For Quick Alerts
ALLOW NOTIFICATIONS  
For Daily Alerts

ಕೂದಲಿಗೆ ಹಾನಿ ಮಾಡದ ಈ ನೈಸರ್ಗಿಕ ಹೇರ್ ಡೈಗಳನ್ನು ಮನೆಯಲ್ಲಿಯೇ ಸುಲಭವಾಗಿ ತಯಾರಿಸಿ

|

ಕೂದಲಿಗೆ ಬಣ್ಣಹಾಕುವುದು ಅಥವಾ ಡೈ ಮಾಡುವಾಗ ಸಾಮಾನ್ಯವಾಗಿ ಮಾರುಕಟ್ಟೆಯಲ್ಲಿ ಸಿಗುವ ರಾಸಾಯನಿಕಯುಕ್ತ ಬಣ್ಣಗಳನ್ನೇ ಆಯ್ಕೆ ಮಾಡಿಕೊಳ್ಳುತ್ತಾರೆ. ಕೆಲ ಯುವಕರು ಸ್ಟೈಲ್ ಗಾಗಿ ಕೂದಲಿಗೆ ಕಲರಿಂಗ್ ಮಾಡಿಕೊಂಡರೆ, ಇನ್ನೂ ಕೆಲವರು ತಮ್ಮ ಬಿಳಿ ಕೂದಲನ್ನು ಮರೆಮಾಡಲು ಡೈ ಮಾಡುತ್ತಾರೆ. ಆದರೆ ಯಾರೂ ನೈಸರ್ಗಿಕವಾಗಿ ಕೂದಲ ಬಣ್ಣಗಳನ್ನು ತಯಾರಿಸಲು ಹೋಗುವುದಿಲ್ಲ.

ನೈಸರ್ಗಿಕ ಬಣ್ಣಗಳು ಕೂದಲಿಗೆ ಉತ್ತಮ ಫಲಿತಾಂಶ ಮಾಡುವುದಲ್ಲದೇ, ರೇಷ್ಮೆಯಂತಹ ಹಾಗೂ ನಯವಾದ ಕೂದಲನ್ನು ಪಡೆಯಲು ಸಹಾಯ ಮಾಡುತ್ತವೆ. ಹಾಗಾದರೆ ಅಂತಹ ಮನೆಯಲ್ಲಿಯೇ ತಯಾರಿಸಬಹುದಾದ ಕೆಲವೊಂದು ಡೈಗಳ ಬಗ್ಗೆ ನೋಡೋಣ.

ಮನೆಯಲ್ಲಿಯೇ ತಯಾರಿಸಬಹುದಾದ ಕೆಲವೊಂದು ಡೈಗಳು:

1. ಬೀಟ್ ಡೈ:

1. ಬೀಟ್ ಡೈ:

ಕೂದಲಿನ ಕೆನ್ನೇರಳೆ ನೋಟಕ್ಕಾಗಿ, ಬೀಟ್ರೂಟ್ ಅನ್ನು ಸಣ್ಣ ತುಂಡುಗಳಾಗಿ ಕತ್ತರಿಸಿ, 1 ಟೀಸ್ಪೂನ್ ಜೇನುತುಪ್ಪ ಮತ್ತು 1 ಚಮಚ ತೆಂಗಿನ ಎಣ್ಣೆಯನ್ನು ಒಟ್ಟಿಗೆ ಸೇರಿಸಿ, ಬೆರೆಸಿ. ನಂತರ ಒಂದು ಜರಡಿ ತೆಗೆದುಕೊಂಡು ಈ ಮಿಶ್ರಣವನ್ನು ಜಾರ್ ಗೆ ಸುರಿಯಿರಿ. ಈ ಮಿಶ್ರಣವನ್ನು ಕೂದಲಿಗೆ ಹಚ್ಚಿ 60 ನಿಮಿಷಗಳ ಕಾಲ ಬಿಟ್ಟು, ಸೌಮ್ಯವಾದ ಶಾಂಪೂ ಮತ್ತು ಕಂಡಿಷನರ್ ನಿಂದ ತೊಳೆಯಿರಿ. ಮನೆಯಲ್ಲಿಯೇ ನೇರಳೆ ಬಣ್ಣದ ಕೂದಲನ್ನು ಪಡೆಯುತ್ತೀರಿ.

