For Quick Alerts
ALLOW NOTIFICATIONS  
For Daily Alerts

ಕಾಜಲ್ ಹಚ್ಚುವಾಗ ಈ ಮಿಸ್ಟೇಕ್ಸ್ ಮಾಡಲೇಬೇಡಿ

|

ಹೆಣ್ಣಿಗೂ ಕಾಡಿಗೆಗೂ ಅದೇನೋ ನಂಟು. ಕಾಡಿಗೆಗೆ ಹಾಕಿದ ಕಣ್ಣುಗಳ ಅಂದವನ್ನು ನೋಡುವುದೇ ಚೆಂದ. ಆಕರ್ಷಕವಾಗಿ ಕಾಣಲು ಹೆಚ್ಚೇನು ಮೇಕಪ್ ಬೇಕಾಗಿಲ್ಲ, ಕಣ್ಣಿಗೆ ಕಾಡಿಗೆ ಹಚ್ಚಿದರೆ ಸಾಕು ಮುಖ ಲಕ್ಷಣವಾ ಗಿ ಕಾಣುವುದು.

ಮೇಕಪ್‌ ಸಾಧನಗಳಲ್ಲಿ ಪ್ರಮುಖವಾದ ವಸ್ತು ಕಾಜಲ್ ಅಥವಾ ಕಾಡಿಗೆ ಆಗಿದೆ. ಮುಖಕ್ಕೆ ಮೇಕಪ್ ಮಾಡಿ ಕಣ್ಣಿಗೆ ಕಾಡಿಗೆ ಹಚ್ಚದಿದ್ದರೆ ಆಕರ್ಷಕವಾಗಿ ಕಾಣಲು ಸಾಧ್ಯವಿಲ್ಲ, ಆಕರ್ಷಕ ಲುಕ್‌ಗೆ ಕಾಡಿಗೆ ಅಥವಾ ಕಾಜಲ್ ಟಚ್‌ ಬೇಕೇ ಬೇಕು.

Tips to apply kajal

ಕಾಜಲ್ ಅಥವಾ ಕಾಡಿಗೆಯನ್ನು ಹಲವಾರು ರೀತಿಯಲ್ಲಿ ಹಚ್ಚಬಹುದು. ಕೆಲವರು ತೆಳುವಾಗಿ ಹಚ್ಚಿದರೆ, ಇನ್ನು ಕೆಲವರು ತುಂಬಾ ಗಾಢವಾಗಿ ಹಚ್ಚುತ್ತಾರೆ. ಇನ್ನು ಕಾಡಿಗೆ ಹಚ್ಚಿ ಚಿಕ್ಕ ಗಾತ್ರದ ಕಣ್ಣುಗಳನ್ನು ಸ್ವಲ್ಪ ದೊಡ್ಡ ಕಣ್ಣುಗಳಾಗಿ, ದೊಡ್ಡ ಕಣ್ಣುಗಳನ್ನು ಆಕರ್ಷಕವಾಗಿ ಕಾಣುವಂತೆ ಮಾಡಬಹುದು.

ಆದರೆ ಕಾಡಿಗೆ ಹಚ್ಚುವಾಗ ಕೆಲವೊಂದು ತಪ್ಪುಗಳನ್ನು ಮಾಡುತ್ತೇವೆ, ಈ ತಪ್ಪುಗಳನ್ನು ಮಾಡದೇ ಇದ್ದರೆ ನೀವು ಮತ್ತಷ್ಟು ಸುಂದರವಾಗಿ ಕಾಣಬಹುದು, ಬನ್ನಿ ಆ ತಪ್ಪುಗಳೇನು ಎಂದು ನೋಡೋಣ ಬನ್ನಿ:

