For Quick Alerts
ALLOW NOTIFICATIONS  
For Daily Alerts

ಸಿಂಪಲ್ ಬ್ಯೂಟಿ ಟಿಪ್ಸ್: ಮನೆಯಲ್ಲೇ ಲಿಪ್ ಸ್ಟಿಕ್ ತಯಾರಿಸಿಕೊಳ್ಳಿ!

By Hemanth
|

ಮಹಿಳೆಯರ ಮುಖದ ಸೌಂದರ್ಯದಲ್ಲಿ ಎದ್ದು ಕಾಣುವಂತಹ ತುಟಿಗಳಿಗೆ ಲಿಪ್ ಸ್ಟಿಕ್ ಹಚ್ಚಿಕೊಂಡರೆ ಆಗ ನೋಡುಗರಿಗೆ ನೋಡುತ್ತಲೇ ಇರಬೇಕೆಂದನಿಸಿದರೆ ತಪ್ಪಿಲ್ಲ. ಇಂದು ಮಾರುಕಟ್ಟೆಯಲ್ಲಿ ವಿವಿಧ ಬಣ್ಣದ ಲಿಪ್ ಸ್ಟಿಕ್ ಗಳು ಸಿಗುವುದು. ಆದರೆ ಇದನ್ನು ಹೆಚ್ಚಾಗಿ ರಾಸಾಯನಿಕ ಬಳಸಿಕೊಂಡು ತಯಾರಿಸಲಾಗುತ್ತದೆ. ಇದು ತುಟಿಗೆ ಹಚ್ಚಿಕೊಂಡರೂ ನಾವು ಸೇವಿಸುವ ಆಹಾರದ ಮೂಲಕ ರಾಸಾಯನಿಕವು ಹೊಟ್ಟೆಯೊಳಗೆ ಪ್ರವೇಶ ಮಾಡಿ, ಅದರಿಂದ ದೇಹದ ಆರೋಗ್ಯದ ಮೇಲೆ ಪರಿಣಾಮ ಉಂಟಾಗಬಹುದು. ಇದಕ್ಕೆ ಲಿಪ್ ಸ್ಟಿಕ್ ಬಳಸುವಾಗ ಒಳ್ಳೆಯ ಗುಣಮಟ್ಟದ್ದನ್ನು ಬಳಸಿದರೆ ತುಂಬಾ ಒಳ್ಳೆಯದು.

ಆದರೆ ಒಳ್ಳೆಯ ಉತ್ಪನ್ನಗಳು ಯಾವಾಗಲೂ ದುಬಾರಿಯಾಗಿರುವುದು. ನಕಲಿ ಹಾಗೂ ಅಗ್ಗದ ಲಿಪ್ ಸ್ಟಿಕ್ ಬಳಸಿದರೆ ಅದರಿಂದ ತುಟಿಗಳು ಕಪ್ಪಾಗಬಹುದು, ತುಟಿಗಳು ಬಣ್ಣ ಕಳಕೊಳ್ಳಬಹುದು, ತುಟಿಗಳು ಒಣಗುವುದು ಇತ್ಯಾದಿ ಸಮಸ್ಯೆಗಳು ಕಾಣಿಸಬಹುದು. ಇದೆಲ್ಲದಕ್ಕೂ ಪರಿಹಾರವೆಂದರೆ ನಿಮ್ಮ ಲಿಪ್ ಸ್ಟಿಕ್ ನ್ನು ನೀವೇ ತಯಾರಿ ಮಾಡಿಕೊಳ್ಳುವುದು. ಹೌದು, ನೀವು ಲಿಪ್ ಸ್ಟಿಕ್ ನ್ನು ಮನೆಯಲ್ಲೇ ತಯಾರಿ ಮಾಡಿಕೊಳ್ಳಬಹುದು. ಇದರಿಂದ ಯಾವುದೇ ಅಡ್ಡಪರಿಣಾಮಗಳು ಇಲ್ಲದೆ ನಿಮ್ಮ ತುಟಿಗಳಿಗೆ ವಿಭಿನ್ನ ಬಣ್ಣ ಹಚ್ಚಬಹುದು ಮತ್ತು ಹಣ ಕೂಡ ಉಳಿತಾಯವಾಗುವುದು. ಈ ಲೇಖನದಲ್ಲಿ ನೀವು ಮನೆಯಲ್ಲೇ ತಯಾರಿಸುವ ಲಿಪ್ ಸ್ಟಿಕ್ ಬಗ್ಗೆ ತಿಳಿಯಿರಿ. ಇದು ಸಂಪೂರ್ಣವಾಗಿ ನೈಸರ್ಗಿಕವಾಗಿದೆ. ಇದರ ತಯಾರಿ ಹೇಗೆ ಎಂದು ತಿಳಿಯಿರಿ.

