For Quick Alerts
ALLOW NOTIFICATIONS  
For Daily Alerts

ಕೂದಲು ಕಸಿ ಮಾಡಿಸುವುದರ ಅಡ್ಡ ಪರಿಣಾಮಗಳೆಷ್ಟು ಗೊತ್ತಾ?

|

ಇತ್ತೀಚಿನ ದಿನಗಳಲ್ಲಿ ಕೂದಲು ಉದುರುವ ಸಮಸ್ಯೆ ಹೆಚ್ಚಾಗಿ ಕಂಡುಬರುತ್ತಿದೆ. ಅದರಲ್ಲೂ ಯುವಕರಲ್ಲಿಯೇ ಬಕ್ಕತಲೆಯ ಸಮಸ್ಯೆಯನ್ನು ಹೆಚ್ಚಾಗಿ ಕಾಣುತ್ತಿದ್ದೇವೆ. ನಮ್ಮ ಜೀವನಶೈಲಿ, ಆಹಾರ ಪದ್ಧತಿಗಳಿಂದ ಈ ಸಮಸ್ಯೆ ದ್ವಿಗುಣವಾಗುತ್ತಿದೆ. ಇದಕ್ಕೆ ಪರಿಹಾರವಾಗಿ ಕಂಡುಕೊಂಡಿದ್ದು ಕೂದಲು ಕಸಿ ಚಿಕಿತ್ಸೆ. ಸರಳವಾಗಿ ಹೇಳುವುದಾದರೆ ವ್ಯಕ್ತಿಯ ದೇಹದ ಇತರ ಭಾಗದಲ್ಲಿನ ಕೂದಲನ್ನು ತೆಗೆದು ನೆತ್ತಿಯ ಅಥವಾ ತಲೆಯ ಬೋಳು ಭಾಗಕ್ಕೆ ಸ್ಥಳಾಂತರಿಸುವ ಪ್ರಕ್ರಿಯೆಯಾಗಿದೆ. ಇತ್ತೀಚಿಗೆ ಕೂದಲು ಕಸಿ ಅಥವಾ ಹೇರ್‌ಟ್ರಾನ್ಸ್‌ಪ್ಲಾಂಟ್‌ ಮಾಡುವವರ ಸಂಖ್ಯೆ ಹೆಚ್ಚಾಗುತ್ತಿದೆ. ಆದರೆ ಅದರ ಅಡ್ಡಪರಿಣಾಮಗಳ ಕುರಿತು ಯಾರೂ ತಲೆಕೆಡಿಸಿಕೊಳ್ಳುವುದಿಲ್ಲ. ಅದೇ ತಪ್ಪು..! ನೀವು ಕೂದಲು ಕಸಿ ಮಾಡಿಸಿಕೊಳ್ಳುವುದಾದರೆ ಅದರ ಅಡ್ಡಪರಿಣಾಮಗಳ ಕುರಿತು ಮುಖ್ಯವಾಗಿ ತಿಳಿದುಕೊಳ್ಳಲೇಬೇಕು.

hair
ಕೂದಲು ಕಸಿ ಮಾಡೋದು ಹೇಗೆ.?

ಕೂದಲು ಕಸಿ ಮಾಡೋದು ಹೇಗೆ.?

ಹೇರ್‌ ಟ್ರಾನ್ಸ್‌ಪ್ಲಾಂಟ್‌ ಅಥವಾ ಕೂದಲು ಕಸಿ ಮಾಡುವಿಕೆಯ ಅಡ್ಡ ಪರಿಣಾಮಗಳ ಬಗ್ಗೆ ತಿಳಿದುಕೊಳ್ಳುವ ಮೊದಲು ಕೂದಲು ಕಸಿ ಹೇಗೆ ಮಾಡುತ್ತಾರೆ ಎನ್ನುವುದಾದರೆ ಒಂದು ವೈದ್ಯಕೀಯ ವಿಧಾನವಾಗಿದ್ದು ಅಲ್ಲಿ ಸಕ್ರಿಯ ಕೂದಲು ಕಿರುಚೀಲಗಳನ್ನು ದಪ್ಪವಾಗಿ ಕೂದಲಿರುವ ನೆತ್ತಿಯ ಒಂದು ಭಾಗದಿಂದ ಬೋಳು ಭಾಗಕ್ಕೆ ಸ್ಥಳಾಂತರಿಸಲಾಗುತ್ತದೆ. ಇದು ನೈಜ ಕೂದಲು ಕಾಣುವಂತೆಯೇ ಇರುತ್ತದೆ. ಕೂದಲು ಕಸಿ ಚಿಕಿತ್ಸೆಯು ಬೋಳು ತಲೆಯವರಿಗೆ ಮಾತ್ರವಲ್ಲ ಅಲೋಪೇಸಿಯಾ ಸಮಸ್ಯೆ ಇರುವವರಿಗೂ ಒಂದು ಪರಿಹಾರ.

