For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಕಲರಿಂಗ್‌ ಮಾಡಿಸಿಕೊಂಡಿದ್ದರೆ, ಈ ವಿಚಾರಗಳನ್ನು ಗಮನದಲ್ಲಿಡಿ

|

ಕೂದಲು ಟ್ರೆಂಡಿಯಾಗಿ ಕಾಣಲು ಹೆಚ್ಚಿನವರು ಹೇರ್‌ ಕಲರಿಂಗ್‌ ಮೊರೆಹೋಗುತ್ತಾರೆ. ತಮಗಿಷ್ಟವಾದ ವಿಭಿನ್ನವಾದ ಕಲರ್‌ಗಳನ್ನು ಕೂದಲಿಗೆ ಮಾಡಿಸಿಕೊಂಡು, ಸಂಭ್ರಮಿಸುತ್ತಾರೆ. ಆದರೆ, ಇದು ನಮಗರ ಕಾಣುವಷ್ಟು ಸರಳವಲ್ಲ. ಏಕೆಂದರೆ ಕಲರಿಂಗ್‌ ಮಾಡಿದ ಮೇಲೆ ಹೆಚ್ಚು ಕಾಳಜಿ ವಹಿಸಬೇಕು, ಇಲ್ಲವಾದಲ್ಲಿ ಕೂದಲು ಹಾನಿಗೊಳಗಾಗುವ ಸಾಧ್ಯತೆಯಿದೆ.

ಕೂದಲಿಗೆ ಕಲರಿಂಗ್‌ ಮಾಡಿದ ಮೇಲೆ, ಅವು ಡಲ್‌ ಮತ್ತು ಶುಷ್ಕವಾಗುವುದರ ಜೊತೆಗೆ ಅದರ ನೈಸರ್ಗಿಕ ಹೊಳಪನ್ನು ಕಳೆದುಕೊಳ್ಳುತ್ತದೆ. ಆದರೆ, ನಿಮ್ಮ ಕೂದಲನ್ನು ಸರಿಯಾಗಿ ಆರೈಕೆ ಮಾಡಿದರೆ, ಯಾವುದೇ ಸಮಸ್ಯೆಗಳು ಉಂಟಾಗುವುದಿಲ್ಲ. ಹಾಗಾದರೆ, ಕಲರಿಂಗ್‌ ಮಾಡಿದ ಕೂದಲ ಆರೈಕೆ ಹೇಗಿರಬೇಕು ಇಲ್ಲಿ ನೋಡೋಣ.

ಕೂದಲಿಗೆ ಕಲರಿಂಗ್‌ ಮಾಡಿಸಿದ್ದರೆ, ಈ ಸಲಹೆಗಳನ್ನು ಅನುಸರಿಸಿ:

ತೈಲ ಮಸಾಜ್:

ತೈಲ ಮಸಾಜ್:

ಕೂದಲಿಗೆ ಕಲರಿಂಗ್‌ ಮಾಡುವುದರಿಂದ ನೆತ್ತಿಯ ವಾತ ಮತ್ತು ಪಿತ್ತ ದೋಷಗಳಲ್ಲಿ ಅಸಮತೋಲನವನ್ನು ಉಂಟುಮಾಡುತ್ತದೆ ಎಂದು ನಂಬಲಾಗಿದೆ. ನಿಮ್ಮ ಕೂದಲಿನ ನೈಸರ್ಗಿಕ ಹೊಳಪನ್ನು ಮರಳಿ ಪಡೆಯಲು, ಈ ದೋಷಗಳ ನಡುವೆ ಸಮತೋಲನವನ್ನು ರಚಿಸಬೇಕಾಗುತ್ತದೆ ಅದಕ್ಕಾಗಿ ತೈಲ ಮಸಾಜ್‌ ಸೂಕ್ತ. ಉತ್ತಮ ತೈಲ ಮಸಾಜ್ ಈ ಅಸಮತೋಲನವನ್ನು ಸರಿಪಡಿಸುತ್ತದೆ ಮತ್ತು ದೀರ್ಘಕಾಲದವರೆಗೆ ಬಣ್ಣ ಇರಲು ಸಹಾಯ ಮಾಡುತ್ತದೆ . ಕೂದಲು ಉದುರುವಿಕೆ, ಒಣ ನೆತ್ತಿ, ಕೂದಲಿನ ಎಳೆಗಳನ್ನು ಒಣಗಿಸುವುದು ಮತ್ತು ಒಡೆದ ತುದಿಗಳಂತಹ ಸಮಸ್ಯೆಗಳನ್ನು ಬೆಚ್ಚಗಿನ ಎಣ್ಣೆ ಮಸಾಜ್‌ಗಳು ಕಡಿಮೆ ಮಾಡುತ್ತವೆ.

