For Quick Alerts
ALLOW NOTIFICATIONS  
For Daily Alerts

ಕೊರಿಯನ್ನರಂತೆ ಗ್ಲಾಸಿ ತ್ವಚೆಯನ್ನು ಮನೆಯಲ್ಲೇ ಹೊಂದುವುದು ಹೇಗೆ? ಇಲ್ಲಿದೆ ಬೆಸ್ಟ್‌ ಟಿಪ್ಸ್‌

|

ಬ್ಯೂಟಿ ಕೇರ್‌ ನಲ್ಲಿ ಕೊರಿಯನ್ಸ್ ಬಹಳ ಫೇಮಸ್.. ತ್ವಚೆಗೆ ಅಗತ್ಯವಾಗ ಎಲ್ಲಾ ಆರೈಕೆಗಳನ್ನು ಮಾಡಿಕೊಳ್ಳುವುದರಿಂದ ಕೊರಿಯನ್ನರು ಸಾಮಾನ್ಯವಾಗಿ ಗ್ಲಾಸಿ ಲುಕ್ ಹೊಂದಿರೋದು ಎಲ್ಲರಿಗೂ ಗೊತ್ತೇ ಇದೆ. ಅಂದಹಾಗೇ ಗ್ಲಾಸಿ ಲುಕ್ ಅಂದ್ರೆ, ಯಾವುದೇ ಕಲೆಯಿಲ್ಲದ, ತ್ವಚೆಯ ರಂಧ್ರಗಳು ಕಾಣದ, ಶುಭ್ರ, ಸ್ವಚ್ಛ ಸಮತಟ್ಟಾದ ಮುಖ. ಇಂತಹ ತ್ವಚೆ ಸುಖಾಸುಮ್ಮನೇ ಸಿಗೋದಿಲ್ಲ. ಅದಕ್ಕೆ ಅಗತ್ಯವಿರುವಂತಹ ಆರೈಕೆ ಮಾಡಿದರೆ ಮಾತ್ರ ಕೊರಿಯನ್ನರಂತಹ ಗ್ಲಾಸಿ ಲುಕ್ ಸಿಗುವುದು. ಹಾಗಾದ್ರೆ, ಅವರ ಆರೈಕೆ ಕ್ರಮ ಏನು? ಗ್ಲಾಸಿ ಲುಕ್ ಪಡೆಯಲು ಅವರು ಬಳಸೋ ವಿಧಾನಗಳೇನು ಎಂಬುದನ್ನು ಇಲ್ಲಿ ನೋಡೋಣ.

123

ಕೊರಿಯನ್ನರಂತೆ, ಗ್ಲಾಸಿ ಲುಕ್ ಮನೆಯಲ್ಲಿ ಪಡೆಯುವುದು ಹೇಗೆ ಎಂಬುದನ್ನು ಈ ಕೆಳಗೆ ನೀಡಲಾಗಿದೆ:
1. ಡಬಲ್ ಕ್ಲೆನ್ಸ್

1. ಡಬಲ್ ಕ್ಲೆನ್ಸ್

ಕ್ಲೆನ್ಸಿಂಗ್ ಎಂದರೆ ಬೇರೆನಲ್ಲ, ನಿಮ್ಮ ಮುಖವನ್ನು ತೊಳೆಯುವುದು. ದಿನಕ್ಕೆ ಎರಡು ಬಾರಿ, ನಿಮ್ಮ ಆಯ್ಕೆಯ ಹಾಗೂ ನಿಮ್ಮ ತ್ವಚೆಗೆ ಸೂಕ್ತವಾಗಿರುವ ಫೇಸ್ ವಾಶ್ ಬಳಸಿ, ಮುಖವನ್ನು ತೊಳೆಯಿರಿ.