ಕೂದಲು ಕಸಿಯನ್ನು ಅನುಭವಿ ಕಾಸ್ಮೆಟಿಕ್ ಶಸ್ತ್ರಚಿಕಿತ್ಸಕರು ಶಸ್ತ್ರಚಿಕಿತ್ಸಾ ವಿಧಾನದ ಮೂಲಕ ಮಾಡುತ್ತಾರೆ. ನೆತ್ತಿಯಿಂದ ಸಕ್ರಿಯ ಕೂದಲು ಕಿರುಚೀಲಗಳು ಅಥವಾ ದೇಹದ ಯಾವುದೇ ಭಾಗಗಳಲ್ಲಿರುವ ಕೂದಲಿನ ಕಿರು ಚೀಲಗಳನ್ನು ನೆತ್ತಿಯ ಬೋಳು ಪ್ರದೇಶಗಳಿಗೆ ಸ್ಥಳಾಂತರಿಸಲಾಗುತ್ತದೆ. ಸಕ್ರಿಯ ಕೂದಲು ಕಿರುಚೀಲಗಳು ಬೋಳು ಪ್ರದೇಶದಲ್ಲಿ ಅತ್ಯಂತ ನೈಸರ್ಗಿಕವಾಗಿ ಕಾಣುವ ಕೂದಲನ್ನು ಉತ್ಪಾದಿಸುತ್ತವೆ.

ಕೂದಲು ಕಸಿಯಲ್ಲಿ ಎರಡು ವಿಧದ ಕೂದಲು ಕಸಿ ವಿಧಾನಗಳಿವೆ ಒಂದು ಫೋಲಿಕ್ಯುಲರ್ ಯೂನಿಟ್ ಟ್ರಾನ್ಸ್‌ಪ್ಲಾಂಟೇಶನ್ (ಎಫ್‌ಯುಟಿ) ಮತ್ತು ಎರಡನೆಯದಾಗಿ ಫೋಲಿಕ್ಯುಲರ್ ಯೂನಿಟ್ ಎಕ್ಸ್‌ಟ್ರಾಕ್ಷನ್ (ಎಫ್‌ಯುಇ) ಫೋಲಿಕ್ಯುಲಾರ್ ಯೂನಿಟ್ ಟ್ರಾನ್ಸ್‌ಪ್ಲಾಂಟೇಶನ್ (ಎಫ್‌ಯುಟಿ) ಈ ಪ್ರಕ್ರಿಯೆಯು ತೆಗೆದ ಫೋಲಿಕ್ಯುಲಾರ್ ಘಟಕಗಳನ್ನು ಸ್ವೀಕರಿಸುವವರ ನೆತ್ತಿಯಲ್ಲಿ ಇರಿಸುವುದನ್ನು ಒಳಗೊಂಡಿರುತ್ತದೆ. ಫೋಲಿಕ್ಯುಲರ್ ಘಟಕಗಳಿಗೆ ಪಂಚ್‌ಗಳನ್ನು ಸರಿಯಾಗಿ ಇರಿಸಬೇಕಾಗಿರುವುದರಿಂದ ಇದಕ್ಕೆ ನಿಖರತೆಯ ಅಗತ್ಯವಿರುತ್ತದೆ. ಪಂಚ್‌ಗಳು ಘಟಕಗಳಿಗಿಂತ ದೊಡ್ಡದಾಗಿರಬಾರದು.

