For Quick Alerts
ALLOW NOTIFICATIONS  
For Daily Alerts

ಹಳದಿ ಉಗುರನ್ನು ನಿವಾರಿಸಲು ಈ 4 ಮನೆಮದ್ದನ್ನು ಬಳಸಿ ನೋಡಿ

|

ಕಾಲ ಬದಲಾದಂತೆ ಹೊಸ ಹೊಸ ಸಮಸ್ಯೆಗಳು ಹುಟ್ಟಿಕೊಳ್ಳುತ್ತಿದೆ. ಇವುಗಳಲ್ಲಿ ಒಂದು ಉಗುರುಗಳ ಬಣ್ಣ ಹಳದಿ ಆಗುವುದು. ಈ ಸಮಸ್ಯೆ ಹಿಂದೆ ಇರಲಿಲ್ಲ ಎಂದಲ್ಲ, ಹಿಂದೆ ಇದು ಗಂಭೀರ ಕಾಯಿಲೆಯ ಸಮಸ್ಯೆಯಾಗಿತ್ತು, ಇಂದು ನಮ್ಮ ಆಧುನಿಕ ಜೀವನಕ್ಕೆ ಒಗ್ಗಿಕೊಳ್ಳವ ಭರದಲ್ಲಿ ನಾವೇ ಈ ಸಮಸ್ಯೆಯನ್ನು ತಂದುಕೊಂಡಿದ್ದೇವೆ.

Yellow Nails

ಉಗುರುಗಳು ಹಳದಿ ಆಗಲು ಕಾರಣ ಶ್ವಾಸಕೋಶದ ಕಾಯಿಲೆ, ನೇರ ಸಂಬಂಧಿತ ಸಮಸ್ಯೆಗಳು, ಮೂತ್ರಪಿಂಡದ ಅಸ್ವಸ್ಥತೆಗಳು ಇತ್ಯಾದಿಗಳನ್ನು ಸಹ ಸೂಚಿಸುತ್ತದೆ. ಅಷ್ಟೇ ಅಲ್ಲದೆ ಹೆಣ್ಣು ಉಗುರು ಮಸುಕಾಗಲು ಹೆಣ್ಣು ಮಕ್ಕಳು ಹಚ್ಚುವ ಉಗುರುಬಣ್ಣ/ನೈಲ್‌ಪಾಲಿಶ್‌, ಪುರುಷರಲ್ಲಿ ಧೂಮಪಾನದ ಅಭ್ಯಾಸ. ಈ ಅಭ್ಯಾಸಗಳು ನಮ್ಮ ಆರೋಗ್ಯದ ಜತೆಗೆ ಬಾಹ್ಯ ಸೌಂದರ್ಯದ ಮೇಲೆ ಪರಿಣಾಮ ಬೀರುತ್ತಿದೆ.
ಉಗುರು ಹಳದಿ ಆಗುವುದನ್ನು ತಡೆಗಟ್ಟುವುದು ಹೇಗೆ?, ಅದರಲ್ಲೂ ಯಾವುದೇ ರಾಸಾಯನಿಕ ಇಲ್ಲದೆ ಮನೆಮದ್ದಿನ ಮೂಲಕ ಉಗುರು ಹಳದಿ ಆಗುವುದನ್ನು ತಡೆಗಟ್ಟಲು ಹೀಗೆ ಮಾಡಿ....

ನಿಂಬೆ ರಸ

ನಿಂಬೆ ರಸ

ಯಾವುದೇ ಸೌಂದರ್ಯ ಸಮಸ್ಯೆಗೆ ನಿಂಬೆ ರಸವು ಅತ್ಯುತ್ತಮ ಮನೆಮದ್ದು ಎಂಬುದು ಅಲ್ಲರಿಗೂ ಗೊತ್ತು. ಇಲ್ಲಿಯೂ ಸಹ ಉಗುರುಗಳ ಮೇಲೆ ಪ್ರತಿದಿನ ನಿಂಬೆ ರಸವನ್ನು ಬಳಸುವುದರಿಂದ ಉಗುರಿನಲ್ಲಿರುವ ಹಳದಿ ಕಲೆಗಳನ್ನು ಪರಿಣಾಮಕಾರಿಯಾಗಿ ತೆಗೆದುಹಾಕುತ್ತದೆ. ಹೀಗಾಗಿ ನಿಮ್ಮ ಉಗುರುಗಳು ಗುಲಾಬಿ ಬಣ್ಣವನ್ನು ಪಡೆಯಲು ಮತ್ತು ಆರೋಗ್ಯಕರವಾಗಿ ಕಾಣಲು ಇದು ಅತ್ಯುತ್ತಮ ಮನೆಮದ್ದು.

ಕೈಗಳನ್ನು ಹೊಳೆಯುವಂತೆ ಮತ್ತು ಮೃದುವಾಗಿಸಲು ನೀವು ಗ್ಲಿಸರಿನ್ ಜೊತೆಗೆ ಸ್ವಲ್ಪ ನಿಂಬೆ ರಸವನ್ನು ಕೈಗಳಿಗೆ ಅನ್ವಯಿಸಬಹುದು. ಮೃದುವಾಗಿ ಮಸಾಜ್ ಮಾಡಿ ಮತ್ತು ರಾತ್ರಿಯಿಡೀ ಬಿಡಿ. ಇದರಿಂದ ಹಳದಿ ಉಗುರುಗಳು ಬಿಳಿಯಾಗಿ ಕೈಗಳು ಸುಂದರವಾಗುವುದು.

