For Quick Alerts
ALLOW NOTIFICATIONS  
For Daily Alerts

ನೀವು ಮುರಿಯಲೇಬೇಕಾಗಿರುವ ಮೇಕಪ್ ನಿಯಮಗಳು!

By Hemanth
|

ಮೇಕಪ್ ಮಾಡದ ಮಹಿಳೆಯರೇ ಇಲ್ಲವೆಂದರೆ ತಪ್ಪಾಗಲಾರದು. ಯಾಕೆಂದರೆ ಸ್ವಲ್ಪ ಮಟ್ಟಿಗಾದರೂ ಮಹಿಳೆಯರು ಮುಖದ ಅಂದವನ್ನು ಹೆಚ್ಚಿಸಿಕೊಳ್ಳಲು ಮೇಕಪ್ ಮಾಡಿಯೇ ಮಾಡುತ್ತಾರೆ. ಮೇಕಪ್ ಮಾಡಲು ಹೆಚ್ಚಿನವರು ಬ್ಯೂಟಿ ಪಾರ್ಲರ್ ಗಳಿಗೆ ಹೋದರೆ ಇನ್ನು ಕೆಲವರು ಮನೆಯಲ್ಲೇ ಮೇಕಪ್ ಮಾಡುವುದನ್ನು ಇಷ್ಟಪಡುವರು. ಮನೆಯಲ್ಲೇ ಮೇಕಪ್ ಮಾಡಿಕೊಳ್ಳುವಂತಹ ಮಹಿಳೆಯರು ಇಂಟರ್ ನೆಟ್‌ನಲ್ಲಿ ವಿಡಿಯೋ ನೋಡಿ ಅದರಲ್ಲಿ ಸಿಗುವಂತಹ ಮೇಕಪ್ ನ ಸಲಹೆಗಳನ್ನು ಬಳಸಿಕೊಳ್ಳುವರು. ಆದರೆ ಮೇಕಪ್ ಗೆ ಸಂಬಂಧಿಸಿರುವ ಎಲ್ಲಾ ಸಲಹೆಗಳನ್ನು ಪಾಲಿಸುವುದು ತುಂಬಾ ಕಠಿಣ ವಿಚಾರ.

ನಮ್ಮ ಸಾಮರ್ಥ್ಯಕ್ಕೆ ತಕ್ಕದಾಗಿರುವಂತಹ ನಿಯಮಗಳನ್ನು ಮಾತ್ರ ಪಾಲಿಸಬೇಕು ಮತ್ತು ಉತ್ಪನ್ನಗಳು ಕೂಡ ನಮ್ಮ ಬಜೆಟ್ ನ ಒಳಗಡೆ ಇದ್ದರೆ ಆಗ ಇದನ್ನು ಪಾಲಿಸಿಕೊಂಡು ಹೋಗಬಹುದು. ಮೇಕಪ್ ನಿಂದ ನಿಮ್ಮ ಮುಖವು ಸುಂದರ ಹಾಗೂ ಕಾಂತಿಯುತವಾಗಿ ಕಾಣಿಸುವುದು. ಆದರೆ ಮೇಕಪ್ ನ ಕೆಲವು ಕಠಿಣ ನಿಯಮಗಳನ್ನು ಮುರಿಯುವುದು ಕೂಡ ಅಗತ್ಯವಾಗಿದೆ. ನೀವು ಮುರಿಯಲೇಬೇಕಾಗಿರುವ ಮೇಕಪ್ ನಿಯಮಗಳ ಬಗ್ಗೆ ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮೇಕಪ್ ನ್ನು ವಿವಿಧ ರೀತಿಯಿಂದ ಹಚ್ಚಿಕೊಳ್ಳಲು ನೀವು ತುಂಬಾ ಕ್ರಿಯಾತ್ಮಕ ಹಾಗೂ ಸಾಧ್ಯತೆಗಳನ್ನು ಹೊರಗೆಡಹಿ.