ಫೋಲಿಕ್ಯುಲರ್ ಯೂನಿಟ್ ಎಕ್ಸ್‌ಟ್ರಾಕ್ಷನ್ (ಎಫ್‌ಯುಇ) ಈ ಕೂದಲು ಕಸಿ ವಿಧಾನವು ದಾನಿಯಿಂದ ಫೋಲಿಕ್ಯುಲರ್ ಘಟಕಗಳನ್ನು ಹೊರತೆಗೆಯುವುದನ್ನು ಒಳಗೊಂಡಿರುತ್ತದೆ. ಆರೋಗ್ಯಕರ ಕೂದಲು ಬೆಳವಣಿಗೆಯ ಪ್ರದೇಶವನ್ನು ನೋಡಿ ಕೆಲವು ಫೋಲಿಕ್ಯುಲರ್ ಘಟಕಗಳನ್ನು ಅಲ್ಲಿಂದ ತೆಗೆದುಕೊಳ್ಳಲಾಗುತ್ತದೆ. ವಿಶೇಷ ಸೂಕ್ಷ್ಮ ಪಂಚ್‌ಗಳ ಸಹಾಯದಿಂದ, ಬೋಳು ಪ್ರದೇಶದಲ್ಲಿ ಈ ಘಟಕಗಳನ್ನು ಅಳವಡಿಸಲಾಗುತ್ತದೆ.

ಕೂದಲು ಕಸಿ ಮಾಡುವಿಕೆಯ ಅಡ್ಡ ಪರಿಣಾಮಗಳು

ಕೂದಲು ಕಸಿ ಮಾಡುವಿಕೆಯ ಅಡ್ಡ ಪರಿಣಾಮಗಳು

ಕೂದಲು ಉದುರುವುದು

ಅತಿಯಾದ ಕೂದಲು ಉದುರುವಿಕೆ ಕೂದಲು ಕಸಿ ಮಾಡುವಿಕೆಯ ಸಾಮಾನ್ಯ ಅಡ್ಡ ಪರಿಣಾಮವಾಗಿದೆ. ಶಸ್ತ್ರಚಿಕಿತ್ಸೆ ಮಾಡುವಾಗ ಸಣ್ಣ ರಕ್ತನಾಳಗಳಿಗೆ ಅಡ್ಡಿಯಾಗುವುದು ಮತ್ತು ಶಸ್ತ್ರಚಿಕಿತ್ಸಾ ಆಘಾತದಿಂದಾಗಿ, ಕೂದಲು ತೆಗೆದ ಸ್ಥಳದ ಕೂದಲು ತೆಳುವಾಗುವುದನ್ನು ಕಾಣಬಹುದು. ಫೋಲಿಕ್ಯುಲಾರ್ ಯೂನಿಟ್ ಟ್ರಾನ್ಸ್‌ಪ್ಲಾಂಟ್ (ಎಫ್‌ಯುಟಿ) ಗಿಂತ ಫೋಲಿಕ್ಯುಲರ್ ಯೂನಿಟ್ ಎಕ್ಸ್‌ಟ್ರಾಕ್ಷನ್‌ನಲ್ಲಿ (ಎಫ್‌ಯುಇ) ಕೂದಲು ಉದುರುವಿಕೆ ಹೆಚ್ಚಾಗಿರುತ್ತದೆ ಏಕೆಂದರೆ ಕಸಿ ದೊಡ್ಡದಾಗಿರುತ್ತದೆ.. ಇದಲ್ಲದೆ, FUE ಶಾಶ್ವತ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ, ಆದರೆ FUT ಶಸ್ತ್ರಚಿಕಿತ್ಸೆಯ ಅಲಭ್ಯತೆಯ ನಂತರ ಕೂದಲು ಉದುರುವಿಕೆಯನ್ನು ಹಿಮ್ಮುಖಗೊಳಿಸುತ್ತದೆ.

ರಕ್ತಸ್ರಾವ

ರಕ್ತಸ್ರಾವ

ನೀವು ಎಫ್‌ಯುಇ ಅಥವಾ ಎಫ್‌ಯುಟಿ ಮೂಲಕ ಕೂದಲು ಕಸಿಗೆ ಒಳಗಾದರೂ, ಕಡಿತಕ್ಕೆ ಒಳಗಾಗಬೇಕಾಗುತ್ತದೆ. ರಕ್ತಸ್ರಾವವು ಕಡಿಮೆಯಾಗಿದೆ ಎಂದು ವೈದ್ಯರು ಖಚಿತಪಡಿಸಿದರೂ, ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಯ ಸಮಯದಲ್ಲಿ ನೀವು ರಕ್ತಸ್ರಾವವನ್ನು ಅನುಭವಿಸಬಹುದು.

