For Quick Alerts
ALLOW NOTIFICATIONS  
For Daily Alerts

ಹೇರ್‌ ಡಸ್ಟಿಂಗ್‌ ಬಗ್ಗೆ ಗೊತ್ತಿದೆಯೇ? ಇದರಿಂದ ಕೂದಲಿನಿಂದ ಉದ್ದ ಕಡಿಮೆ ಮಾಡದೆ ಸ್ಪ್ಲಿಟ್ ಹೇರ್ ತೆಗೆಯಬಹುದು

|

ಸೀಳು ಕೂದಲಿನ ಸಮಸ್ಯೆ ಪ್ರತಿಯೊಬ್ಬ ಮಹಿಳೆಯನ್ನು ಕಾಡುವ ಪ್ರಮುಖ ಕೂದಲಿನ ಸಮಸ್ಯೆಗಳನ್ನು ಒಂದು. ಪೋಷಕಾಂಶಗಳ ಕೊರತೆ, ಮಾಲಿನ್ಯದಿಂದ ಕೂದಲಿನ ತುದಿ ಸೀಳಾಗುವುದು. ಈ ಸೀಳು ತುದಿ ಕೂದಲಿನ ಬೆಳವಣಿಗೆಗೆ ಅಡ್ಡಿ ಮಾಡುತ್ತದೆ ಎಂಬ ವಿಚಾರ ಹೊಸತೇನಲ್ಲ.

What Is Hair Dusting

ಅದಕ್ಕೆ ಹೆಚ್ಚಿನವರು ಸೀಳು ತುದಿ ಉಂಟಾದ ತಕ್ಷಣ, ಹೇರ್ ಟ್ರಿಮ್ಮಿಂಗ್ ಅಥವಾ ಕೂದಲಿಗೆ ಕತ್ತರಿ ಹಾಕೋದು. ಆದರೆ ಈ ವೇಳೆ ಹೆಚ್ಚು ಕೂದಲು ಹೋಗಿ, ನಿಮ್ಮ ಕೂದಲಿನ ಉದ್ದ ಕಡಿಮೆಯಾಗುವುದು ಮಾತ್ರ ಸುಳ್ಳಲ್ಲ. ನಿಮ್ಮ ವಿಚಾರವೂ ಇದೇ ರೀತಿಯಾಗಿದ್ದರೆ, ಕೂದಲಿನ ಉದ್ದ ಕಡಿಮೆ ಮಾಡದೇ, ಸೀಳು ತುದಿ ಸಮಸ್ಯೆಯನ್ನು ನಿವಾರಿಸಲು ನಾವಿಂದು ಪರಿಹಾರವೊಂದನ್ನು ಹೇಳಲಿದ್ದೇವೆ. ಅದೇ ಹೇರ್ ಡಸ್ಟಿಂಗ್..! ಏನಿದು ಹೇರ್ ಡಸ್ಟಿಂಗ್? ಇದನ್ನು ಮಾಡಿಸುವುದು ಹೇಗೆ? ಎಲ್ಲದರ ಸಂಪೂರ್ಣ ಮಾಹಿತಿಗಾಗಿ ಈ ಲೇಖನ ಸಂಪೂರ್ಣ ಓದಿ.

ಸೀಳು ತುದಿ ನಿವಾರಣೆಗೆ ಹೇರ್ ಡಸ್ಟಿಂಗ್ ಹೇಗೆ ಸಹಕಾರಿ ಎಂಬುದನ್ನು ಈ ಕೆಳಗೆ ನೀಡಲಾಗಿದೆ:

ಹೇರ್ ಡಸ್ಟಿಂಗ್ ಎಂದರೇನು?

ಹೇರ್ ಡಸ್ಟಿಂಗ್ ಎಂದರೇನು?

