For Quick Alerts
ALLOW NOTIFICATIONS  
For Daily Alerts

ಕೆಂದುಟಿಯ ಚೆಲುವಿಗಾಗಿ ಬಳಸಿ ನೈಸರ್ಗಿಕವಾದ ಈ ಲಿಪ್‌ ಸ್ಕ್ರಬ್ಬರ್

|

ಹೆಣ್ಮಕ್ಕಳ ಮುಖದ ಅಂದಕ್ಕೆ ಹೆಚ್ಚಿನ ಮೆರಗು ನೀಡುವುದು ಗುಲಾಬಿ ಬಣ್ಣದ ತುಟಿಗಳು. ಲಿಪ್‌ಸ್ಟಿಕ್‌ ಹಚ್ಚಿದ ತುಟಿಗಿಂತ ನೈಸರ್ಗಿಕವಾದ ಕೆಂಪಾದ ತುಟಿಗಳು ಯಾವುದೇ ಮೇಕಪ್ ಇಲ್ಲದಿದ್ದರೂ ಮುಖಕ್ಕೆ ಆಕರ್ಷಕ ಕಳೆ ನೀಡುವುದು. ಆದರೆ ಕೆಲವರಿಗೆ ನಾನಾ ಕಾರಣಗಳಿಂದಾಗಿ ತುಟಿ ಕಪ್ಪಾಗಿರುತ್ತದೆ.

ಗುಲಾಬಿ ರಂಗಿನ ತುಟಿಗೆ ಮೇಕಪ್ ಹಚ್ಚುವಾಗ ಮಾಡುವ ಮಿಸ್ಟೇಕ್ಸ್‌ನಿಂದಾಗಿ ಎಷ್ಟೋ ಜನರ ತುಟಿಗಳ ಅದರ ಸಹಜ ಸೌಂದರ್ಯ ಕಳೆದುಕೊಂಡು ಕಪ್ಪಾಗಿ ಹೋಗಿರುತ್ತದೆ. ಆಕರ್ಷಕವಾಗಿ ಕಾಣಿಸಲು ತುಟಿಗೆ ಹಚ್ಚುವ ಲಿಪ್‌ಸ್ಟಿಕ್‌ನಿಂದಾಗಿ ತುಟಿಯ ನೈಸರ್ಗಿಕ ಬಣ್ಣ ಕುಂದಿರುತ್ತದೆ. ಲಿಪ್‌ಸ್ಟಿಕ್ ಕೊಳ್ಳುವಾಗ ಗುಣಮಟ್ಟದ್ದು ಲಿಪ್‌ಸ್ಟಿಕ್ ಕೊಳ್ಳಬೇಕು.

Natural Lip Scrubber

ಇಲ್ಲದಿದ್ದರೆ ತುಟಿ ಹಾಳಾಗುವುದು. ಇನ್ನು ಕೆಲವರು ಮಕ್ಕಳಿಗೆ ಆಟ ಆಡಲು ಲಿಪ್‌ಸ್ಟಿಕ್ ಕೊಡುವಾಗ ಹಾಳು ಮಾಡುತ್ತಾರೆಂದು ಕಡಿಮೆ ಬೆಲೆಯ ಲಿಪ್‌ಸ್ಟಿಕ್ ಕೊಡುತ್ತಾರೆ. ಆದರೆ ಅಂಥ ಲಿಪ್‌ಸ್ಟಿಕ್‌ ಮಕ್ಕಳು ತುಟಿಗೆ ಹಚ್ಚಿಕೊಂಡರೆ ಚಿಕ್ಕ ಪ್ರಾಯದಲ್ಲಿಯೇ ಮಕ್ಕಳ ತುಟಿ ಕೆಂಪಾಗುವುದು. ಆದ್ದರಿಂದ ಮಕ್ಕಳ ಕೈಯಲ್ಲಿ ಲಿಪ್‌ಸ್ಟಿಕ್ ಕೊಡುವಾಗ ಜೋಪಾನ.

