For Quick Alerts
ALLOW NOTIFICATIONS  
For Daily Alerts

ಸಾಂಪ್ರದಾಯಕವಾದ 9 ಬಗೆಯ ಮದುವೆ ಸೀರೆಗಳು

|

ಸೀರೆಯುಟ್ಟ ನಾರಿಯ ಚೆಲುವನ್ನು ನೋಡುವುದೇ ಚೆಂದ. ಅದರಲ್ಲೂ ಮದುವೆಗಂತೂ ಮದುಮಗಳು ಸೀರೆಯನ್ನು ಉಡುವುದು ಭಾರತೀಯರ ಸಂಪ್ರದಾಯ ಕೂಡ. ಮದು ಮಗಳಿಗೆ ಸೀರೆ ಕೊಳ್ಳುವಾಗ ಯಾರೂ ಫ್ಯಾಷನ್ ಸೀರೆಯನ್ನು ಕೊಳ್ಳುವುದಿಲ್ಲ. ಪ್ರತಿಯೊಬ್ಬರೂ ಸಾಂಪ್ರದಾಯಕವಾದ ಸೀರೆಯನ್ನೇ ಕೊಳ್ಳುತ್ತಾರೆ. ಸಾಂಪ್ರದಾಯಕವಾದ ಸೀರೆ ಉಡಿಸಿ, ಅಲಂಕಾರ ಮಾಡಿದ ಮದುಮಗಳನ್ನು ನೋಡುವುದೇ ಚೆಂದ.

ಸಾಂಪ್ರಾದಾಯಕವಾದ ಸೀರೆಗಳು ಅನೇಕ ಹೊಸ ವಿನ್ಯಾಸದಲ್ಲಿ ದೊರೆಯುತ್ತದೆ. ಕರ್ನಾಟಕದ ಕಡೆ ಮದುಮಗಳು ಹೆಚ್ಚಾಗಿ ಮೈಸೂರು ಸಿಲ್ಕ್ ಸೀರೆ ಉಟ್ಟರೆ, ಬೆಂಗಾಳಿ ಕಡೆ ಮದು ಮಗಳು ಬನಾರಸಿ ಸೀರೆಯನ್ನು ಧರಿಸುತ್ತಾಳೆ. ನೂರಾರು ಬಗೆಯ ಸೀರೆಗಳು ಮಾರ್ಕೆಟ್ ನಲ್ಲಿದ್ದರೂ ಮದುಮಗಳ ಸೀರೆಯಾಗಿ ಕೆಲವೇ ಬಗೆಯ ಸೀರೆಗಳನ್ನಷ್ಟೇ ಆಯ್ಕೆ ಮಾಡುತ್ತೇವೆ. ಅದರಲ್ಲೂ ಈ ಕೆಳಗಿನ ಸೀರೆಗಳಲ್ಲಿ ಮದುಮಗಳು ಆಕರ್ಷಿಕವಾಗಿ ಕಾಣುವಾಗಿ ಫ್ಯಾಷನ್ ಸೀರೆಯಲ್ಲಿ ಕಾಣಲು ಸಾಧ್ಯವೇ ಇಲ್ಲ.

ರೇಷ್ಮೆ ಸೀರೆ

ರೇಷ್ಮೆ ಸೀರೆ

ಕರ್ನಾಟಕದಲ್ಲಿ ಶುಭ ಸಂದರ್ಭಗಳಲ್ಲಿ ರೇಷ್ಮೆ ಸೀರೆ ಉಡುವುದು ವಾಡಿಕೆ. ಅದರಲ್ಲೂ ಕರ್ನಾಟಕದಲ್ಲಿ ಮದುವೆ ಮಗಳಿಗೆ ರೇಷ್ಮೆ ಸೀರೆಯನ್ನು ಕೊಂಡೇಕೊಳ್ಳುತ್ತಾರೆ. ಅದರಲ್ಲೂ ಮೈಸೂರ್ ಸಿಲ್ಕ್ ಹೆಂಗಳೆಯರ ಮೆಚ್ಚಿನ ಸೀರೆ.

 ಕಾಂಜೀವರಂ

ಕಾಂಜೀವರಂ

ಕಾಂಜೀವರಂ ಸೀರೆಯನ್ನು ದಕ್ಷಿಣ ಭಾರತದ ಕಡೆ ಮದುಮಗಳಿಗೆ ಹೆಚ್ಚಾಗಿ ಉಡಿಸುತ್ತಾರೆ. ಕಾಂಜೀವರಂ ಸೀರೆಯ ಬಾರ್ಡರ್ ನಲ್ಲಿ ದೇವಾಲಯಗಳ, ದೇವರುಗಳ ಚಿತ್ರಣವಿದ್ದು, ಇದನ್ನು ಉಟ್ಟ ಮದುಮಗಳು ಮಂಗಳಕರವಾಗಿ ಕಾಣುವುದು.

ಬನಾರಸಿ

ಬನಾರಸಿ

ಈ ಸೀರೆಯನ್ನು ಕಾಶಿಯಲ್ಲಿ ತಯಾರಿಸುತ್ತಾರೆ. ಬನಾರಸಿ ರೇಷ್ಮೆ ಸೀರೆಯಲ್ಲಿ ಚಿನ್ನದ ಬಣ್ಣದ ವಿನ್ಯಾಸವಿದ್ದು ಇದನ್ನು ಧರಿಸಿದರೆ ಹೆಣ್ಣಿನ ಸೊಬಗು ಹೆಚ್ಚುವುದು.

