For Quick Alerts
ALLOW NOTIFICATIONS  
For Daily Alerts

ನೈಲ್ ಪೈಂಟಿಗ್ ಬಗ್ಗೆ ಕೆಲ ಸಂಗತಿಗಳು

|

ನಿಮಗೆ ನಿಮ್ಮ ಚೆಂದದ ಉಗುರುಗಳಿಗೆ ಗಾಢ ಬಣ್ಣಗಳನ್ನು ಬಳಸಿ ಚಿತ್ತಾರ ಮಾಡುವುದು ಇಷ್ಟವೇ? ಹಾಗಿದ್ದರೆ ಈ ಬಣ್ಣಗಳು ನಿಮ್ಮ ಉಗುರಿಗೆ ಹಾನಿ ಮಾಡಬಹುದು ಎಂಬ ಎಚ್ಚರವಿರಲಿ. ನೀವು ನೈಲ್ ಪಾಲಿಷ್ ಹಚ್ಚುವ ಮುನ್ನ ಉಗುರಿಗೆ ಬೇಸ್ ಹಚ್ಚುವುದು ಬಹಳ ಒಳ್ಳೆಯದು. ಇತ್ತೀಚೆಗೆ ವಿಶ್ವದಾದ್ಯಂತ ಹೆಣ್ಣುಮಕ್ಕಳು ತಮ್ಮ ಉಗುರಿನ ಮೇಲ್ತುದಿಗೆ ಮಾತ್ರ ಬಣ್ಣ ಹಚ್ಚಿಕೊಳ್ಳುವ ಟ್ರೆಂಡ್ ಕಂಡುಬರುತ್ತಿದೆ. ನೀವು ಒಳ್ಳೆಯ ಬ್ರಾಂಡಿನ ಬಣ್ಣವನ್ನು ಬಳಸಿದಿದ್ದರೆ ಉಗುರುಗಳು ಹಾಳಾಗುವ ಸಾಧ್ಯತೆ ಹೆಚ್ಚು.

ಈವತ್ತು ಬೋಲ್ಡ್ ಸ್ಕೈ ಹೆಣ್ಣುಮಕ್ಕಳು ಮುಖ್ಯವಾಗಿ ನೈಲ್ ಪಾಲಿಷ್ ಬಳಸುವಾಗ ನೆನಪಿನಲ್ಲಿಡಬೇಕಾದ ಸಂಗತಿಗಳನ್ನು ಹಂಚಿಕೊಳ್ಳಲಿದೆ. ಇವು ಉಗುರು ಮತ್ತು ಉಗುರಿನ ಬಣ್ಣಗಳ ಬಗ್ಗೆ ತಿಳಿದುಕೊಳ್ಳಬೇಕಾದ ಕೆಲವು ಮುಖ್ಯ ಸಂಗತಿಗಳು. ಬಣ್ಣ ಹಚ್ಚುವ ಮೊದಲು ಫ್ಯಾಷನಬಲ್ ಆಗಿ ಕಾಣಿಸಿಕೊಳ್ಳಬೇಕು ಎಂದುಕೊಳ್ಳುವುದರ ಜೊತೆಯಲ್ಲೇ ಉಗುರಿನ ಸುರಕ್ಷತೆಯ ಕಡೆ ಗಮನ ನೀಡಿ.

ನಿಮ್ಮ ಉಗುರಿನ ಸೌಂದರ್ಯವನ್ನು ಹೆಚ್ಚು ಮಾಡುವುದರ ಜೊತೆಯಲ್ಲೇ ಉಗುರಿನ ಸುರಕ್ಷತೆಯನ್ನು ಕಾಪಾಡಿಕೊಳ್ಳಿ. ಅಂದವಾದ ಆರೋಗ್ಯಕರವಾದ ಉಗುರಿನೊಂದಿಗೆ ಜನರ ನಡುವೆ ಮಿಂಚುವುದನ್ನು ಕಲಿಯಿರಿ. ಮತ್ತೇಕೆ ತಡ ಇಲ್ಲಿನ ಟಿಪ್ಸ್ ಗಳ ಮೇಲೆ ಒಮ್ಮೆ ಕಣ್ಣಾಡಿಸಿ.

