For Quick Alerts
ALLOW NOTIFICATIONS  
For Daily Alerts

ನಿಮ್ಮ ಕೂದಲು ಉದುರುತ್ತಿದ್ದರೆ, ಕೂಡಲೇ ಈ ಆಹಾರ ಸೇವಿಸುವುದನ್ನು ನಿಲ್ಲಿಸಿ

|

ದಿನನಿತ್ಯದ ಒತ್ತಡ ಮತ್ತು ಮಾಲಿನ್ಯವು ನಮ್ಮ ಕೂದಲನ್ನು ಹಾಳುಮಾಡುತ್ತದೆ ಎಂಬುದು ಎಲ್ಲರಿಗೂ ತಿಳಿದಿದೆ. ಆದರೆ, ನಿಮ್ಮ ಆಹಾರದಲ್ಲಿ ಸೇರಿಸಲಾದ ಕೆಲವು ಪದಾರ್ಥಗಳು ಸಹ ಕೂದಲು ಉದುರುವಿಕೆಯ ಆಶ್ಚರ್ಯಕರ ಅಂಶಗಳಲ್ಲಿ ಸೇರಿಕೊಂಡಿವೆ ಎಂಬುದು ಬಹುಶಃ ನಿಮಗೆ ತಿಳಿದಿರಲಿಕ್ಕಿಲ್ಲ.

ಹೌದು, ನೀವು ಆಯ್ಕೆ ಮಾಡುವ ಆಹಾರಗಳು ಕೂದಲಿನ ಆರೋಗ್ಯಕ್ಕೆ ಅದ್ಭುತಗಳನ್ನು ಮಾಡಬಹುದು ಅಥವಾ ಕೂದಲನ್ನು ಹಾನಿಗೊಳಿಸಿ, ಉದುರುವಿಕೆ ಮತ್ತು ತೆಳುವಾಗುವಿಕೆಗೆ ಕಾರಣವಾಗಬಹುದು. ಆದ್ದರಿಂದ ಆರೋಗ್ಯಕರ ಕೂದಲು ಬಯಸಿದರೆ, ಕೂದಲು ಉದುರುವಿಕೆಗೆ ಕಾರಣವಾಗುವ ಈ ಆಹಾರಗಳನ್ನು ತಿನ್ನುವುದನ್ನು ನಿಲ್ಲಿಸಿ.

ನಿಮ್ಮ ಕೂದಲಿನ ಆರೋಗ್ಯಕ್ಕಾಗಿ ಸೇವಿಸಬಾರದ ಆಹಾರಗಳನ್ನು ಈ ಕೆಳಗೆ ನೀಡಲಾಗಿದೆ:

ಸಕ್ಕರೆಯುಕ್ತ ಆಹಾರಗಳು:

ಸಕ್ಕರೆಯುಕ್ತ ಆಹಾರಗಳು:

ತ್ವರಿತ ಕೂದಲು ಉದುರುವಿಕೆಗೆ ಸಕ್ಕರೆ ಬಹಳ ಮುಖ್ಯವಾದ ಕಾರಣವಾಗಿದೆ. ಸಕ್ಕರೆ ನಿಮ್ಮ ಕೂದಲಿಗೆ ಒಳ್ಳೆಯದಲ್ಲ ಜೊತೆಗೆ ನಿಮ್ಮ ಆರೋಗ್ಯಕ್ಕೆ ಕೂಡ ಹಾನಿ ಮಾಡುತ್ತದೆ. ಹೇಗೆಂದರೆ, ನಿಮ್ಮ ಕೂದಲಿಗೆ ಪ್ರೋಟೀನ್ ತುಂಬಾ ಮುಖ್ಯವಾಗಿದ್ದು, ಸಕ್ಕರೆ ಅದರ ಹೀರಿಕೊಳ್ಳುವಿಕೆಯನ್ನು ತಡೆಯುತ್ತದೆ. ಆದ್ದರಿಂದ ಸಕ್ಕರೆ ಮತ್ತು ಸಕ್ಕರೆ ಅಂಶವಿರುವ ಆಹಾರಗಳಿಂದ ದೂರವಿರಿ. ಜೊತೆಗೆ ಮಧುಮೇಹ ಮತ್ತು ಸ್ಥೂಲಕಾಯತೆಗೆ ಕಾರಣವಾಗುವ ಇನ್ಸುಲಿನ್ ಪ್ರತಿರೋಧವು ಕೂದಲು ಉದುರುವಿಕೆಗೆ ಕಾರಣವಾಗಬಹುದು ಎಂದು ಅಧ್ಯಯನಗಳು ತೋರಿಸಿವೆ. ಇದು ಪುರುಷರು ಮತ್ತು ಮಹಿಳೆಯರಲ್ಲಿ ಬೋಳು ತಲೆ ಉಂಟುಮಾಡಬಹುದು .

