For Quick Alerts
ALLOW NOTIFICATIONS  
For Daily Alerts

ಹಲ್ಲಿಗೆ ಹಿಡಿಯೋ ಲಿಪ್‌ಸ್ಟಿಕ್‌ ಕಿರಿಕಿರಿಗೆ ಫುಲ್‌ಸ್ಟಾಪ್

By Su.Ra
|

ಲಿಪ್‌ಸ್ಟಿಕ್ ಹಚ್ಚುವವರಲ್ಲೊಂದು ಸಮಸ್ಯೆ ಇರುತ್ತೆ. ಆಗಾಗ ಲಿಪ್‌ಸ್ಟಿಕ್ ಹಲ್ಲಿಗೆ ಹಿಡಿದು ಬಿಡೋದು ಅದು ಅಸಹ್ಯ ಕಾಣೋದು ಒಂದು ಕಾಮನ್ ಪ್ರಾಬ್ಲಂ.. ಅದ್ರಲ್ಲೂ ಮೊದಮೊದಲು ಲಿಪ್‌ಸ್ಟಿಕ್ ಹಚ್ಚಿಕೊಳ್ಳುವವರು ಮತ್ತು ತೀರಾ ಅಪರೂಪಕ್ಕೆ ಲಿಪ್‌ಸ್ಟಿಕ್ ಹಚ್ಚಿಕೊಳ್ಳುವವರಲ್ಲಿ ಅವ್ರು ಹಚ್ಚಿಕೊಂಡ ಲಿಪ್‌ಸ್ಟಿಕ್ ಹಲ್ಲಿಗೆ ಹಚ್ಚಿ ಅವ್ರ ಸೌಂದರ್ಯವೇ ಹಾಳಾದಂತೆ, ಸ್ಟೈಲ್ ಮಾಡೋಕೆ ಬರದವರಂತೆ ಕಾಣಿಸೋದು ಮಾಮೂಲು..ಬಟ್ ಈ ರೀತಿ ಆಗಬಾರದು ಅಂದ್ರೆ ಏನು ಮಾಡ್ಬೇಕು? ಮುಂದೆ ಓದಿ...

ಮೊದಲ ವಿಧಾನ

ಮೊದಲ ವಿಧಾನ

ಹಲ್ಲಿಗೆ ಲಿಪ್‌ಸ್ಟಿಕ್ ಅಂಟುವುದನ್ನು ತಪ್ಪಿಸಲು ನೀವು ನಿಮ್ಮ ಕೈಬೆರಳನ್ನು ಬಾಯಲ್ಲಿ ಒಮ್ಮೆ ಹಾಕಿ ಹೊರತೆಗೆಯುವುದರಿಂದ ಅವೈಡ್ ಮಾಡ್ಬಹುದು. ಹೀಗೆ ಮಾಡೋದ್ರಿಂದ ತುಟಿಯ ಒಳಅಂಚಿನಲ್ಲಿ ಅಂಟಿರುವ ಲಿಪ್‌ಸ್ಟಿಕ್ ನಿಮ್ಮ ಕೈ ಬೆರಳಿಗೆ ಹಚ್ಚಿಕೊಳ್ಳುತ್ತೆ ಮತ್ತು ಹಲ್ಲುಗಳಿಗೆ ಅಂಟುವುದು ತಪ್ಪಿದಂತಾಗುತ್ತೆ.

ಎರಡನೇ ವಿಧಾನ

ಎರಡನೇ ವಿಧಾನ

ಲಿಪ್ ಲೈನರ್ ಹಚ್ಚಿಕೊಳ್ಳುವಾಗ ತುಟಿಯ ಒಳಪದರದಲ್ಲಿ ಹಚ್ಚಿಕೊಳ್ಳಬೇಡಿ. ಲಿಪ್ ಲೈನರ್ ಹಚ್ಚಿಕೊಂಡ ವಿಧಾನ ಸರಿ ಇಲ್ಲದೇ ಇದ್ದಾಗ ಸಹಜವಾಗೇ ತುಟಿಗಳಿಗೆ ಹಚ್ಚಿದ ರಂಗು ಹಲ್ಲುಗಳಿಗೂ ಹಿಡಿಯುತ್ತೆ.