ಕಾಜಲ್ ಹಚ್ಚುವಾಗ ಕಣ್ಣುಗಳನ್ನು ಸ್ಟ್ರೆಚ್ ಮಾಡುವುದು

ಕಾಜಲ್ ಹಚ್ಚುವಾಗ ಕಣ್ಣುಗಳನ್ನು ಸ್ಟ್ರೆಚ್ ಮಾಡುವುದು

ಈ ಅಭ್ಯಾಸ ಎಲ್ಲರಲ್ಲಿ ಇರುತ್ತದೆ. ಕಾಡಿಗೆ ಹಾಗೇ ಹಚ್ಚಬಹುದಾದರೂ ನಮ್ಮ ಕೈ ಕಣ್ಣಿನ ಬಳಿ ಹೋಗಿ, ಕಣ್ಣನ್ನು ಎಳೆದು ಕಾಡಿಗೆ ಹಚ್ಚುತ್ತೇವೆ. ಹೀಗೆ ಹಚ್ಚುವುದರಿಂದ ಕಣ್ಣಿನ ಕೆಳಗೆ ನೆರಿಗೆ ಬೀಳುವ ಸಾಧ್ಯತೆ ಹೆಚ್ಚು. ಅದರ ಬದಲಿಗೆ ನಿಧಾನಕ್ಕೆ ಹಚ್ಚಿ, ಕಾಡಿಗೆ ಆಕರ್ಷಕವಾಗಿಯೇ ಕಾಣುತ್ತದೆ.

ನಿಮ್ಮ ಕಣ್ಣಿನ ಗಾತ್ರವನ್ನು ಪರಿಗಣಿಸದಿರುವುದು

ನಿಮ್ಮ ಕಣ್ಣಿನ ಗಾತ್ರವನ್ನು ಪರಿಗಣಿಸದಿರುವುದು

ನಾವು ನಮಗೆ ಇಷ್ಟ ಬಂದಂತೆ ಕಾಡಿಗೆ ಹಚ್ಚುತ್ತೇವೆ. ಆದರೆ ಕಣ್ಣಿಗೆ ಕಾಡಿಗೆ ಹಚ್ಚುವಾಗ ನಮ್ಮ ಕಣ್ಣಿನ ಗಾತ್ರವನ್ನು ಗಮನದಲ್ಲಿಟ್ಟು ಹಚ್ಚಿದರೆ ಮುಖ ಆಕರ್ಷಕವಾಗಿ ಕಾಣುವುದು. ದೊಡ್ಡ ಕಣ್ಣು ಇರುವವರು ಕಾಜಲ್ ತುಂಬಾ ಗಾಢವಾಗಿ ಹಚ್ಚಿದರೆ ಕಣ್ಣುಗಳು ಮತ್ತಷ್ಟು ದೊಡ್ಡದಾಗಿ ಕಾಣುವುದು. ನಿಮ್ಮ ಕಣ್ಣಿನ ಗಾತ್ರ ಹೇಗೆ ಕಾಣಬೇಕೆಂದು ನಿರ್ಧರಿಸಿ ನಂತರ ಅದಕ್ಕೆ ತಕ್ಕಂತೆ ಕಾಡಿಗೆ ಹಚ್ಚಬೇಕು. ಇಲ್ಲದಿದ್ದರೆ ಕಣ್ಣು ಇರುವುದಕ್ಕಿಂತ ಚಿಕ್ಕದಾಗಿ ಹಾಗೂ ದೊಡ್ಡದಾಗಿ ಕಾಣುವುದು. ಹಾಗಾಗಿ ಕಾಜಲ್ ಹಾಕುವಾಗ ಮುಖ ಮತ್ತಷ್ಟು ಆಕರ್ಷಕವಾಗಿ ಕಾಣುವಂತೆ ಹಾಕಿ.