ಇನ್ನು ಕಡಿಮೆ ನೀರು ಕುಡಿಯುವುದು, ಸೂರ್ಯನ ಬಿಸಿಲಿನಲ್ಲಿ ಹೆಚ್ಚು ಓಡಾವುದು, ಅತ್ಯಧಿಕ ಧೂಮಪಾನ ಇವುಗಳಿಂದ ತುಟಿ ಕಪ್ಪಾಗುವುದು. ಇಲ್ಲಿ ನಾವು ಕಪ್ಪಾದ ತುಟಿಯನ್ನು ಮತ್ತೆ ಸಹಜ ಸೌಂದರ್ಯಕ್ಕೆ ಮರಳಿ ತರುವುದು ಹೇಗೆ ಎಂದು ಟಿಪ್ಸ್ ನೀಡಿದ್ದೇವೆ ನೋಡಿ:

ಸಾಕಷ್ಟು ನೀರು ಕುಡಿಯಿರಿ

ಸಾಕಷ್ಟು ನೀರು ಕುಡಿಯಿರಿ

ಉತ್ತಮ ಆರೋಗ್ಯಕ್ಕಾಗಲಿ, ಸೌಂದರ್ಯಕ್ಕಾಗಲಿ ಮೊದಲಿಗೆ ಮಾಡಬೇಕಾಗಿರುವುದ ಸಾಕಷ್ಟು ನೀರು. ಒಬ್ಬ ವ್ಯಕ್ತಿ ದಿನದಲ್ಲಿ ಎಂಟು ಲೋಟ ನೀರು ಕುಡಿಯುವುದು ಆರೋಗ್ಯಕರ. ದೇಹದಲ್ಲಿ ನೀರಿನಂಶ ಕಡಿಮೆಯಾದರೆ ತುಟಿ ಒಣಗುವುದು ಮಾತ್ರವಲ್ಲ, ದೇಹದ ತ್ವಚೆಯ ಆಕರ್ಷಣೆಯೂ ಇಲ್ಲವಾಗುವುದು. ತುಟಿಯಲ್ಲಿ ತೇವಾಂಶ ಕಾಪಾಡಲು ಮನೆಯಲ್ಲಿರುವ ತುಪ್ಪ ಅಥವಾ ಬೆಣ್ಣೆಯನ್ನು ಆಗಾಗ ತುಟಿಗೆ ಹಚ್ಚುತ್ತಿದ್ದರೆ ತುಟಿ ಆಕರ್ಷಕವಾಗಿ ಕಾಣುವುದು.

ತುಟಿಗೆ ಎಕ್ಸ್‌ಫೋಲೆಟ್ ಮಾಡಿ

ತುಟಿಗೆ ಎಕ್ಸ್‌ಫೋಲೆಟ್ ಮಾಡಿ

ತ್ವಚೆಯಂತೆ ತುಟಿಗೂ ಎಕ್ಸ್‌ಫೋಲೆಟ್ ಮಾಡಬೇಕು. ವಾರದಲ್ಲಿ 2-3 ಬಾರಿ ತುಟಿಗೆ ಲಿಪ್‌ಸ್ಕ್ರಬ್ ಹಚ್ಚಿ ಎಕ್ಸ್‌ಫೋಲೆಟ್‌ ಮಾಡುವುದರಿಂದ ತುಟಿ ಮೃದುವಾಗುವುದು ಹಾಗೂ ತುಟಿಯ ಬಣ್ಣ ಕಪ್ಪಾಗದಂತೆ ತಡೆಯಬಹುದು. ಲಿಪ್‌ಸ್ಕ್ರಬ್ ನೀವು ಮನೆಯಲ್ಲಿಯೇ ಮಾಡಬಹುದಾಗಿದ್ದು ಒಂದು ಚಮಚ ಎಣ್ಣೆಗೆ ಒಂದು ಚಮಚ ಸಕ್ಕರೆ ಹಾಕಿ ಮಿಶ್ರ ಮಾಡಿ ಅದರಿಂದ ತುಟಿಯನ್ನು ಸ್ಕ್ರಬ್ ಮಾಡಿ. ನಂತರ ತುಟಿಗೆ ಜೇನು ಹಚ್ಚಿ. ಹೀಗೆ ಮಾಡುವುದರಿಂದ ತುಟಿಯ ಅಂದ ಹೆಚ್ಚುವುದು.