ಬೀಟ್‌ರೂಟ್‌ಗಳು ನೇರಳೆ ಬಣ್ಣಕ್ಕೆ ಹೆಸರುವಾಸಿಯಾಗಿದೆ ಜೊತೆಗೆ ನಿಮ್ಮ ನೆತ್ತಿಯಲ್ಲಿ ರಕ್ತದ ಹರಿವನ್ನು ಹೆಚ್ಚಿಸುತ್ತವೆ ಮತ್ತು ಇದು ಕೂದಲನ್ನು ಆರೋಗ್ಯಕರ ಮತ್ತು ಮೃದುವಾಗುವಂತೆ ಮಾಡುತ್ತದೆ.

2. ಫುಡ್ ಕಲರ್ ಡೈ:

2. ಫುಡ್ ಕಲರ್ ಡೈ:

ಒಂದು ಕಪ್ ದಪ್ಪವಿರುವ ಕಂಡಿಷನರ್ ಮತ್ತು ನಿಮ್ಮ ಆಯ್ಕೆಯ ಯಾವುದೇ ಫುಡ್ ಕಲರ್ ನ ಕೆಲವು ಹನಿಗಳ ಜೊತೆ ಮಿಶ್ರಣ ಮಾಡಿ. ಜಾಸ್ತಿ ಫುಡ್ ಕಲರ್ ತೆಗೆದುಕೊಂಡರೆ ಹೆಚ್ಚು ಡಾರ್ಕ್ ಬಣ್ಣವನ್ನು ಪಡೆಯಬಹುದು. ನೀವು ಬಯಸಿದ ಪ್ರದೇಶಗಳಿಗೆ ಈ ಬಣ್ಣವನ್ನು ಹಚ್ಚಿ, 15-20 ನಿಮಿಷಗಳ ನಂತರ ತೊಳೆಯಿರಿ.

ಫುಡ್ ಕಲರ್ ನಿಮ್ಮ ಕೂದಲಿಗೆ ಸಂಪೂರ್ಣವಾಗಿ ಸುರಕ್ಷಿತವಾಗಿದೆ ಏಕೆಂದರೆ ಇದು ಮಾನವ ಬಳಕೆ ಮತ್ತು ರಾಸಾಯನಿಕ ಮುಕ್ತವಾಗಿರುತ್ತದೆ, ಜೊತೆಗೆ ಕಂಡಿಷನರ್ ನಿಮ್ಮ ಕೂದಲನ್ನು ಪೋಷಿಸುತ್ತದೆ ಮತ್ತು ಅವುಗಳನ್ನು ಮೃದುಗೊಳಿಸುತ್ತದೆ.

3. ಬಿಳಿ ಕೂದಲು ದೂರಮಾಡಲು ಕಾಫಿ:

3. ಬಿಳಿ ಕೂದಲು ದೂರಮಾಡಲು ಕಾಫಿ:

ಒಂದು ಕಪ್ ಕುದಿಸಿದ ಎಸ್ಪ್ರೆಸೊವನ್ನು ತೆಗೆದುಕೊಳ್ಳಿ, ಅದನ್ನು ½ ಒಂದು ಕಪ್ ಕಂಡಿಷನರ್ ನೊಂದಿಗೆ ಬೆರೆಸಿ, ನಂತರ 1 ಚಮಚ ಕಾಫಿ ಪುಡಿಯನ್ನು ಸೇರಿಸಿ, ಬೆರೆಸಿ. ಇದನ್ನು ಮಾಸ್ಕ್ ರೀತಿ ಕೂದಲಿಗೆ ಹಚ್ಚಿ, 60 ನಿಮಿಷಗಳ ಕಾಲ ನಂತರ ತೊಳೆಯಿರಿ.

