For Quick Alerts
ALLOW NOTIFICATIONS  
For Daily Alerts

ವರ್ಕೌಟ್ ಬಳಿಕ ಕೂದಲು ಜಿಡ್ಡಾಗುವುದನ್ನು ತಡೆಗಟ್ಟುವುದು ಹೇಗೆ?

|

ಪ್ರತಿದಿನ ವರ್ಕೌಟ್‌ ಮಾಡುವುದು ಆರೋಗ್ಯಕ್ಕೆ ತುಂಬಾನೇ ಒಳ್ಳೆಯದು, ಇದರಿಂದ ಮೈ ಬೊಜ್ಜು ಕರಗುವುದು, ಹೃದಯ ಸೇರಿ ದೇಹದ ಒಟ್ಟು ಮೊತ್ತ ಆರೋಗ್ಯಕ್ಕೆ ಒಳ್ಳೆಯದು, ಆದರೆ ವರ್ಕೌಟ್ ಮಾಡಿದಾಗ ಮೈ, ತಲೆ ಬೆವರುವುದು.

ನೀವು ತಲೆ ಕೂದಲನ್ನು ಸರಿಯಾಗಿ ಆರೈಕೆ ಮಾಡದಿದ್ದರೆ ಕೂದಲು ಉದುರುವ ಸಮಸ್ಯೆ ಕಂಡು ಬರುವುದು. ತಲೆ ಬೆವರಿ ಅದನ್ನು ಹಾಗೇ ಬಿಟ್ಟರೆ ಕೂದಲು ಡ್ರೈಯಾಗುವುದು, ಕೂದಲಿಗೆ ಹಾನಿಯುಂಟಾಗಿ ಉದುರಲು ಆರಂಭಿಸುವುದು. ಇನ್ನೂ ದಿನಾ ತಲೆ ತೊಳೆಯುವುದು ಕೂಡ ಅಷ್ಟು ಒಳ್ಳೆಯದಲ್ಲ, ಹಾಗಾದರೆ ಕೂದಲು ಎಣ್ಣೆ-ಎಣ್ಣೆಯಾಗುವುದನ್ನು ತಡೆಗಟ್ಟುವುದು ಹೇಗೆ ಎಂದು ನೋಡೋಣ ಬನ್ನಿ:

ವರ್ಕೌಟ್‌ಗೆ ಮೊದಲು

ವರ್ಕೌಟ್‌ಗೆ ಮೊದಲು

1. ಡ್ರೈ ಶ್ಯಾಂಪೂ ಬಳಸಿ

ವರ್ಕೌಟ್‌ ಮಾಡುವ ಮುನ್ನ ಡ್ರೈ ಶ್ಯಾಂಪೂ ಬಳಸುವುದು ಒಳ್ಳೆಯದು. ವರ್ಕೌಟ್‌ ಮಾಡುವ ಮುನ್ನ ಸ್ವಲ್ಪ ಡ್ರೈ ಶ್ಯಾಂಪೂ ತೆಗೆದು ಅದನ್ನು ತಲೆಯ ಬುಡಕ್ಕೆ ಹಾಕಿ.

2. ಹೇರ್ ಸ್ಟೈಲ್‌ ವರ್ಕೌಟ್‌ಗೆ ತಕ್ಕಂತೆ ಇರಲಿ

ನೀವು ವರ್ಕೌಟ್‌ಗೆ ಸೂಕ್ತವಾದ ಹೇರ್‌ ಸ್ಟೈಲ್‌ ಬಳಸುವುದರಿಂದ ಕೂದಲು ತುಂಬಾ ಎಣ್ಣೆ-ಎಣ್ಣೆಯಾಗುವುದನ್ನು ತಡೆಗಟ್ಟಬಹುದು. ಧ್ಯಾನ ಮಾಡುವಾಗ ಅಥವಾ ವಿಶ್ರಾಂತಿ ಅನುಭವ ನೀಡುವಾಗ ಲೂಸ್‌ ತುರುಬು ಕಟ್ಟಿಕೊಳ್ಳಬಹುದು, ಆದರೆ ಮೈ ಬೆವರುವಂತೆ ವರ್ಕೌಟ್‌ ಮಾಡುವಾಗ ಜುಟ್ಟು ಅಥವಾ ಜಡೆ ಹಾಕಿಕೊಳ್ಳುವುದು ಒಳ್ಳೆಯದು.

3. ಕೂದಲನ್ನು ಮುಖಕ್ಕೆ ಬೀಳಲು ಬಿಡಬೇಡಿ

3. ಕೂದಲನ್ನು ಮುಖಕ್ಕೆ ಬೀಳಲು ಬಿಡಬೇಡಿ

ಕೂದಲು ಮುಖಕ್ಕೆ ಬೀಳುವಂತಿದ್ದರೆ ಬೆವರಿಗೆ ಮುಖಕ್ಕೆ ಅಂಟಿಕೊಂಡು ನಿಲ್ಲುವುದು, ಅದನ್ನು ತಡೆಗಟ್ಟಲು ಸ್ಟೆಟ್‌ ಬ್ಯಾಂಡ್‌, ಸ್ಕ್ರೂಂಚಿ ಕ್ಲಿಪ್, ಹೇರ್ ಬ್ಯಾಂಡ್ ಇವುಗಳನ್ನು ಬಳಸಿ.