ಬಿಸಿಲಿಗೆ ಹೋಗುವಾಗ ತುಟಿಯ ರಕ್ಷಣೆ

ಬಿಸಿಲಿಗೆ ಹೋಗುವಾಗ ತುಟಿಯ ರಕ್ಷಣೆ

ಹೊರಗಡೆ ಬಿಸಿಲಿಗೆ ಹೋಗುವಾಗ ಅಥವಾ ಬಿಸಿಲಿನಲ್ಲಿ ಅಥವಾ ಸನ್‌ಸ್ಕ್ರೀನ್ ಹಚ್ಚುತ್ತೆವೆ. ಆದರೆ ತುಟಿಯ ಬಗ್ಗೆ ಗಮನ ಕೊಡುವುದಿಲ್ಲ. ಬಿಸಿಲಿಗೆ ಹೋಗುವಾಗ ತ್ವಚೆಯಷ್ಟೇ ತುಟಿಯನ್ನು ಆರೈಕೆ ಮಾಡಬೇಕು. ಬಿಸಿಲಿಗೆ ಹೋಗುವಾಗ SPF ಇರುವ ಲಿಪ್‌ಬಾಮ್ ಹಚ್ಚುಬೇಕು. ಇದು ತುಟಿಯನ್ನು ಬಿಸಿಲಿನಿಂದ ರಕ್ಷಣೆ ಮಾಡಿ, ತುಟಿಯಲ್ಲಿ ತೇವಾಂಶ ಕಾಪಾಡುತ್ತದೆ.

ತುಟಿಯನ್ನು ಸ್ವಚ್ಚವಾಗಿಡಿ

ತುಟಿಯನ್ನು ಸ್ವಚ್ಚವಾಗಿಡಿ

ದಿನಪೂರ್ತಿ ತುಟಿಗೆ ಲಿಪ್‌ಸ್ಟಿಕ್‌ ಹಚ್ಚಿಕೊಂಡು ಇರುವುದು ಒಳ್ಳೆಯದಲ್ಲ. ಕೆಲವರಿಗೆ ರಾತ್ರಿ ಮಲಗುವಾಗ ಲಿಪ್‌ಸ್ಟಿಕ್ ತುಟಿಯಲ್ಲೇ ಮಲಗುವ ಅಭ್ಯಾಸ ಇರುತ್ತದೆ. ತುಂಬಾ ಲಿಪ್‌ಸ್ಟಿಕ್ ಬಳಕೆ ಮಾಡುವುದರಿಂದ ಅದರಲ್ಲಿರುವ ರಾಸಾಯನಿಕದಿಂದಾಗಿ ತುಟಿ ಕಪ್ಪಾಗುವುದು.

ಪ್ರತಿದಿನ ಲಿಪ್‌ಸ್ಟಿಕ್ ಹಚ್ಚುವವರು ತುಟಿಯ ಆರೈಕೆ ಕಡೆಗೆ ತುಂಬಾ ಗಮನ ಕೊಡಬೇಕು. ಯಾವಾಗಲೂ ಗುಣಮಟ್ಟದ ಲಿಪ್‌ಸ್ಟಿಕ್ ಬಳಸಬೇಕು. ಮನೆಗೆ ಬಂದ ತಕ್ಷಣ ಲಿಪ್‌ಸ್ಟಿಕ್‌ ತೆಗೆದು ತುಟಿಗೆ ಬೆಣ್ಣೆ, ಹಾಲಿನ ಕೆನೆ, ಜೇನು ಮಂತಾದ ನೈಸರ್ಗಿಕವಾದ ಮಾಯಿಶ್ಚರೈಸರ್ ಹಚ್ಚುವುದರಿಂದ ತುಟಿ ಸೌಂದರ್ಯ ಹಾಳಾಗುವುದಿಲ್ಲ.

ಧೂಮಪಾನದಿಂದ ದೂರವಿರಿ

ಧೂಮಪಾನ ಸೌಂದರ್ಯವನ್ನು ಹಾಳು ಮಾಡುವುದರ ಜೊತೆಗೆ ತುಟಿಯನ್ನು ಕಪ್ಪಾಗಿಸುತ್ತದೆ.

ಈ ನೈಸರ್ಗಿಕ ಸ್ಕ್ರಬ್ಬ್ರರ್ ತುಟಿಯ ಕಪ್ಪನ್ನು ಹೋಗಲಾಡಿಸುವಲ್ಲಿ ಸಹಕಾರಿ

ಈ ನೈಸರ್ಗಿಕ ಸ್ಕ್ರಬ್ಬ್ರರ್ ತುಟಿಯ ಕಪ್ಪನ್ನು ಹೋಗಲಾಡಿಸುವಲ್ಲಿ ಸಹಕಾರಿ

ಸಕ್ಕರೆ ಮತ್ತು ಜೇನಿನ ಮಿಶ್ರಣ ತುಟಿಯ ಸೌಂದರ್ಯ ಕಾಪಾಡುವಲ್ಲಿ ಸಹಕಾರಿ. ಸಕ್ಕರೆ ತುಟಿಯನ್ನು ಎಕ್ಸ್‌ಪೋಲೆಟ್ವ ಮಾಡಿದರೆ ಜೇನು ತುಟಿಯ ಮಾಯಿಶ್ಚರೈಸರ್ ಹೆಚ್ಚಿಸುತ್ತದೆ.