makeup rules that are worth breaking

ಮುರಿಯಲೇಬೇಕಾದ ಮೇಕಪ್ ನಿಯಮಗಳು

ಫೌಂಡೇಶನ್ ಶೇಡ್ ನಿಮ್ಮ ಕುತ್ತಿಗೆಗೆ ಹೊಂದಿಕೊಳ್ಳಬೇಕು
ನೀವು ಪ್ರತೀ ಸಲ ಫೌಂಡೇಶನ್ ಖರೀದಿಸಲು ಹೋದಾಗ ಕೇಳಿಬರುವ ಮಾತೆಂದರೆ, ಫೌಂಡೇಶನ್ ಯಾವಾಗಲೂ ನಿಮ್ಮ ಚರ್ಮದಲ್ಲಿ ಕಣ್ಮರೆಯಾಗುವಂತೆ ಇರಬೇಕು. ಅದಾಗ್ಯೂ, ನಿಮ್ಮ ಮುಖವು ತುಂಬಾ ಬಿಳಿ ಅಥವಾ ಕಪ್ಪಾಗಿದ್ದರೆ, ಆಗ ಈ ನಿಯಮ ಹೊಂದಿಕೊಳ್ಳಲ್ಲ. ಇಲ್ಲಿ ಪಾಲಿಸಬೇಕಾದ ನಿಯಮವೆಂದರೆ ನೀವು ಕುತ್ತಿಗೆಗೆ ಹೊಂದಿಕೊಳ್ಳುವ ಫೌಂಡೇಶನ್ ಗಿಂತ ಮುಖಕ್ಕೆ ಹೊಂದಿಕೆಯಾಗುವುದನ್ನು ಹಚ್ಚಿಕೊಳ್ಳಿ.
ಹೆಚ್ಚಿನ ಮೇಕಪ್ ತಜ್ಞರು ನಿಮ್ಮ ಕುತ್ತಿಗೆಯ ಬಣ್ಣಕ್ಕೆ ಹೊಂದಿಕೊಳ್ಳುವ ಫೌಂಡೇಶನ್ ಖರೀದಿಸಲು ಸೂಚಿಸುವರು. ಆದರೆ ಕೆಲವೊಂದು ಸಂದರ್ಭಗಳಲ್ಲಿ ಇದು ಕೆಲಸ ಮಾಡಲ್ಲ. ಗುಲಾಬಿಯಾಗಿರುವಂತಹ ಫೌಂಡೇಶನ್ ನಿಂದ ದೂರ ಉಳಿದರೆ ತುಂಬಾ ಒಳ್ಳೆಯದು. ಯಾಕೆಂದರೆ ಇದು ಅನೈಸರ್ಗಿಕವಾಗಿ ಕಾಣುವುದು. ಹಳದಿ ಮೆಲುದನಿ ಹೊಂದಿರುವ ಫೌಂಡೇಶನ್ ಆಯ್ಕೆ ಮಾಡಿಕೊಳ್ಳಿ. ಇದು ಮುಖದ ಮೇಲಿನ ಕೆಂಪು ಬಣ್ಣವನ್ನು ಪರಿಣಾಮಕಾರಿಯಾಗಿ ಸಮತೋಲನದಲ್ಲಿಡುವುದು. ಕುತ್ತಿಗೆ ಅಥವಾ ದೇಹದ ಇತರ ಭಾಗಕ್ಕಿಂತ ಮುಖವು ಕಪ್ಪಾಗಿದ್ದರೆ ಆಗ ನೀವು ಹೊಂದಿಕೊಳ್ಳುವ ಫೌಂಡೇಶನ್ ನ ನಿಯಮ ಪಾಲಿಸಿಕೊಳ್ಳಿ.

ನಗ್ನ ತುಟಿಗಳು ಮತ್ತು ಧೂಮ್ರವರ್ಣದ ಕಣ್ಣುಗಳು ಒಂದಕ್ಕೊಂದು ಸರಿಹೊಂದುವುದು.