ಡಾರ್ಕ್‌ ಸರ್ಕಲ್ ಬಿದ್ದರೆ ಸ್ಮಡ್ಜಿಂಗ್ ಮಾಡುವುದು

ಡಾರ್ಕ್‌ ಸರ್ಕಲ್ ಬಿದ್ದರೆ ಸ್ಮಡ್ಜಿಂಗ್ ಮಾಡುವುದು

ಸ್ಮಡ್ಜಿಂಗ್ ಎಂದರೆ ಕಾಡಿಗೆ ಹಚ್ಚಿ ಅದನ್ನು ಕೈಯಿಂದ ಸ್ವಲ್ಪ ಉಜ್ಜಿ ಹರಡುವುದು, ಹೀಗೆ ಮಾಡಿದರೆ ತುಂಬಾ ಆಕರ್ಷಕವಾಗಿ ಕಾಣುವುದು. ಆದರೆ ಡಾರ್ಕ್ ಸರ್ಕಲ್ ಇದ್ದಾಗ ಸ್ಮಡ್ಜಿಂಗ್ ಮಾಡಿದರೆ ಮುಖ ಕಳೆ ಹಾಳು ಮಾಡುವುದು. ಡಾರ್ಕ್ ಸರ್ಕಲ್ ಬಿದ್ದಾಗ ಕನ್ಸೀಲ್ ಹಚ್ಚಿ, ಸ್ಮಡ್ಜಿಂಗ್ ಮಾಡಿ, ಇಲ್ಲಾ ಬರೀ ಕಾಜಲ್ ಅಷ್ಟೇ ಹಚ್ಚಿ.

 ಮೇಲ್ರೆಪ್ಪೆಗೆ ಕಾಜಲ್ ಹಚ್ಚದಿರುವುದು

ಮೇಲ್ರೆಪ್ಪೆಗೆ ಕಾಜಲ್ ಹಚ್ಚದಿರುವುದು

ಸಾಮಾನ್ಯವಾಗಿ ಕಾಜಲ್ ಹಚ್ಚುವಾಗ ಕಣ್ಣಿನ ಕೆಳ್ರೆಪ್ಪೆಗೆ ಮಾತ್ರ ಕಾಜಿಲ್ ಹಚ್ಚುತ್ತೆವೆ, ಆದರೆ ಕಣ್ಣಿನ ಮೇಪ್ರೆಪ್ಪೆಗೂ ಹಚ್ಚಿ ನೋಡಿ ಎಷ್ಟು ವ್ಯತ್ಯಾಸವಾಗಿ ಕಾಣುವಿರಿ ಎಂದು ನಿಮಗೇ ತಿಳಿಯುತ್ತದೆ. ಕಣ್ಣಿನ ಕೆಳ್ರೆಪ್ಪೆ ಹಾಗೂ ಮೇಲ್ರೆಪ್ಪೆಗೆ ಹಚ್ಚುವುದರಿಂದ ಕಣ್ಣುಗಳು ಮತ್ತಷ್ಟು ಹೈಲೈಟ್ಸ್ ಆಗುತ್ತವೆ.

ಶಾರ್ಪ್ ಮಾಡದೆ ಕಾಜಲ್ ಪೆನ್ಸಿಲ್ ಬಳಸುವುದು

ಶಾರ್ಪ್ ಮಾಡದೆ ಕಾಜಲ್ ಪೆನ್ಸಿಲ್ ಬಳಸುವುದು

ಕಾಜಲ್ ಪೆನ್ಸಿಲ್‌ ಬಳಸುವಾಗ ಅದರ ತುದಿ ಶಾರ್ಪ್‌ ಆಗಿದ್ದರೆ ಚೆನ್ನಾಗಿ ಹಾಕಬಹುದು, ಇಲ್ಲದಿದ್ದರೆ ಅಷ್ಟೊಂದು ಪರ್ಫೆಕ್ಟ್ ಆಗಿ ಹಾಕಲು ಬರುವುದಿಲ್ಲ, ಆದ್ದರಿಂದ ಕಾಜಲ್ ಪೆನ್ಸಿಲ್ ಆಗಾಗ ಶಾರ್ಪ್ ಮಾಡಿ ಬಳಸುವುದು ಒಳ್ಳೆಯದು.

ಹಗಲಿನಲ್ಲಿ ತುಂಬಾ ಗಾಢವಾಗಿ ಕಾಜಲ್ ಬಳಸುವುದು

ಹಗಲಿನಲ್ಲಿ ತುಂಬಾ ಗಾಢವಾಗಿ ಕಾಜಲ್ ಬಳಸುವುದು

ರಾತ್ರಿ ಪಾರ್ಟಿಗೆ ಹೋಗುವಾಗ ಕಾಜಲ್ ತುಂಬಾ ಮಂದವಾಗಿ ಹಚ್ಚಿದರೆ ಆ ಡ್ರೆಸ್ಸಿಂಗ್‌ಗೆ ಆ ಲುಕ್‌ ಮ್ಯಾಚ್‌ ಆಗುತ್ತದೆ. ಆದರೆ ಹಗಲಿನಲ್ಲಿ ಕಾಡಿಗೆ ಹಚ್ಚುವಾಗ ಸ್ವಲ್ಪ ಲೈಟ್‌ ಆಗಿ ಹಚ್ಚಬೇಕು. ತುಂಬಾ ಗಾಢವಾಗಿ ಹಚ್ಚಿದರೆ ಅದು ನಿಮ್ಮ ಲುಕ್‌ ಹಾಳು ಮಾಡಬಹುದು.

