For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕೂದಲಿನ ಆರೈಕೆ ಹೀಗೆ ಮಾಡಿ, ಕೂದಲಿನ ಅಂದ ಹೆಚ್ಚುವುದು

|

ಕಾಲ-ಕಾಲಕ್ಕೆ ತಕ್ಕಂತೆ ಕೂದಲಿನ ಆರೈಕೆಯಲ್ಲೂ ಬದಲಾವಣೆ ಮಾಡಿಕೊಳ್ಳಬೇಕು. ಆ ಕಾಲಕ್ಕೆ ತಕ್ಕಂತೆ ಶ್ಯಾಂಪೂ, ಕಂಡೀಷನರ್ ಬದಲಾಯಿಸಿದರೆ ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಅದರಲ್ಲೂ ಚಳಿಗಾಲದಲ್ಲಿ ಒಣಕೂದಲಿನ ಸಮಸ್ಯೆ ಹೆಚ್ಚುವುದು, ಅಲ್ಲದೆ ತಲೆ ಬುಡದಲ್ಲಿ ತುರಿಕೆ ಕಂಡು ಬರುವುದು. ಬೇಸಿಗೆ ಕಾಲಕ್ಕಿಂತಲೂ ಚಳಿಗಾಲದಲ್ಲಿ ಕೂದಲು ಹಾಳಾಗುವುದು ಹೆಚ್ಚು, ಏಕೆ ಹೀಗಾಗುತ್ತದೆ?

hair care during winter season

ನೀವು ಮನೆಯಿಂದ ಹೊರಗಡೆ ಕಾಲಿಟ್ಟಾಗ ತುಂಬಾ ಚಳಿಯಿರುತ್ತದೆ, ಅಲ್ಲದೆ ಈ ಸಮಯದಲ್ಲಿ ದೂಳು ಕೂಡ ತುಂಬಾನೇ ಇರುತ್ತದೆ, ಇನ್ನು ಮಧ್ಯಾಹ್ನ ಹೊತ್ತಿಗೆ ಬಿಸಿಲ ಉರಿ ಉಂಟಾಗುತ್ತದೆ ಈ ಎಲ್ಲಾ ಕಾರಣಗಳು ನಿಮ್ಮ ದೇಹದ ಮಾತ್ರವಲ್ಲ ಕೂದಲಿನ ಮೇಲೂ ಪರಿಣಾಮ ಬೀರುವುದು.

ಚಳಿಗಾಳದಲ್ಲಿ ನಿಮ್ಮ ಕೂದಲಿನ ಮಾಯಿಶ್ಚರೈಸರ್ ಕೂಡ ಕಡಿಮೆಯಾಗುವುದು, ಅಲ್ಲದೆ ತಲೆ ಹೊಟ್ಟಿನ ಸಮಸ್ಯೆ ಕೂಡ ಹೆಚ್ಚಾಗುವುದು. ಅಲ್ಲದೆ ಕೂದಲಿನ ಬುಡ ಸಡಿಲವಾಗುವುದು.

 ಚಳಿಗಾಲದಲ್ಲಿ ಆರೈಕೆ ಹೀಗಿರಲಿ:

ಚಳಿಗಾಲದಲ್ಲಿ ಆರೈಕೆ ಹೀಗಿರಲಿ:

ಈ ಸಮಯದಲ್ಲಿ ನಿಮ್ಮ ಕೂದಲಿನ ಆರೈಕೆ ಕಡೆಗೆ ತುಂಬಾನೇ ಗಮನ ನೀಡಬೇಕು.

* ಹದ ಬಿಸಿ ಎಣ್ಣೆಯಿಂದ ವಾರಕ್ಕೆ 2-3 ಬಾರಿ ತಲೆ ಬುಡವನ್ನು ಮಸಾಜ್ ಮಾಡಿ.

* ಕೂದಲಿನ ತುದಿ ಕವಲೊಡೆಯುವುದನ್ನು ತಡೆಗಟ್ಟಲು ಸ್ವಲ್ಪ ಟ್ರಿಮ್ ಮಾಡಿ.

