Just In
Don't Miss
- Movies
ದರ್ಶನ್, ರಾಕ್ಲೈನ್ ಬಿಟ್ಟು 'ಮದಕರಿ ನಾಯಕ' ಚಿತ್ರಕ್ಕೆ ಶಕ್ತಿ ತುಂಬಿದ್ದು ಆ 'ನಾಲ್ವರು'
- Finance
ಡಿಸೆಂಬರ್ 7ರ ಚಿನ್ನ- ಬೆಳ್ಳಿ ದರ ಹೀಗಿದೆ
- News
ತೆಲಂಗಾಣ ಎನ್ಕೌಂಟರ್ ಬಗ್ಗೆ ಸುಪ್ರೀಂಕೋರ್ಟ್ ಸಿಜೆಐ ಹೇಳಿದ್ದೇನು?
- Automobiles
ಗ್ರಾಹಕರ ಬೇಡಿಕೆಯೆಂತೆ 6, 7, 8 ಸೀಟರ್ ಸೌಲಭ್ಯದೊಂದಿಗೆ ಬರಲಿದೆ ಕಿಯಾ ಕಾರ್ನಿವಾಲ್
- Sports
ಭಾರತ vs ವಿಂಡೀಸ್: ಟೀಮ್ ಇಂಡಿಯಾದ ಮೇಲೆ ಗುಡುಗಿದ ಯುವರಾಜ!
- Technology
ಫೋಕಸ್ ಮೂಡ್ ಆಯ್ಕೆ ಪರಿಚಯಿಸಿದ ಗೂಗಲ್!
- Education
ರೆಪ್ಕೊ ಬ್ಯಾಂಕ್ ನಲ್ಲಿ 15 ಹುದ್ದೆಗಳ ನೇಮಕಾತಿ
- Travel
ಹಿಮಾಚಲ ಪ್ರದೇಶದ ಈ ಜಲಪಾತಗಳು ನಿಮ್ಮನ್ನು ಬೇರೊಂದು ರಮ್ಯಲೋಕಕ್ಕೆ ಕೊಂಡೊಯ್ಯುವುದು ಖಂಡಿತ
ಪುರುಷರು ಆಕರ್ಷವಾಗಿ ಕಾಣಲು ಕೆಲ ಸಲಹೆಗಳು
ಹೆಚ್ಚಿನ ಪುರುಷರು, ತ್ವಚೆ ಆರೈಕೆ ಸ್ತ್ರೀಯರಿಗೆ ಮಾತ್ರ ಸೀಮಿತ, ಮೇಕಪ್ ಮಾಡುವುದು ಪುರುಷರಿಗೆ ಲಕ್ಷಣವಲ್ಲ ಎಂದು ತಪ್ಪಾಗಿ ಅರ್ಥೈಹಿಸಿರುತ್ತಾರೆ. ಆದ್ದರಿಂದ ಸರಿಯಾದ ತ್ವಚೆ ಆರೈಕೆ ಇಲ್ಲದೆ ಮುಖದ ಹೊಳಪು ಕಡಿಮೆಯಾಗುವುದು.
ಲುಕ್ ನಲ್ಲಿ ಸ್ವಲ್ಪ ಚೇಂಜ್ ಬೇಕೆನ್ನುವ ಪುರುಷರು ಸಲಹೆಗಳನ್ನು ಪಾಲಿಸಬಹುದು.
1. ಡ್ರೆಸ್ : ಬೆಳಗ್ಗೆ ಎದ್ದು ಕೈಗೆ ಸಿಕ್ಕಿದ ಶರ್ಟ್ ಬಳಸುವುದಕ್ಕಿಂತ ರಾತ್ರಿ ಮಲಗುವ ಮುಂಚೆ ನಾಳೆಗೆ ಹಾಕುವ ಬಟ್ಟೆಗಳನ್ನು ನೀಟಾಗಿ ಇಸ್ತ್ರಿ ಹಾಕಿ ತೆಗೆದಿಡಬೇಕು. ಶೂ ಪಾಲಿಷ್ ಮಾಡಿಡಬೇಕು. ವಾಚ್ ನಲ್ಲಿ ದೂಳು ಇದ್ದರೆ ಒರೆಸಿ ಇಡಬೇಕು. ಕೈ ಮತ್ತು ಕಾಲಿನ ಉಗುರುಗಳನ್ನು ನೀಟಾಗಿ ಕತ್ತರಿಸಿರಬೇಕು. ಇಷ್ಟು ಮಾಡಿದರೆ ಡ್ರೆಸ್ ಮಾಡಿದಾಗ ಆಕರ್ಷಕವಾಗಿ ಕಾಣಬಹುದು.
2. ಲಿಪ್ ಬಾಮ್ : ತುಟಿಗೆ ಲಿಪ್ ಬಾಮ್ ಹಚ್ಚುವುದರಿಂದ ತುಟಿ ತುಂಬಾ ಒಣಗಿದಂತೆ ಕಾಣುವುದಿಲ್ಲ. ಇದನ್ನು ಮಹಿಳೆಯರು ಮಾತ್ರವಲ್ಲ ಪುರುಷರೂ ಬಳಸಬಹುದು.
3. ಮುಖದ ಆರೈಕೆ: ದಿನಾವೂ ಸೋಪ್ ಮಾತ್ರ ಹಾಕಿ ತೊಳೆಯುವುದರಿಂದ ಮುಖದ ಹೊಳಪು ಹೆಚ್ಚುವುದಿಲ್ಲ. ಸ್ಕ್ರಬ್ಬಿಂಗ್ ಮಹಿಳೆಯರಷ್ಟೆ ಅಲ್ಲ ಪುರುಷರ ಮುಖದ ಆರೈಕೆಗೆ ಕೂಡ ಬಳಸಬಹುದು. ಸ್ಕ್ರಬ್ ಮಾಡಿ ನಿರ್ಜೀವ ತ್ವಚೆ ಹೋಗಲಾಡಿಸಿದರೆ ಮುಖದ ಹೊಳಪು ಹೆಚ್ಚುವುದು.
4. ಆಭರಣಗಳು: ಕತ್ತಿನಲ್ಲಿ ಚಿನ್ನದ ಚೈನ್ , ಕೈಯಲ್ಲಿ ಉಂಗುರ ಪುರುಷರ ಅಂದವನ್ನು ಹೆಚ್ಚಿಸುವುದು. ತುಂಬಾ ಸಿಂಪಲ್ ಬಯಸುವವರು ನೀಟಾಗಿ ಡ್ರೆಸ್ ಮಾಡಿ ಕೈಗೆ ಒಂದು ವಾಚ್ ಕಟ್ಟಿದರೆ ಸಾಕು, ಅದು ನಿಮಗೆ ಡೀಸೆಂಟ್ ಲುಕ್ ನೀಡುವುದು.
5. ಗಡ್ಡದ ವಿನ್ಯಾಸ: ದಿನಾವೂ ಒಂದೆ ರೀತಿ ಹೋಗುವುದರ ಬದಲು ಫ್ರೆಂಚ್, ಟ್ರಿಮ್ ಈ ರೀತಿಯ ಗಡ್ಡದ ವಿನ್ಯಾಸ ಮಾಡಬಹುದು. ಆದರೆ ಆ ವಿನ್ಯಾಸ ನಿಮ್ಮ ಮುಖದ ಅಂದ ಹೆಚ್ಚಿಸುವುದಾದರೆ ಮಾತ್ರ ಮಾಡಿ.