ಅಡಿಗೆ ಸೋಡಾ

ಅಡಿಗೆ ಸೋಡಾ

ಬೇಕಿಂಗ್ ಸೋಡಾವನ್ನು ಸ್ವಲ್ಪ ನೀರಿನೊಂದಿಗೆ ಬೆರೆಸಿ ಈ ಪೇಸ್ಟ್ ಅನ್ನು ಉಗುರಿನ ಮೇಲೆ ಹಚ್ಚಿ ಮತ್ತು 10 ನಿಮಿಷಗಳ ಕಾಲ ಇರಿಸಿ. ನಂತರ ಉಗುರಿನಿಂದ ನಿಧಾನವಾಗಿ ಉಜ್ಜಿಕೊಳ್ಳಿ. ಈ ಅಡುಗೆ ಸೋಡಾ ಮನೆಮದ್ದು ಹಳದಿ ಉಗುರುಗಳನ್ನು ಬಿಳಿ/ಗುಲಾಬಿ ಬಣ್ಣಕ್ಕೆ ತರುತ್ತದೆ ಮತ್ತು ಕಲೆಗಳು ನಿವಾರಣೆ ಆಗುವುದನ್ನು ನೀವು ಗಮನಿಸಬಹುದು.

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆ

ವಿಟಮಿನ್ ಇ ಎಣ್ಣೆಯು ಉಗುರುಗಳನ್ನು ಬಲಪಡಿಸಲು ಮತ್ತು ಕೈಗಳನ್ನು ಸುಂದರಗೊಳಿಸಲು ಸಹಾಯ ಮಾಡುತ್ತದೆ, ನೈಸರ್ಗಿಕವಾಗಿ ಉಗುರುಗಳನ್ನು ಬಿಳಿಯಾಗಿಸುತ್ತದೆ. ವಿಟಮಿನ್ ಇ ಎಣ್ಣೆಯನ್ನು ಉಗುರುಗಳ ಮೇಲೆ ಹಚ್ಚಿ ಮೃದುವಾಗಿ ಮಸಾಜ್ ಮಾಡಿ. ರಾತ್ರಿಯಿಡೀ ಇದನ್ನು ಬಿಡಿ. ಯಾವುದೇ ಕಲೆಗಳಿಲ್ಲದೆ ಬಲವಾದ ಮತ್ತು ಆರೋಗ್ಯಕರ ಉಗುರುಗಳಿಗಾಗಿ ಇದನ್ನು ಪ್ರತಿದಿನ ಪ್ರಯತ್ನಿಸಿ.

ಟೊಮ್ಯಾಟೋ ರಸ

ಟೊಮ್ಯಾಟೋ ರಸ

ಹಳದಿ ಉಗುರುಗಳ ಮೇಲೆ ಪ್ರತಿದಿನ ಟೊಮೆಟೊ ರಸವನ್ನು ಕಚ್ಚಿ ಉಜ್ಜಿದರೆ ಅವು ಮತ್ತೆ ಬಿಳಿಯಾಗುತ್ತವೆ ಮತ್ತು ಯಾವುದೇ ಕಲೆಗಳು ಸಹ ಕಡಿಮೆಯಾಗುತ್ತವೆ. ಟೊಮೆಟೊ ರಸವು ಹಳದಿ ಉಗುರುಗಳಿಗೆ ಮತ್ತು ಕಲೆಗಳನ್ನು ತೆಗೆದುಹಾಕಲು ಉತ್ತಮ ನೈಸರ್ಗಿಕ ಪರಿಹಾರವಾಗಿದೆ.

ಉಗುರುಗಳು ಹಳದಿಯಾಗದಂತೆ ತಡೆಗಟ್ಟುವ ಸಲಹೆಗಳು

ಉಗುರುಗಳು ಹಳದಿಯಾಗದಂತೆ ತಡೆಗಟ್ಟುವ ಸಲಹೆಗಳು

* ಉಗುರುಗಳು ಹಳದಿಯಾಗುವುದನ್ನು ತಡೆಯಲು, ಅಧಿಕ ರಾಸಾಯನಿಕಗಳನ್ನು ಹೊಂದಿರುವ ಅಗ್ಗದ ಉಗುರು ಬಣ್ಣವನ್ನು ಬಳಸುವುದನ್ನು ಇಂದೇ ಬಿಡಿ

* ಉಗುರುಗಳು ವಾರಕ್ಕೆ ಒಮ್ಮೆಯಾದರೂ ಉಗುರು ಬಣ್ಣದಿಂದ ಮುಕ್ತವಾಗಿರಲಿ, ಇದರಿಂದ ಅವು ಉಸಿರಾಡಲು ಮತ್ತು ಅವುಗಳ ಮೂಲ ಬಣ್ಣಕ್ಕೆ ಮರಳಲು ಸಾಧ್ಯವಾಗುತ್ತದೆ.

* ನೇಲ್ ಪಾಲಿಶ್ ರಿಮೂವರ್ ಅನ್ನು ಬಳಸಿದ ನಂತರ ಉಗುರುಗಳು ಮತ್ತು ಚರ್ಮದ ಹತ್ತಿರವಿರುವ ಚರ್ಮದ ಮೇಲೆ ಮಾಯಿಶ್ಚರೈಸರ್‌ ಅನ್ನು ಬಳಸಿ ನಂತರ 15-20 ನಿಮಿಷಗಳ ನಂತರ ನೇಲ್ ಪಾಲಿಷ್ ಅನ್ನು ಅನ್ವಯಿಸಿ.

English summary

Natural Home Remedies To Treat Yellow Nails in kannada

Here we are discussing about Natural Home Remedies To Treat Yellow Nails in kannada. Read more.
X
Desktop Bottom Promotion