2. ಎಕ್ಸ್‌ಫೋಲಿಯೇಟರ್

2. ಎಕ್ಸ್‌ಫೋಲಿಯೇಟರ್

ಫೇಸ್ ವಾಶ್ ಮಾಡಿದ ಬಳಿಕ, ನಿಮ್ಮ ಮುಖವನ್ನು ಟವೆಲ್‌ನಿಂದ ಒರೆಸಿ, ಚರ್ಮವನ್ನು ಎಕ್ಸ್‌ಫೋಲಿಯೇಟ್ ಮಾಡಲು ಫೇಸ್ ಸ್ಕ್ರಬ್ ಹಚ್ಚಿ. ಸ್ವಲ್ಪ ಕಾಲ ಬಿಡಿ. ತದನಂತರ, ನಿಧಾನವಾಗಿ ಉಜ್ಜುತ್ತಾ ನಿಮ್ಮ ಮುಖ ತೊಳೆಯಿರಿ. ಇದು ನಿಮ್ಮ ತ್ವಚೆಯಲ್ಲಿ ಸಂಗ್ರಹವಾಗಿರುವ ಡೆಡ್‌ಸೆಲ್ ಹಾಗೂ ಇತರ ಕೊಳೆ, ಕಲ್ಮಶಗಳನ್ನು ಅಳದಿಂದ ತೆಗೆದುಹಾಕುವುದು.

3. ಟೋನರ್

3. ಟೋನರ್

ಫೇಸ್ ಎಫ್ಫೋಲಿಯೇಶನ್ ನಂತರ ನಿಮ್ಮ ಚರ್ಮವು ಮೃದುವಾಗಿರುತ್ತದೆ. ಅದಕ್ಕಾಗಿ ಟೋನರ್ ಬಳಿಸಿ, ನಿಮ್ಮ ಮುಖದ ಟೋನ್‌ನ್ನು ಸುಧಾರಿಸುವುದು ಮುಖ್ಯ. ಇದು ಚರ್ಮದ pH ಮಟ್ಟವನ್ನು ಸಮತೋಲನಗೊಳಿಸಲು ಮುಖ್ಯವಾಗಿದ್ದು, ತ್ವಚೆಯ ಟೋನ್ ಸುಧಾರಿಸಲು ಸಹಾಯ ಮಾಡುತ್ತದೆ. ನಿಮ್ಮ ತ್ವಚೆಯ ಪ್ರಕಾರಕ್ಕೆ ಸೂಕ್ತವಾಗುವ ಟೋನರ್ ಬಳಸಿ.

4. ಎಸೆನ್ಸ್

4. ಎಸೆನ್ಸ್

ಎಸೆನ್ಸ್ ಎಂಬುದು ಹಗುರವಾದ ವಾಟರ್ ಬೇಸ್ಡ್ ಉತ್ಪನ್ನವಾಗಿದ್ದು, ಅದು ನಿಮ್ಮ ಚರ್ಮಕ್ಕೆ ತೇವಾಂಶವನ್ನು ನೀಡುತ್ತದೆ. ಇದನ್ನು ಪ್ರತಿನಿತ್ಯ ಬಳಸುವು ಅಗತ್ಯವಿಲ್ಲ. ಏಕೆಂದರೆ, ಮಾಯಿಶ್ಚರೈಸರ್ ದಿನನಿತ್ಯ ಬಳಕೆ ಮಾಡುವುದರಿಂದ, ಅದರಿಂದಲೇ ತೇವಾಂಶ ನಿಮ್ಮ ತ್ವಚೆಗೆ ಲಭಿಸುವುದು. ಆದ್ದರಿಂದ ವಾರಕ್ಕೊಮ್ಮೆ ಟೋನರ್ ಬಳಸಿದ ಮೇಲೆ, ಒಮ್ಮೆ ನಿಮ್ಮ ಆಯ್ಕೆಯ ಎಸೆನ್ಸ್ ನ್ನು ಸ್ಪ್ರೇ ಮಾಡಿ.

5. ಫೇಸ್ ಸೀರಮ್

5. ಫೇಸ್ ಸೀರಮ್

ಫೇಸ್ ಸೀರಮ್ ನಿಮ್ಮ ತ್ವಚೆಗೆ ಅಗತ್ಯವಿರುವ ಪೋಷಕಾಂಶ ನೀಡಿ, ಅದನ್ನು ಕಲೆರಹಿತ-ದೋಷಮುಕ್ತವಾಗಿ ಕಾಪಾಡುವುದು. ಅದ್ದರಿಂದ ತ್ವಚೆಯ ಆರೈಕೆಯಲ್ಲಿ ಫೇಸ್ ಸೀರಮ್ ಕಡ್ಡಾಯವಾಗಿ ಸೇರಿಸಿಕೊಳ್ಳಬೇಕು. ಟೋನರ್ ಬಳಸಿದ ಬಳಿಕ ಫೇಸ್ ಸೀರಮ್ ಹಚ್ಚಿ, ನಿಮ್ಮ ಮುಖವನ್ನು ಮೃದುವಾಗಿ ಮಸಾಜ್ ಮಾಡಿ.

