For Quick Alerts
ALLOW NOTIFICATIONS  
For Daily Alerts

ನೀವು ಕೂದಲನ್ನ ಪ್ರೀತಿಸುವವರಾಗಿದ್ರೆ, ಈ ತಪ್ಪುಗಳನ್ನು ಮಾಡಬೇಡಿ

|

ಕೆಲವರಿಗೆ ತಮ್ಮ ಕೂದಲೆಂದರೆ ಬಹಳ ಪ್ರೀತಿ. ಸದಾ ಕಾಲ ಸಾಕಷ್ಟು ಆರೈಕೆ ಮಾಡಿಕೊಂಡು, ಅದರ ಅಂದ-ಚಂದ ಕಾಪಾಡಿಕೊಂಡು ಬಂದಿರುತ್ತಾರೆ. ಆದ್ರೆ ಕೆಲವೊಮ್ಮೆ ಗೊತ್ತಿದ್ದೋ ಅಥವಾ ಗೊತ್ತಿಲ್ಲದೆಯೋ ಮಾಡುವ ಕೆಲವು ತಪ್ಪುಗಳು ನಿಮ್ಮ ಸೊಂಪಾದ ಕೇಶರಾಶಿಯ ಆರೋಗ್ಯ ಕೆಡಿಸಬಹುದು. ಹಾಗಾದರೆ ಅಂತಹ ಕೆಲವು ವಿಚಾರಗಳು ಯಾವುವು ಎಂಬುದನ್ನು ಇಲ್ಲಿ ನೋಡೋಣ.

ಆರೋಗ್ಯ ಕೂದಲು ಬೇಕಿದ್ದಲ್ಲಿ ಮಾಡಬಾರದ ವಿಚಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಹೆಚ್ಚು ತೊಳೆಯಬೇಡಿ:

ಹೆಚ್ಚು ತೊಳೆಯಬೇಡಿ:

ಆಗಾಗ ಶಾಂಪೂ ಮಾಡುವುದರಿಂದ ನಿಮ್ಮ ಕೂದಲಿಗೆ ಹೆಚ್ಚು ಹಾನಿಯಾಗುವುದು. ಶಾಂಪೂವಿನಲ್ಲಿ ಹಲವಾರು ರಾಸಾಯನಿಕಗಳು ಇರುವುದರಿಂದ ಅವು ನಿಮ್ಮ ನೆತ್ತಿಯ ನೈಸರ್ಗಿಕ ತೈಲಗಳನ್ನು ತೆಗೆದುಹಾಕುತ್ತವೆ. ಇದರಿಂದ ನೆತ್ತಿ ಶುಷ್ಕ, ಮಂದವಾಗುವುದರ ಜತೆಗೆ ಬೇರುಗಳು ದುರ್ಬಲವಾಗಿ ಬಿಡುತ್ತದೆ. ಅಲ್ಲದೆ, ಹೆಚ್ಚು ಶಾಂಪೂ ಮಾಡುವುದು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಕೂದಲಿನ ತಜ್ಞರ ಪ್ರಕಾರ, ನೀವಿರುವ ಜಾಗವನ್ನು ಅವಲಂಬಿಸಿ, ವಾರಕ್ಕೆ ಎರಡು ಬಾರಿ ಮಾತ್ರ ಕೂದಲು ತೊಳೆಯುವುದು ಉತ್ತಮ.

ನೆತ್ತಿಯ ಮೇಲೆ ಕಂಡೀಷನರ್ ಹಾಕಬೇಡಿ:

ನೆತ್ತಿಯ ಮೇಲೆ ಕಂಡೀಷನರ್ ಹಾಕಬೇಡಿ:

ಶಾಂಪೂ ಮಾಡಿದ ನಂತರ ನಿಮ್ಮ ಕೂದಲನ್ನು ಕಂಡೀಷನ್ ಮಾಡುವುದು ಬಹಳ ಮುಖ್ಯ ಆದರೆ ಅದನ್ನು ಎಲ್ಲಿ ಹಾಕಬೇಕೆಂದು ಸರಿಯಾಗಿ ತಿಳಿದಿರಬೇಕು. ಕಂಡೀಷನರ್ ಅನ್ನು ಯಾವಾಗಲೂ ಕೂದಲಿಗೆ ಹಚ್ಚಬೇಕು. ಆರೋಗ್ಯಕರ ಮತ್ತು ಹೊಳೆಯುವ ಕೂದಲು ಬೇಕಿದ್ದಲ್ಲಿ ಕಂಡೀಷನರ್ ನೆತ್ತಿ ತಲುಪದಂತೆ ತಡೆಯಬೇಕು.

