For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಸುರಕ್ಷಿತ ಬಣ್ಣ ಹಚ್ಚುವುದು ಹೇಗೆ?

|

ಹೆಣ್ಣುಮಕ್ಕಳಿಗೆ ತಮ್ಮ ಸೌಂದರ್ಯವನ್ನು ಕಾಪಾಡಿಕೊಳ್ಳುವುದು ಎಂದರೆ ತುಂಬಾನೇ ಇಷ್ಟ. ಅದರಲ್ಲೂ ತಮ್ಮ ಮುಖಚರ್ಯೆಗೆ ತಕ್ಕಂತೆ ಕೂದಲನ್ನು ಕೂಡ ಬೆಳೆಸಿಕೊಳ್ಳುತ್ತಾರೆ. ಕೆಲವರಿಗೆ ಉದ್ದ ಕೂದಲು ಇಷ್ಟವಾದರೆ ಇನ್ನೂ ಕೆಲವರಿಗೆ ಗಿಡ್ಡ ಕೂದಲು, ಕೆಲವರಿಗೆ ಗುಂಗುರು ಕೂದಲು, ಮತ್ತೆ ಕೆಲವರಿಗೆ ನೀಳವಾದ ಕೂದಲು, ಹೀಗೆ ಅವರವರಿಗೆ ಇಷ್ಟವಿದ್ದ ಹಾಗೆ ಕೂದಲಿನ ವಿನ್ಯಾಸ ಮಾಡಿಕೊಳ್ಳುತ್ತಾರೆ. ಇತ್ತೀಚಿಗೆ ಕೂದಲಿಗೆ ಬೇರೆ ಬೇರೆ ರೀತಿಯ ಬಣ್ಣಗಳನ್ನು ಹಚ್ಚುವುದು ಸಾಮಾನ್ಯವಾಗಿದೆ. ಕೂದಲಿನ ಮೇಲ್ಭಾಗದಲ್ಲಿ, ಕೂದಲಿನ ತುದಿಗೆ, ಕೂದಲಿನ ಎಳೆ ಎಳೆಗೆ ವಿವಿಧ ಬಣ್ಣಗಳನ್ನು ಹಚ್ಚಲಾಗುತ್ತದೆ.

Temporary And Safe Ways to Colour Your Hair

ಕೂದಲಿಗೆ ಶಾಶ್ವತವಾಗಿ ಹಾಗೂ ತಾತ್ಕಾಲಿಕವಾಗಿ ಬಣ್ಣವನ್ನು ಹಚ್ಚಬಹುದು. ಕೆಲವರುಶಾಶ್ವತವಾಗಿ ಕೂದಲಿನ ಕಲರಿಂಗ್ ಮಾಡಿಸುತ್ತಾರೆ. ಆದರೆ ಇದರ ನಿರ್ವಹಣೆ ಅಷ್ಟು ಸುಲಭವಲ್ಲ. ಆದರೆ ತುಂಬಾ ಹೆಣ್ನುಮಕ್ಕಳಿಗೆ ಈಗಿನ ಬದಲಾವಣೆಗೆ ತಕ್ಕ ಹಾಗೆ ಕೂದಲಿಗೆ ಬಣ್ಣ ಹಚ್ಚಲು ಬಯಸುತ್ತಾರೆ. ಆದರೆ ಶಾಶ್ವತ ಬಣ್ಣ ಹಾಕಲು ಹೆದರುತ್ತಾರೆ. ಹಾಗಾಗಿ ಇಂಥವರು ತಾತ್ಕಾಲಿಕ ಬಣ್ಣವನ್ನು ಕೂದಲಿಗೆ ಹಚ್ಚಬಹುದು. ಹಾಗಾದರೆ ನೀವು ಬಹಳ ಸಮಯದಿಂದ ನಿಮ್ಮ ಕೂದಲಿಗೆ ಬಣ್ಣ ಹಾಕುವ ಬಗ್ಗೆ ಯೋಚಿಸುತ್ತಿದ್ದೀರಾ? ನಿಮ್ಮ ಉತ್ತರ ಹೌದು ಎಂದಾದರೆ, ತಾತ್ಕಾಲಿಕವಾಗಿ ಕೂದಲಿಗೆ ಬಣ್ಣ ಹಾಕುವುದು ಅತ್ಯಂತ ಸೂಕ್ತ ಮತ್ತು ಉತ್ತಮ ಸಲಹೆ. ನೀವು ತುಂಬಾ ಸಮಯದಿಂದ ಬಯಸುತ್ತಿದ್ದ, ಈ ಕೆಳಗಿನ ಕೂದಲಿಗೆ ಬಣ್ಣ ಹಾಕುವ ಆಯ್ಕೆಗಳು ಅತ್ಯಂತ ಸುಲಭವಾದವು. ಇವು ನಿಮ್ಮ ಕೂದಲು ಹಾನಿಯಾಗುವುದನ್ನು ಮತ್ತು ಬ್ಲೀಚಿಂಗ್ ಮತ್ತು ಶಾಶ್ವತ ಕೂದಲು ಬಣ್ಣಗಳ ಹಾನಿಯಿಂದ ನಿಮ್ಮನ್ನು ಉಳಿಸುತ್ತವೆ.
ಕೂದಲಿಗೆ (ಚಾಕ್) ಸೀಮೆಸುಣ್ಣ

