For Quick Alerts
ALLOW NOTIFICATIONS  
For Daily Alerts

ನೆತ್ತಿಯಲ್ಲಿ ಬರುವ ವಿಪರೀತ ತುರಿಕೆ ಕಡಿಮೆ ಮಾಡಲು ಇಲ್ಲಿವೆ ಟಿಪ್ಸ್‌ಗಳು

|

ಚಳಿಗಾಲ ಸಮೀಪಿಸುತ್ತಿದ್ದಂತೆ ಕೂದಲಿಗೆ ಸಂಬಂಧಿಸಿದ ಅನೇಕ ಸಮಸ್ಯೆಗಳು ಎದುರಾಗುತ್ತವೆ, ಅವುಗಳಲ್ಲಿ ಒಂದು ನೆತ್ತಿಯ ತುರಿಕೆ. ಇದು ಅತ್ಯಂತ ಕಿರಿಕಿರಿಯುಂಟುಮಾಡುವ ಸಂವೇದನೆಗಳಲ್ಲಿ ಒಂದಾಗಿದ್ದು, ತಲೆಹೊಟ್ಟು ಮತ್ತು ಎಸ್ಜಿಮಾದಂತಹ ಕಾರಣಗಳೂ ಸೇರಿಕೊಂಡಿವೆ. ಇದರಿಂದ ಒಣನೆತ್ತಿ ಮತ್ತು ತುರಿಕೆ ಹುಟ್ಟಿಕೊಳ್ಳುತ್ತವೆ.

ಇದನ್ನು ಹೋಗಲಾಡಿಸುವುದು ಸಾಹಸದ ಕೆಲಸವೇನಲ್ಲ, ಆದರೆ, ನೀವು ಕೆಲವೊಂದು ಸಲಹೆಗಳನ್ನು ಪಾಲಿಸಬೇಕಾಗುತ್ತದೆ. ಇದಕ್ಕಾಗಿ ನಾವಿಂದು ನೆತ್ತಿಯ ತುರಿಕೆ ಕಡಿಮೆ ಮಾಡಲು ತಜ್ಞರು ಶಿಫಾರಸ್ಸು ಮಾಡಿದಂತಹ, ಸಲಹೆಗಳನ್ನು ನೀಡಲಿದ್ದೇವೆ. ಇವುಗಳನ್ನು ಅನುಸರಿಸುವ ಮೂಲಕ ನೆತ್ತಿಯ ತುರಿಕೆಯಿಂದ ಮುಕ್ತಿ ಹೊಂದಬಹುದು.

1. ಕ್ಲೆನ್ಸಿಂಗ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ:

1. ಕ್ಲೆನ್ಸಿಂಗ್ ಶಾಂಪೂ ಬಳಸಿ ಕೂದಲನ್ನು ತೊಳೆಯಿರಿ:

ನೆತ್ತಿಯ ತುರಿಕೆಯನ್ನು ತಪ್ಪಿಸಲು ಶಾಂಪೂವಿನಿಂದ ಕ್ಲೆನ್ಸಿಂಗ್‌ ಮಾಡುವುದು ನಿಜವಾಗಿಯೂ ಪ್ರಯೋಜನಕಾರಿಯಾಗಿದೆ. ಕ್ಲೆನ್ಸಿಂಗ್ ಶಾಂಪೂವಿನಿಂದ ನಿಮ್ಮ ಕೂದಲನ್ನು ನಿಧಾನವಾಗಿ ತೊಳೆಯುವುದು ಎಣ್ಣೆಯುಕ್ತ ನೆತ್ತಿಯನ್ನು ಕಡಿಮೆ ಮಾಡಲು ಸಹಾಯ ಮಾಡುತ್ತದೆ, ಏಕೆಂದರೆ, ಇದು ನೆತ್ತಿಯ ತುರಿಕೆಗೆ ಕಾರಣಗಳಲ್ಲಿ ಒಂದಾಗಿದೆ. ಅಷ್ಟೇ ಅಲ್ಲದೇ, ಒಣ ನೆತ್ತಿಗೆ ಮತ್ತೊಂದು ಕಾರಣವೆಂದರೆ ಕಠಿಣವಾದ ಶ್ಯಾಂಪೂಗಳ ಬಳಕೆಯೂ ಆಗಿರಬಹುದು. ಆದ್ದರಿಂದ ನೀವು ಇಂತಹ ಶ್ಯಾಂಪೂ ಬಳಸುತ್ತಿದ್ದರೆ, ತಕ್ಷಣವೇ ನಿಲ್ಲಿಸಿ.

