For Quick Alerts
ALLOW NOTIFICATIONS  
For Daily Alerts

ಮದುಮಗಳ ಮೇಕಪ್ ಕಿಟ್ ನಲ್ಲಿರಬೇಕಾದ ಸಾಮಗ್ರಿಗಳು

By Hemanth
|

ಹೆಣ್ಣು ಮಕ್ಕಳು ಬಾಲ್ಯದಲ್ಲಿ ಆಡುವಂತಹ ಕೆಲವೊಂದು ಆಟಗಳು ಅವರನ್ನು ಮುಂದಿನ ಜೀವನಕ್ಕೆ ಸಜ್ಜುಗೊಳಿಸುತ್ತದೆ ಎನ್ನುವುದು ಸ್ಪಷ್ಟ. ಯಾಕೆಂದರೆ ಹೆಣ್ಣು ಮಕ್ಕಳು ಬಾಲ್ಯದಲ್ಲಿ ಮದುವೆಯಾಟ ಆಡುತ್ತಿರುತ್ತಾರೆ. ಇದಕ್ಕಾಗಿ ಅವರು ತಾಯಿಯ ಸೀರೆ, ಆಭರಣಗಳನ್ನು ತಂದು ಶೃಂಗರಿಸಿಕೊಳ್ಳುವರು. ಹೆಣ್ಣಿನ ಜೀವನದಲ್ಲಿ ಮದುವೆ ಎನ್ನುವುದು ತುಂಬಾ ಪ್ರಮುಖ ಅಂಗವಾಗಿರುವುದು. ಇದಕ್ಕಾಗಿ ಆಕೆ ಬಾಲ್ಯದಲ್ಲಿ ಆಟವಾಡುತ್ತಲೇ ಕನಸುಗಳನ್ನು ಪೋಣಿಸಿಕೊಂಡಿರುತ್ತಾಳೆ.

ಈ ದಿನ ತುಂಬಾ ಸುಂದರವಾಗಿ ಕಾಣಿಸಿಕೊಳ್ಳಬೇಕು ಎನ್ನುವುದು ಪ್ರತಿಯೊಬ್ಬ ಹೆಣ್ನಿನ ಮನದಾಳದ ಆಸೆ. ಅದರಲ್ಲೂ ಭಾರತೀಯ ಮದುವೆಗಳೆಂದರೆ ಸುಮಾರು ನಾಲ್ಕೈದು ದಿನಗಳು ಸಂಭ್ರಮ ಇದ್ದೇ ಇರುತ್ತದೆ. ಅದಲ್ಲಿ ಪ್ರಮುಖವಾಗಿ ಸಂಗೀತ, ಮೆಹಂದಿ, ಅತಿಥಿಗಳ ಸತ್ಕಾರ ಇದ್ದೇ ಇರುವುದು. ಇಂತಹ ಸಮಯದಲ್ಲಿ ಇಷ್ಟು ಕಾರ್ಯಕ್ರಮಗಳಿಗೆ ತಯಾರಾಗುವುದು ತುಂಬಾ ಗೊಂದಲ ಮೂಡಿಸುವುದು. ನೀವು ಯಾವ ರೀತಿಯಿಂದ ಮೇಕಪ್ ಮಾಡಿಕೊಳ್ಳಬಹುದು ಎನ್ನುವ ಬಗ್ಗೆ ನಾವು ಈ ಲೇಖನದಲ್ಲಿ ನಿಮಗೆ ತಿಳಿಸಿಕೊಡಲಿದ್ದೇವೆ. ಮದುವೆಗೆ ಒಂದು ವಾರ ಮೊದಲೇ ಎಲ್ಲಾ ರೀತಿಯ ವ್ಯಾಕ್ಸಿಂಗ್ ಮತ್ತು ಥ್ರೆಡಿಂಗ್ ಮಾಡಿಸಿಕೊಳ್ಳಬೇಕು. ಇದರಿಂದ ಮುಖ ಕೆಂಪಾಗಿ ಕಾಣಿಸಿಕೊಳ್ಳುವುದು ತಪ್ಪುವುದು. ಮದುಮಗಳ ಮೇಕಪ್ ಗೆ ಏನೆಲ್ಲಾ ಬೇಕು ಎಂದು ಕೆಳಗೆ ಓದುತ್ತಾ ಹೋದರೆ ನಿಮಗೆ ತಿಳಿಯಲಿದೆ.