ಹೇರ್ ಮಾಸ್ಕ್ ನಿಯಮಿತವಾಗಿ ಬಳಸಿ:

ಹೇರ್ ಮಾಸ್ಕ್ ನಿಯಮಿತವಾಗಿ ಬಳಸಿ:

ಹೇರ್ ಮಾಸ್ಕ್‌ಗಳು ನಿಮಗೆ ವಿಶ್ರಾಂತಿ ಪಡೆಯಲು ಮಾತ್ರವಲ್ಲ ಕೂದಲ ಆರೋಗ್ಯಕ್ಕೂ ಬಳಸಬೇಕು. ಈ ಹೇರ್ ಮಾಸ್ಕ್‌ಗಳನ್ನು ನೀವು ನಿಯಮಿತವಾಗಿ ಬಳಸುವುದರಿಂದ ನಿಮ್ಮ ಕೂದಲು ಆರೋಗ್ಯಕರವಾಗಿಡಲು ಸಹಾಯ ಆಗುವುದು. ಈ ಹೇರ್ ಮಾಸ್ಕ್‌ಗಳು ಹೇರ್ ಕಲರಿಂಗ್‌ನಿಂದ ಉಂಟಾಗುವ ಒಣ ಕೂದಲನ್ನು ಹೈಡ್ರೇಟ್ ಮಾಡಿ, ಪುನರುಜ್ಜೀವನಗೊಳಿಸುತ್ತವೆ.

ನೀವೇನಾದರೂ ಬಣ್ಣಬಣ್ಣದ ಕೂದಲನ್ನು ಹೊಂದಿದ್ದರೆ, ಅಮೈನೋ ಆಮ್ಲಗಳು, ಪ್ರೋಟೀನ್ ಮತ್ತು ಕಬ್ಬಿಣದಿಂದ ಸಮೃದ್ಧವಾಗಿರುವ ಮಾಸ್ಕ್‌ ಬಳಸಿ, ಏಕೆಂದರೆ ಅದು ಕೂದಲನ್ನು ಪೋಷಿಸುತ್ತದೆ, ಅವುಗಳನ್ನು ಬಲಪಡಿಸುತ್ತದೆ ಮತ್ತು ಕೂದಲಿನ ಬಣ್ಣಗಳಿಂದ ಉಂಟಾಗುವ ನೆತ್ತಿಯ ಸೋಂಕನ್ನು ತಡೆಯುತ್ತದೆ.

ನಿಮ್ಮ ಶಾಂಪೂ ಪರಿಶೀಲಿಸಿ:

ನಿಮ್ಮ ಶಾಂಪೂ ಪರಿಶೀಲಿಸಿ:

ನಿಮ್ಮ ಶಾಂಪೂ ಆಯ್ಕೆಮಾಡುವಾಗ ಜಾಗರೂಕರಾಗಿರಬೇಕು. ಅದರಲ್ಲೂ ಕೂದಲಿಗೆ ಕಲರಿಂಗ್‌ ಮಾಡಿಕೊಂಡಿದ್ದರೆ, ಹೆಚ್ಚುವರಿ ಮುನ್ನೆಚ್ಚರಿಕೆಗಳನ್ನು ತೆಗೆದುಕೊಳ್ಳಬೇಕಾಗುತ್ತದೆ. ಏಕೆಂದರೆ ಹೆಚ್ಚಿನ ಶಾಂಪೂಗಳು ಸೋಡಿಯಂ ಲಾರಿಲ್ ಸಲ್ಫೇಟ್ (ಎಸ್‌ಎಲ್‌ಎಸ್) ಮತ್ತು ಸೋಡಿಯಂ ಲಾರೆತ್ ಸಲ್ಫೇಟ್ (ಎಸ್‌ಎಲ್‌ಇಎಸ್) ನಂತಹ ರಾಸಾಯನಿಕಗಳನ್ನು ಹೊಂದಿರುತ್ತವೆ. ಈ ರಾಸಾಯನಿಕಗಳು ಕಲರ್‌ ಮಾಡಿದ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಸೌಮ್ಯವಾದ ಮತ್ತು ಸಲ್ಫೇಟ್ ಮುಕ್ತವಾದ ಶಾಂಪೂವನ್ನು ಆಯ್ಕೆ ಮಾಡಲು ಹೆಚ್ಚು ಶಿಫಾರಸು ಮಾಡಲಾಗಿದೆ ಅಥವಾ ಗಿಡಮೂಲಿಕೆಗಳ ಶ್ಯಾಂಪೂಗಳನ್ನು ಬಳಸಬಹುದು.

