For Quick Alerts
ALLOW NOTIFICATIONS  
For Daily Alerts

ಪುರುಷರೇ, ಕೂದಲು ಉದುರುವುದು ತಡೆಗಟ್ಟಲು ಮಳೆಗಾಲದಲ್ಲಿ ಕೂದಲ ಆರೈಕೆ ಹೀಗಿರಲಿ

|

ಮಳೆಗಾಲ ಎಂದರೆ ಎಲ್ಲರಿಗೂ ಇಷ್ಟ. ಹೊರಗೆ ಮಳೆ ಬರುತ್ತಿದ್ದರೆ ಬೆಚ್ಚಗೆ ಒಳಗೆ ಕುಳಿತು ಬಿಡುವ ಅನಿಸುವ ಕಾಲ. ಮಳೆಗೆ ಬಾಯಿ ಚಪ್ಪರಿಸುವ ಕಾಲವೂ ಹೌದು. ರೊಮ್ಯಾಂಟಿಕ್ ಆಸೆಗಳು ಮೂಡುವ, ಹಾಡು ಕೇಳಬೇಕು ಅನ್ನಿಸುವ ಸಮಯ ಕೂಡ ಮನ್ಸೂನ್. ಹೀಗೆ ಮಳೆಗಾಲದ ಬಗ್ಗೆ ಹೇಳಲು ಹೋದರೆ ನೂರಾರು ಕತೆಗಳಿವೆ. ಒಟ್ಟಾರೆ ಹೇಳಬೇಕೆಂದರೆ ಮಳೆ ಹಾಗೂ ಮನುಷ್ಯನ ನಡುವೆ ಅವಿನಾಭಾವ ಸಂಬಂಧವಿದೆ. ಆದರೆ ಮಳೆಗಾಲ ಕೂದಲಿಗೆ ಒಳ್ಳೆ ಕಾಲ ಅಲ್ಲ ಅನ್ನುವ ಬಗ್ಗೆ ನಿಮಗೆಷ್ಟು ಗೊತ್ತು?

ಹೌದು, ಮಳೆಗಾಲದಲ್ಲಿ ಕೂದಲು ಉದುರುವ ಸಮಸ್ಯೆ ಜಾಸ್ತಿ. ಅಲ್ಲದೇ ಮಳೆಗಾಲದಲ್ಲಿ ಕೂದಲಿಗೆ ಒಂದಲ್ಲೊಂದು ಸಮಸ್ಯೆಗಳು ಬರುತ್ತದೆ. ಪುರುಷರಿಗೂ ಮಳೆಗಾಲದಲ್ಲಿ ಕೂದಲಿನ ರಕ್ಷಣೆ ಅಗತ್ಯವಿದೆ. ಯಾಕೆಂದರೆ ಹೆಚ್ಚಿನ ಪುರುಷರು ಮಳೆಗಾಲದಲ್ಲಿ ಹೊರಗೆ ಕೆಲಸಕ್ಕೆ ಹೋಗುವುದರಿಂದ ಒಂದಲ್ಲ ಒಂದು ರೀತಿಯಲ್ಲಿ ಕೂದಲಿನ ಸಮಸ್ಯೆ ಎದುರಿಸುತ್ತಾರೆ. ಹಾಗಾದರೆ ಮಳೆಗಾಲದಲ್ಲಿ ಪುರುಷರು ಯಾವ ರೀತಿ ಕೂದಲಿನ ರಕ್ಷಣೆ ಮಾಡಬೇಕು? ಪುರುಷರ ಕೂದಲಿಗೆ ಏನು ಸಮಸ್ಯೆ ಮಳೆಗಾಲದಲ್ಲಿ ಬರುತ್ತದೆ? ಇಲ್ಲಿದೆ ಈ ಬಗ್ಗೆ ಸಂಪೂರ್ಣ ಮಾಹಿತಿ.

ಮಳೆಗೆ ಕೂದಲು ಉದುರುವುದು ಏಕೆ?