1. ಫೌಂಡೇಶನ್

1. ಫೌಂಡೇಶನ್

ಒಳ್ಳೆಯ ಫೌಂಡೇಶನ್ ಹುಡುಗಿಯ ಒಳ್ಳೆಯ ಗೆಳೆಯ. ಮದುವೆಗೆ ಮೊದಲು ಹಲವಾರು ರೀತಿಯ ಫೌಂಡೇಶನ್ ಗಳನ್ನು ಪ್ರಯತ್ನಿಸಿ, ಇದರಿಂದ ಮದುವೆಗೆ ಯಾವ ರೀತಿಯ ಫೌಂಡೇಶನ್ ಹಾಕಿಕೊಳ್ಳಬಹುದು ಎಂದು ನಿಮಗೆ ತಿಳಿಯುವುದು. ಮಧ್ಯಮದಿಂದ ಪೂರ್ಣ ಪ್ರಮಾಣದ ಫೌಂಡೇಶನ್ ಹಾಕಿಕೊಳ್ಳಬಹುದು. ಇದರಿಂದ ಫೋಟೊ ತೆಗೆಯುವಾಗ ಅದು ಫ್ಲ್ಯಾಶ್ ಆಗಲ್ಲ ಮತ್ತು ಇದು ಉತ್ಕರ್ಷಿಸಲ್ಲ. ಎಚ್ ಡಿ ಫೌಂಡೇಶನ್ ಮಾಡಿಕೊಂಡರೆ ಅದು ಎಸ್ ಪಿಎಫ್ ನಿಂದ ಮುಕ್ತವಾಗಿರುವುದು ಮತ್ತು ಯಾವುದೇ ಫ್ಲ್ಯಾಶ್ ನ್ನು ತಡೆಯುವುದು. ಪೂರ್ಣ ಪ್ರಮಾಣದ ಫೌಂಡೇಶನ್ ನ್ನು ಮದುವೆಗೆ ಹಾಕಿಕೊಳ್ಳಿ, ಇತರ ಸಮಾರಂಭಗಳಿಗೆ ಮಧ್ಯಮದ ಫೌಂಡೇಶನ್ ಹಾಕಿ. ಪೂರ್ಣ ಪ್ರಮಾಣದ ಫೌಂಡೇಶನ್ ಚರ್ಮಕ್ಕೆ ತುಂಬಾ ಭಾರ ಮತ್ತು ಇದನ್ನು ಪದೇ ಪದೇ ಬಳಸಬಾರದು.

2. ಕನ್ಸೆಲರ್

2. ಕನ್ಸೆಲರ್

ಮೊಡವೆಗಳ ಕಲೆಗಳನ್ನು ಮರೆಮಾಚಲು ಮತ್ತು ಮುಖದ ಮೇಲೆ ನೈಸರ್ಗಿಕವಾಗಿ ಬೀಳುವಂತಹ ಬೆಳಕನ್ನು ಎದ್ದುತೋರಿಸಲು ಕನ್ಸೆಲರ್ ಬಳಸಲಾಗುವುದು. ಒಂದು ಕನ್ಸೆಲರ್ ನಿಂದ ಕಣ್ಣಿನ ಕೆಳಗಡೆ ಇರುವಂತಹ ವೃತ್ತಗಳನ್ನು ಮರೆಮಾಚಲು ಬಳಸಿಕೊಳ್ಳಿ. ಇನ್ನೊಂದನ್ನು ನಿಮ್ಮ ಚರ್ಮದ ಬಣ್ಣವನ್ನು ಸ್ವಲ್ಪ ಹಗುರ ಮಾಡಿಕೊಳ್ಳಲು ಬಳಸಿಕೊಳ್ಳಿ. ಕಣ್ಣಿನ ಕೆಳಗಿನ ಭಾಗ, ಮೂಗು ಇವಗಳೀಗೆ ಬಳಸಿಕೊಳ್ಳಿ.