ಉಗುರಿಗೆ ಬಣ್ಣ ಹಚ್ಚುವಾಗ ತಿಳಿದಿರಬೇಕಾದ ಕೆಲ ಸಂಗತಿಗಳು:

ಥ್ರೀ ಸ್ಟ್ರೋಕ್ಸ್

ಥ್ರೀ ಸ್ಟ್ರೋಕ್ಸ್

ಫರ್ಫೆಕ್ಟ್ ಕೋಟ್ ನೈಲ್ ಪಾಲಿಷ್ ಹಚ್ಚಲು ಕೇಲವ ಮೂರು ಸ್ಟ್ರೋಕ್ ಗಳು ಸಾಕು. ನೀವು ಮಾಡಬೇಕಾದದ್ದು ಇಷ್ಡೇ ಬ್ರಷ್ ಅನ್ನು ಸರಿಯಾಗಿ ಬಳಸಿ ಉಗುರಿಗೆ ಬಣ್ಣ ಹಚ್ಚಿ.

ಉಗುರಿಗೆ ಬೇಸ್ ಕೋಟ್ ಹಚ್ಚುವುದನ್ನು ಮರೆಯದಿರಿ

ಉಗುರಿಗೆ ಬೇಸ್ ಕೋಟ್ ಹಚ್ಚುವುದನ್ನು ಮರೆಯದಿರಿ

ಪರಿಣಿತರ ಪ್ರಕಾರ ಯಾವುದೇ ಬಣ್ಣವನ್ನು ಹಚ್ಚುವ ಮೊದಲು ಉಗುರಿಗೆ ಬೇಸ್ ಕೋಟ್ ಹಚ್ಚುವುದು ಅತ್ಯಗತ್ಯ. ಇದು ಮುಖ್ಯವಾಗಿ ನೆನಪಿನಲ್ಲಿಡಬೇಕಾದ ಸಂಗತಿ.

ನೈಲ್ ಪಾಲಿಷ್ ನ ವಿಧಗಳು

ನೈಲ್ ಪಾಲಿಷ್ ನ ವಿಧಗಳು

'ಕ್ವಿಕ್ ಡ್ರೈ' ಎಂದು ಹಾಕಿರುವ ನೈಲ್ ಪಾಲಿಷ್ ಗಳನ್ನು ಬಳಸದಿರಿ. ಇವು ಹೆಚ್ಚು ದುಬಾರಿ ಮತ್ತು ನಿಮ್ಮ ಉಗುರನ್ನು ಹಾಳು ಮಾಡುತ್ತದೆ.

ಮಸಾಜ್ ಮಾಡಿ

ಮಸಾಜ್ ಮಾಡಿ

ನಿಮ್ಮ ಉಗುರಿನ ಹೊರಪದರಕ್ಕೆ ಎಣ್ಣೆ ಹಚ್ಚಿ ಮಸಾಜ್ ಮಾಡಿ. ಇದು ಅವುಗಳನ್ನು ಆರೋಗ್ಯವಾಗಿರಿಸಲು ಸಹಕಾರಿ ಮತ್ತು ಚರ್ಮದ ಸಿಪ್ಪೆ ಏಳುವುದನ್ನು ಇದು ತಪ್ಪಿಸುತ್ತದೆ.

ಉಗುರಿಗೆ ನೀರು ನೀಡಿ

ಉಗುರಿಗೆ ನೀರು ನೀಡಿ

ನಿಮ್ಮ ಉಗುರಿಗೆ ಬಣ್ಣ ಹಚ್ಚಿದ ನಂತರ ಕೂಡ ಅದರ ಆರೈಕೆ ಬಹಳ ಮುಖ್ಯ. ಅದು ತಾನಾಗಿ ಒಣಗಲು ನೀವು ಮಾಡಬೇಕಾದದ್ದು ಇಷ್ಟೆ ನಲ್ಲಿ ತಿರುಗಿಸಿ ನೀರಿನ ಕೆಳಗೆ ಕೈಯೊಡ್ಡಿ. ಇದರಿಂದ ನೈಲ್ ಪಾಲಿಷ್ ಸಹಜವಾಗಿ ವೇಗವಾಗಿ ಒಣಗುತ್ತದೆ.