2. ನಿಮ್ಮ ಕೂದಲು ಮತ್ತು ನೆತ್ತಿಯನ್ನು ತೇವವಾಗಿರಿಸಿಕೊಳ್ಳಿ:

2. ನಿಮ್ಮ ಕೂದಲು ಮತ್ತು ನೆತ್ತಿಯನ್ನು ತೇವವಾಗಿರಿಸಿಕೊಳ್ಳಿ:

ನೆತ್ತಿಯ ಮೇಲಿನ ತುರಿಕೆಯನ್ನು ತಡೆಗಟ್ಟಲು ಕೂದಲು ಮತ್ತು ನೆತ್ತಿಯನ್ನು ತೇವಗೊಳಿಸುವುದು ಅತ್ಯಗತ್ಯ. ಇದಕ್ಕಾಗಿ ಕೂದಲು ಮತ್ತು ನೆತ್ತಿಯ ಆರ್ಧ್ರಕ ಉತ್ಪನ್ನಗಳನ್ನು ಬಳಸಿ. ಇದು ನಿಮ್ಮ ಕೂದಲಿಗೆ ಆರೋಗ್ಯಕರ ನೋಟವನ್ನು ನೀಡುತ್ತದೆ. ಜೊತೆಗೆ ಸೂಕ್ತವಾದ ಎಣ್ಣೆ, ಉತ್ತಮ ಶಾಂಪೂ ಮತ್ತು ಕಂಡೀಷನರ್ ಇತ್ಯಾದಿಗಳನ್ನು ಬಳಸಿ ನಿಮ್ಮ ಕೂದಲನ್ನು ಹೈಡ್ರೀಕರಿಸಬಹುದು.

3. ನೈಸರ್ಗಿಕ ಹೇರ್ ಮಾಸ್ಕ್:

3. ನೈಸರ್ಗಿಕ ಹೇರ್ ಮಾಸ್ಕ್:

ನೆತ್ತಿಯ ತುರಿಕೆ ಕಡಿಮೆ ಮಾಡಲು ನೈಸರ್ಗಿಕ ಹೇರ್ ಮಾಸ್ಕ್ ಅನ್ನು ಬಳಸುವುದು ಉತ್ತಮ ಮಾರ್ಗವಾಗಿದೆ. ನಿಂಬೆ, ಜೇನುತುಪಪ್‌, ಮೊಸರಿನಿಂತಹ ನೈಸರ್ಗಿಕ ಪದಾರ್ಥಗಳನ್ನೇ ಬಳಸಿಕೊಂಡು ತಯಾರಿಸುವ ಹೇರ್‌ ಮಾಸ್ಕ್‌ನಿಂದ ಯಾವುದೇ ಅಡ್ಡಪರಿಣಾಮಗಳಿರುವುದಿಲ್ಲ, ಜೊತೆಗೆ ಆರೋಗ್ಯಕರ ಕೂಡ. ಇವುಗಳು ಉತ್ತಮವಾಗಿ ಕಾರ್ಯನಿರ್ವಹಿಸುತ್ತವೆ ಜೊತೆಗೆ ನಿಮ್ಮ ಕೂದಲಿಗೆ ಅಗತ್ಯವಾದ ಪೋಷಕಾಂಶಗಳನ್ನು ಒದಗಿಸುತ್ತವೆ. ಆದ್ದರಿಂದ ಆದಷ್ಟು ನೈಸರ್ಗಿಕ ಹೇರ್‌ ಮಾಸ್ಕ್‌ ಬಳಸಿ.

