For Quick Alerts
ALLOW NOTIFICATIONS  
For Daily Alerts

ಈ ನೈಸರ್ಗಿಕ ಡೈ ಹಚ್ಚಿದರೆ ಬಿಳಿಯಾಗುತ್ತಿರುವ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುವುದು

|

ಕಪ್ಪು-ಬಿಳಿ ಕೂದಲು ಕೆಲವರಿಗೆ ಸ್ಟೈಲಿಷ್‌ ಲುಕ್‌ ನೀಡಿದರೆ ಇನ್ನು ಕೆಲವರು ವಯಸ್ಸು ಸ್ವಲ್ಪ ಹೆಚ್ಚಿಸುತ್ತೆ, ಆಗ ಆ ಕೂದಲನ್ನು ಮರೆ ಮಾಚಬೇಕೆಂದು ಅನಿಸುವುದು. ಆದರೆ ಬಿಳಿ ಕೂದಲನ್ನು ಮರೆ ಮಾಚಲು ರಾಸಾಯನಿಕವಿರುವ ಡೈ ಬಳಸಿದರೆ ಒಂದೆರಡು ಕೂದಲು ಬೆಳ್ಳಗಾಗಿದ್ದರೆ ಸ್ವಲ್ಪ ದಿನದಲ್ಲಿ ಕೂದಲೆಲ್ಲಾ ಬೆಳ್ಳಗಾಗುವುದು.

ಕೂದಲು ಬಿಳಿಯಾದರೆ ರಾಸಾಯನಿಕಗಳನ್ನು ಬಳಸುವ ಈ ಹೋಂ ಮೇಡ್‌ ಹೇರ್ ಡೈ ಬಳಸಿ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದು ಹಾಗೂ ಕೂದಲು ಉದುರುವ ಸಮಸ್ಯೆಯೂ ಉಂಟಾಗುವುದಿಲ್ಲ.

ಮೆಹಂದಿ

ಮೆಹಂದಿ

ಹರಳೆಣ್ಣೆಗೆ ನೈಸರ್ಗಿಕವಾದ ಮೆಹಂದಿ ಹಾಕಿ ಕುದಿಸಿ, ಎಣ್ಣೆ ಮೆಹಂದಿ ಬಣ್ಣಕ್ಕೆ ತಿರುಗುವಷ್ಟು ಹೊತ್ತು ಕುದಿಸಿ, ನಂತರ ತಣ್ಣಗಾಗಲು ಬಿಡಿ, ಈಗ ಆ ಪೇಸ್ಟ್‌ ಅನ್ನು ಕೂದಲಿನ ಬುಡಕ್ಕೆ ಹಚ್ಚಿ. ನಂತರ ಮೈಲ್ಡ್ ಶ್ಯಾಂಪೂ ಹಚ್ಚಿ ತಲೆ ತೊಳೆಯಿರಿ. ಹದಿನೈದು ದಿನಕ್ಕೊಮ್ಮೆ ಈ ರೀತಿ ಮಾಡಿ.

ಕಾಫಿ

ಕಾಫಿ

ನೀವು ಕಾಫಿ ಮಾಡಲಿ ಬಳಸುವ ಕಾಫಿ ಪುಡಿಯೇ ಸಾಕು ನಿಮ್ಮ ನೆರೆತ ಕೂದಲು ಮತ್ತೆ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡಲಿ. ಒಂದು ಕಪ್‌ ನೀರಿಗೆ ಕಾಫಿ ಪುಡಿ ಹಾಕಿ ಚೆನ್ನಾಗಿ ಕುಸಿಸಿ, ಪುಡಿ ಸ್ವಲ್ಪ ಅಧಿಕ ಹಾಕಿಡಿ, ಕಾಫಿ ಕಪ್ಪು ಬಣ್ಣದಲ್ಲಿರಲಿ, ನಂತರ ಗ್ಯಾಸ್‌ ಆಫ್‌ ಮಾಡಿ ತಣ್ಣಗಾಗಲು ಬಿಡಿ. ನಂತರ ಅದನ್ನು ಸ್ಪ್ರೇ ಬಾಟಲಿಗೆ ಹಾಕಿ ಕೂದಲಿಗೆ, ಕೂದಲಿನ ಬುಡಕ್ಕೆ ಸ್ಪ್ರೇ ಮಾಡಿ, ನಂತರ ಒಂದು ಗಂಟೆಯ ಬಳಿಕ ತಲೆ ತೊಳೆಯಿರಿ. ಹೀಗೆ ಮಾಡಿದರೆ ಅಕಾಲಿಕ ನೆರೆ ಉಂಟಾಗಿದ್ದರೆ ಕಪ್ಪು ಬಣ್ಣಕ್ಕೆ ತಿರುಗುವುದು.