ಬೇಕಾಗುವ ಸಾಮಗ್ರಿ

ಒಂದು ಚಮಚ ಬ್ರೌನ್ ಶುಗರ್ (ಕಂದು ಬಣ್ಣದ ಸಕ್ಕರೆ)

ಒಂದು ಚಮಚ ಜೇನು

ಬಳಸುವುದು ಹೇಗೆ?

ಒಂದು ಚಿಕ್ಕ ಬೌಲ್‌ನಲ್ಲಿ ಈ ಎರಡು ಸಾಮಗ್ರಿ ಹಾಕಿ ಮಿಶ್ರ ಮಾಡಿ, ನಂತರ ತುಟಿಗೆ ಹಾಕಿ 5 ನಿಮಿಷ ಮೆಲ್ಲನೆ ತಿಕ್ಕಿ. ಹೀಗೆ ವಾರದಲ್ಲಿ 2-3 ಬಾರಿ ಮಾಡುತ್ತಾ ಬನ್ನಿ.

2. ಜೇನು ಮತ್ತು ನಿಂಬೆಹಣ್ಣು

ಈ ಮಿಶ್ರಣ ನಿಮ್ಮ ತುಟಿ ಕಪ್ಪಾಗುವುದನ್ನು ತಡೆಗಟ್ಟುವುದರ ಜೊತೆ ತುಟಿಯಲ್ಲಿ ಮಾಯಿಶ್ಚರೈಸರ್ ಉಳಿಯುವಂತೆ ಮಾಡಿ, ತುಟಿಯ ಹೊಳಪನ್ನು ಹೆಚ್ಚಿಸುವುದು.

ಬೇಕಾಗುವ ಸಾಮಗ್ರಿ

2 ಚಮಚ ನಿಂಬೆರಸ

2 ಚಮಚ ಜೇನು

ಬಳಸುವ ವಿಧಾನ

ಈ ಎರಡು ಸಾಮಗ್ರಿ ಮಿಶ್ರ ಮಾಡಿ ಅದನ್ನು ತುಟಿಗೆ ಹಚ್ಚಿ 15 ನಿಮಿಷ ಬಿಡಿ, ನಂತರ ತೊಳೆದು ಮಾಯಿಶ್ಚರೈಸರ್ ಹಚ್ಚಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡುತ್ತಾ ಬನ್ನಿ.

ಸಕ್ಕರೆ ಮತ್ತು ಹಾಲಿನ ಮಿಶ್ರಣ

ಒಣ ತ್ವಚೆ ಸಮಸ್ಯೆ ಹೋಗಲಾಡಿಸುವಲ್ಲಿ ಈ ಮಿಶ್ರಣ ಸಹಕಾರಿ.

ಬೇಕಾಗುವ ಸಾಮಗ್ರಿ

ಅರ್ಧ ಚಮಚ ಸಕ್ಕರೆ

ಅರ್ಧ ಚಮಚ ಹಾಲಿನ ಕೆನೆ

ಬಳಸುವ ವಿಧಾನ

ತುಟಿ ತುಂಬಾ ಒಣಗುತ್ತಿದ್ದರೆ ವಾರದಲ್ಲಿ 2-3 ಬಾರಿ ಈ ಎರಡು ಸಾಮಗ್ರಿ ಮಿಶ್ರ ಮಾಡಿ ಅದರಿಂದ ತುಟಿಯನ್ನು ಸ್ಕ್ರಬ್ ಮಾಡಿ. ನಂತರ ತುಟಿಯನ್ನು ತೊಳೆದು, ತುಟಿಗೆ ಜೇನು ಹಚ್ಚಿ.

ಲೋಳೆಸರ ಮತ್ತು ಮೊಸರು

ತುಟಿ ತುಂಬಾ ಒಣಗುತ್ತಿದ್ದರೆ ಅತ್ಯುತ್ತಮವಾದ ಮನೆಮದ್ದು ಇದಾಗಿದೆ.

ಬೆಕಾಗುವ ಸಾಮಗ್ರಿ

ಒಂದು ಚಮಚ ತಾಜಾ ಲೋಳೆಸರ ರಸ

ಒಂದು ಚಮಚ ಮೊಸರು

ಬಳಸುವ ವಿಧಾನ ಈ ಎರಡು ವಸ್ತುಗಳನ್ನು ಮಿಶ್ರ ಮಾಡಿ ತುಟಿಗೆ ಹಚ್ಚಿ 20 ನಿಮಿಷ ಬಿಡಿ, ನಂತರ ಬಾಯಿ ತೊಳೆಯಿರಿ. ಈ ರೀತಿ ವಾರದಲ್ಲಿ 2-3 ಬಾರಿ ಮಾಡುತ್ತಾ ಬಂದರೆ ತುಟಿ ಒಣಗುವ ಸಮಸ್ಯೆ ಇಲ್ಲವಾಗುವುದು.