ಮಳೆಗೆ ಕೂದಲು ಉದುರುವುದು ಏಕೆ?

ಮಾನ್ಸೂನ್ ಸಮಯದಲ್ಲಿ ಕೂದಲಿನ ತೊಂದರೆಗಳು ಹೆಚ್ಚು. ಮಳೆಗಾಲದಲ್ಲಿ ಹವಾಮಾನ ಅಥವಾ ಗಾಳಿಯಲ್ಲಿ ಹೆಚ್ಚಿನ ತೇವಾಂಶ ಇರುವ ಹಿನ್ನೆಲೆ ಇದು ಕೂದಲು ಹಾಗೂ ನೆತ್ತಿಗೆ ಪ್ರತಿಕೂಲವಾಗಿ ಪರಿಣಮಿಸುತ್ತದೆ. ಹೌದು, ತೇವಾಂಶದಿಂದ ಕೂದಲು ಹಾಗೂ ನೆತ್ತಿಗೆ ಸಾಮಾನ್ಯವಾಗಿ ಸಮಸ್ಯೆ ಸಂಭವಿಸುತ್ತದೆ. ತೇವಾಂಶದಿಂದಾಗಿ ಕೂದಲು ಕರ್ಲಿ ಆಗೋದು, ಕೂದಲು ಉದುರುತ್ತದೆ. ಜೊತೆಗೆ ಸೆಬಮ್ ಎಂದು ಕರೆಯಲ್ಪಡುವ ದೇಹದ ಸೆಬಾಸಿಯಸ್ ಗ್ರಂಥಿಗಳಿಂದ ಉತ್ಪತ್ತಿಯಾಗುವ ಎಣ್ಣೆಯುಕ್ತ ವಸ್ತುವು ಮಳೆಗಾಲದಲ್ಲಿ ನೆತ್ತಿಯ ಮೇಲೆ ಬಹಳ ಸುಲಭವಾಗಿ ಸಂಗ್ರಹವಾಗುತ್ತದೆ. ಈ ಎಲ್ಲಾ ಕಾರಣಗಳಿಂದ ಮಳೆಗಾಲದಲ್ಲಿ ಕೂದಲಿನ ಉದುರುವ ಸಮಸ್ಯೆ ಜಾಸ್ತಿಯಾಗುತ್ತದೆ. ಹೀಗಾಗಿ ಮಳೆಗಾಲದಲ್ಲಿ ಕೂದಲಿನ ಆರೈಕೆ ಮುಖ್ಯ.

ನೆತ್ತಿ ತುರಿಕೆ, ತಲೆ ಹುಟ್ಟು!

ನೆತ್ತಿ ತುರಿಕೆ, ತಲೆ ಹುಟ್ಟು!

ಇನ್ನು ಮಳೆಗಾಲದಲ್ಲಿ ಕೂದಲು ಉದುರುವ ಜೊತೆಗೆ ತಲೆ ತುರಿಕೆ ಹಾಗೂ ತಲೆ ಹುಟ್ಟು ಕೂಡ ಆಗುವುದು ಸಾಮಾನ್ಯ. ಮಲಸೇಜಿಯಾ ಎಂಬ ಒಂದು ಬಗೆಯ ಶಿಲೀಂದ್ರವಾಗಿದ್ದು, ಇದು ಸಾಮಾನ್ಯವಾಗಿ ಎಲ್ಲರ ಬುರುಡೆ ಮೇಲೆ ಇರುತ್ತದೆ. ಆದರೆ ಮಳೆಗಾಲದಲ್ಲಿ ಇದರ ಸಂತಾನೋತ್ಪತ್ತಿ ಜಾಸ್ತಿಯಾಗುತ್ತದೆ. ಇದರಿಂದ ತಲೆಹೊಟ್ಟು ಸಂಭವಿಸುತ್ತದೆ. ಈ ಸಮಯದಲ್ಲಿ ಇದು ನೆತ್ತಿಯ ತುರಿಕೆಯನ್ನು ಉಂಟುಮಾಡುತ್ತದೆ.ನೆತ್ತಿಯ ತುರಿಕೆ ಉಂಟಾದರೆ ಸಾಮಾನ್ಯವಾಗಿ ಇದು ತಲೆಹೊಟ್ಟನ್ನು ಉಂಟುಮಾಡುತ್ತದೆ. ತಲೆಹೊಟ್ಟು ಉಂಟಾದರೆ ಇದು ಸಾಮಾನ್ಯವಾಗಿ ಕೂದಲು ಉದುರುವಿಕೆಗೆ ಕಾರಣವಾಗುತ್ತದೆ. ಮಳೆಗಾಲದಲ್ಲಿ ತಲೆಹೊಟ್ಟು ಉಲ್ಬಣಗೊಳ್ಳುವುದು ಸಾಮಾನ್ಯ.

