For Quick Alerts
ALLOW NOTIFICATIONS  
For Daily Alerts

ದಟ್ಟ ಕೇಶರಾಶಿ ಪಡೆಯಲು, ಶಾಂಪೂ ಖರೀದಿಸುವಾಗ ಈ ತಪ್ಪುಗಳನ್ನು ಮಾಡಲೇಬೇಡಿ

|

ರೇಷ್ಮೆಯಂತಹ ಕೂದಲು ಬೇಕೆನ್ನುವುದು ಪ್ರತಿಯೊಬ್ಬರ ಆಸೆಯಾಗಿದೆ. ಆದರೆ ಆಧುನಿಕ ಜೀವನ ಶೈಲಿ, ಅನಾರೋಗ್ಯಕರ ಆಹಾರ ಜೊತೆಗೆ ನಾವು ಕೂದಲಿನ ಆರೈಕೆಯಲ್ಲಿ ಮಾಡುವ ಕೆಲವೊಂದು ತಪ್ಪುಗಳು ನಮ್ಮ ಕೂದಲನ್ನು ರಫ್ ಮಾಡುವುದಲ್ಲದೇ, ಉದುರುವಿಕೆಗೂ ಕಾರಣವಾಗುತ್ತದೆ. ಅದರಲ್ಲಿ ಒಂದು ಕೂದಲನ್ನು ಸ್ವಚ್ಛಗೊಳಿಸಲು ಬಳಸುವ ಶಾಂಪೂವಿನ ಆಯ್ಕೆಯಲ್ಲಿ ಮಾಡುವ ತಪ್ಪುಗಳು.

ಸ್ಯಾಶ್ ಪ್ರಾಡಕ್ಟ್ಸ್ ನಡೆಸಿದ ಸಮೀಕ್ಷೆಯ ಪ್ರಕಾರ, ಕೂದಲು ಉತ್ಪನ್ನಗಳನ್ನು ಆಯ್ಕೆಮಾಡುವಾಗ 10,000 ಕ್ಕೂ ಹೆಚ್ಚು ಜನರು ತಪ್ಪುಗಳನ್ನು ಮಾಡಿದ್ದಾರೆ ಎಂದು ತಿಳಿದು ಬಂದಿದೆ. ಈ ಸಮೀಕ್ಷೆಯ ಪ್ರಕಾರ, ಶಾಂಪೂ ಖರೀದಿಸುವಾಗ ನಾವು ಮಾಡುವ ಕೆಲವು ತಪ್ಪುಗಳನ್ನು ಈ ಕೆಳಗೆ ವಿವರಿಸಲಾಗಿದೆ.

ಶಾಂಪೂವಿನ ವಿಚಾರದಲ್ಲಿ ಮಾಡುವ ಸಾಮಾನ್ಯ ತಪ್ಪುಗಳನ್ನು ಈ ಕೆಳಗೆ ನೀಡಲಾಗಿದೆ:

ಅಯಾನಿಕ್ ಸಲ್ಫೇಟ್ಗಳನ್ನು ಹೊಂದಿರುವ ಶಾಂಪೂ ಬಳಕೆ:

ಅಯಾನಿಕ್ ಸಲ್ಫೇಟ್ಗಳನ್ನು ಹೊಂದಿರುವ ಶಾಂಪೂ ಬಳಕೆ:

ಅಯಾನಿಕ್ ಸಲ್ಫೇಟ್ಗಳನ್ನು ಹೊಂದಿರುವ ಶ್ಯಾಂಪೂಗಳು ಅಂದರೆ, ಸೋಡಿಯಂ ಲಾರಿಲ್ ಸಲ್ಫೇಟ್ (ಎಸ್ಎಲ್ಎಸ್), ಅಮೋನಿಯಂ ಲಾರಿಲ್ ಸಲ್ಫೇಟ್ (ಎಎಲ್ಎಸ್) ಇರುವ ಶಾಂಪೂ ಬಳಕೆಯಿಂದ ಕೂದಲಿನ ಮೇಲೆ ನಕಾರಾತ್ಮಕ ಪರಿಣಾಮ ಬೀರುವುದು. ಇದೊಂದು ಕ್ಲೆನ್ಸರ್ ಆಗಿದ್ದು, ಕೂದಲಿನ ಹೊರಪದರ ಸವೆಯುವಂತೆ ಮಾಡುವುದು. ಇದರಿಂದ ಕೂದಲು ಒಣಗಿ, ಉದುರಲು, ಸೀಳಾಗಲು ಆರಂಭವಾಗುವುದು. ಆದ್ದರಿಂದ ಇನ್ನುಮುಂದೆ ಶಾಂಪೂ ಖರೀದಿಸುವಾಗ ಈ ಎರಡು ರಾಸಾಯನಿಕಗಳು ಇಲ್ಲದ ಶಾಂಪೂ ಖರೀದಿಸಿ ಅಥವಾ ಕಡಿಮೆ ಪ್ರಮಾಣದಲ್ಲಿರುವ ಶಾಂಪೂವನ್ನು ನೋಡಿ ಖರೀದಿಸಿ.