lip care tips

1. ಬೇಕಾಗುವ ಸಾಮಗ್ರಿಗಳು

  • ನೈಸರ್ಗಿಕದತ್ತ ಲಿಪ್ ಸ್ಟಿಕ್ ತಯಾರಿಸಲು ಬೇಕಾಗಿರುವ ಸಾಮಗ್ರಿಗಳು.
  • ಬೆಣ್ಣೆ(ಶಿಯಾ ಬೆಣ್ಣೆ, ಬಾದಾಮಿ, ಮಾವು ಅಥವಾ ಅವಕಾಡೊ ಬೆಣ್ಣೆ ಬಳಸಬಹುದು)- 1 ಚಮಚ
  • ಜೇನುಮೇಣ- 1 ಚಮಚ
  • ತೈಲ(ಬಾದಾಮಿ, ಜೊಜೊಬಾ, ಆಲಿವ್ ತೈಲ)-1 ಚಮಚ
  • ಮೈಕ್ರೋವೇವ್ ಗೆ ಹೊಂದಿಕೊಳ್ಳುವ ಪಾತ್ರೆ
  • ಚಾಪ್ ಸ್ಟಿಕ್ ಅಥವಾ ಲಿಪ್ ಸ್ಟಿಕ್ ಟ್ಯೂಬ್ ಅಥವಾ ಕಾಸ್ಮೆಟಿಕ್ ಪಾಟ್

2. ಬಣ್ಣಗಳನ್ನು ಪಡೆಯಿರಿ

ನಿಮ್ಮ ನೆಚ್ಚಿನ ಬಣ್ಣ ಪಡೆಯಲು ನೀವು ಬೇರೆ ಎಲ್ಲೂ ಹೋಗಬೇಕಾಗಿಲ್ಲ. ಅಡುಗೆ ಮನೆಗೆ ಹೋದರೆ ಅಲ್ಲಿ ನಿಮ್ಮ ಲಿಪ್ ಸ್ಟಿಕ್ ಗೆ ಬೇಕಾಗುವ ಬಣ್ಣಕ್ಕೆ ಸಿಗುವಂತಹ ಸಾಮಗ್ರಿಗಳನ್ನು ನೋಡಿ ನಿಮಗೆ ಅಚ್ಚರಿಯಾಗಬಹುದು. ಇದು ಕೆಂಪು, ಕಿತ್ತಳೆ, ಹಳದಿ, ಗುಲಾಬಿ ಇತ್ಯಾದಿ ಆಗಿರಬಹುದು.

*ಕಡುಕೆಂಪು ಮತ್ತು ಗುಲಾಬಿ
ಇದನ್ನು ನೀವು ಬೀಟ್ ರೂಟ್ ಹುಡಿ ಅಥವಾ ಬೀಟ್ ರೂಟ್ ತುಂಡುಗಳಿಂದ ಪಡೆಯಬಹುದು.
*ಕೆಂಗಂದು ಬಣ್ಣ
ಈ ಬಣ್ಣ ಪಡೆಯಲು ನೀವು ದಾಲ್ಚಿನಿ ಹುಡಿಯನ್ನು ಬಳಸಿದರೆ ಸಾಕು.