ಕೂದಲು ಉದುರುವುದನ್ನು ತಡೆಯಲು ಪುರುಷರು ಏನು ಮಾಡಬೇಕು?

ಕೂದಲು ಉದುರುವುದನ್ನು ತಡೆಯಲು ಪುರುಷರು ಏನು ಮಾಡಬೇಕು?

ಮಹಿಳೆಯರಂತೆ ಪುರುಷರಿಗೂ ಮಳೆಗಾಲದಲ್ಲಿ ಕೂದಲು ಉದುರುವುದು ಸಾಮಾನ್ಯ. ಮಳೆಯಲ್ಲಿ ನೆಂದರೆ ಕೂದಲಿನ ಸಮಸ್ಯೆಯೂ ಪುರುಷರಿಗೆ ಹೆಚ್ಚಾಗುತ್ತದೆ. ರೋಗಗಳು ಕೂದಲಿಗೂ ಅಂಟಿ ಕೂದಲು ಉದುರುತ್ತದೆ. ಹಾಗಾದರೆ ಕೂದಲು ಉದುರದಂತೆ ಪುರುಷರು ಏನು ಮಾಡಬೇಕು? ಕೂದಲಿನ ಆರೈಕೆ ಪುರುಷರು ಹೇಗೆ ಮಾಡಬೇಕು? ಇಲ್ಲಿದೆ ಈ ಬಗ್ಗೆ ಮಾಹಿತಿ.

ಕೂದಲಿಗೆ ಎಣ್ಣೆ ಹಚ್ಚುವುದು!

ಕೂದಲಿಗೆ ಎಣ್ಣೆ ಹಚ್ಚುವುದು!