ಹೇರ್ ಡಸ್ಟಿಂಗ್ ಎನ್ನುವುದು ಕೂದಲಿನ ಸೀಳು ತುದಿಗಳನ್ನು ತೆಗೆದುಹಾಕುವ ಮೂಲಕ ಕೂದಲಿನ ಉದ್ದ ಮತ್ತು ಪರಿಮಾಣವನ್ನು ಕಾಪಾಡುವ ಗುರಿಯನ್ನು ಹೊಂದಿದೆ. ಸೀಳು ಅಥವಾ ಒಡೆದ ತುದಿಗಳು ತಾನಾಗಿಯೇ ಸರಿಯಾಗುವುದಿಲ್ಲ. ಅವುಗಳನ್ನು ನಿವಾರಿಸುವ ಏಕೈಕ ಮಾರ್ಗವೆಂದರೆ ಅವುಗಳನ್ನು ಕತ್ತರಿಸುವುದು. ಈ ವಿಧಾನದಲ್ಲಿ ಸ್ಪ್ಲಿಟ್ ತುದಿಗಳನ್ನು ಎಳೆಎಳೆಯಾಗಿ ಪರೀಕ್ಷಿಸಿ, ಹಾನಿಗೊಳಗಾದ ಭಾಗಗಳನ್ನು ಮಾತ್ರ ತೆಗೆದುಹಾಕಲಾಗುತ್ತದೆ. ಆದ್ದರಿಂದ, ಈ ವಿಧಾನದಲ್ಲಿ ನಿಮ್ಮ ಕೂದಲಿನ ಹೆಚ್ಚಿನ ಪ್ರಮಾಣವನ್ನು ತೆಗೆದುಹಾಕುವ ಅವಶ್ಯಕತೆ ಬರಲಾರದು. ಸರಳವಾಗಿ ಹೇಳುವುದಾದರೆ, ಕೂದಲು ಟ್ರಿಮ್ಮಿಂಗ್ ಸಂದರ್ಭದಲ್ಲಿ, ಸಾಮಾನ್ಯವಾಗಿ ಕೂದಲಿನ ಉದ್ದದಲ್ಲಿ ಹೆಚ್ಚಿನ ಭಾಗವನ್ನು ಕಳೆದುಕೊಳ್ಳುತ್ತೀರಿ. ಆದರೆ, ಹೇರ್ ಡಸ್ಟಿಂಗ್ ಸಮಯದಲ್ಲಿ ಕೂದಲಿನ ಉದ್ದದಲ್ಲಿ ಸುಮಾರು ಕಾಲು ಇಂಚು ಅಥವಾ ಅದಕ್ಕಿಂತ ಕಡಿಮೆ ಭಾಗವನ್ನು ಕಳೆದುಕೊಳ್ಳಬಹುದು.

ಹೇರ್ ಡಸ್ಟಿಂಗ್ ಎಲ್ಲಾ ರೀತಿಯ ಕೂದಲುಗಳಿಗೆ ಸೂಕ್ತವಾಗಿದ್ದು, ಅದರ ಅನುಕೂಲಗಳು ಇಲ್ಲಿವೆ:

ಹೇರ್ ಡಸ್ಟಿಂಗ್ ಎಲ್ಲಾ ರೀತಿಯ ಕೂದಲುಗಳಿಗೆ ಸೂಕ್ತವಾಗಿದ್ದು, ಅದರ ಅನುಕೂಲಗಳು ಇಲ್ಲಿವೆ:

1. ಇದು ಹಾನಿಗೊಳಗಾದ ಕೂದಲೆಳೆಗಳನ್ನು ತೆಗೆದುಹಾಕುವ ಮೂಲಕ, ಸ್ಟೈಲಿಂಗ್ ಅನ್ನು ಸುಲಭಗೊಳಿಸುತ್ತದೆ, ಜೊತೆಗೆ ಕೂದಲನ್ನು ಸುಲಭವಾಗಿ ನಿರ್ವಹಿಸಲು ಸಹಕಾರಿ

2. ಡಸ್ಟಿಂಗ್‌ನಿಂದ ಸೀಳು ಕೂದಲು ಹೆಚ್ಚು ವಿಸ್ತರಿಸುವುದನ್ನು ತಡೆಯಬಹುದು.