ಕಲೆಗಳು

ಕಲೆಗಳು

ಕೂದಲು ಕಸಿ ಮಾಡುವ ಕೆಲವು ಜನರಲ್ಲಿ ಗುರುತು ಅಥವಾ ಸ್ಟೆರೈಲ್ ಫೋಲಿಕ್ಯುಲೈಟಿಸ್ ಸಾಮಾನ್ಯವಾಗಿದೆ. ಚರ್ಮದಲ್ಲಿ ಶಸ್ತ್ರಚಿಕಿತ್ಸೆಯಾದುದರ ಗುರುತು ಮೂಡಬಹುದು. ಅಧ್ಯಯನದ ಪ್ರಕಾರ, ಕೂದಲು ಪುನಃಸ್ಥಾಪನೆ ಶಸ್ತ್ರಚಿಕಿತ್ಸೆಯ ನಂತರ 23% ರೋಗಿಗಳಲ್ಲಿ ಇದು ಕಂಡುಬರುತ್ತದೆ.

ಸೋಂಕುಗಳು

ಸೋಂಕುಗಳು

ಹೊಲಿಗೆಗಳ ಸ್ಥಳಗಳ ಬಳಿ ಸೋಂಕುಗಳು ಸಂಭವಿಸಬಹುದು. ಶಸ್ತ್ರಚಿಕಿತ್ಸೆಯ ಸಮಯದಲ್ಲಿ ಶುಚಿತ್ವವನ್ನು ಕಾಪಾಡಿಕೊಳ್ಳಬೇಕು ಇಲ್ಲವಾದರೆ ಅಶುಚಿಯಾಗಿರುವ ನೆತ್ತಿಯಿಂದಾಗಿ ಕೂದಲು ಕಸಿ ಮಾಡುವ ಜಾಗವು ಸೋಂಕಿಗೆ ಒಳಗಾಗಬಹುದು.

ನೋವು

ನೋವು

ಹೇರ್ ಟ್ರಾನ್ಸ್‌ಪ್ಲಾಂಟೇಶನ್ ಒಂದು ನೋವುಸಹಿತ ಶಸ್ತ್ರಚಿಕಿತ್ಸೆಯಾಗಿದ್ದು, ಅರಿವಳಿಕೆಯನ್ನು ಸರಿಯಾದ ಪ್ರಮಾಣದಲ್ಲಿ ನೀಡದಿದ್ದಲ್ಲಿ ಅದು ನೋವನ್ನು ಉಂಟುಮಾಡುತ್ತದೆ. ಶಸ್ತ್ರಚಿಕಿತ್ಸೆಯ ನಂತರದ ಚೇತರಿಕೆಯ ಸಮಯದಲ್ಲಿ, ನೀವು ಹಿಗ್ಗಿದಂತಹ ಸಂವೇದನೆಯನ್ನು ಸಹ ಅನುಭವಿಸಬಹುದು.

 ಉರಿಯೂತ

ಉರಿಯೂತ

ಲಿಚೆನ್‌ ಪ್ಲಾನೋಪಿಲಾರಿಸ್ (LLP) ಅಂದರೆ ಅಪರೂಪದ ಉರಿಯೂತದ ಕೂದಲಿನ ಸಮಸ್ಯೆ ಮತ್ತು ಸ್ಟೆರೈಲ್ ಫೋಲಿಕ್ಯುಲೈಟಿಸ್‌ ಸಮಸ್ಯೆ ತೀವ್ರವಾಗಬಹುದು. ಇದು ಶಾಶ್ವತ ಅಲೋಪೆಸಿಯಾಕ್ಕೆ ಕಾರಣವಾಗಬಹುದು ಮತ್ತು ಕೂದಲು ಕಿರುಚೀಲಗಳು ಗಾಯದಂತಹ ನಾರಿನ ರೂಪದ ಅಂಗಾಂಶವಾಗಿ ಬದಲಾಗಬಹುದು.

English summary

Side Effects Of Hair Transplantation in Kannada

you must know about side effects of hair transplantaion in kannada. Read more.
X
Desktop Bottom Promotion