3. ಬ್ಲಶ್ ಪ್ಯಾಲೆಟ್

3. ಬ್ಲಶ್ ಪ್ಯಾಲೆಟ್

ಮದುವೆಯ ಮೇಕಪ್ ಕಿಟ್ ನಲ್ಲಿ ಬ್ಲಶ್ ಪ್ಯಾಲೆಟ್ ಇಟ್ಟುಕೊಳ್ಳುವುದು ತುಂಬಾ ಅಗತ್ಯವಾಗಿದೆ. ಇದರಿಂದಾಗಿ ನೀವು ವಿವಿಧ ಬಟ್ಟೆ ವಿನ್ಯಾಸ, ಲಿಪ್ ಸ್ಟಕ್ ಮತ್ತು ಕಣ್ಣಿನ ರೆಪ್ಪೆಗಳನ್ನು ಸರಿಪಡಿಸಿಕೊಳ್ಳಬಹುದು. ಬ್ಲಶ್ ಪ್ಯಾಲೆಟ್ ತುಂಬಾ ಸುಲಭವಾಗಿ ತೆಗೆದುಕೊಂಡು ಹೋಗಬಹುದು. ಇದರಲ್ಲಿ ಮದುಮಗಳಿಗೆ ಬೇಕಾಗುವಂತಹ ಎಲ್ಲಾ ರೀತಿಯ ಬಣ್ಣಗಳಿರುವುದು. ಇದರಲ್ಲಿ ಪೀಚ್ ಮತ್ತು ಪಿಂಕ್, ನೈಸರ್ಗಿಕ ಬಣ್ಣಗಳು ಇರುವುದು.

4. ಬ್ರೊನ್ಜರ್

4. ಬ್ರೊನ್ಜರ್

ಬ್ರೊನ್ಜರ್ ನ್ನು ಬಣ್ಣಗಳನ್ನು ಮರಳಿ ಮುಖಕ್ಕೆ ತರಲು ಬಳಸಲಾಗುವುದು. ನಿಮ್ಮ ಮೇಕಪ್ ಗೆ ಆಳ ನೀಡುವ ಸಲುವಾಗಿ ಇದನ್ನು ಬಳಸಿಕೊಳ್ಳಬಹುದು. ಮ್ಯಾಟ್ ಬ್ರೊನ್ಜರ್ ನ್ನು ನೀವು ಬಳಸಿಕೊಳ್ಳಿ. ಇದರಿಂದ ನಿಮ್ಮ ಮುಖದ ಬಣ್ಣವು ತುಂಬಾ ವಿನ್ಯಾಸದಿಂದ ಇರುವುದು.

5. ಬಾಳೆಹಣ್ಣಿನ ಹುಡಿ

5. ಬಾಳೆಹಣ್ಣಿನ ಹುಡಿ

ಬಾಳೆಹಣ್ಣಿನ ಹುಡಿಯನ್ನು ಬಳಸುವುದರಿಂದ ಮುಖದ ಮೇಲಿನ ಮೇಕಪ್ ನ್ನು ಮತ್ತಷ್ಟು ಉತ್ತಮಪಡಿಸಬಹುದು. ಹಳದಿ ಬಣ್ಣದ ಬಾಳೆಹಣ್ಣಿನ ಹುಡಿಯು ಕಣ್ಣಿನ ಕೆಳಗಡೆ ಹಾಕಿಕೊಂಡರೆ ಆಗ ಸೌಂದರ್ಯವು ಎದ್ದು ಕಾಣುವುದು. ಹಳದಿ ಬಣ್ಣವು ಹೆಚ್ಚು ಶ್ರಮವಿಲ್ಲದೆಯೇ ನಿಮ್ಮ ಮುಖದ ಬಣ್ಣವನ್ನು ಹೆಚ್ಚಿಸುವುದು. ಕನ್ಸೆಲರ್ ಹಾಕಿಕೊಂಡು ಕಣ್ಣಿನ ಕೆಳಗಿನ ಭಾಗ ಬೇಕ್ ಮಾಡಿ ಮತ್ತು ಅಲ್ಲಿಗೆ ಈ ಹುಡಿ ಸಿಂಪಡಿಸಿ. ಕೆಲವು ನಿಮಿಷ ಬ್ರಷ್ ಮಾಡಿ. ಇದರಿಂದ ದಿನಪೂರ್ತಿ ನಿಮಗೆ ಹೊಳೆಯುವ ತ್ವಚೆ ಸಿಗುವುದು.