ಒಂದೇ ಬಾರಿ ಹಚ್ಚುವುದು

ಒಂದೇ ಬಾರಿ ಹಚ್ಚುವುದು

ಕಾಜಲ್ ಹಚ್ಚುವಾಗ ಒಮ್ಮೆ ಹಚ್ಚಿ ಬಿಟ್ಟರೆ ಅಷ್ಟು ಎದ್ದು ಕಾಣುವುದಿಲ್ಲ, ಅದಕ್ಕೆ ಇನ್ನೊಂದು ಕೋಟ್‌ ಹಾಕಬೇಕು. ಕಣ್ಣಿನ ಒಂದು ತುದಿಯಿಂದ ಮತ್ತೊಂದು ತುದಿಯವರೆಗೆ ಹಚ್ಚಿ. ಇಲ್ಲದಿದ್ದರೆ ಕಾಜಲ್ ಹಚ್ಚಿರುವುದು ಕಂಪ್ಲೀಟ್ ಲುಕ್ ನೀಡುವುದಿಲ್ಲ.

ಹಗಲಿನಲ್ಲಿ ತುಂಬಾ ಗಾಢವಾಗಿ ಕಾಜಲ್ ಬಳಸುವುದು

ಹಗಲಿನಲ್ಲಿ ತುಂಬಾ ಗಾಢವಾಗಿ ಕಾಜಲ್ ಬಳಸುವುದು

ರಾತ್ರಿ ಪಾರ್ಟಿಗೆ ಹೋಗುವಾಗ ಕಾಜಲ್ ತುಂಬಾ ಮಂದವಾಗಿ ಹಚ್ಚಿದರೆ ಆ ಡ್ರೆಸ್ಸಿಂಗ್‌ಗೆ ಆ ಲುಕ್‌ ಮ್ಯಾಚ್‌ ಆಗುತ್ತದೆ. ಆದರೆ ಹಗಲಿನಲ್ಲಿ ಕಾಡಿಗೆ ಹಚ್ಚುವಾಗ ಸ್ವಲ್ಪ ಲೈಟ್‌ ಆಗಿ ಹಚ್ಚಬೇಕು. ತುಂಬಾ ಗಾಢವಾಗಿ ಹಚ್ಚಿದರೆ ಅದು ನಿಮ್ಮ ಲುಕ್‌ ಹಾಳು ಮಾಡಬಹುದು.

 ಗುಣಮಟ್ಟದ ಕಾಜಲ್ ಬಳಸದೇ ಇರುವುದು

ಗುಣಮಟ್ಟದ ಕಾಜಲ್ ಬಳಸದೇ ಇರುವುದು

ಎಂದಿಗೂ ಕಾಜಲ್ ಅಥವಾ ಯಾವುದೇ ಸೌಂದರ್ಯವರ್ಧಕಗಳಾಗಿರಲಿ ಗುಣಮಟ್ಟದ್ದು ಬಳಸಬೇಕು. ಕಾಜಲ್ ಕಡಿಮೆ ಗುಣಮಟ್ಟದಾಗಿದ್ದರೆ ಕಣ್ಣು ಉರಿ ಬರುವ ಸಾಧ್ಯತೆ ಇದೆ. ಇನ್ನು ಕಾಜಲ್ ಪ್ರತಿದಿನ ಬಳಸುವುದರಿಂದ ಗುಣಟ್ಟದ ಕಾಜಲ್ ಅಷ್ಟೇ ಬಳಸಿ.

English summary

Common Kajal Mistakes That You Might Be Doing

There are some common kajal mistakes that many of us are guilty of making. What are these mistakes, whether you are making them and how to avoid them?
Story first published: Thursday, February 27, 2020, 11:48 [IST]
X
Desktop Bottom Promotion