ಮೂರನೇ ವಿಧಾನ

ಮೂರನೇ ವಿಧಾನ

ಟ್ರಾನ್ಫರ್ಪ್ರೂಫ್ ಲಿಪ್‌ಸ್ಟಿಕ್‌ಗಳನ್ನು ಖರೀದಿಸಿ.. ನಿಮ್ಮ ಕೈಗೆಟುಕುವ ಬೆಲೆಗೆ ಈ ಲಿಪ್‌ಸ್ಟಿಕ್‌ಗಳು ಲಭ್ಯವಿದ್ದು, ಇವು ಹೆಚ್ಚು ಹರಡದೇ ತುಟಿಗಳಲ್ಲೇ ಅಂಟಿಕೊಳ್ಳುತ್ತೆ. ಅಷ್ಟೇ ಅಲ್ಲ, ನಿಮ್ಮ ತುಟಿಗಳು ಸುಂದರವಾಗಿ ಕಾಣುವಂತೆ ಮಾಡುತ್ತೆ.

ನಾಲ್ಕನೇ ವಿಧಾನ

ನಾಲ್ಕನೇ ವಿಧಾನ

ಲಿಪ್‌ಸ್ಟಿಕ್ ಹಚ್ಚಿದ ನಂತ್ರ ಟಿಶ್ಯೂ ಪೇಪರ್ ತೆಗೆದುಕೊಂಡು ಒಮ್ಮೆ ತುಟಿಗಳನ್ನು ಪ್ರೆಸ್ ಮಾಡ್ಕೊಳ್ಳಿ. ಇದು ಲಿಪ್‌ಸ್ಟಿಕ್ ತುಟಿಗಳಲ್ಲೇ ಉಳಿಯುವಂತೆ ಮಾಡುತ್ತೆ ಮತ್ತು ಹಲ್ಲುಗಳಿಗೆ ಹಿಡಿಯುವುದನ್ನು ನಿಯಂತ್ರಿಸುತ್ತೆ. ಕೆಲವು ಲಿಪ್‌ಸ್ಟಿಕ್‌ಗಳು ಎಣ್ಣೆಯ ಅಂಶವನ್ನು ಒಳಗೊಂಡಿರುತ್ತೆ. ಹಾಗಾಗಿ ತುಟಿಗಳಲ್ಲಿ ಹೆಚ್ಚಾಗಿರುವ ಎಣ್ಣೆಯ ಅಂಶದಿಂದಾಗಿ ತುಟಿ ಮಾತ್ರವಲ್ಲದೇ ಹಲ್ಲುಗಳಿಗೂ ಲಿಪ್‌ಸ್ಟಿಕ್ ಅಂಟಲು ಕಾರಣವಾಗುತ್ತೆ.