ಕೂದಲಿಗೆ (ಚಾಕ್) ಸೀಮೆಸುಣ್ಣ

ಎಲ್ಲಾ ಬಣ್ಣಗಳ ಪ್ರಿಯರಿಗೆ ತುಂಬಾ ಚಮತ್ಕಾರಿ ಮತ್ತು ಉತ್ತಮ ಆಯ್ಕೆ ಎಂದರೆ ಅದು ಹೇರ್ ಚಾಕ್. (ಕೂದಲಿಗೆ ಹಚ್ಚುವ ಸೀಮೆಸುಣ್ಣ). ಈ ಹೇರ್ ಕಲರ್ ನ್ನು ನಿಮ್ಮ ಕೂದಲನ್ನು ವಿಭಾಗಗಳನ್ನಾಗಿ ಮಾಡಿ ಹಚ್ಚಿದರೆ ಆಯಿತು ಅಷ್ಟೇ. ಸುಂದರವಾದ ವಿವಿಧ ಬಣ್ಣಗಳು ನಿಮ್ಮ ಕೂದಲಿನಲ್ಲಿ ಅಂಟಿಕೊಂಡಿರುತ್ತವೆ. ಇದು ಇನ್ನಷ್ಟು ಪರಿಣಾಮಕಾರಿಯಾಗಿ ಕಾಣಲು ಹೇರ್ ಸ್ಪ್ರೇ ಯನ್ನು ಸಹ ಅನ್ವಯಿಸಬಹುದು. ಹೇರ್ ಚಾಕ್ ಗಳು ವ್ಯಾಪಕ ಶ್ರೇಣಿಯ ಬಣ್ಣಗಳಲ್ಲಿ ಮಾರುಕಟ್ಟೆಯಲ್ಲಿ, ಒನ್ ಲೈನ್ ಗಳಲ್ಲೂ ಲಭ್ಯ. ಇದು ಸುಮಾರು 9-10 ಬಾರಿ ಕೂದಲು ತೊಳೆಯುವವವರೆಗೂ ಇರುತ್ತದೆ.