ಮಳೆಗಾಲದಲ್ಲಿ ಪುರುಷರ ಕೂದಲು ಉದುರಲು ಕಾರಣ ಏನೆಂದು ತಿಳಿದುಕೊಂಡೆವು. ಇದೀಗ ಇದಕ್ಕೆ ಮನೆ ಮದ್ದು ಏನು ಎನ್ನುವುದನ್ನು ನೋಡೊದಾದ್ರೆ. ಕೂದಲಿನ ನಿತ್ಯ ಎಣ್ಣೆ ಹಚ್ಚುವುದು ಉತ್ತಮ ಎನ್ನುತ್ತಾರೆ ತಜ್ಞರು. ಹೌದು, ಹೇರ್ ಆಯಿಲ್‌ಗಳು ಕೂದಲನ್ನು ಬಲಪಡಿಸುವ ಮತ್ತು ಪೋಷಿಸುವ ಅಂಶಗಳನ್ನು ಒಳಗೊಂಡಿರುವುದರಿಂದ ಕೂದಲು ಉದುರುವುದನ್ನು ತಡೆಯಲು ಇದೊಂದು ಉತ್ತಮ ಮದ್ದು. ಅದರ ಜೊತೆಗೆ ಮಳೆಗಾಲದಲ್ಲಿ ನೆತ್ತಿ ಹಾಗೂ ಕೂದಲಿನಲ್ಲಿ ಉಂಟಾಗುವ ಸೋಂಕುಗಳ ವಿರುದ್ಧ ಹೋರಾಡಲು ಎಣ್ಣೆ ಸಹಾಯ ಮಾಡುತ್ತದೆ. ಎಣ್ಣೆ ಹಚ್ಚುವುದರಿಂದ ಕೂದಲಿನೊಳಗೆ ರಕ್ತ ಪರಿಚಲನೆ ಹೆಚ್ಚಾಗುತ್ತದೆ. ಅಲ್ಲದೇ ಸುಕ್ಕುಗಟ್ಟಿದ ಕೂದಲನ್ನು ಸಾಫ್ಟ್ ಮಾಡಲು ವಾರಕ್ಕೆ ಎರಡು ಬಾರಿಯಾದರೂ ಕುದಿಸಿದ ಎಣ್ಣೆಯನ್ನು ತಲೆಗೆ ಹಾಕಿ ಮಸಾಜ್ ಮಾಡಿದರೆ ಒಳ್ಳೆಯದು. ಈ ರೀತಿಯ ಕೂದಲಿನ ಆರೈಕೆಯಿಂದ ಕೂದಲು ಉದುರುವುದಿಲ್ಲ ಜೊತೆಗೆ ತೇವಾಂಶ ಸಮಸ್ಯೆಯಿಂದ ಕೂದಲಿಗೆ ರಕ್ಷಣೆ ಸಿಗುತ್ತದೆ.

ಮಳೆಯಿಂದ ಒದ್ದೆಯಾಗಿದ್ದರೆ ಕೂದಲು ವಾಶ್ ಮಾಡಿ!

ಮಳೆಯಿಂದ ಒದ್ದೆಯಾಗಿದ್ದರೆ ಕೂದಲು ವಾಶ್ ಮಾಡಿ!

ಮಹಿಳೆಯರಿಗಿಂತ ಜಾಸ್ತಿ ಮಳೆಯಲ್ಲಿ ಒದ್ದೆಯಾಗುವುದು ಪುರುಷರು. ಕೆಲಸ, ಆಟ ಅಂತ ಸಾಮಾನ್ಯವಾಗಿ ಪುರುಷರು ಒದ್ದೆಯಾಗುತ್ತಿರುತ್ತಾರೆ. ಆದರೆ ನಿಮಗೆ ನೆನಪಿರಲಿ ಅತೀ ಒದ್ದೆಯಿಂದ ಕೂದಲು ಉದುರುತ್ತದೆ. ಕೂದಲಿಗೆ ಸಮಸ್ಯೆಗಳು ಬರುತ್ತದೆ. ಹೌದು, ಮಳೆ ನೀರು ನಮ್ಮ ತಲೆಗೆ ತಾಕುವುದರಿಂದ ಸೆಬಮ್ ಎಂದು ಕರೆಯಲ್ಪಡುವ ದೇಹದ ಸೆಬಾಸಿಯಸ್ ಗ್ರಂಥಿಗಳಿಂದ ಹೆಚ್ಚಿನ ಪ್ರಮಾಣದಲ್ಲಿ ಎಣೆಯುಕ್ತ ವಸ್ತು ಉಂಟಾಗುತ್ತದೆ. ಅಲ್ಲದೇ ತಲೆ ಬುರುಡೆಗೆ ನೀರು ತಾಕುವುದರಿಂದ ತಲೆಯಲ್ಲಾಗುವ ಅಸಮತೋಲನದಿಂದ ಹುಟ್ಟು ಉಂಟಾಗುತ್ತದೆ. ಇದ್ರು ನೇರವಾಗಿ ಕೂದಲು ಉದುರಲು ಕಾರಣವಾಗುತ್ತದೆ. ಹೀಗಾಗಿ ಮಳೆ ನೀರು ಬಿದ್ದರೆ ತಕ್ಷಣ ತಲೆಯನ್ನು ಉಚ್ಚುವುದು ಬಿಟ್ಟು ತಲೆಯನ್ನು ಉತ್ತಮ ನೀರಿನಿಂದ ತೊಳೆಯಬೇಕು. ಕೂದಲು ಅಥವಾ ತಲೆ ತೊಳೆಯಲು ಸಾವಯವ ಶ್ಯಾಂಪೂ, ಕಂಡೀಷನರ್ ಬಳಸಿದರೆ ಅತ್ಯುತ್ತಮ.