ಸಂಬಾಲ್ ಪುರಿ ಸ್ಯಾರಿ

ಸಂಬಾಲ್ ಪುರಿ ಸ್ಯಾರಿ

ಇದನ್ನು ಒರಿಯಾ ಮಹಿಳೆಯರು ಹೆಚ್ಚಾಗಿ ಉಡುತ್ತಾರೆ. ಈ ಸೀರೆ ನೋಡಲು ಆಕರ್ಷಕವಾಗಿದ್ದು ಈ ಸೀರೆ ಉಟ್ಟ ನಾರಿ ಚೆಲುವಿನ ರೂಪಸಿಯಂತೆ ಕಾಣುವುದು. ಈ ಸೀರೆ ಮುಂಬಯಿಯಲ್ಲಿ ಹೆಚ್ಚಾಗಿ ದೊರೆಯುತ್ತದೆ.

ಅಸ್ಸಾಂ ಸಿಲ್ಕ್

ಅಸ್ಸಾಂ ಸಿಲ್ಕ್

ಅಸ್ಸಾಂ ಸಿಲ್ಕ್ ಸೀರೆಯನ್ನು ಅಸ್ಸಾ ಸಿಲ್ಕ್ ಅಥವಾ ಮುಗಾ ಸಿಲ್ಕ್ ಸೀರೆಯೆಂದು ಕರೆಯುತ್ತಾರೆ. ಅಸ್ಸಾಂ ಮದುಮಗಳು ಸಾಮಾನ್ಯವಾಗಿ ಕೆಂಪು ಬಾರ್ಡರ್ ಇರುವ ಬಿಳಿ ಬಣ್ಣದ ಸೀರೆಯನ್ನು ಉಡುತ್ತಾಳೆ. ಅಸ್ಸಾಂ ಸೀರೆಯ ಪ್ಯಾಟರ್ನ್ ಈ ಚಿತ್ರದಲ್ಲಿ ತೋರಿಸಿದಂತೆ ಇರುತ್ತದೆ.

ಗೋಟ ಸೀರೆ

ಗೋಟ ಸೀರೆ

ಗೋಟ ಸೀರೆಯ ಸೆರಗಿಗೆ ಮಣಿಯಿರುವ ದಾರಗಳಿರುತ್ತದೆ. ಈ ಸೀರೆ ಮದುಮಗಳಿಗೆ ಚೆನ್ನಾಗಿ ಒಪ್ಪುತ್ತದೆ. ಈ ರೀತಿಯ ಮಣಿಗಳನ್ನು ( ಸೀರೆಗೆ ಗುಚ್ಛ ಹಾಕುವುದು ಇತರ ಸೀರೆಗಳಿಗೂ ಹಾಕಬಹುದು.

ಬಾಂದನಿ ಸೀರೆ

ಬಾಂದನಿ ಸೀರೆ

ಬಾಂದನಿ ಸೀರೆಯನ್ನು ಒಂದು ರೀತಿಯ ವಿಶಿಷ್ಠ ಕಲ್ಲುಗಳಿಂದ ಅಲಂಕರಿಸಿರುತ್ತಾರೆ. ಡಾಟ್-ಡಾಟ್ ಆಗಿರುವ ಸೀರೆ ಬಾಂದನಿ ಸೀರೆ ಟ್ರೇಡ್ ಮಾರ್ಕ್ ಆಗಿದೆ. ಈ ಬಗೆಯ ಸೀರೆಯನ್ನು ಗುಜರಾತಿ ಮದುವೆಯಲ್ಲಿ ಧರಿಸುತ್ತಾರೆ.

ಪಟ್ ಸೀರೆ

ಪಟ್ ಸೀರೆ

ಇದು ಕೇರಳ ಶೈಲಿ ಸೀರೆಯಾಗಿದೆ. ಬಿಳಿ ಸೀರೆಗೆ ಗೋಲ್ಡನ್ ಎಂಬ್ರಾಯ್ಡ್ ಇರುವ ಈ ಸೀರೆ ಮಲ್ಲು ಬೆಡಗಿಯರ ಮೆಚ್ಚಿನ ಸೀರೆಯಾಗಿದೆ. ಇದನ್ನು ಕೆಲವರು ಮದುಮಗಳಿಗೆ ತಾಲಿ ಕಟ್ಟುವ ಸಂದರ್ಭದಲ್ಲಿ ಉಡಿಸುತ್ತಾರೆ. ನಂತರ ಇತರ ರೇಷ್ಮೆ ಸೀರೆಯನ್ನು ಉಡಿಸಲಾಗುವುದು.

ಬ್ರೊಕೇಡ್ ಸೀರೆ

ಬ್ರೊಕೇಡ್ ಸೀರೆ

ಬ್ರೊಕೇಡ್ ಸಿಲ್ಕ್ ಸೀರೆ ಇತರ ಸಿಲ್ಕ್ ಸೀರೆಗಿಂತ ಭಿನ್ನವಾದ ಸೀರೆಯಾಗಿದೆ. ಇದರ ಬಾರ್ಡರ್ ಹಾಗೂ ಸೆರಗನ್ನು ಹೊಳೆಯುವ ಬ್ರೊಕೇಡ್ ಮೆಟೇರಿಯಲ್ ಬಳಸಿ ಇದನ್ನು ತಯಾರಿಸಲಾಗುವುದು.

English summary

Traditional Indian Bridal Sarees | Sarees For Marriage | ಮದುಮಗಳಿಗೆ ಸಾಂಪ್ರದಾಯಕವಾದ ಸಿಲ್ಕ್ ಸೀರೆ | ಸೀರೆ ಮತ್ತು ಮದುವೆ

Indian bridal sarees have a vast majority of varieties. In fact every state in India has it own kind of bridal saree. While Kanjeevaram is the most famous South-Indian bridal saree, net and fancy sarees rule the roost in the North. So, there is no scarcity of types to choose when it comes to Indian bridal saree
X
Desktop Bottom Promotion