ಹೆಚ್ಚಿನ ಕೋಟ್ ಹಚ್ಚಬೇಡಿ

ಹೆಚ್ಚಿನ ಕೋಟ್ ಹಚ್ಚಬೇಡಿ

ಪರಿಣಿತರ ಪ್ರಕಾರ ನೈಲ್ ಪಾಲಿಷ್ ಅನ್ನು ಹೆಚ್ಚಿನ ಕೋಟ್ ಗಳಲ್ಲಿ ಹಚ್ಚಿದರೆ ದೀರ್ಘಾವಧಿಯಲ್ಲಿ ಉಗುರಿಗೆ ಹಾನಿಯಾಗುತ್ತದೆ. ಉಗುರಿನ ಸಿಪ್ಪೆ ಏಳುತ್ತದೆ.

ನೈಲ್ ಪಾಲಿಷ್ ಸ್ಟೋರೇಜ್

ನೈಲ್ ಪಾಲಿಷ್ ಸ್ಟೋರೇಜ್

ಎಂದೂ ನೈಲ್ ಪಾಲಿಷ್ ಅನ್ನು ಹೆಚ್ಚು ಧಗೆ ಅಥವ ಉಷ್ಣತೆಯಿರುವ ಜಾಗದಲ್ಲಿ ಇಡಬೇಡಿ. ಯಾವಾಗಲೂ ಅದು ತಂಪಾದ ಸ್ಥಳದಲ್ಲಿರುವಂತೆ ಗಮನ ಹರಿಸಿ. ರೆಫ್ರಿಜಿರೇಟರ್ ನಲ್ಲಿಡುವುದು ಒಳ್ಳೆಯದು.

ಶೇಕ್ ಮಾಡಬೇಡಿ

ಶೇಕ್ ಮಾಡಬೇಡಿ

ಬಣ್ಣ ಹಚ್ಚಿಕೊಳ್ಳುವ ಮುನ್ನ ಬಾಟಲ್ ಶೇಕ್ ಮಾಡಬೇಡಿ ಬದಲಿಗೆ ನಿಮ್ಮ ಅಂಗೈಯಲ್ಲಿ ಅದನ್ನು ಹಿಡಿದು ಉರುಳಿಸಿ. ಇದರಿಂದ ಅದರೊಳಗೆ ಗಾಳಿಗುಳ್ಳೆಗಳುಂಟಾಗುವುದನ್ನು ತಡೆಯುತ್ತದೆ.

ಬಣ್ಣ ಹಚ್ಚುವಾಗ

ಬಣ್ಣ ಹಚ್ಚುವಾಗ

ಬಣ್ಣ ಹಚ್ಚುವಾಗ ಪದೇ ಪದೇ ಉಗುರಿನ ಹಿಂದೆ ಮುಂದೆ ನೋಡುತ್ತಿರಬೇಡಿ ಇದರಿಂದ ನಿಮ್ಮ ಉಗುರಿಗೆ ಹಾನಿಯಾಗುವ ಸಾಧ್ಯತೆ ಹೆಚ್ಚು.

ಬಿಸಿ ನೀರು ಬೇಡ

ಬಿಸಿ ನೀರು ಬೇಡ

ನೈಲ್ ಪಾಲಿಷ್ ಹಚ್ಚಿದ ನಂತರ ಬಿಸಿನೀರನ್ನು ಉಗುರಿಗೆ ಸೋಕಿಸಬೇಡಿ. ಏಕೆಂದರೆ ಇದು ಉಗುರಿನ ಬೆಡ್ ಅನ್ನು ಹಿಂಜುತ್ತದೆ. ಇದು ನೈಲ್ ಪಾಲಿಷ್ ಬಣ್ಣವನ್ನು ಕೂಡ ಹರಡಿಕೊಳ್ಳುವಂತೆ ಒತ್ತಡ ಹೇರುತ್ತದೆ. ಈ ಪ್ರಕ್ರಿಯೆಯಲ್ಲಿ ಉಗುರಿನ ಬಣ್ಣದಲ್ಲಿ ಬಿರುಕುಗಳುಂಟಾಗುತ್ತವೆ.

English summary

Things To Know About Painting Your Nails

Do you love to paint your nails with bright colours which are bold and trending? Yes, these lovely colours which you apply on and off on your nails can actually ruin the nail enamel.
Story first published: Wednesday, December 18, 2013, 11:22 [IST]
X
Desktop Bottom Promotion