ನಿಮ್ಮ ಕೂದಲನ್ನು ಆದಷ್ಟೂ ಡ್ರೈ ಆಗಿರುವಂತೆ ಇರಿಸಿ!

ನಿಮ್ಮ ಕೂದಲನ್ನು ಆದಷ್ಟೂ ಡ್ರೈ ಆಗಿರುವಂತೆ ಇರಿಸಿ!

ಮಳೆಗಾಲದಲ್ಲಿ ಗಾಳಿಯಲ್ಲಿ ಆರ್ದ್ರತೆ ಹೆಚ್ಚಿರುವ ಕಾರಣ ಕೂದಲು ಆದಷ್ಟೂ ಒಣಗಿರುವುದು ಅವಶ್ಯ. ಸ್ನಾನದ ಬಳಿಕವೇ ಆಗಲಿ, ಮಳೆಯಲ್ಲಿ ನೆನೆದು ಬಂದ ಬಳಿಕವೇ ಆಗಲಿ, ಮೊದಲಾಗಿ ಕೂದಲನ್ನು ಒರೆಸಿಕೊಂಡು ಒಣಗಿಸಿಕೊಳ್ಳುವುದು ಮೊದಲ ಆದ್ಯತೆಯಾಗಬೇಕು. ಒಂದು ವೇಳೆ ತಲೆಗೂದಲು ಹೆಚ್ಚು ಕಾಲ ಒದ್ದೆಯಾಗಿದ್ದರೆ ಕೂದಲ ಬುಡ ಹಾಗೂ ನೆತ್ತಿಯ ಚರ್ಮದಲ್ಲಿ ಹಲವಾರು ತೊಂದರೆಗಳು ಕಾಣಿಸಿಕೊಳ್ಳಬಹುದು. ಹಾಗಾಗಿ, ಈ ಋತುಮಾನದಲ್ಲಿ ಕೂದಲನ್ನು ಗರಿಷ್ಟ ಮಟ್ಟಿಗೆ ಒಣಗಿಯೇ ಇರುವಂತೆ ನೋಡಿಕೊಳ್ಳಿ.ಕೂದಲು ಒದ್ದೆಯಾದಾಗ ದುರ್ಬಲವಾಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳುವುದು ಒಳ್ಳೆಯದು. ಒದ್ದೆಯಾಗಿದ್ದರೆ ಕೂದಲು ಕಟ್ಟಲು ಹೋಗಬೇಡಿ. ಅದನ್ನು ಡ್ರೈ ಮಾಡಿ ಹಾಗೇ ಬಿಟ್ಟು ಬಿಡಿ.

ಚೆನ್ನಾಗಿ ಕೂದಲನ್ನು ಬಾಚಬೇಕು!

ಚೆನ್ನಾಗಿ ಕೂದಲನ್ನು ಬಾಚಬೇಕು!