* ಈ ಸಮಯದಲ್ಲಿ ಕೂದಲಿಗೆ ಕಲರ್‌ ಮಾಡುವುದು, ಐರನ್ ಮಾಡುವುದು ಒಳ್ಳೆಯ ಆಯ್ಕೆ ಅಲ್ಲ.

* ಕೂದಲಿಗೆ ಲೀವ್‌ ಇನ್‌ ಕಂಡೀಷನರ್ ಮತ್ತು ಸೆರಮ್ ಕೂದಲು ಒಣಗುವುದನ್ನು ತಡೆಗಟ್ಟಲು ತುಂಬಾನೇ ಸಹಕಾರಿ.

ಕೂದಲಿಗೆ ತುಂಬಾ ದುಬಾರಿ ಬೆಲೆಯ ಎಣ್ಣೆ ಹಚ್ಚಬೇಕಾಗಿಲ್ಲ, ಸಾಧಾರಣವಾಗಿ ನೀವು ತಲೆಗೆ ಹಚ್ಚುವ ತೆಂಗಿನೆಣ್ಣೆ, ಹರಳೆಣ್ಣೆ ಹಚ್ಚಬಹುದು. ಇದರಿಂದ ಕೂದಲು ತುಂಬಾ ಸುಂದರವಾಗಿ ಕಾಣುವುದು.

 ಹೊರಗಡೆ ಹೋಗುವಾಗ ತಲೆ ಸ್ಕಾರ್ಪ್‌ ಅಥವಾ ಕ್ಯಾಪ್‌ ಬಳಸಿ

ಹೊರಗಡೆ ಹೋಗುವಾಗ ತಲೆ ಸ್ಕಾರ್ಪ್‌ ಅಥವಾ ಕ್ಯಾಪ್‌ ಬಳಸಿ

* ಈ ಸಮಯದಲ್ಲಿ ಫ್ರೀ ಹೇರ್‌ ಬಿಡುವುದಕ್ಕಿಂತ ತುರುಬು ಅಥವಾ ಜುಟ್ಟು ಒಳ್ಳೆಯದು. ನಿಮ್ಮ ಕ್ಯಾಪ್‌ನ ಒಳಗಡೆ ಸ್ಯಾಟಿನ್ ಬಟ್ಟೆ ಸ್ಟಿಚ್ ಮಾಡಿ. ಸರಿಯಾದ ಕ್ಯಾಪ್‌ ಬಳಸಿ, ಇದರಿಂದ ತಲೆಗೆ ರಕ್ತ ಸಂಚಾರಕ್ಕೆ ಯಾವುದೇ ತೊಂದರೆ ಉಂಟಾಗುವುದಿಲ್ಲ. ಸ್ಕಾರ್ಪ್ ನಿಮ್ಮ ಕೂದಲು ಒಣಗುವುದನ್ನು ತಡೆಗಟ್ಟುತ್ತೆ ಹಾಗೂ ದೂಳಿನಿಂದ ರಕ್ಷಣೆ ನೀಡುವುದು.

ತುಂಬಾ ಬಿಸಿ ನೀರು ಹಾಕಬೇಡಿ ಹಾಗೂ ಆಗಾಗ ಶ್ಯಾಂಪೂ ಹಾಕಬೇಡಿ ಚಳಿಗಾಲದಲ್ಲಿ ಬಿಸಿ ನೀರು ಹಾಕಲು ಹಿತ ಅನಿಸಿದರು ತುಂಬಾ ಬಿಸಿ ನೀರು ಕೂದಲಿನ ಆರೋಗ್ಯಕ್ಕೆ ಒಳ್ಳೆಯದು. ಹದ ಬಿಸಿ ನೀರು ಬಳಸಿ. ಅಲ್ಲದೆ ತುಂಬಾ ಶ್ಯಾಂಪೂ ಬಳಸಬೇಡಿ.