ಹೇರ್ ಕಲರ್ ಸ್ಪ್ರೇ

ಹೇರ್ ಕಲರ್ ಸ್ಪ್ರೇ

ಹೇರ್ ಕಲರ್ ಸ್ಪ್ರೇ , ನಿಮ್ಮ ಕೂದಲಿಗೆ ಬಣ್ಣ ಹಚ್ಚುವ ಸುಲಭ ಮತ್ತು ಗೊಂದಲಮಯವಲ್ಲದ ಮಾರ್ಗವಾಗಿದೆ. ನಿಮ್ಮ ಸಾಮಾನ್ಯ ಹೇರ್ ಸೆಟ್ಟಿಂಗ್ ಸ್ಪ್ರೇಗಳಂತೆಯೇ ಇದನ್ನೂ ಬಳಸಬಹುದು. ಆದರೆ ಇದರಲ್ಲಿ ಸ್ವಲ್ಪ ಬಣ್ಣ ಇರುತ್ತದೆ ಅಷ್ಟೇ. ನಿಮ್ಮ ಕೂದಲನ್ನು ಭಾಗಗಳಾಗಿ ವಿಂಗಡಿಸಿ ಮತ್ತು ನಡುವೆ ಬಣ್ಣದ ಗೆರೆಗಳನ್ನು ನೀಡಲು ಸ್ಪ್ರೇ ಬಾಟಲಿಯನ್ನು ನೆತ್ತಿಯಿಂದ ಕೂದಲಿನ ತುದಿಯವರೆಗೆ ಸಿಂಪಡಿಸಿ. ಇದು ಕೂಡ ಕನಿಷ್ಠ 5-6 ಬಾರಿ ಕೂದಲು ತೊಳೆಯುವವರೆಗೂ ಇರುತ್ತದೆ.

ಕೂದಲಿಗೆ ಅರೆ ಶಾಶ್ವತ ಬಣ್ಣ

ಕೂದಲಿಗೆ ಅರೆ ಶಾಶ್ವತ ಬಣ್ಣ

ನಿಮ್ಮ ಕೂದಲಿನ ಮೇಲೆ ಶಾಶ್ವತ ಬಣ್ಣ ಹೇಗೆ ಕಾಣುತ್ತದೆ ಎಂಬುದನ್ನು ನೀವು ನೋಡಲು ಬಯಸಿದರೆ, ಹೇರ್ ಡೈ ಪರ್ಯಾಯವು ನಿಮಗೆ ಸೂಕ್ತವಾಗಿದೆ. ಇದು ತಾತ್ಕಾಲಿಕ ಕೂದಲು ಬಣ್ಣಕ್ಕಿಂತ ಕಡಿಮೆ ಆದರೆ ತಾತ್ಕಾಲಿಕ ಬಣ್ಣಕ್ಕಿಂತ ಹೆಚ್ಚು ಕಾಲ ಉಳಿಯುತ್ತದೆ. ಅರೆ-ಶಾಶ್ವತ ಬಣ್ಣವು ಶಾಶ್ವತ ಬಣ್ಣವನ್ನು ಪಡೆಯುವ ತೊಂದರೆಯಿಂದ ನಿಮ್ಮನ್ನು ಉಳಿಸುತ್ತದೆ ಮತ್ತು ನಿಮ್ಮ ಕೂದಲಿಗೆ ಅಷ್ಟೇ ಆರೋಗ್ಯಕರ ಆಯ್ಕೆಯಾಗಿದೆ.

ತರಕಾರಿ ಬಣ್ಣ

ತರಕಾರಿ ಬಣ್ಣ

ನಿಮ್ಮ ಕೂದಲಿನ ಬಣ್ಣದಿಂದ ಯಾವುದೇ ರೀತಿಯ ರಾಸಾಯನಿಕಗಳನ್ನು ತೊಡೆದುಹಾಕಲು ನೀವು ಬಯಸಿದರೆ, ತರಕಾರಿ ಬಣ್ಣವು ನಿಮಗಾಗಿ ಉತ್ತಮ ಆಯ್ಕೆಯಾಗಿದೆ. ಇದು ಅತ್ಯಂತ ಉದ್ದವಾಗಿದೆ ಮತ್ತು 15-20 ಸಲ ಕೂದಲು ತೊಳೆಯುವವರೆಗೂ ಇರುತ್ತದೆ. ಈ ಬಣ್ಣವು ನಿಮ್ಮ ಕೂದಲನ್ನು ಹಾನಿಯಿಂದ ರಕ್ಷಿಸುವುದಲ್ಲದೆ ಕೂದಲನ್ನು ಹೆಚ್ಚು ಕಾಲ ಹೊಳೆಯುವಂತೆ ಮಾಡುತ್ತದೆ.