ನೀವು ಮೇಕಪ್ ಮಾಡುವುದರಲ್ಲಿ ಹೊಸಬರಾಗಿದ್ದರೆ ಮತ್ತು ಮೇಕಪ್ ನ ಕಲೆಯನ್ನು ಕಲಿಯುತ್ತಲಿದ್ದರೆ ಆಗ ನಿಮ್ಮ ಮುಖದಲ್ಲಿ ಯಾವುದೇ ತೊಂದರೆ ಕಾಣಿಸಿಕೊಳ್ಳದಿರಲು ನೀವು ಈ ನಿಯಮ ಆಯ್ಕೆ ಮಾಡಬಹುದು. ನೀವು ತುಂಬಾ ಸಾಹಸಿಪ್ರವೃತ್ತಿಯವರಾಗಿದ್ದರೆ ಆಗ ನೀವು ಮೇಕಪ್ ಕಿಟ್ ನಲ್ಲಿ ಇರುವಂತಹ ವಿಭಿನ್ನ ರೀತಿಯ ಬಣ್ಣಗಳನ್ನು ಪರೀಕ್ಷೆಗೆ ಒಡ್ಡಬಹುದು. ಇದರಿಂದ ನಿಮಗೆ ಹೊಂದಿಕೆಯಾಗುವ ಬಣ್ಣದ ಆಯ್ಕೆ ಮಾಡಬಹುದು. ನಗ್ನ ತುಟಿಗಳು ಮತ್ತು ಧೂಮ್ರವರ್ಣದ ಕಣ್ಣುಗಳು ಸರಿ ಹೊಂದುವುದು ಎನ್ನುವುದು ಸರಿಯಲ್ಲ. ಅದರಲ್ಲೂ ನೀವು ದಪ್ಪ ನೋಟವನ್ನು ಇಷ್ಟಪಡುತ್ತಿದ್ದರೆ ಈ ನಿಯಮ ಹೊಂದಲ್ಲ. ಗುಲಾಬಿ ತುಟಿಗಳು ಅಥವಾ ಕಂಚಿನ ಬಣ್ಣದ ಧೂಮ್ರಬರ್ಣದ ಕಣ್ಣುಗಳಿಗೆ ಕೆಂಪು ಲಿಪ್ ಸ್ಟಿಕ್ ಹಚ್ಚಿಕೊಳ್ಳಬಹುದು. ನೀವು ಕೇವಲ ತುಟಿಗಳು ಅಥವಾ ಕಣ್ಣುಗಳಿಗೆ ಮಾತ್ರ ಮೇಕಪ್ ಮಾಡುವತ್ತ ಗಮನಹರಿಸಬಾರದು. ನೀವು ಒಂದೇ ಸಲ ಎರಡರ ಕಡೆಯೂ ಗಮನಹರಿಸಬೇಕು. ನೀವು ಕೇವಲ ಕಣ್ಣುಗಳತ್ತ ಗಮಹರಿಸಿ, ಮುಖದ ಬೇರೆ ಭಾಗಗಳನ್ನು ಹಾಗೆ ಬಿಟ್ಟಿದ್ದರೆ ಆಗ ನಿಮ್ಮ ಮೇಕಪ್ ಅಪೂರ್ಣವಾಗದಂತೆ ಕಂಡುಬರುವುದು.

ಪ್ರೈಮರ್ ಅಗತ್ಯ

ಇಷ್ಟೊಂದು ರೀತಿಯ ಉತ್ಪನ್ನಗಳನ್ನು ಬಳಸಿಕೊಂಡು ದೂಷರಹಿತವಾಗಿರುವ ಸೌಂದರ್ಯವನ್ನು ಪಡೆಯುವ ಅಗತ್ಯವಿದೆಯಾ ಎನ್ನುವ ಪ್ರಶ್ನೆಯು ನಿಮ್ಮಲ್ಲೂ ಮೂಡಬಹುದು. ಪ್ರೈಮರ್ ಬಳಸುವಲ್ಲಿಯೂ ಇಂತಹ ಸಂಶಯವು ನಿಮ್ಮಲ್ಲಿ ಮೂಡಬಹುದು. ಹೆಚ್ಚಿನ ಉನ್ನತ ಮಟ್ಟದ ಫೌಂಡೇಶನ್ ಗಳಲ್ಲಿ ಪ್ರೈಮರ್ ಒಳಗಿನಿಂದಲೇ ಇರುವುದು. ಇದರಿಂದ ನೀವು ಪ್ರತ್ಯೇಕವಾಗಿ ಪ್ರೈಮರ್ ಬಳಸುವ ಅಗತ್ಯವಿಲ್ಲ.