 ನಿಮ್ಮ ಕೂದಲಿನ ಆರೈಕೆ ಮಾಡಿ

ನಿಮ್ಮ ಕೂದಲಿನ ಆರೈಕೆ ಮಾಡಿ

ಪ್ರತಿ 15 ದಿನಕ್ಕೊಮ್ಮೆ ಕುದಲಿನ ಆರೈಕೆ ಮಾಡಿ. ಬಿಸಿ ಎಣ್ಣೆ ಮಸಾಜ್‌, ಸ್ಟೀಮಿಂಗ್, ಡೀಪ್‌ ಕಂಡೀಷನಿಂಗ್ ಮಾಸ್ಕ್‌ ಇವೆಲ್ಲಾ ಮಾಡುವುದರಿಂದ ತಲೆ ಬುಡದಲ್ಲಿ ರಕ್ತ ಸಂಚಾರ ಹೆಚ್ಚುವುದು. ತೆಂಗಿನೆಣ್ಣೆ ಜೊತೆಗೆ ಸ್ವಲ್ಪ ಆಲೀವ್, ಜೊಜೊಬಾ, ರೋಸ್‌ಮೆರಿ ಮುಂತಾದ ಎಣ್ಣೆಗಳನ್ನು ಸೇರಿಸಿದರೆ ಒಳ್ಳೆಯದು.

 ಚಳಿಗಾಲದಲ್ಲಿ ಕೂದಲಿನ ಹೊಳಪಿಗೆ

ಚಳಿಗಾಲದಲ್ಲಿ ಕೂದಲಿನ ಹೊಳಪಿಗೆ

ಕೂದಲಿಗೆ ಲೀವ್ ಇನ್‌ ಹೇರ್‌ ಸೆರಮ್ ಅಥವಾ ಕ್ರೀಮ್‌ ಬಳಸಿ. ಇದು ನಿಮ್ಮ ಕೂದಲನ್ನು ಮೃದುವಾಗಿಡುವುದು. ಫ್ಲ್ಯಾಟ್ ಬೀರ್ ಅಥವಾ ವಿನೆಗರ್‌ ಅನ್ನು ತಲೆ ಸ್ನಾನದ ಬಳಿಕ ಕೊನೆಗೆ ಬಳಸುವುದರಿಂದ ಕೂದಲು ಹೊಳಪಿನಿಂದ ಕೂಡಿರುತ್ತದೆ.

ಒಂದು ಮಗ್‌ ನೀರು ಒಂದು ಚಮಚದಷ್ಟು ಬೀರ್ ಅಥವಾ ವಿನೆಗರ್ ಹಾಕಿ.

ಕಂಡೀಷನಿಂಗ್ ಮಾಡಿ

ಕಂಡೀಷನಿಂಗ್ ಮಾಡಿ

ಪ್ರತಿಬಾರಿ ನೀವು ತಲೆ ತೊಳೆದಾಗ ಕಂಡಿಷನರ್ ಬಳಸಿ. ನಿಮಗೆ ರೆಡಿಮೇಡ್ ಕಂಡೀಷನರ್ ಬಲಸಲು ಇಷ್ಟವಿಲ್ಲದಿದ್ದರೆ ತೆಂಗಿನಕಾಯಿ ಹಾಲನ್ನ ಕಂಡೀಷನರ್ ಆಗಿ ಬಳಸಬಹುದು. ಅಲ್ಲದೆ ಕೂದಲು ಒಣಗಿಸಲು ಹೇರ್ ಡ್ರೈಯರ್‌ ಬಳಸಬೇಡಿ, ಕೂದಲಿಗೆ ಐರನ್ ಮಾಡಬೇಡಿ.

English summary

How to Take Care of Your Hair During the Winter Season in Kannada, Read on.. . ಚಳಿಗಾಲದಲ್ಲಿ ಕೂದಲಿನ ಆರೈಕೆ ಹೇಗಿರಬೇಕು ನೋಡಿ

How to Take Care of Your Hair During the Winter Season in Kannada, Read on.. .
Story first published: Wednesday, December 1, 2021, 20:55 [IST]
X
Desktop Bottom Promotion