ಹೇರ್ ಕಲರ್ ವ್ಯಾಕ್ಸಿಂಗ್

ಹೇರ್ ಕಲರ್ ವ್ಯಾಕ್ಸಿಂಗ್

ಪುರುಷರು ಮತ್ತು ಮಹಿಳೆಯರು ಇಬ್ಬರೂ ಬಳಸಬಹುದಾದ, ಹೇರ್ ಕಲರ್ ವ್ಯಾಕ್ಸ್ ಇಂದು ಹೆಚ್ಚು ಪ್ರಚಲಿತದಲ್ಲಿರುವ ವಿಷಯವಾಗಿದ್ದು ಅದು ಕೂದಲನ್ನು ಬಣ್ಣವಾಗಿಸಲು ಸಹಾಯ ಮಾಡುತ್ತದೆ. ನಿಮ್ಮ ಕೈಗಳಿಗೆ ಸ್ವಲ್ಪ ವ್ಯಾಕ್ಸ್ ನ್ನು ಉಜ್ಜಿಕೊಂಡು ಅದನ್ನು ನೇರವಾಗಿ ನಿಮ್ಮ ಕೂದಲಿಗೆ ಹಚ್ಚಿ. ಹೀಗೆ ಮಾಡುವುದರಿಂದ ಯಾವುದೇ ಸಮಯದಲ್ಲಿ ನಿಮಗೆ ಬೇಕಾದ ಕೂದಲಿನ ಬಣ್ಣವನ್ನು ನೀವು ಪಡೆಯಬಹುದು. ಈ ವ್ಯಾಕ್ಸಿಂಗ್ ಬಣ್ಣವನ್ನು ಸರಿಯಾಗಿ ನಿರ್ವಹಿಸಿದರೆ ಸುಮಾರು 5-6 ಬಾರಿ ಕೂದಲನ್ನು ತೊಳೆಯುವವರೆಗೆ ಇರುತ್ತದೆ.

ಕೂದಲಿನ ಮಸ್ಕರಾ

ಕೂದಲಿನ ಮಸ್ಕರಾ

ಸಾಮಾನ್ಯವಾಗಿ ಬಿಳಿ ಕೂದಲನ್ನು ಮುಚ್ಚಲು ಇದನ್ನು ಬಳಸಲಾಗುತ್ತದೆ. ಕೂದಲಿನ ಮಸ್ಕರಾ ನಿಮ್ಮ ಕೂದಲಿಗೆ ಸ್ವಲ್ಪ ಬಣ್ಣವನ್ನು ಕೊಡಲು ಅಷ್ಟೇ ಉತ್ತಮ ಆಯ್ಕೆಯಾಗಿದೆ. ಇವು ವಿಭಿನ್ನ ಬಣ್ಣಗಳಲ್ಲಿ ಲಭ್ಯವಿವೆ. ಕೂದಲಿನ ಮಸ್ಕರಾ ಕಣ್ಣಿನ ಮಸ್ಕರಾದ ಆಕಾರದಲ್ಲಿಯೇ ಇರುತ್ತದೆ ಮತ್ತು ಇದನ್ನು ಕೂದಲಿಗೆ ಹಚ್ಚುವುದು ಸುಲಭವಾಗಿದೆ. ನಿಮ್ಮ ಕೂದಲಿನ ವಿವಿಧ ಎಳೆಗಳ ಮೇಲೆ ಮಸ್ಕರಾವನ್ನು ಹಚ್ಚಿದರೆ ಆಯ್ತು. ಕೂದಲಿಗೆ ಬಣ್ಣವಾಗುತ್ತದೆ. ಇದು ಸಾಮಾನ್ಯವಾಗಿ 4-5 ಬಾರಿ ಶಾಂಪೂ ಮಾಡುವವರೆಗೂ ಇರುತ್ತದೆ. ಇದು ಬಳಸಲು ಸುರಕ್ಷಿತವಾಗಿದೆ ಮತ್ತು ಹೆಚ್ಚಿನ ನಿರ್ವಹಣೆ ಅಗತ್ಯವಿಲ್ಲ.

English summary

Temporary And Safe Ways to Colour Your Hair

Here we are discussing about Temporary And Safe Ways to Colour Your Hair. These easy to do hair colouring options will give you the hair colour you want from long and will also save you from the damage of bleaching and permanent hair dyes. Read more.
Story first published: Friday, March 20, 2020, 9:22 [IST]
X
Desktop Bottom Promotion