ಬ್ಲ್ಯಾಕ್‌ ಟೀ

ಬ್ಲ್ಯಾಕ್‌ ಟೀ

ಅಕಾಲಿಕ ನೆರೆ ತಡೆಗಟ್ಟಲು ಬ್ಲ್ಯಾಕ್‌ ಟೀ ಕೂಡ ಸಹಕಾರಿ. ಬ್ಲ್ಯಾಕ್‌ ಟೀ ಮಾಡಿ ನೀರನ್ನು ತಲೆ ಬುಡಕ್ಕೆ, ಕೂದಲಿಗೆ ಹಚ್ಚಿ ಒಂದು ಗಂಟೆ ಬಳಿಕ ತಲೆ ತೊಳೆಯಿರಿ. ಹೀಗೆ ಮಾಡುವುದರಿಂದ ಕೂದಲು ಕಪ್ಪು ಬಣ್ಣಕ್ಕೆ ತಿರುಗುವುದು. ತಲೆ ಸ್ನಾನ ಮಾಡುವಾಗೆಲ್ಲಾ ಈ ರೀತಿ ಮಾಡಿದರೆ ನೀವು ಬಯಸಿದ ಫಲಿತಾಂಶ ಸಿಗುವುದು.

ವಾಲ್ನಟ್‌ ಚಿಪ್ಪೆಗಳು

ವಾಲ್ನಟ್‌ ಚಿಪ್ಪೆಗಳು

ಇದು ನಿಮ್ಮ ಕೂದಲಿಗೆ ಬ್ರೌನ್‌ ಲುಕ್‌ ನೀಡುವುದು. ಆದರೆ ಇದನ್ನು ಬಳಸಿದಾಗ ಬಟ್ಟೆ ಕಲೆಯಾಗುವುದು. ನೀವು ವಾಲ್ನಟ್‌ ಸಿಪ್ಪೆ ಬಟ್ಟೆ ಕಲೆಯಾಗುವಂತೆ ಮಾಡುವುದು, ಆ ಸಮಯದಲ್ಲಿ ಹಳೆಯ ಬಟ್ಟೆ ಧರಿಸಿ ಇದನ್ನು ಕೂದಲಿಗೆ ಹಚ್ಚಬೇಕು.

ಮೊದಲಿಗೆ ವಾಲ್ನಟ್‌ ಸಿಪ್ಪೆಯನ್ನು ಪುಡಿ ಮಾಡಿ ನೀರಿನಲ್ಲಿ ಹಾಕಿ ಕುದಿಸಿ, ನಂತರ ಆ ನೀರು ತಣ್ಣಗಾದ ಮೇಲೆ ಸ್ವಲ್ಪ ಹತ್ತಿ ತೆಗೆದು ಅದನ್ನು ನೀರಿನಲ್ಲಿ ಅದ್ದಿ ಕೂದಲು ಹಾಗೂ ಬುಡಕ್ಕೆ ಹಚ್ಚಿ. ಒಂದು ಗಂಟೆ ಬಿಟ್ಟ ಮೇಲೆ ತಲೆ ತೊಳೆಯಿರಿ. ಹೀಗೆ ತಲೆ ಕೂದಲು ಕಂದು ಬಣ್ಣದಿಂದ ಫಳ-ಫಳ ಹೊಳೆಯುವುದು.

English summary

Natural Ingredients Can Be Used To Cover Grey Hair In Kannada

Natural Ingredients Can Be Used To Cover Grey Hair In Kannada, read on....
X
Desktop Bottom Promotion