* ಕಡು ಕಂದು ಬಣ್ಣ
ಈ ಬಣ್ಣವನ್ನು ನೀವು ಕೋಕಾ ಹುಡಿಯಿಂದ ಪಡೆಯಬಹುದು.

*ತಾಮ್ರದ ಬಣ್ಣ
ನಾವು ಪ್ರತಿದಿನವು ಬಳಸುವ ಅರಶಿನವು ಈ ಬಣ್ಣ ಕೊಡುವುದು.
ಸೂಚನೆ: ಇದೆಲ್ಲವೂ ನೈಸರ್ಗಿಕ ಉತ್ಪನ್ನಗಳಾಗಿರುವ ಕಾರಣ ಬಣ್ಣವು ಸ್ವಲ್ಪ ತಿಳಿಯಾಗಿರುವುದು.

3. ಮಿಶ್ರಣ ಮಾಡಿ

*ಬಣ್ಣವನ್ನು ಹೊರತುಪಡಿಸಿ ಉಳಿದೆಲ್ಲಾ ಸಾಮಗ್ರಿಗಳನ್ನು ಮೈಕ್ರೋವೇವ್ ಹೊಂದಿಕೊಳ್ಳುವ ಪಾತ್ರೆಯಲ್ಲಿ ಮಿಶ್ರಣ ಮಾಡಿ.
*30 ಸೆಕೆಂಡುಗಳ ವಿರಾಮದಂತೆ ಇದನ್ನು ಮೈಕ್ರೋವೇವ್ ನಲ್ಲಿ ಬಿಸಿ ಮಾಡಿ.
*ಪ್ರತೀ ವಿರಾಮದ ವೇಳೆ ಇದನ್ನು ಪರೀಕ್ಷಿಸಿ ನೋಡಿ. ಸಾಮಗ್ರಿಗಳು ಕರಗಿದೆಯಾ ಎಂದು ನಿಮಗೆ ತಿಳಿಯುವುದು.
*ಎಲ್ಲಾ ಸಾಮಗ್ರಿಗಳು ಕರಗಿದ ಬಳಿಕ ಇದನ್ನು ಮೈಕ್ರೋವೇವ್ ನಿಂದ ತೆಗೆಯಿರಿ ಮತ್ತು ಸರಿಯಾಗಿ ಮಿಶ್ರಣ ಮಾಡಿ.

ಮೈಕ್ರೋವೇವ್ ಇಲ್ಲದೆ ಇದ್ದರೆ ನೀವು ಡಬಲ್ ಬಾಯ್ಲರ್ ವಿಧಾನ ಬಳಸಬಹುದು.

