನಿರ್ಲಕ್ಷ್ಯ ಮಾಡುತ್ತಾರೆ, ಸೌಂದರ್ಯದ ಬಗ್ಗೆ ತುಂಬಾ ತಲೆ ಕೆಡಿಸಿಕೊಳ್ಳುತ್ತಾರೆ.

ರಮ್ಯಾ ನೀಡಿರುವ ಈ ಸಲಹೆ ಎಲ್ಲರನ್ನೂ ಒಮ್ಮೆ ತಮ್ಮ ಆಲೋಚನೆಗಳು ಬದಲಾಯಿಸುವಂತೆ ಮಾಡುತ್ತವೆ ನೋಡಿ:

ರಮ್ಯಾ ಅವರು ನೀಡಿರುವ ಸಲಹೆಗಳು

ರಮ್ಯಾ ಅವರು ನೀಡಿರುವ ಸಲಹೆಗಳು

1. ಆರೋಗ್ಯವೇ ಭಾಗ್ಯ

2. ನಿಮ್ಮ ತ್ವಚೆ ಬಣ್ಣದ ಜೊತೆ ಹೊಂದಿಕೊಳ್ಳಿ

3. ಕೆಲಸ ಮಾಡಿ ಹಾಗೂ ನೀವು ಈಗ ಇರುವುದಕ್ಕಿಂತಲೂ ಉತ್ತಮವಾಗಿರಲು ಪ್ರಯತ್ನಿಸಿ

4. ಮಹಿಳೆಯರು ಐರನ್ ಸಪ್ಲಿಮೆಂಟ್ ತೆಗೆದುಕೊಳ್ಳಬೇಕು

5. ಐಶ್ವರ್ಯ ಅನುಭವಿಸಲು ಆರೋಗ್ಯವೇ ಇಲ್ಲವಾದರೆ ಸಂತೋಷವಾಗಿರಲು ಹೇಗೆ ಸಾಧ್ಯ?

6. ಬೇರೆಯವರ ಜೊತೆ ಹೋಲಿಕೆ ಬೇಡ

7. ನಗುವಿರಲಿ

ಈ ಟಿಪ್ಸ್ ವಿಶ್ಲೇಷಣೆ ಮಾಡುವುದಾದರೆ:

ಈ ಟಿಪ್ಸ್ ವಿಶ್ಲೇಷಣೆ ಮಾಡುವುದಾದರೆ:

1. ಆರೋಗ್ಯವೇ ಭಾಗ್ಯ

ನಾವು ಚೆನ್ನಾಗಿ ಕಾಣಬೇಕು, ನಮ್ಮ ಮನಸ್ಥಿತಿ ಚೆನ್ನಾಗಿರಬೇಕು ಎಂದರೆ ಆರೋಗ್ಯ ಚೆನ್ನಾಗಿರಬೇಕು. ಆರೋಗ್ಯವೇ ಐಶ್ವರ್ಯ, ಆರೋಗ್ಯವಿಲ್ಲವೆಂದರೆ ಏನೂ ಐಶ್ವರ್ಯ ಇದ್ದರೂ ಪ್ರಯೊಜನವಿಲ್ಲ. ಆದ್ದರಿಂದ ಆರೋಗ್ಯದ ಬಗ್ಗೆ ಗಮನ ಹರಿಸುವಂತೆ ಟಿಪ್ಸ್ ನೀಡಿದ್ದಾರೆ.

2. ನಿಮ್ಮ ತ್ವಚೆ ಬಣ್ಣದ ಜೊತೆ ಹೊಂದಿಕೊಳ್ಳಿ

ಕೆಲವರಿಗೆ ಅಯ್ಯೋ ನಾನು ಕಪ್ಪಗಿದ್ದಾನೆ ಎಂಬ ಕೀಳೆರಿಮೆ ಇರುತ್ತದೆ. ಮೊದಲಿಗೆ ನಮ್ಮ ಮೈ ಬಣ್ಣವನ್ನು ನಾವು ಪ್ರೀತಿಸಬೇಕು, ಆಗ ಕೀಳೆರಿಮೆ ಉಂಟಾಗುವುದಿಲ್ಲ.

ಮಹಿಳೆಯರೇ ಆರೋಗ್ಯ ಜೋಪಾನ

ಮಹಿಳೆಯರೇ ಆರೋಗ್ಯ ಜೋಪಾನ

3. ಕೆಲಸ ಮಾಡಿ ಹಾಗೂ ನೀವು ಈಗ ಇರುವುದಕ್ಕಿಂತಲೂ ಉತ್ತಮವಾಗಿರಲು ಪ್ರಯತ್ನಿಸಿ

ಈ ರೀತಿಯ ಆಟಿಟ್ಯೂಡ್‌ ಮಹಿಳೆಯರ ಆತ್ಮವಿಶ್ವಾಸ ಹೆಚ್ಚಿಸುವುದು. ಮಾಡುವ ಕೆಲಸವನ್ನು ಅತ್ಯುತ್ತಮವಾಗಿ ಮಾಡಬೇಕು, ಆಗ ನಮ್ಮಲ್ಲಿನ ಆತ್ಮವಿಶ್ವಾಸ ಬೆಳೆಯುವುದು, ಇದರಿಂದ ನಾವೂ ಬೆಳೆಯುವುದು.