ಮಳೆಗಾಲದಲ್ಲಿ ಕೂದಲನ್ನು ಸರಿಯಾಗಿ ಬಾಚುವ ಮೂಲಕ ಕೇರ್ ಮಾಡಬೇಕು. ಈ ರೀತಿಯ ಆದ್ಯತೆ ನೀಡಿದರೆ ನಿಮ್ಮ ಕೂದಲು ಉದುರದೆ ಉತ್ತಮವಾಗಿರುತ್ತದೆ. ಇನ್ನು ಕೂದಲು ಬಾಚಲು ಚಿಕ್ಕ ಹಲ್ಲುಗಳಿರುವ ಬಾಚಣಿಗೆಯನ್ನು ಬಳಸಬೇಡಿ, ಯಾಕೆಂದರೆ ಚಿಕ್ಕ ಹಲ್ಲುಗಳಿರುವ ಬಾಚಣಿಕೆ ಕೂದಲಿಗೆ ಹೆಚ್ಚಿನ ಹಾನಿಯುಂಟು ಮಾಡುತ್ತದೆ. ಗಾಳಿಯಲ್ಲಿರುವ ತೇವಾಂಶದಿಂದ ಕೂದಲಿನ ಗಟ್ಟಿತನ ಹೋಗಿರುತ್ತದೆ ಹೀಗಾಗಿ ಸಣ್ಣ ಹಲ್ಲಿರುವ ಬಾಚಣಿಕೆ ಬಳಸಿದರೆ ಕೂದಲು ಸುಲಭವಾಗಿ ಕಿತ್ತು ಬರುತ್ತದೆ. ಹೀಗಾಗಿ ದೊಡ್ಡ ಹಲ್ಲಿನ ಚಾಚಣಿಕೆ ಬಳಸಿ ಚೆನ್ನಾಗಿ ಕೂದಲನ್ನು ಬಾಚಿ ಆರೈಕೆ ಮಾಡುತ್ತಿರಬೇಕು. ಇನ್ನೊಂದು ಮುಖ್ಯ ವಿಚಾರ ಎಂದರೆ ನಿಮ್ಮ ಕೂದಲು ಒದ್ದೆಯಾಗಿದ್ದರೆ ಕೂದಲು ಬಾಚಲು ಹೋಗಬೇಡಿ. ಈ ರೀತಿ ಮಾಡುವುದರಿಂದ ಕೂದಲು ಉದುರುತ್ತದೆ.

ಕೂದಲಿಗೆ ಚಿಕಿತ್ಸೆ!

ಮಳೆಗಾಲದಲ್ಲಿ ಕೂದಲು ಬಲ ಕಳೆದುಕೊಳ್ಳುವುದು ಜಾಸ್ತಿ ಇದರಿಂದ ಕೂದಲು ಉದುರುತ್ತದೆ. ಹೀಗಾಗಿ ಕೂದಲು ಉದುರುವಿಕೆ ತಪ್ಪಿಸಲು ಹಾಗೂ ಕೂದಲಿನ ಹೊಳಪು, ಮೃದುತ್ವವನ್ನು ಸುಧಾರಿಸಲು ವಾರಕ್ಕೊಮ್ಮೆ ಡೀಪ್ ಕಂಡಿಷನರ್ ಬಳಕೆ ಮಾಡಬೇಕು. ಕಂಡೀಷನರ್ ಹಾಕಿ 15 ನಿಮಿಷಗಳ ಕಾಲ ಬೆಚ್ಚಗಿನ ಟವೆಲ್ ನಲ್ಲಿ ಕೂದಲನ್ನು ಕಟ್ಟಿ ಆರೈಕೆ ಮಾಡಬಹುದು. ಇನ್ನು ಸ್ಪಾಗಳಲ್ಲಿರುವ ಚಿಕಿತ್ಸೆ ಮೂಲಕ ಕೂದಲನ್ನು ಬೇರುಗಳಿಂದ ಬಲಪಡಿಸಲು ಮತ್ತು ಕೂದಲಿನ ಉದ್ದವನ್ನು ರಕ್ಷಿಸಿಕೊಳ್ಳಬಹುದು. ಮಳೆ ಹಾಗೂ ಚಳಿಯಿಂದ ಕೂದಲನ್ನು ರಕ್ಷಿಸಿಕೊಳ್ಳಲು ಬೇಕಾದ ಚಿಕಿತ್ಸೆಗಳನ್ನು ಹೇರ್ ಸ್ಪೆಷಲಿಸ್ಟ್ ಗಳಿಂದ ಮಾಡಿಸಿಕೊಳ್ಳಬಹುದು.