4. ನೆತ್ತಿಗೆ ಆಲ್ಕೋಹಾಲ್ ಆಧಾರಿತ ಉತ್ಪನ್ನಗಳನ್ನು ತಪ್ಪಿಸಿ:

4. ನೆತ್ತಿಗೆ ಆಲ್ಕೋಹಾಲ್ ಆಧಾರಿತ ಉತ್ಪನ್ನಗಳನ್ನು ತಪ್ಪಿಸಿ:

ಆಲ್ಕೋಹಾಲ್ ಆಧಾರಿತ ಉತ್ಪನ್ನಗಳನ್ನು ನೆತ್ತಿಯ ಮೇಲೆ ಬಳಸಬಾರದು ಏಕೆಂದರೆ ಅವು ತುರಿಕೆ, ಒಣ ಚರ್ಮವನ್ನು ಉಂಟುಮಾಡಬಹುದು. ಆಲ್ಕೋಹಾಲ್-ಒಳಗೊಂಡಿರುವ ಜೆಲ್ಗಳು, ಮೌಸ್ಸ್, ಹೇರ್ ಸ್ಪ್ರೇಗಳಂತಹ ನಿಮ್ಮ ನೆತ್ತಿ ಮತ್ತು ಕೂದಲನ್ನು ಒಣಗಿಸುವ ಇತರ ಉತ್ಪನ್ನಗಳನ್ನು ಬಳಸುವುದನ್ನು ತಪ್ಪಿಸಿ. ಅವುಗಳನ್ನು ನಿಮ್ಮ ಚರ್ಮಕ್ಕೆ ಯಾವುದೇ ಹಾನಿ ಉಂಟುಮಾಡುವುದಿಲ್ಲ ಎಂಬಂತೆ ಕಾಣಿಸಬಹುದು, ಆದರೆ, ನಿಜವಾಗಿ ನೋಡುವುದಾದರೆ, ಅವುಗಳಿಂದ ಹಾನಿ ಹೆಚ್ಚು. ಆದ್ದರಿಂದ ನೀವೇನಾದರೂ, ತುರಿಕೆ ನೆತ್ತಿಯನ್ನು ಕಡಿಮೆ ಮಾಡಬೇಕೆಂದಿದ್ದರೆ, ತಕ್ಷಣವೇ ಅಂತಹ ಉತ್ಪನ್ನಗಳನ್ನು ಬಳಸುವುದನ್ನು ನಿಲ್ಲಿಸಿ.

ಮುಂಜಾಗ್ರತೆ ಅಗತ್ಯ:

ಮುಂಜಾಗ್ರತೆ ಅಗತ್ಯ:

ಒಣ ಮತ್ತು ತುರಿಕೆ ಕೂದಲಿನ ಕಿರಿಕಿರಿಯನ್ನು ಕಡಿಮೆ ಮಾಡಲು ಮೇಲಿನ ಸಲಹೆಗಳನ್ನು ಪ್ರಯತ್ನಿಸಿ. ಆದರೆ, ಅದನ್ನು ಗುರುತಿಸುವುದು ಮುಖ್ಯ. ನೆತ್ತಿಯ ತುರಿಕೆ ಎಲ್ಲಿಯಾದರೂ ಕಾಣಿಸಿಕೊಳ್ಳಬಹುದು, ಅಂದರೆ, ಒಂದು ಭಾಗದಲ್ಲಿ ಅಥವಾ ಇಡೀ ತಲೆಯಲ್ಲಿ. ಆದರೆ, ಸಾಮಾನ್ಯವಾಗಿ ಬಿಗಿಯಾದ ಪೋನಿಟೇಲ್ ಅನ್ನು ಬಿಚ್ಚಿದ ನಂತರ ಸಾಮಾನ್ಯವಾಗಿ ಸಂಭವಿಸುತ್ತದೆ. ಆದ್ದರಿಂದ ಯಾವುದೇ ಚಿಕ್ಕ ಸಮಸ್ಯೆಯನ್ನು ನಿರ್ಲಕ್ಷ್ಯ ಮಾಡಬೇಡಿ. ಮುಂದೆ ಇದು ನಾನಾ ಸಮಸ್ಯೆಗಳಿಗೆ ದಾರಿ ಮಾಡಿಕೊಡುತ್ತದೆ. ಸಮಸ್ಯೆ ಉಲ್ಬಣಗೊಳ್ಳುವ ಮೊದಲು ಅವುಗಳನ್ನು ಪರಿಹರಿಸುವುದು ಅತ್ಯಗತ್ಯ.

English summary

Simple Tips to Get Rid of the Itchy Scalp in Kannada

Here we talking about Simple Tips to Get Rid of the Itchy Scalp in Kannada, read on
Story first published: Monday, December 6, 2021, 13:38 [IST]
X
Desktop Bottom Promotion