ಬೀಟ್‌ರೂಟ್ ರಸ ಮತ್ತು ಸಕ್ಕರೆ

ತುಟಿಗೆ ಮತ್ತೆ ಗುಲಾಬಿ ರಂಗು ತಂದು ಕೊಡುವಲ್ಲಿ ಬೀಟ್‌ರೂಟ್‌ ಸ್ಕ್ರಬ್ ಸಹಕಾರಿ.

ಬೇಕಾಗುವ ಸಾಮಗ್ರಿ

ಅರ್ಧ ಚಮಚ ಬೀಟ್‌ರೂಟ್ ರಸ

2 ಚಮಚ ಸಕ್ಕರೆ

ಮಾಡುವ ವಿಧಾನ

ಬೀಟ್‌ರೂಟ್‌ ರಸಕ್ಕೆ ಸಕ್ಕರೆ ಹಾಕಿ ಮಿಸ್ರ ಮಾಡಿ ಅದರಿಂದ ತುಟಿಗೆ 5 ನಿಮಿಷ ಸ್ಕ್ರಬ್ ಮಾಡಿ. ನಂತರ ಬಾಯಿ ತೊಳೆದು ತುಟಿಗೆ ಲಿಪ್‌ಬಾಮ್‌ ಹಚ್ಚಿ. ಈ ರೀತಿ ವಾರಕ್ಕೊಮ್ಮೆ ಮಾಡಿದರೆ ಸಾಕು.

ಕಾಫಿ ಪುಡಿ ಮತ್ತು ಜೇನು

ತುಟಿಗೆ ಮೃದುತ್ವ ತಂದುಕೊಡುವಲ್ಲಿ ಈ ಸ್ಕ್ರಬ್ ತುಂಬಾ ಸಹಕಾರಿ.

ಬೇಕಾಗುವ ಸಾಮಗ್ರಿ

ಅರ್ಧ ಚಮಚ ಕಾಫಿ ಪುಡಿ

ಅರ್ಧ ಚಮಚ ಜೇನು

ಬಳಸುವ ವಿಧಾನ:

ಜೇನು ಮತ್ತು ಕಾಫಿ ಪುಡಿಯನ್ನು ಮಿಶ್ರ ಮಾಡಿ ಅದರಿಂದ ಐದು ನಿಮಿಷ ಮಸಾಜ್ ಮಾಡಿ. ಇದನ್ನು ವಾರಕ್ಕೊಮ್ಮೆ ಮಾಡಿದರೆ ಸಾಕು, ತುಟಿಯ ನೈಸರ್ಗಿಕ ಸೌಂದರ್ಯ ಹೆಚ್ಚುವುದು.

ಬಾದಾಮಿ ಎಣ್ಣೆ ಮತ್ತು ನಿಂಬೆರಸ

ತುಟಿಯ ರಂಗು ಹೆಚ್ಚಲು ಈ ಬ್ಯೂಟಿ ಸಲಹೆ ತುಂಬಾ ಒಳ್ಳೆಯದು

ಬೇಕಾಗುವ ಸಾಮಗ್ರಿ

1 ಚಮಚ ಬಾದಾಮಿ ಎಣ್ಣೆ

ಅರ್ಧ ಚಮಚ ನಿಂಬೆರಸ

ಬಳಸುವ ವಿಧಾನ

ಬಾದಾಮಿ ಎಣ್ಣೆ ಹಾಗೂ ನಿಂಬೆರಸ ಮಿಶ್ರ ಮಾಡಿ ಅದನ್ನು ತುಟಿಗೆ ಹಚ್ಚು ಒಂದು ಗಂಟೆ ಬಿಡಿ, ನಂತರ ಬಾಯಿ ತೊಳೆಯಿರಿ. ಈ ರೀತಿ ಎರಡು ದಿನಕ್ಕೊಮ್ಮೆ ಮಾಡುತ್ತಾ ಬಂದರೆ ತುಟಿಯ ಚೆಲುವು ಹೆಚ್ಚುವುದು.

English summary

Best Natural Scrubber For Lips To Get Pink Lips

Today, we have curated for you some amazing tips and remedies that can make your lips soft, rosy, plump and prevent it from darkening.
Story first published: Thursday, January 30, 2020, 12:25 [IST]
X
Desktop Bottom Promotion