4. ಹೇರ್‌ ಪರ್‌ಪ್ಯೂಮ್‌ ಬಳಸಿ

ವರ್ಕೌಟ್‌ಗೆ ಮುನ್ನ ಹೇರ್ ಪರ್‌ಪ್ಯೂಮ್‌ ಬಳಸಿ. ಆಲ್ಕೋಹಾಲ್‌ ಅಂಶವಿರುವ ಹೇರ್ ಪರ್ಪ್ಯೂಮ್‌ ಬಳಸಬೇಡಿ. ಇದು ಕೂದಲು ಬೆವರು ವಾಸನೆ ಬೀರುವುದನ್ನು ತಡೆಗಟ್ಟಲು ಸಹಕಾರಿ, ಅಲ್ಲದೆ ಇದು ಕೂದಲನ್ನು ಮೃದುವಾಗಿಯೂ ಇಡುತ್ತದೆ.

ವರ್ಕೌಟ್‌ ಬಳಿಕ ಕೂದಲಿನ ಆರೈಕೆ

ವರ್ಕೌಟ್‌ ಬಳಿಕ ಕೂದಲಿನ ಆರೈಕೆ

1. ವರ್ಕೌಟ್‌ ಆದ ಬಳಿಕ ಕೂದಲನ್ನು ಬಿಚ್ಚಿ ಒಣಗಲು ಬಿಡಿ, ಕೂದಲುಗಳು ಗಾಳಿಯಲ್ಲೇ ಒಣಗಲಿ, ಬ್ಲೋ ಡ್ರೈ ಬಳಸಬೇಡಿ.

2. ಕೂದಲನ್ನು ತೊಳೆಯಿರಿ

ವರ್ಕೌಟ್‌ ಬಳಿಕ ಕೂದಲಿಗೆ ಮೃದುವಾದ ಶ್ಯಾಂಪೂ ಹಾಕಿ ತೊಳೆಯಿರಿ, ಇದರಿಂದ ಕೂದಲು ಸ್ವಚ್ಛವಾಗುವುದು. ನೀವು ಕೂದಲು ತೊಳೆಯುವಾಗ ಕೂದಲಿಗೆ ಕಂಡೀಷಿನಿಂಗ್‌ ಮಾಡಿ.

3. ಹದ ಬಿಸಿ ನೀರು ಬಳಸಿ

ನೀವು ತುಂಬಾ ಬಿಸಿಯಾದ ನೀರನ್ನು ತಲೆಗೆ ಹಾಕಬೇಡಿ, ತುಂಬಾ ತಣ್ಣೆಯ ನೀರನ್ನೂ ಬಳಸಬೇಡಿ. ಹದ ಬಿಸಿ ನೀರನ್ನು ಬಳಸಿ ಅಥವಾ ತಣ್ಣೀರು ಬಳಸಿ.

ಕೂದಲಿನ ಆರೋಗ್ಯ ಹೆಚ್ಚಿಸಿ

ಕೂದಲಿನ ಆರೋಗ್ಯ ಹೆಚ್ಚಿಸಿ

ಸೆರಮ್ ಬಳಸಿ

ವರ್ಕೌಟ್‌ ಬಳಿಕ ಕೂದಲು ಗಂಟು-ಗಂಟಾಗುವುದನ್ನು ತಡೆಗಟ್ಟಲು ಸೆರಮ್ ಬಳಸಿ, ಸೆರಮ್‌ ಕೂದಲು ಹೊಳಪಿನಿಂದ ಕೂಡಿರುವಂತೆ ಮಾಡುತ್ತದೆ.

ಕೂದಲನ್ನು ಫ್ರೀ ಆಗಿ ಬಿಡಿ

ವರ್ಕೌಟ್‌ ಮುಗಿದ ಬಳಿಕವೂ ಕೂದಲನ್ನು ಬಿಗಿಯಾಗಿ ಕಟ್ಟಬೇಡಿ, ಅವುಗಳನ್ನು ಸಡಿಲವಾಗಿ ಬಿಡಿ, ಇದರಿಂದ ಕೂದಲಿನ ಬುಡ ಉಸಿರಾಡುವುದು, ಕೂದಲು ತುಂಡಾಗುವುದನ್ನು ತಡೆಗಟ್ಟಬಹುದು.

English summary

Tips To Fix Greasy Hair After A Workout in kannada

Tips to fix Greasy Hair after a workout in kannada, read on...
Story first published: Thursday, December 16, 2021, 16:15 [IST]
X
Desktop Bottom Promotion