ಪೌಷ್ಟಿಕ ಆಹಾರವನ್ನು ಸೇವಿಸುವುದು!

ಕೂದಲು ಉದುರುವಿಕೆಗೆ ಕೇವಲ ತಲೆಗೆ ಮಾತ್ರವಲ್ಲ ಹೊಟ್ಟೆಯನ್ನು ತಣಿಸಬೇಕು. ಕೂದಲು ಉದುರದಂತೆ ನೋಡಿಕೊಳ್ಳಲು ಪೌಷ್ಟಿಕ ಆಹಾರವನ್ನು ನಿಯಮಿತವಾಗಿ ಸೇವಿಸಬೇಕು. ನಾವು ಸೇವಿಸುವ ಆಹಾರವು ನಮ್ಮ ಕೂದಲಿನ ಗುಣಮಟ್ಟದ ಮೇಲೆ ನೇರ ಪರಿಣಾಮ ಬೀರುತ್ತದೆ. ಸಮತೋಲಿತ ಆಹಾರವು ನಿಮ್ಮ ಕೂದಲನ್ನು ವರ್ಷಪೂರ್ತಿ ಆರೋಗ್ಯಕರವಾಗಿ ಮತ್ತು ಹೊಳೆಯುವಂತೆ ಮಾಡುತ್ತದೆ. ಮಾನ್ಸೂನ್ ತಿಂಗಳುಗಳಲ್ಲಿ ನೀವು ಬಿಸಿ, ಎಣ್ಣೆಯುಕ್ತ ಮತ್ತು ಗರಿಗರಿಯಾದ ಆಹಾರಗಳನ್ನು ಹಂಬಲಿಸಬಹುದು, ಆದರೆ ಇದು ನಿಮ್ಮ ಕೂದಲು ಮತ್ತು ನೆತ್ತಿಯ ಸಮಸ್ಯೆಗಳನ್ನು ಮಾತ್ರ ತೀವ್ರಗೊಳಿಸುತ್ತದೆ. . ಆದ್ದರಿಂದ, ಜಂಕ್‌ಗಳಿಂದ ದೂರವಿರುವುದು ಮತ್ತು ಬದಲಿಗೆ ತಾಜಾ ಮತ್ತು ಆರೋಗ್ಯಕರ ಆಹಾರವನ್ನು ಆಯ್ಕೆ ಮಾಡುವುದು ಒಳ್ಳೆಯದು. ನಿಮ್ಮ ನಿಯಮಿತ ಆಹಾರದಲ್ಲಿ ಕೂದಲಿಗೆ ಸಂಬಂಧಪಟ್ಟ ಪ್ರೋಟೀನ್ ಮತ್ತು ವಿಟಮಿನ್ ಭರಿತ ಆಹಾರಗಳನ್ನು ಸೇರಿಸಿ. ಉತ್ತಮ ಆಹಾರಗಳೆಂದರೆ ಬೆರ್ರಿ ಹಣ್ಣುಗಳು, ಬೀಜಗಳು, ಪಾಲಕ್ ಮತ್ತು ಸಿಹಿ ಆಲೂಗಡ್ಡೆ ಸೇವಿಸಿದರೆ ಒಳ್ಳೆಯದು. ಈ ರೀತಿಯ ವಿಧಾನಗಳನ್ನು ಪುರುಷರು ಅಳವಡಿಸಿಕೊಂಡರೆ ತಮ್ಮ ಕೂದಲು ಉದುರುವುದಿಲ್ಲ. ಮಳೆಗಾಲದಲ್ಲಿ ಈ ರೀತಿಯ ಆರೈಕೆ ತಪ್ಪದೇ ಮಾಡಿ.

English summary

Monsoon Hair Care Tips For Men in Kannada

Monsoon Hair Care Tips For Men in Kannada, Read on....
Story first published: Monday, June 27, 2022, 8:36 [IST]
X
Desktop Bottom Promotion