3. ಉದ್ದ ಕಡಿಮೆ ಮಾಡುವ ಟ್ರಿಮ್‌ಗಿಂತ ಇದು ಹೆಚ್ಚು ಪರಿಣಾಮಕಾರಿ ಮತ್ತು ಆರ್ಥಿಕಸ್ನೇಹಿ.

4. ಹೇರ್‌ ಡಸ್ಟಿಂಗ್ ಮೂಲಕ ನಿಮ್ಮ ಕೂದಲಿನ ಉದ್ದವನ್ನು ಉಳಿಸಬಹುದು.

5. ಗುಂಗುರು ಕೂದಲಿರುವವರಿಗೆ ಹೇರ್ ಡಸ್ಟಿಂಗ್ ತುಂಬಾ ಪ್ರಯೋಜನಕಾರಿಯಾಗಿದೆ, ಏಕೆಂದರೆ ಇದು ನಿಮ್ಮ ಕೂದಲಿನ ಉದ್ದವನ್ನ ಕಡಿಮೆ ಮಾಡಲಾರದು.

ಎಷ್ಟು ಬಾರಿ ಹೇರ್‌ ಡಸ್ಟಿಂಗ್ ಮಾಡಿಸಬೇಕು?

ಎಷ್ಟು ಬಾರಿ ಹೇರ್‌ ಡಸ್ಟಿಂಗ್ ಮಾಡಿಸಬೇಕು?

ತಜ್ಞರ ಪ್ರಕಾರ ಪ್ರತಿ ಮೂರು ತಿಂಗಳಿಗೊಮ್ಮೆ ನಿಮ್ಮ ಕೂದಲನ್ನು ಟ್ರಿಮ್ ಮಾಡಬೇಕು. ಈ ಟ್ರಿಮ್ ಕೂದಲಿನ ಉದ್ದದ ಕನಿಷ್ಠ 1-2 ಇಂಚುಗಳನ್ನು ತೆಗೆದುಕೊಳ್ಳುತ್ತದೆ. ಆದರೆ ಡಸ್ಟಿಂಗ್‌ನಲ್ಲಿ ಕೂದಲನ್ನು ಹೆಚ್ಚು ಕತ್ತರಿಸುವ ಅಗತ್ಯವಿಲ್ಲದಿರುವುದರಿಂದ, ಕೂದಲು ಉದುರುವ ಸಂದರ್ಭದಲ್ಲಿ, ನಿಮ್ಮ ಕೂದಲನ್ನು ಆರೋಗ್ಯಕರವಾಗಿ ಇಡಲು ಪ್ರತಿ 6 ರಿಂದ 8 ವಾರಗಳಿಗೊಮ್ಮೆ ಹೇರ್ ಡಸ್ಟಿಂಗ್ ಮಾಡಲು ಸಲಹೆ ನೀಡಲಾಗುವುದು.

 ಹೇರ್ ಡಸ್ಟಿಂಗ್ ಮಾಡುವ ವಿಧಾನ:

ಹೇರ್ ಡಸ್ಟಿಂಗ್ ಮಾಡುವ ವಿಧಾನ:

ಈ ವಿಧಾನವು ತುಂಬಾ ಸರಳವಾಗಿದ್ದು, ಮೊದಲ ಹಂತದಲ್ಲಿ ಕೂದಲಿನ ಸೀಳು ತುದಿಗಳು ಗೋಚರಿಸುವಂತೆ ಮಾಡಲು ಕೂದಲನ್ನು ಚೆನ್ನಾಗಿ ಬಾಚಿಕೊಳ್ಳುವುದು. ನಂತರ ಹಾನಿಗೊಳಗಾದ ಸೀಳು ತುದಿಗಳನ್ನು ಕತ್ತರಿಸಲಾಗುವುದು. ನಿಮಗೆ ಕೂದಲು ಸೀಳಾಗುವ ಸಮಸ್ಯೆಯಿದ್ದರೆ, ಆಗಾಗ ಹೇರ್ ಡಸ್ಟಿಂಗ್ ಮಾಡಿಸಬೇಕಾಗುತ್ತದೆ. ಈ ಬಗ್ಗೆ ನಿಮ್ಮ ಹೇರ್ ಸ್ಟೈಲಿಸ್ಟ್ ಕೂದಲಿನ ಧೂಳು ತೆಗೆಯುವ ಸಮಯಕ್ಕೆ ನಿಮಗೆ ಮಾರ್ಗದರ್ಶನ ನೀಡುತ್ತಾರೆ.