4. ಮಹಿಳೆಯರು ಐರನ್ ಸಪ್ಲಿಮೆಂಟ್ ತೆಗೆದುಕೊಳ್ಳಬೇಕು

ಸ್ತ್ರೀರೋಗ ತಜ್ಞರನ್ನು ಭೇಟಿಯಾಗಿ, ನಿಮ್ಮ ಆರೋಗ್ಯಕ್ಕೆ ಅವರು ನೀಡಿರುವ ಸಲಹೆ ಪಾಲಿಸಿ. ಮಹಿಳೆಯರಿಗೆ ಸಾಮಾನ್ಯವಾಗಿ ಕಬ್ಬಿಣದಂಶದ ಕೊರತೆ ಉಂಟಾಗುತ್ತದೆ. ಐರನ್ ಸಪ್ಲಿಮೆಂಟ್‌ ತೆಗೆದುಕೊಳ್ಳುವುದರಿಂದ ಈ ಸಮಸ್ಯೆ ಉಂಟಾಗುವುದನ್ನು ತಡೆಗಟ್ಟಬಹುದು.

ಬೇರೆಯವರ ಜೊತೆ ಹೋಲಿಕೆ ಮಾಡಬೇಡಿ, ನಗುತ್ತಾ ಇರಿ

ಬೇರೆಯವರ ಜೊತೆ ಹೋಲಿಕೆ ಮಾಡಬೇಡಿ, ನಗುತ್ತಾ ಇರಿ

5. ಐಶ್ವರ್ಯ ಅನುಭವಿಸಲು ಆರೋಗ್ಯವೇ ಇಲ್ಲವಾದರೆ ಸಂತೋಷವಾಗಿರಲು ಹೇಗೆ ಸಾಧ್ಯ?

ಆದ್ದರಿಂದ ಆರೋಗ್ಯಕ್ಕೆ ಮೊದಲ ಪ್ರಾಮುಖ್ಯತೆ ನೀಡಲು ರಮ್ಯಾ ಸಲಹೆ ನೀಡಿದ್ದಾರೆ. ಹೌದಲ್ವಾ? ಎಲ್ಲಾ ಇದ್ದು ಆರೋಗ್ಯವೇ ಇಲ್ಲವಾದರೆ ಏನು ಪ್ರಯೋಜನ. ಆದ್ದರಿಂದ ಆರೋಗ್ಯದ ಕಡೆಗೆ ಹೆಚ್ಚು ಗಮನ ನೀಡಿ.

6. ಬೇರೆಯವರ ಜೊತೆ ಹೋಲಿಕೆ ಬೇಡ

ಬೇರೆಯವರ ಜೊತೆ ನಮ್ಮನ್ನು ಹೋಲಿಸುತ್ತಲೇ ಇದ್ದರೆ ಅದರಿಂದ ಸಿಗುವುದು ದುಃಖವಲ್ಲದೆ ಮತ್ತೇನು ಪ್ರಯೋಜನವಿಲ್ಲ. ಆದ್ದರಿಂದ ಬೇರೆಯವರ ಜೊತೆ ಹೋಲಿಕೆ ಬಿಡಿ, ನಿಮ್ಮ ಮನಸ್ಸಿಗೆ ನೆಮ್ಮದಿ ತನ್ನಿಂದ ತಾನೇ ಬರುವುದು.

7. ನಗುವಿರಲಿ

ನಗುವಿಗೆ ಎಷ್ಟೋ ಕಾಯಿಲೆಯನ್ನು ಬಾರದಂತೆ ತಡೆಯುವ ಶಕ್ತಿಯಿದೆ. ಆದ್ದರಿಂದ ನಗುತ್ತಾ ಖುಷಿಯಾಗಿರಿ. ನೀವು ನಗು-ನಗುತ್ತಾ ಇದ್ದರೆ ನಿಮ್ಮನ್ನು ನೋಡಿದವರಿಗೂ ಖಷಿಯಾಗುವುದು, ನಿಮ್ಮ ಆರೋಗ್ಯವೂ ವೃದ್ಧಿಯಾಗುವುದು

English summary

Beauty Tips From Sandalwood Actress Ramya

Beauty tips from sandalwood actor Ramya, Read on...
X
Desktop Bottom Promotion