ಉಗುರು ಮತ್ತು ತುಟಿಗಳ ಬಣ್ಣವು ಹೊಂದಿಕೊಳ್ಳಬೇಕು

ಉಗುರುಗಳ ಬಣ್ಣ ಮತ್ತು ತುಟಿಗಳ ಬಣ್ಣವು ಹೊಂದಿಕೊಳ್ಳಬೇಕೇ ಎನ್ನುವ ಪ್ರಶ್ನೆಯು ಪ್ರತಿಯೊಬ್ಬ ಮೇಕಪ್ ಹಚ್ಚಿಕೊಳ್ಳುವವರಲ್ಲಿ ಮೂಡುವುದು. ಮೇಕಪ್ ತಜ್ಞರ ಬಳಿಯಲ್ಲಿ ಕೇಳಿದರೆ ನಿಮಗೆ ವಿಭಿನ್ನ ರೀತಿಯ ಉತ್ತರಗಳು ಸಿಗಬಹುದು. ಏನು ಆಯ್ಕೆ ಮಾಡುತ್ತೀರೋ ಅದು ನಿಮ್ಮ ನಿರ್ಧಾರವಾಗಿರುವುದು. ನಿಮ್ಮ ನೋಟಕ್ಕೆ ಹೆಚ್ಚುವರಿಯಾಗಿ ಬಣ್ಣ ನೀಡಬೇಕೆಂದಿದ್ದರೆ ಆಗ ನೀವು ತುಟಿಗಳು ಮತ್ತು ಉಗುರುಗಳಿಗೆ ವಿಭಿನ್ನ ಬಣ್ಣಗಳನ್ನು ಹಚ್ಚಿಕೊಳ್ಳಬಹುದು.

ಮಸ್ಕರಾವನ್ನು ಕಣ್ಣರೆಪ್ಪೆಗಳ ಬುಡಕ್ಕೆ ಹಚ್ಚಬಾರದು

ನೀವು ಈ ನಿಯಮವನ್ನು ಪಾಲಿಸುತ್ತಿದ್ದರೆ ಆಗ ಖಂಡಿತವಾಗಿಯೂ ನೀವು ಸುಂದರ ಕಣ್ಣರೆಪ್ಪೆಗಳಿಗೆ ನ್ಯಾಯ ಒದಗಿಸಿದಂತೆ ಆಗಲ್ಲ. ಕಣ್ಣರೆಪ್ಪೆಯ ತಳಭಾಗಕ್ಕೆ ಮಸ್ಕರಾ ಹಚ್ಚುವುದರಿಂದಾಗಿ ಅದು ಸೌಂದರ್ಯ ಕೆಡಿಸುವುದು ಎಂದು ನಿಮಗೆ ಅನಿಸಿದರೆ ಆಗ ನೀವು ಕೆಳಭಾಗದಲ್ಲಿ ಒಂದು ಪೇಪರ್ ನ್ಯಾಪ್ಕಿನ್ ಇಟ್ಟುಕೊಂಡು ಮಸ್ಕರಾ ಹಚ್ಚಿಕೊಳ್ಳಬೇಕು. ಕೆಳಗಿನ ಭಾಗಕ್ಕೆ ಹಚ್ಚಿಕೊಳ್ಳುವ ಮೊದಲು ಐಲೈನರ್ ಬ್ರಷ್ ನ್ನು ವಾಂಡ್ ನಲ್ಲಿ ಅದ್ದಿಕೊಳ್ಳಿ.