ಮನೆಯಲ್ಲಿ ಹೇರ್ ಡಸ್ಟಿಂಗ್ ಮಾಡುವುದು ಹೇಗೇ:

ಮನೆಯಲ್ಲಿ ಹೇರ್ ಡಸ್ಟಿಂಗ್ ಮಾಡುವುದು ಹೇಗೇ:

ನಿಮ್ಮ ಕೂದಲನ್ನು ಒಣಗಿಸಿ:

ಮನೆಯಲ್ಲಿ ಹೇರ್ ಡಸ್ಟಿಂಗ್ ಮಾಡಲು ಸುಲಭವಾದ ಮಾರ್ಗವೆಂದರೆ ನಯವಾದ, ಒಣ ಕೂದಲಿನೊಂದಿಗೆ ಪ್ರಾರಂಭಿಸುವುದು. ಇದರಿಂದ ನಿಮ್ಮ ಹಾನಿಗೊಳಗಾದ ಕೂದಲನ್ನು ಸುಲಭವಾಗಿ ಪತ್ತೆಹಚ್ಚಬಹುದು.

ಕೂದಲನ್ನು ವಿಭಾಗಿಸಿಕೊಳ್ಳಿ:

ಒಂದು ಬಾರಿಗೆ, ಸ್ವಲ್ಪ ಕೂದಲನ್ನು ತೆಗೆದುಕೊಳ್ಳಿ, ಉಳಿದ ಭಾಗಕ್ಕೆ ಕ್ಲಿಪ್ ಹಾಕಿಡಿ. ಎಲ್ಲಾ ಕೂದಲನ್ನು ಒಂದೇ ಬಾರಿಗೆ ಮಾಡಲು ಪ್ರಯತ್ನಿಸಿದರೆ, ಅದು ಸಂಪೂರ್ಣವಾಗುವುದಿಲ್ಲ.

ಟ್ವಿಸ್ಟ್ ಮತ್ತು ಕತ್ತರಿಸಿ:

ವಿಭಜಿತ ತುದಿಗಳನ್ನು ಹೈಲೈಟ್ ಮಾಡಲು, ಆಯ್ಕೆ ಮಾಡಿದ ಕೂದಲಿನ ಭಾಗವನ್ನು ತಿರುಗಿಸಿ, ಈಗ ಆರೋಗ್ಯಕರ ಕೂದಲುಗಳು ಒಂದಕ್ಕೊಂದು ಅಂಟಿಕೊಂಡಿರುತ್ತದೆ. ಆದರೆ, ಸೀಳು ತುದಿಗಳು ಆ ಭಾಗದಿಂದ, ಮೇಲೆದ್ದು ಹೊರಬಂದಿರುತ್ತದೆ. ಈಗ ಅದನ್ನು ಕತ್ತರಿಸಿ.

ಪುನರಾವರ್ತಿಸಿ:

ನಿಮ್ಮ ತಲೆಯ ಎಲ್ಲಾ ಕೂದಲನ್ನು ಪರೀಕ್ಷಿಸಲು ಎರಡು ಮತ್ತು ಮೂರು ಹಂತಗಳನ್ನು ಪುನರಾವರ್ತಿಸಿ.

English summary

What Is Hair Dusting? Its Benefits & How To Do It At Home in Kannada

Here we talking about What Is Hair Dusting? Its Benefits & How To Do It At Home in Kannada, read on
X
Desktop Bottom Promotion