ಮದ್ಯ:

ಮದ್ಯ:

ಕೂದಲು ಮುಖ್ಯವಾಗಿ ಕೆರಾಟಿನ್ ಎಂಬ ಪ್ರೊಟೀನ್ ನಿಂದ ಮಾಡಲ್ಪಟ್ಟಿದೆ. ಕೆರಾಟಿನ್ ನಿಮ್ಮ ಕೂದಲಿಗೆ ರಚನೆಯನ್ನು ನೀಡುವ ಪ್ರೋಟೀನ್ ಆಗಿದೆ. ಆದರೆ, ಆಲ್ಕೋಹಾಲ್ ಪ್ರೋಟೀನ್ ಸಂಶ್ಲೇಷಣೆಯ ಮೇಲೆ ನಕಾರಾತ್ಮಕ ಪರಿಣಾಮ ಬೀರುತ್ತದೆ, ಇದರಿಂದ ಕೂದಲು ದುರ್ಬಲಗೊಳ್ಳಲು ಮತ್ತು ಅದರ ಹೊಳಪನ್ನು ಕಳೆದುಕೊಳ್ಳಲು ಕಾರಣವಾಗುತ್ತದೆ. ಜೊತೆಗೆ, ಆಲ್ಕೋಹಾಲ್ ನಿಮ್ಮ ದೇಹದಲ್ಲಿನ ಸತುವಿನ ಮಟ್ಟವನ್ನು ಕಡಿಮೆಗೊಳಿಸುತ್ತದೆ. ಸತುವು ಕೂದಲಿನ ಆರೋಗ್ಯ ಮತ್ತು ಬೆಳವಣಿಗೆಗೆ ಅಗತ್ಯವಾದ ಖನಿಜವಾಗಿದೆ. ಹೆಚ್ಚು ಆಲ್ಕೋಹಾಲ್ ಸೇವನೆಯು ನಿಮ್ಮನ್ನು ನಿರ್ಜಲೀಕರಣಗೊಳಿಸುತ್ತದೆ, ಇದು ನಿಮ್ಮ ಕೂದಲಿನ ಮೇಲೆ ಕೆಟ್ಟ ಪರಿಣಾಮ ಬೀರುತ್ತದೆ.

ಡಯೆಟ್ ಸೋಡಾ:

ಡಯೆಟ್ ಸೋಡಾ:

ಡಯಟ್ ಸೋಡಾವು ಆಸ್ಪರ್ಟೇಮ್ ಎಂಬ ಕೃತಕ ಸಿಹಿಕಾರಕವನ್ನು ಹೊಂದಿದ್ದು, ಇದು ಕೂದಲು ಕಿರುಚೀಲಗಳನ್ನು ಹಾನಿಗೊಳಿಸುತ್ತದೆ ಎಂದು ಸಂಶೋಧಕರು ಕಂಡುಕೊಂಡಿದ್ದಾರೆ. ನೀವೇನಾದರೂ ಇತ್ತೀಚೆಗೆ ಕೂದಲು ಉದುರುವಿಕೆಯನ್ನು ಅನುಭವಿಸುತ್ತಿದ್ದರೆ , ಡಯಟ್ ಸೋಡಾವನ್ನು ಸಂಪೂರ್ಣವಾಗಿ ತ್ಯಜಿಸುವುದು ಉತ್ತಮ.

ಮೀನು:

ಮೀನು:

ಹೆಚ್ಚಿನ ಮಟ್ಟದ ಪಾದರಸವು ಹಠಾತ್ ಕೂದಲು ಉದುರುವಿಕೆಗೆ ಕಾರಣವಾಗಬಹುದು. ಈ ಪಾದರಸಕ್ಕೆ ಒಡ್ಡಿಕೊಳ್ಳುವ ಸಾಮಾನ್ಯ ಮೂಲವೆಂದರೆ ಮೀನು. ಇವುಗಳಲ್ಲಿ ಮೀಥೈಲ್ ಪಾದರಸದ ಸಾಂದ್ರತೆಯು ಕಳೆದ ಕೆಲವು ದಶಕಗಳಲ್ಲಿ ಹವಾಮಾನ ಬದಲಾವಣೆ ಮತ್ತು ಅತಿಯಾದ ಮೀನುಗಾರಿಕೆಯಿಂದಾಗಿ ಹೆಚ್ಚಿದೆ. ಇತರ ಸಮುದ್ರಾಹಾರ ಆಯ್ಕೆಗಳಿಗಿಂತ ಕತ್ತಿಮೀನು ಹೆಚ್ಚಿನ ಪಾದರಸವನ್ನು ಹೊಂದಿದೆ. ಆದ್ದರಿಂದ ಕತ್ತಿಮೀನು, ಮ್ಯಾಕೆರೆಲ್ ಮತ್ತು ಕೆಲವು ಟ್ಯೂನ ಮೀನುಗಳಿಂದ ದೂರವಿರಿ.

ಹಸಿ ಮೊಟ್ಟೆಯ ಬಿಳಿಭಾಗ:

ಹಸಿ ಮೊಟ್ಟೆಯ ಬಿಳಿಭಾಗ:

ಮೊಟ್ಟೆ ಕೂದಲಿಗೆ ತುಂಬಾ ಒಳ್ಳೆಯದು ಆದರೆ ಹಸಿಯಾಗಿ ತಿನ್ನಬಾರದು. ಕಚ್ಚಾ ಮೊಟ್ಟೆಯ ಬಿಳಿಭಾಗವು ಬಯೋಟಿನ್ ಕೊರತೆಗೆ ಕಾರಣವಾಗಬಹುದು, ಇದು ಕೆರಾಟಿನ್ ಉತ್ಪಾದನೆಗೆ ಸಹಾಯ ಮಾಡುವ ವಿಟಮಿನ್ ಆಗಿದೆ. ಆದ್ದರಿಂದ ನೀವು ಕೂದಲು ಉದುರುವಿಕೆಯಿಂದ ತೊಂದರೆಗೊಳಗಾಗಿದ್ದರೆ, ಈ ಆಹಾರಗಳಿಂದ ದೂರವಿರಿ.

English summary

Worst Foods That Could Cause Hair Loss in Kannada

Here we talking about Worst Foods That Could Cause Hair Loss in Kannada, read on
X
Desktop Bottom Promotion