ಕೂದಲನ್ನು ಹೆಚ್ಚು ಹೊತ್ತು ಕಟ್ಟಬೇಡಿ:

ಕೂದಲನ್ನು ಹೆಚ್ಚು ಹೊತ್ತು ಕಟ್ಟಬೇಡಿ:

ಕೂದಲನ್ನು ಪೋನಿಟೇಲ್ ಅಥವಾ ಬನ್ ಹಾಕಿ ದೀರ್ಘಕಾಲ ಇರುವುದು ತುಂಬಾ ಆರಾಮದಾಯಕವಾಗಿದ್ದರೂ, ಅದು ಕೂದಲಿಗೆ ಒಳ್ಳೆಯದಲ್ಲ. ಬ್ಯಾಂಡ್ ನಿರಂತರವಾಗಿ ಬೇರುಗಳನ್ನು ದುರ್ಬಲಗೊಳಿಸಿ, ನೆತ್ತಿಯನ್ನು ಹಾನಿಗೊಳಿಸುತ್ತವೆ. ಬದಲಾಗಿ, ನಿಮ್ಮ ಕೂದಲನ್ನು ಕಾಲಕಾಲಕ್ಕೆ ತೆರೆದು ವಿಶ್ರಾಂತಿಯನ್ನು ನೀಡಿ.

ಆಗಾಗ್ಗೆ ಬಾಚಿಕೊಳ್ಳಬೇಡಿ:

ಆಗಾಗ್ಗೆ ಬಾಚಿಕೊಳ್ಳಬೇಡಿ:

ಹೇರ್ ಬ್ರಷ್ ಅಥವಾ ಬಾಚಣಿಗೆಯನ್ನ ಬುದ್ಧಿವಂತಿಕೆಯಿಂದ ಬಳಸಿದರೆ ಕೂದಲಿಗೆ ಒಳ್ಳೆಯದು. ಆದ್ದರಿಂದ ಪ್ರತಿ ಗಂಟೆಗೆ ಬಾಚಿಕೊಳ್ಳಬೇಡಿ, ಏಕೆಂದರೆ ಅದು ನಿಮ್ಮ ಕೂದಲನ್ನು ಹೆಚ್ಚು ಹಾನಿಗೊಳಿಸುತ್ತದೆ. ಆಗಾಗ ಬಾಚುವುದು ಬೇರುಗಳನ್ನು ದುರ್ಬಲಗೊಳಿಸಿ, ಬಹಳಷ್ಟು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ.

 ಒದ್ದೆ ಕೂದಲು ಬಾಚಬೇಡಿ:

ಒದ್ದೆ ಕೂದಲು ಬಾಚಬೇಡಿ:

ಒದ್ದೆಯಾಗಿರುವಾಗ ಕೂದಲು ಬಾಚುವುದು ಕೂದಲಿನ ಆರೋಗ್ಯಕ್ಕೆ ಹಾನಿಕರ. ಇದು ಬಹಳಷ್ಟು ತುಂಡಾಗುವಿಕೆ ಮತ್ತು ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಆದ್ದರಿಂದ ಒದೆ ಕೂದಲನ್ನು ಸ್ವಲ್ಪ ಸಮಯದವರೆಗೆ ನೈಸರ್ಗಿಕವಾಗಿ ಒಣಗಲು ಬಿಡಿ ಮತ್ತು ನಂತರ ಅಗಲವಾದ ಹಲ್ಲಿನ ಬಾಚಣಿಗೆ ಅಥವಾ ಬ್ರಷ್‌ನಿಂದ ಅದನ್ನು ಬಿಡಿಸಿ. ಅಲ್ಲಿಯವರೆಗೆ, ನಿಮ್ಮ ಬೆರಳುಗಳನ್ನು ಬಳಸಿ.

ಕೂದಲು ಸ್ಟೈಲಿಂಗ್ ಕಡಿಮೆ ಮಾಡಿ:

ಕೂದಲು ಸ್ಟೈಲಿಂಗ್ ಕಡಿಮೆ ಮಾಡಿ:

ಕೂದಲಿನ ಮೇಲೆ ಸ್ಟೈಲಿಂಗ್ ಮತ್ತು ಶಾಖ ಉತ್ಪನ್ನಗಳನ್ನು ಬಳಸುವುದನ್ನು ಇಷ್ಟಪಡುವ ಜನರಲ್ಲಿ ನೀವು ಒಬ್ಬರಾಗಿದ್ದರೆ, ಅದರ ಪರಿಣಾಮಗಳನ್ನು ಎದುರಿಸಲು ಸಿದ್ಧರಾಗಿರಿ. ಹೀಟ್ ಉಪಕರಣಗಳು ನಿಮ್ಮ ಕೂದಲಿನ ಶತ್ರು. ಒಂದು ವೇಳೆ ನಿಮಗೆ ಅನಿವಾರ್ಯವಾಗಿದ್ದರೆ, ಹೀಟಿಂಗ್ ಮಾಡುವ ಮೊದಲು, ಶಾಖ ರಕ್ಷಣಾ ಸ್ಪ್ರೇ ಬಳಸಿ.

English summary

Things you shouldn't do If you love your hair in Kannada

Here we talking about things you shouldn't do If you love your hair in Kannada, read on
Story first published: Tuesday, August 9, 2022, 9:01 [IST]
X
Desktop Bottom Promotion