6. ಮಾಯಿಶ್ಚರೈಸರ್

6. ಮಾಯಿಶ್ಚರೈಸರ್

ತ್ವಚೆಯ ಆರೋಗ್ಯ ಕಾಪಾಡುವಲ್ಲಿ ಮಾಯಿಶ್ಚರೈಸರ್ ಪಾತ್ರ ಮಹತ್ವದ್ದು. ಇದು ನಿಮ್ಮ ತ್ವಚೆಗೆ ಅಗತ್ಯವಿರುವ ತೇವಾಂಶನವನ್ನ ನೀಡಿ, ಹೈಡ್ರೇಟಿಂಗ್ ಆಗಿ ಇಡುವುದು. ಇದರಿಂದ ಅಕಾಲಿಕವಾಗಿ ಕಾಣಿಸಿಕೊಳ್ಳುವ ವಯಸ್ಸಾಗುವಿಕೆಯ ಲಕ್ಷಣಗಳಿಂದ ದೂರವಿರಬಹುದು. ಜೊತೆಗೆ ಮಾಯಿಶ್ಚರೈಸರ್ ನಿಮ್ಮ ಚರ್ಮವನ್ನು ನಯವಾಗಿ ಮತ್ತು ಮೃದುವಾಗಿ ಕಾಣುವಂತೆ ಮಾಡುತ್ತದೆ.

7. ಸನ್‌ಸ್ಕ್ರೀನ್

7. ಸನ್‌ಸ್ಕ್ರೀನ್

ಯಾವುದೇ ತ್ವಚೆಯ ಪ್ರಕಾರವಾದರೂ, ಯಾವುದೇ ಕಾರಣಕ್ಕೂ ಬಿಡಬಾರದ ಒಂದು ಹಂತವೆಂದರೆ, ಅದು ಸನ್‌ಸ್ಕ್ರೀನ್ ಬಳಸುವುದು. ಎಲ್ಲಾ ಕಾಲಕ್ಕೂ ಕಡ್ಡಾಯವಾಗಿ ಬಳಸಬೇಕಾದ ಉತ್ಪನ್ನ ಇದು. ನೀವು ಹೊರಹೋಗುವ ಮುನ್ನ ಅಥವಾ ಮನೆಯಲ್ಲಿ ಇರುವಾಗ ಆಗಲೀ, ಸನ್‌ಸ್ಕ್ರೀನ್ ಮುಖಕ್ಕೆ ಹಚ್ಚಿಕೊಳ್ಳಬೇಕು.

8. ಶೀಟ್ ಮಾಸ್ಕ್‌ಗಳು

8. ಶೀಟ್ ಮಾಸ್ಕ್‌ಗಳು

ಶೀಟ್ ಮಾಸ್ಕ್‌ನಲ್ಲಿರುವ ಅಂಶಗಳು ಚರ್ಮಕ್ಕೆ ನೈಸರ್ಗಿಕ ಹೊಳಪನ್ನು ನೀಡಿ, ತ್ವಚೆಯನ್ನ ತುಂಬಾ ಮೃದುಗೊಳಿಸುತ್ತದೆ. ಜೊತೆಗೆ ತ್ವಚೆಯನ್ನು ಹೈಡ್ರೇಟ್ ಮಾಡುವ ಕಾರ್ಯವನ್ನು ಮಾಡುವುದು. ಚರ್ಮದ ಸ್ಥಿತಿಸ್ಥಾಪಕತ್ವ ಮತ್ತು ಆರೋಗ್ಯವನ್ನು ಹೆಚ್ಚಿಸಲು ಶೀಟ್‌ ಮಾಸ್ಕ್‌ಗಳ ಮೇಲೆ ಹೂಡಿಕೆ ಮಾಡುವುದು ಉತ್ತಮವಾಗಿದೆ.

English summary

How to get glass skin at home and steps to follow in kannada

Here we talking about How to get glass skin at home and steps to follow in kannada, read on
X
Desktop Bottom Promotion