For Quick Alerts
ALLOW NOTIFICATIONS  
For Daily Alerts

ಆಂಟಿಯರಿಗೆ ಅಂಟಿಕೊಳ್ಳುತ್ತೆ ಮಿರರ್ ಫೋಬಿಯಾ

|
Mirror Phobia in Middle age women
ನೀವು 40-50 ರ ಆಸುಪಾಸಿನಲ್ಲಿದ್ದೀರಾ? ಕನ್ನಡಿಯಲ್ಲಿ ಆಗಾಗ್ಗೆ ಮುಖ ನೋಡಿಕೊಂಡು ಬೇಸರ ಆಗ್ತಿದ್ಯಾ? ಹಾಗಾದರೆ ಅದು ಮತ್ತಿನ್ನೇನೂ ಅಲ್ಲ, ಮಿರರ್ ಫೋಬಿಯಾ.

ಹೌದು. ಮಧ್ಯವಯಸ್ಕ ಮಹಿಳೆಯರು ಕನ್ನಡಿ ನೋಡಿಕೊಂಡಾಗಲೆಲ್ಲಾ, ತಮ್ಮ ಸೌಂದರ್ಯದ ಬಗ್ಗೆ ಟೀನೇಜ್ ಹುಡುಗಿಯರಿಗಿಂತ ನಾಲ್ಕು ಪಟ್ಟು ಹೆಚ್ಚು ಬೇಸರ ವ್ಯಕ್ತಪಡಿಸುತ್ತಾರೆ ಎಂದು ಸಮೀಕ್ಷೆಯೊಂದು ವರದಿ ಮಾಡಿದೆ.

ಒಪಿನಿಯನ್ ಮ್ಯಾಟರ್ಸ್ ಆನ್ ಲೈನ್ ನಲ್ಲಿ ಸುಮಾರು 1,246 ಮಹಿಳೆಯರ ಮೇಲೆ ಸಮೀಕ್ಷೆ ನಡೆಸಿದಾಗ 40ರಿಂದ 50 ವಯೋಮಿತಿಯ ಶೇಕಡಾ 90 ರಷ್ಟು ಮಹಿಳೆಯರು ತಮ್ಮ ಮುಖಚರ್ಯೆ ಬಗ್ಗೆ ಬೇಸರ ವ್ಯಕ್ತಪಡಿಸಿರುವುದು ಕಂಡುಬಂದಿದ್ದು, ಇದು ಒಂದು ರೀತಿ ಮಾನಸಿಕ ತೊಳಲಾಟದ ಮಿರರ್ ಫೋಬಿಯಾ ಎಂದು ತಜ್ಞರು ತಿಳಿಸಿದ್ದಾರೆ.

50 ರ ನಂತರವೂ ತಮ್ಮ ಸೌಂದರ್ಯದ ಬಗ್ಗೆ, ನಿಲುವಿನ ಬಗ್ಗೆ ಹೆಮ್ಮೆ ಪಡುವ ಮಹಿಳೆಯರು ಕೇವಲ ಶೇ. 9 ರಷ್ಟು ಮಾತ್ರ ಇದ್ದು, ಇವರು ತಮ್ಮ ಚೆಲುವಿನ ಕುರಿತು 16-19 ವಯೋಮಿತಿಯ ಯುವತಿಯರಿಗಿಂತ ಶೇ 42 ರಷ್ಟು ಹೆಚ್ಚಿಗೆ ಖುಷಿ ಪಡುತ್ತಾರೆ ಎಂದೂ ಸಮೀಕ್ಷೆ ತಿಳಿಸಿದೆ.

ವಯಸ್ಸಾಗುತ್ತಿದ್ದಂತೆ ದೇಹ ಮತ್ತು ತ್ವಚೆಯಲ್ಲಿ ಕಂಡುಬರುವ ಬದಲಾವಣೆ, ಸೌಂದರ್ಯ ಪ್ರಜ್ಞೆ ಹೆಚ್ಚಾಗಿರುವ ಮಧ್ಯ ವಯಸ್ಸಿನ ಮಹಿಳೆಯರ ಕಾನ್ಫಿಡೆನ್ಸ್ ಕಡಿಮೆ ಮಾಡುತ್ತದೆ ಎಂದು ಸಮೀಕ್ಷೆ ತಿಳಿಸಿದೆ.

ಇದಲ್ಲದೆ ಫ್ಯಾಷನ್ ಜಗತ್ತು ಯುವತಿಯರನ್ನೇ ಉದ್ದೇಶವಾಗಿಟ್ಟುಕೊಂಡಿರುವುದರಿಂದ ಮಧ್ಯ ವಯಸ್ಸಿನ ಮಹಿಳೆಯರನ್ನು ನಿರ್ಲಕ್ಷಿಸುತ್ತಿರುವಂತೆ ಭಾಸವಾಗಿ ಕೆಲವರಲ್ಲಿ ಒತ್ತಡವನ್ನೂ ಉಂಟು ಮಾಡುತ್ತದೆ ಎಂದು ಡೈಲಿ ಮೇಲ್ ವರದಿ ಮಾಡಿದೆ.

English summary

Mirror Phobia | Middle Age Women and Mirror Phobia | Beauty Problem in Middle Age | ಮಧ್ಯವಯಸ್ಕ ಮಹಿಳೆಯರಲ್ಲಿ ಮಿರರ್ ಫೋಬಿಯಾ | ಮಧ್ಯವಯಸ್ಕರಲ್ಲಿ ಸೌಂದರ್ಯ ಸಮಸ್ಯೆ

Middle age women are more unhappy than teenage girls when they look at the mirror and suffer from, what experts have dubbed 'Mirror Phobia' a new survey revealed.
Story first published: Tuesday, September 20, 2011, 17:18 [IST]
X
Desktop Bottom Promotion