*ಒಂದು ದಪ್ಪ ಹಾಗೂ ದೊಡ್ಡ ತವಾ ತೆಗೆದುಕೊಳ್ಳಿ ಮತ್ತು ಅದಕ್ಕೆ 5 ಸೆ.ಮೀ.ನಷ್ಟು ನೀರು ಹಾಕಿ ಮತ್ತು ಬಿಸಿ ಮಾಡಿ.
* ಬಣ್ಣ ಹೊರತುಪಡಿಸಿ ಎಲ್ಲಾ ಸಾಮಗ್ರಿಗಳನ್ನು ಸಣ್ಣ ಪಾತ್ರೆಗೆ ಹಾಕಿ ಮತ್ತು ಅದನ್ನು ನೀರಿರುವ ತವಾದಲ್ಲಿ ನಿಧಾನವಾಗಿ ಇಡಿ.
* ಪಾತ್ರೆಗಳು ಬೆಂಕಿಯಲ್ಲಿ ಇರುವಾಗಲೇ ಸಾಮಗ್ರಿಗಳನ್ನು ಸರಿಯಾಗಿ ತಿರುಗಿಸಿ, ಕಲಸಿಕೊಳ್ಳಿ. ಎಲ್ಲವನ್ನು ಸರಿಯಾಗಿ ಮಿಶ್ರಣ ಮಾಡಿಕೊಳ್ಳಿ.
ನಿಮಗೆ ಬಣ್ಣ ಎಷ್ಟು ಕಡು ಬೇಕು ಎಂದು ನಿರ್ಧರಿಸಿ ಬಣ್ಣದ ಆಯ್ಕೆ ಮಾಡಿಕೊಳ್ಳಿ. 1/4ರಿಂದ 1/8 ಚಮಚ ಬಣ್ಣದ ಮಿಶ್ರಣ ಹಾಕಿ. ಆರಂಭದಲ್ಲಿ ಸ್ವಲ್ಪ ಹಾಕಿಕೊಂಡು ಪರೀಕ್ಷೆ ಮಾಡಿ, ಬಳಿಕ ಮತ್ತೆ ಹಾಕಿಕೊಳ್ಳಿ. ಹೀಗೆ ಮಾಡಿಕೊಂಡರೆ ನಿಮಗೆ ಬೇಕಾಗಿರುವ ಬಣ್ಣ ಪಡೆಯಬಹುದು.

ನಿಮ್ಮ ಲಿಪ್ ಸ್ಟಿಕ್ ತಯಾರಾಗಿದೆ

ಈ ಮಿಶ್ರಣವು ತಣ್ಣಗಾದ ಬಳಿಕ ಖಾಲಿ ಲಿಪ್ ಸ್ಟಿಕ್ ಟ್ಯೂಬ್ ಗೆ ತುಂಬಿಸಿ. ಇದನ್ನು ರಾತ್ರಿಯಿಡಿ ಹಾಗೆ ಬಿಡಿ ಮತ್ತು ಸರಿಯಾಗಿ ತುಂಬಿಸಿದ ಬಳಿಕ ರಾತ್ರಿಯಿಡಿ ಹಾಗೆ ಬಿಟ್ಟರೆ ಅದು ತಣ್ಣಗಾಗಿ ಗಟ್ಟಿಯಾಗುವುದು.
ಮರುದಿನ ಬೆಳಗ್ಗೆ ನಿಮಗೆ ನೈಸರ್ಗಿಕದತ್ತ, ಮನೆಯಲ್ಲೇ ತಯಾರಿಸಿದ ಲಿಪ್ ಸ್ಟಿಕ್ ಸಿಗುವುದು. ನೀವು ಪ್ರತಿನಿತ್ಯ ಬೇರೆ ಬೇರೆ ಬಣ್ಣಗಳನ್ನು ಮಾಡಿಕೊಂಡು ಬಳಸಬಹುದು.
ಇನ್ನು ಲಿಪ್ ಸ್ಟಿಕ್ ಗೆ ದುಬಾರಿ ಹಣ ತೆರಬೇಕಾಗಿಲ್ಲ ಅಲ್ಲವೇ? ಮನೆಯಲ್ಲೇ ಇದನ್ನು ತಯಾರಿಸಿಕೊಂಡು ನೋಡಿ. ನಿಮ್ಮ ದೇಹವು ರಾಸಾಯನಿಕದಿಂದ ಮುಕ್ತವಾಗಿರುವುದು.

English summary

Mix These Ingredients & Make Your Own Lipstick!

There are amazing brands with awesome lip colours available in the market and the most sought-after ones are always a little bit heavy on the pocket. Don't you all agree, ladies? Well, you might find the same brand in a much cheaper price; but you need to be a wee bit more careful because there are a lot of duplicate products in the market. The chemicals and the lead content in duplicate products are high and can cause darkening of the lips, lip discolouration, dry lips, etc
X
Desktop Bottom Promotion