ಮೇಕಪ್ ಇಲ್ಲದೆ ಹೊರಹೋಗಬೇಡಿ

ಈ ನಿಯಮವನ್ನು ನೀವು ಒಂದು ಹಂತದಲ್ಲಿ ಮುರಿಯಲೇಬೇಕು. ಪ್ರತಿಯೊಬ್ಬ ವ್ಯಕ್ತಿಗೂ ನೈಸರ್ಗಿಕದತ್ತ ಸೌಂದರ್ಯವಿರುವುದು ಮತ್ತು ಮೇಕಪ್ ಇಲ್ಲದೆ ಇರುವ ಮುಖದಿಂದ ನಿಮ್ಮ ಆತ್ಮವಿಶ್ವಾಸವನ್ನು ಹೆಚ್ಚಿಸುವುದು. ಎಲ್ಲಾ ಸಮಯದಲ್ಲೂ ಮೇಕಪ್ ಮಾಡಿಕೊಂಡರೆ ಆಗ ಚರ್ಮದ ಸಮಸ್ಯೆಯು ಕಾಣಿಸಬಹುದು. ಮೇಕಪ್ ಹಾಕದೆ ನಿಮ್ಮ ಚರ್ಮವು ಸರಿಯಾಗಿ ಉಸಿರಾಡಲು ಬಿಡಬೇಕು.

ಯಾವಾಗಲೂ ದುಬಾರಿ ಉತ್ಪನ್ನಗಳನ್ನು ಬಳಸಿ-ಇದು ತುಂಬಾ ಒಳ್ಳೆಯದು

ನೀವು ಮೇಕಪ್ ಉತ್ಪನ್ನಗಳಿಗೆ ಹಣ ವ್ಯಯ ಮಾಡುವ ಮೊದಲು ನೀವು ಇದನ್ನು ಎಷ್ಟು ಸಲ ಬಳಸುತ್ತೀರಿ ಮತ್ತು ಇದು ನಿಮ್ಮ ಹಣಕ್ಕೆ ಪ್ರತಿಫಲ ನೀಡುತ್ತಿದೆಯಾ ಎಂದು ತಿಳಿಯಿರಿ. ನೀವು ಖರೀದಿಸುವಂತಹ ಮೇಕಪ್ ಸಾಧನಗಳು ಹೆಚ್ಚೆಂದರೆ ಆರು ತಿಂಗಳ ಕಾಲ ಬರುವುದು. ಫೌಂಡೇಶನ್ ಮತ್ತು ಚರ್ಮದ ಆರೈಕೆಯ ಸಾಧನಗಳಿಗೆ ಹೆಚ್ಚು ವ್ಯಯ ಮಾಡುವುದು ಅರ್ಥಪೂರ್ಣವಾಗಿರುವುದು. ಡಿಸೈನರ್ ಬ್ರಾಂಡ್ ಗಿಂತ ಸ್ಥಳೀಯ ಉತ್ಪನ್ನಗಳು ಯಾವಾಗಲೂ ಉತ್ತಮವಾಗಿರಲ್ಲ ಎಂದು ಹೇಳಲಾಗದು. ಅದಕ್ಕೆ ಬಳಸುವಂತಹ ಸಾಮಗ್ರಿಗಳು ತುಂಬಾ ಮಹತ್ವ ಪಡೆಯುವುದು. ಉತ್ಪನ್ನದ ಹೆಸರು, ಸುವಾಸನೆ, ಪ್ಯಾಕಿಂಗ್ ಇತ್ಯಾದಿಗಳಿಂದಾಗಿ ಡಿಸೈನರ್ ಬ್ರಾಂಡ್ ಗಳು ಹೆಚ್ಚು ದುಬಾರಿಯಾಗಿರುವುದು. ಮುಂದಿನ ಸಲ ನೀವು ಉತ್ಪನ್ನ ಖರೀದಿ ಮಾಡುವಾದ ಅದನ್ನು ಪರೀಕ್ಷಿಸಿ ಮತ್ತು ಕೇವಲ ಬ್ರಾಂಡ್ ಹೆಸರಿಗೆ ಹಣ ನೀಡುವುದು ಸರಿಯೇ ಎಂದು ತಿಳಿಯಿರಿ.