ಕಾಫಿ ಕೂದಲಿಗೆ ನೈಸರ್ಗಿಕ ಟಾನಿಕ್ ಆಗಿ ಕಾರ್ಯನಿರ್ವಹಿಸುವುದಲ್ಲದೇ, ಇದು ಕೋಶಗಳ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ತಿಳಿ ಬೂದು ಕೂದಲನ್ನು ನೈಸರ್ಗಿಕವಾಗಿ ಕಪ್ಪು ಬಣ್ಣಕ್ಕೆ ತಿರುಗಿಸುವುದು.

4. ದಾಲ್ಚಿನ್ನಿ ಡೈ:

4. ದಾಲ್ಚಿನ್ನಿ ಡೈ:

ಕೆಂಪು ಮಿಶ್ರಿಣ ಕಂದು ಬಣ್ಣದ ಕೂದಲಿಗೆ, ½ ಒಂದು ಕಪ್ ದಾಲ್ಚಿನ್ನಿಯನ್ನು ½ ಒಂದು ಕಪ್ ಕಂಡಿಷನರ್ ನೊಂದಿಗೆ ಮಿಶ್ರಣ ಮಾಡಿ. ಈ ಮಿಶ್ರಣವನ್ನು ಮಾಸ್ಕ್ ರೀತಿ ಹಚ್ಚಿ, 45-60 ನಿಮಿಷಗಳ ಕಾಲ ಬಿಡಿ. ಸೌಮ್ಯವಾದ ಶಾಂಪೂ ಬಳಸಿ ಅದನ್ನು ತೊಳೆಯಿರಿ.

ದಾಲ್ಚಿನ್ನಿ ನೆತ್ತಿಯನ್ನು ತೇವಗೊಳಿಸುತ್ತದೆ. ನಿಮ್ಮ ಕೂದಲಿಗೆ ನೈಸರ್ಗಿಕ ಕೆಂಪು-ಕಂದು ಬಣ್ಣವನ್ನು ನೀಡುವುದರ ಜೊತೆಗೆ ಕೂದಲಿಗೆ ನೈಸರ್ಗಿಕ ಹೊಳಪನ್ನು ನೀಡುತ್ತದೆ.

5. ಕ್ಯಾರೆಟ್ ಜ್ಯೂಸ್ ಡೈ:

5. ಕ್ಯಾರೆಟ್ ಜ್ಯೂಸ್ ಡೈ:

ಕೆಂಪು-ಕಿತ್ತಳೆ ಶೇಡ್ ಬಣ್ಣದ ಕೂದಲಿಗೆ ಕ್ಯಾರೆಟ್ ರಸವನ್ನು 1 ಚಮಚ ತೆಂಗಿನಕಾಯಿ ಅಥವಾ ಆಲಿವ್ ಎಣ್ಣೆಯೊಂದಿಗೆ ಬೆರೆಸಿ. ಇದನ್ನು ನೀವು ಬಯಸಿದ ಭಾಗಗಳಿಗೆ ಹಚ್ಚಿ, ಪ್ಲಾಸ್ಟಿಕ್ ಶೀಟ್ ಬಳಸಿ ಅವುಗಳನ್ನು ಕಟ್ಟಿಕೊಳ್ಳಿ ಮತ್ತು ಕನಿಷ್ಠ 60 ನಿಮಿಷಗಳ ಕಾಲ ಕುಳಿತುಕೊಳ್ಳಿ. ಸುಂದರವಾದ ಕೆಂಪು-ಕಿತ್ತಳೆ ಬಣ್ಣದ ಹೊಳೆಯುವ ಕೂದಲಿಗೆ ಆಪಲ್ ಸೈಡರ್ ವಿನೆಗರ್ ಬಳಸಿ ಇದನ್ನು ತೊಳೆಯಿರಿ.

ಕ್ಯಾರೆಟ್ ನೈಸರ್ಗಿಕವಾಗಿ ವಿಟಮಿನ್ ಎ ಯಿಂದ ತುಂಬಿದ್ದು, ಕೂದಲಿನ ಬೆಳವಣಿಗೆ ಮತ್ತು ದಪ್ಪವನ್ನು ಉತ್ತೇಜಿಸುತ್ತದೆ.

English summary

Natural DIY Hair Dyes at Home in Kannada

Here we talking about Natural DIY Hair Dyes at Home in Kannada, read on
X
Desktop Bottom Promotion