ಹೆಚ್ಚು ಬಿಸಿ ನೀರು ಬೇಡ:

ಹೆಚ್ಚು ಬಿಸಿ ನೀರು ಬೇಡ:

ನಿಮ್ಮ ಕೂದಲು ತೊಳೆಯುವ , ನೀರಿನ ತಾಪಮಾನದ ಪರಿಶೀಲಿಸುವುದು ತುಂಬಾ ಮುಖ್ಯ. ಏಕೆಂದರೆ ಬಿಸಿನೀರು ಕೂದಲಿನ ಕ್ಯುಟಿಕಲ್ ಪದರವನ್ನು ತೆರೆಯುವುದರಿಂದ ಬಣ್ಣವು ತೊಳೆದು ಹೋಗುವ ಸಾಧ್ಯತೆಯಿದೆ. ಆದ್ದರಿಂದ, ನಿಮ್ಮ ಕೂದಲನ್ನು ತೊಳೆಯುವಾಗ ತುಂಬಾ ಬಿಸಿ ನೀರನ್ನು ಬಳಸುವುದನ್ನು ತಪ್ಪಿಸಬೇಕು.

ಕಲರಿಂಗ್‌ ಮಾಡಿದ ಕೂದಲನ್ನು ಉಗುರುಬೆಚ್ಚಗಿನ ನೀರಿನಿಂದ ತೊಳೆದುಕೊಳ್ಳಲು ಹಾಗೂ ಕೊನೆಯದಾಗಿ ತಣ್ಣೀರಿನ ಮೂಲಕ ಸ್ನಾನ ಮುಗಿಸಲು ಸಲಹೆ ನೀಡಲಾಗುತ್ತದೆ. ಹೀಗೆ ಮಾಡುವುದರಿಂದ ಕೂದಲು ಒದ್ದೆಯಾದಾಗ ತೆರೆಯುವ ರಂಧ್ರಗಳನ್ನು ಮುಚ್ಚಲು ಸಹಾಯ ಮಾಡುತ್ತದೆ. ಹೀಗಾಗಿ, ಇದು ಕೂದಲಿನಲ್ಲಿ ಬಣ್ಣ ಮತ್ತು ತೇವಾಂಶ ಎರಡನ್ನೂ ಭದ್ರಪಡಿಸುತ್ತದೆ.

ಅತಿಯಾಗಿ ತೊಳೆಯಬೇಡಿ:

ಅತಿಯಾಗಿ ತೊಳೆಯಬೇಡಿ:

ನಿಮ್ಮ ಕೂದಲು ತೊಳೆಯುವಿಕೆಯನ್ನು ವಾರಕ್ಕೆ 2-3 ಬಾರಿ ಮಿತಿಗೊಳಿಸಬೇಕು. ಏಕೆಂದರೆ ನೆತ್ತಿಯಲ್ಲಿರುವ ಹೆಚ್ಚುವರಿ ಎಣ್ಣೆ ಮತ್ತು ಕೊಳೆಯನ್ನು ಸ್ವಚ್ಛಗೊಳಿಸಲು ಇರುವ ಶಾಂಪೂ ಕೂದಲಿನ ಬಣ್ಣವನ್ನು ಸಹ ತೆಗೆದುಹಾಕಬಹುದು. ಆದ್ದರಿಂದ, ನಿಮ್ಮ ಕೂದಲಿಗೆ ಯಾವುದೇ ಉತ್ಪನ್ನವನ್ನು ಹೆಚ್ಚು ಬಳಸುವುದನ್ನು ತಪ್ಪಿಸಬೇಕು. ಅದಕ್ಕಾಗಿ ಡ್ರೈ ಶಾಂಪೂ ಉತ್ತಮ ಪರ್ಯಾಯವಾಗಿದೆ ಏಕೆಂದರೆ ಇದು ಕೂದಲಿಗೆ ಹಾನಿ ಮಾಡುವುದಿಲ್ಲ ಮತ್ತು ಕೊಳೆಯನ್ನು ತೊಡೆದುಹಾಕುತ್ತದೆ.

English summary

Ways To Protect Your Coloured Hair in Kannada

Here we talking about Ways To Protect Your Coloured Hair in Kannada, read on
X
Desktop Bottom Promotion