ಐದನೇ ವಿಧಾನ

ಐದನೇ ವಿಧಾನ

ಲಿಪ್‌ಸ್ಟಿಕ್ ಹಚ್ಚಿರೋದು ಅತಿಯಾದಾಗ, ಇಲ್ಲವೇ ಲಿಪ್‌ಸ್ಟಿಕ್ ಆಯಿಲಿ ಆಯಿಲಿಯಾಗಿದ್ದಾಗ, ಅದು ತುಟಿಗಳಲ್ಲಿ ಮಾತ್ರ ಉಳಿಯದೇ ಸ್ಪ್ರೆಡ್ ಆಗುತ್ತೆ. ಎಸ್ಪೆಷಲಿ ಮಾತನಾಡುವಾಗ ಹಲ್ಲುಗಳಿಗೆ ಅಂಟಿಕೊಂಡು ಬಿಡುತ್ತೆ. ಅದನ್ನು ನಿಯಂತ್ರಿಸಬೇಕು ಅಂದ್ರೆ ತುಟಿಗಳ ಮೇಲೆ ಸ್ವಲ್ಪ ಪೌಡರ್ ಅಪ್ಲೈ ಮಾಡಿ. ನಂತ್ರ ಸ್ಪಾಂಜ್ ಅಥವಾ ಬ್ರಷ್ ಸಹಾಯದಿಂದ ಪೌಡರ್ ಅನ್ನು ತೆಗೆದುಬಿಡಿ. ಹೀಗೆ ಮಾಡೋದ್ರಿಂದ ಹೆಚ್ಚಾದ ಲಿಪ್‌ಸ್ಟಿಕ್ ಕಡಿಮೆಯಾಗಿ ಸರಿಯಾಗಿ ತುಟಿಗಳಲ್ಲೇ ಸ್ಟಿಕ್ ಆಗಿ ಕೂರುತ್ತೆ.

ಆರನೇ ವಿಧಾನ

ಆರನೇ ವಿಧಾನ

ಹಲ್ಲುಗಳಿಗೆ ಲಿಪ್‌ಸ್ಟಿಕ್ ಹತ್ತುವುದನ್ನ ತಡೀಬೇಕು ಅಂದ್ರೆ ಜ್ಯೂಸ್ ಅಥ್ವಾ ಇತರೆ ಯಾವುದೇ ವಸ್ತುಗಳನ್ನು ಸೇವಿಸುವಾಗ ಸ್ಟ್ರಾ ಬಳಕೆ ಮಾಡಿ.. ಸ್ಟ್ರಾ ಇಲ್ಲದೇ ಇದ್ದಾಗ ಲಿಪ್‌ಸ್ಟಿಕ್ ಸ್ಪ್ರೆಡ್ ಆಗುವ ಸಾಧ್ಯತೆ ಹೆಚ್ಚಾಗಿರುತ್ತೆ.

ಏಳನೇ ವಿಧಾನ

ಏಳನೇ ವಿಧಾನ

ಕೆಲವರಿಗೆ ತುಟಿಗಳನ್ನು ಕಚ್ಚುವ ಅಭ್ಯಾಸವಿರುತ್ತೆ. ಅಂತವರು ಲಿಪ್‌ಸ್ಟಿಕ್ ಹಚ್ಚಿಕೊಂಡಾಗ ಅದು ಹಲ್ಲುಗಳಿಗೆ ಸ್ಪ್ರೆಡ್ ಆಗೋದು ಮಾಮೂಲು. ಹೀಗೆ ಹಲ್ಲುಕಚ್ಚೋದು ಕೇವಲ ಕೆಟ್ಟದಾಗಿ ಕಾಣಿಸೋದು ಮಾತ್ರವಲ್ಲ ನೀವು ಹಚ್ಚಿದ ಲಿಪ್‌ಸ್ಟಿಕ್ ಹಲ್ಲುಗಳಿಗೆ ಸ್ಪ್ರೆಡ್ ಆಗಿ ನಿಮ್ಮ ಸೌಂದರ್ಯವನ್ನೂ ಹಾಳು ಮಾಡುತ್ತೆ ಅನ್ನೋದು ಯಾವಾಗಲೂ ನೆನಪಿರಲಿ..

English summary

Tips to Keep Lipstick off Your Teeth in kannada

It's extremely embarrassing when you decide to flaunt that gorgeous smile of yours, only to notice the people in front of your react oddly. It’s that moment when there is a 98% chance you’ve got a lipstick stain in your teeth. Talk about an awkward moment! Well, hopefully you will have no more of these situations with the seven tricks to prevent lipstick from getting to your teeth. Smile and talk confidently, because these tricks are guaranteed to work!
X
Desktop Bottom Promotion