ಕನ್ಸೆಲರ್ ನ್ನು ಫೌಂಡೇಶನ್ ಗಿಂತ ಮೊದಲು ಹಚ್ಚಿಕೊಳ್ಳಬೇಕು

ಇದರ ವಿರುದ್ಧ ಮಾಡಿದರೆ ಅದು ಒಳ್ಳೆಯ ರೀತಿಯಲ್ಲಿ ಕೆಲಸ ಮಾಡುವುದು. ನೀವು ಮೊದಲು ಫೌಂಡೇಶನ್ ಹಚ್ಚಿಕೊಂಡಾಗ ಆಗ ಮುಖದ ಮೇಲಿರುವ ಹೆಚ್ಚಿನ ಅಪೂರ್ಣತೆಯನ್ನು ಸರಿಪಡಿಸಿರುತ್ತೀರಿ. ಮುಖದ ಮೇಲಿನ ಕಲೆಗಳು ಮತ್ತು ಗುರುತುಗಳನ್ನು ನೀವು ಕನ್ಸೆಲರ್ ಬಳಸಿಕೊಂಡು ಮರೆಮಾಚಬೇಕಾಗಿರುವುದನ್ನು ಇದು ಕಡಿಮೆ ಮಾಡುವುದು.

ಮೇಕಪ್ ವೇಳೆ ನೀವು ನೆನಪಿನಲ್ಲಿ ಇಟ್ಟುಕೊಳ್ಳಬೇಕಾದ ಪ್ರಮುಖ ಅಂಶಗಳು

*ಮೇಕಪ್ ನಲ್ಲಿ ಕಡಿಮೆ ಎಂದರೆ ತುಂಬಾ.
*ಮಿತವಾಗಿ ಮೇಕಪ್ ಹಚ್ಚಿಕೊಳ್ಳಿ.
*ಫೌಂಡೇಶನ್ ಹಚ್ಚಿಕೊಳ್ಳಲು ಮೇಕಪ್ ಬ್ರಶ್ ಬಳಸಿ.
*ಲಿಪ್ ಸ್ಟಿಕ್ ದೀರ್ಘಕಾಲ ತನಕ ಉಳಿಯಲು ನೀವು ಸ್ವಲ್ಪ ಪೌಡರ್ ಬಳಸಬಹುದು.
*ಬೇಸಿಗೆ ಕಾಲದಲ್ಲಿ ಹೈಲೈನರ್ ಮೇಲೆ ನೀವು ಸ್ವಲ್ಪ ಪೌಂಡರ್ ಸಿಂಪಡಿಸಿದರೆ ಆಗ ಅದು ಕರಗುವುದು ತಪ್ಪುವುದು.
* ನಿಮಗೆ ಹೆಚ್ಚಾಗಿ ಬೆವರುತ್ತಲಿದ್ದರೆ ಆಗ ನೀವು ಟಿಶ್ಯೂ ಪೇಪರ್ ಹಿಡಿದುಕೊಳ್ಳಿ.
* ಹೈಲೈನರ್ ಮತ್ತು ಮಸ್ಕರಾ ಬಳಸಿಕೊಂಡು ಕಣ್ಣುಗಳು ಹೊಳೆಯುವಂತೆ ಮಾಡಿ.
* ಮುಖದಲ್ಲಿ ದೊಡ್ಡ ಮೊಡವೆಗಳು ಅಥವಾ ಬೊಕ್ಕೆಗಳು ಇದ್ದರೆ ಆಗ ಹೊಳಪನ್ನು ಬಳಸಬೇಡಿ.
* ದಪ್ಪಗಿನ ಕಣ್ಣರೆಪ್ಪೆಗಳನ್ನು ಪಡೆಯಲು ಮಗುವಿನ ಪೌಡರ್ ಬಳಸಿ.

English summary

Makeup Rules That Are Worth Breaking!

If you love to do your own makeup, then it's obvious you would have gone through plenty of makeup tutorials to get an idea about how makeup artists are always able to give a ravishing and diva-like look to people. However, sometimes following every makeup rule can get troublesome. It is more often necessary that we follow the rules that are within our ability and yes, as far as products are concerned, they should also fit into our budget.
Story first published: Tuesday, August 21, 2018, 11:00 [IST]
X
Desktop Bottom Promotion