6. ಐಶ್ಯಾಡೊ ಪ್ಯಾಲೆಟ್

6. ಐಶ್ಯಾಡೊ ಪ್ಯಾಲೆಟ್

ಬಿಸಿ ಹಾಗೂ ತಂಪಾದ ಬಣ್ಣದ ಐಶ್ಯಾಡೋ ಪ್ಯಾಲೆಟ್ ನ್ನು ನೀವು ಮರೆಯಬಾರದು. ಬಿಸಿ ಬಣ್ಣದ ಕಡೆ ಹೆಚ್ಚಿನ ಗಮನಹರಿಸಿ. ಯಾಕೆಂದರೆ ಭಾರತೀಯ ಮದುವೆಗಳು ಹೆಚ್ಚಾಗಿ ಬಿಸಿಯಾಗಿರುವ ವಾತಾವರಣದಲ್ಲಿ ನಡೆಯುವುದು. ರಸ್ಟ್, ಡಾರ್ಕ್ ಆರೆಂಜ್ ಮತ್ತು ವಾರ್ಮ್ ಟೌಪೆ ಬಣ್ಣಗಳನ್ನು ಆಯ್ಕೆ ಮಾಡಿಕೊಳ್ಳಿ. ಹಳೆ ಬಂಗಾರದ ಮತ್ತು ಕಂಚಿನ ಬಣ್ಣವು ಉತ್ತಮ. ಎಲ್ಲಾ ಬಣ್ಣಗಳನ್ನು ಒಂದೇ ಐಶ್ಯಾಡೋ ಪ್ಯಾಲೆಟ್ ನಲ್ಲಿ ತುಂಬಾ ಚೆನ್ನಾಗಿ ಕಾಣಿಸುವುದು.

7. ಲಿಕ್ವಿಡ್ ಲೈನರ್

7. ಲಿಕ್ವಿಡ್ ಲೈನರ್

ಕಪ್ಪು ಬಣ್ಣದ ವಾಟರ್ ಪ್ರೂಫ್ ಆಗಿರುವಂತಹ ಐಲೈನರ್ ನ್ನು ಬಳಸಿಕೊಳ್ಳಿ. ಇದು ಭಾರತೀಯ ವಧುಗಳಿಗೆ ತುಂಬಾ ಚೆನ್ನಾಗಿ ಕಾಣಿಸುವುದು. ಬೆವರು ಮತ್ತು ಕಣ್ಣೀರಿನಿಂದ ಕಪ್ಪು ಬಣ್ಣವು ಕಿತ್ತು ಬರುವುದು ಬೇಡ ಎಂದು ನಮಗನಿಸುತ್ತದೆ.

8. ಕಾಜಲ್

8. ಕಾಜಲ್

ಭಾರತೀಯ ಮಧುಮಗಳ ಮೇಕಪ್ ಕಾಜಲ್ ಇಲ್ಲದೆ ಪೂರ್ಣವಾಗುವುದೇ ಇಲ್ಲ. ಇಲ್ಲಿಯು ನೀವು ವಾಟರ್ ಪ್ರೂಫ್ ಆಗಿರುವ ಕಾಜಲ್ ಬಳಸಿಕೊಳ್ಳಿ. ಕಣ್ಣರೆಪ್ಪೆಗಳ ಮೇಲಿನ ಮತ್ತು ಕೆಳಗಿನ ಭಾಗಕ್ಕೆ ಇದನ್ನು ಹಚ್ಚಿಕೊಳ್ಳಿ. ಇದರ ಮೇಲೆ ಬ್ರಶ್ ಆಡಿಸಿದರೆ ಅದು ತುಂಬಾ ನಯವಾಗಿರುವುದು.

9. ಹೈಲೈಟ್

9. ಹೈಲೈಟ್

ಮದುಮಗಳು ತುಂಬಾ ಕಾಂತಿಯುತವಾಗಿ, ಆಕರ್ಷಣೀಯವಾಗಿ ಕಾಣಲು ಹೈಲೈಟ್ ತುಂಬಾ ಮುಖ್ಯ. ಇದಕ್ಕಾಗಿ ನೀವು ಪೌಡರ್ ಹೈಲೈಟ್ ಬಳಸಿಕೊಳ್ಳಿ. ಇದು ತುಂಬಾ ನುಣ್ಣಗೆ ಬೆರೆಸಿದ ಮತ್ತು ಹೆಚ್ಚು ಹುಡಿಯಾಗಿರದಂತೆ ಬಳಸಿಕೊಳ್ಳಿ.

10. ಸ್ಪ್ರೇ ಮಾಡುವುದು

10. ಸ್ಪ್ರೇ ಮಾಡುವುದು

ಮುಖಕ್ಕೆ ಮೇಕಪ್ ಅಂಟಿಕೊಳ್ಳಲು ನೀವು ಸ್ಪ್ರೇ ಇಟ್ಟುಕೊಳ್ಳಬೇಕು. ಇದು ತುಂಬಾ ಉಪಯೋಗಕ್ಕೆ ಬರುವುದು.

English summary

How To Build Your Bridal Makeup Kit

we have the makeup aspect of it covered for you. These makeup products are all you need, for all the events leading up to your big day. Another thing to do is to be sure that you get all your waxing and threading done a week in advance of the big day, in order to avoid any redness on your face.
X
Desktop Bottom Promotion