ಅನೇಕ ಪದಾರ್ಥಗಳಿರುವ ಗಿಡಮೂಲಿಕೆಗಳ ಶ್ಯಾಂಪೂ ಬಳಕೆ:

ಅನೇಕ ಪದಾರ್ಥಗಳಿರುವ ಗಿಡಮೂಲಿಕೆಗಳ ಶ್ಯಾಂಪೂ ಬಳಕೆ:

ಸಾವಯವ ಮತ್ತು ಗಿಡಮೂಲಿಕೆ ಪದಾರ್ಥಗಳು ನೆತ್ತಿಯ pH ಅನ್ನು ಅಸಮತೋಲನಗೊಳಿಸುವಲ್ಲಿ ಪ್ರಮುಖ ಪಾತ್ರವಹಿಸುತ್ತವೆ. ನೆತ್ತಿಯ pH 4.5-5.5 ವ್ಯಾಪ್ತಿಯಲ್ಲಿರಬೇಕು. ಆಗ ಯಾವುದೇ ಕೂದಲಿನ ಸಮಸ್ಯೆಗಳು ಉಂಟಾಗುವುದಿಲ್ಲ. ಗಿಡಮೂಲಿಕೆಗಳಿಂದ ತಯಾರಾದ ಶಾಂಪೂವಿನಲ್ಲಿ ಹಲವಾರು ಪದಾರ್ಥಗಳನ್ನು ಬಳಸಿರುವುದರಿಂದ ಈ ಮಟ್ಟ ಅಸತೋಲನವಾಗುವುದು. ಆದ್ದರಿಂದ ಶಾಂಪೂ ಖರೀದಿಸುವಾಗ ಹೆಚ್ಚು ಪದಾರ್ಥಗಳನ್ನು ಬಳಕೆ ಮಾಡಿ, ತಯಾರಿಸಿರುವ ಶಾಂಪೂವಿನ ಬಳಿ ಹೋಗಬೇಡಿ.

ಮಿನರಲ್ ಇರುವ ಶಾಂಪೂ ಬಳಕೆ:

ಮಿನರಲ್ ಇರುವ ಶಾಂಪೂ ಬಳಕೆ:

ಮಿನರಲ್ ಹೊಂದಿರುವ ಶ್ಯಾಂಪೂಗಳ ಬಳಕೆ ಖಂಡಿತವಾಗಿಯೂ ನಿಮ್ಮ ಕೂದಲಿಗೆ ಸಮಸ್ಯೆಯಾಗಿದೆ. ಇವುಗಳು ಕೂದಲಿನಿಂದ ಜಿಡ್ಡನ್ನು ತೆಗೆಯುವ ವಿಧಾನವಾಗಿದ್ದರೂ, ಕೂದಲಿನ ಹೊರಪೊರೆ ಸವೆದುಹೋಗಲು ಇದು ಒಂದು ಪ್ರಮುಖ ಕಾರಣವಾಗಿದೆ. ಇದು ಕೂದಲು ಸರಿಯಾದ ಪೌಷ್ಟಿಕಾಂಶ ಹೀರಿಕೊಳ್ಳಲು ಅಡ್ಡಿ ಮಾಡುತ್ತದೆ. ಆದ್ದರಿಂದ ಈ ಅಂಶವಿರುವ ಶಾಂಪೂವನ್ನು ಆದಷ್ಟು ಕಡಿಮೆ ಮಾಡಿ.

ಕೂದಲಿನ ಪ್ರಕಾರವನ್ನು ಆಧರಿಸಿ ಶಾಂಪೂ ಆಯ್ಕೆ ಆರಿಸದೇ ಇರುವುದು:

ಕೂದಲಿನ ಪ್ರಕಾರವನ್ನು ಆಧರಿಸಿ ಶಾಂಪೂ ಆಯ್ಕೆ ಆರಿಸದೇ ಇರುವುದು:

ಶ್ಯಾಂಪೂಗಳು ವಿವಿಧ ಅಂಶಗಳನ್ನು ಒಳಗೊಂಡಿದ್ದು, ನಿರ್ದಿಷ್ಟ ಕೂದಲಿನ ಪ್ರಕಾರಗಳಿಗೆ ಹೊಂದಿಕೆಯಾಗದೇ ಇರಬಹುದು. ಮೊದಲು ಶಾಂಪೂವಿನಲ್ಲಿರುವ ಗ್ಲಿಸರಿನ್, ಎಣ್ಣೆ, ಸಿಲಿಕೋನ್ ಮತ್ತು ಕೆರಾಟಿನ್ ಅಂಶವನ್ನು ಪರಿಶೀಲಿಸಿ. ಈ ಅಂಶಗಳು ಗುಂಗುರು ಕೂದಲಿಗೆ ಹೆಚ್ಚಿರಬೇಕು, ನೇರ ಕೂದಲಿಗೆ ಸಾಮಾನ್ಯವಾಗಿರಬೇಕು. ಈ ಅಂಶಗಳು ಹೆಚ್ಚು-ಕಡಿಮೆ ಆದರೆ ನಿಮ್ಮ ಕೂದಲು ಜಿಗುಟಾಗುತ್ತದೆ, ಉದುರುವಿಕೆ, ತಲೆಹೊಟ್ಟಿನಂತಹ ಸಮಸ್ಯೆಗೆ ದಾರಿ ಮಾಡಿಕೊಡುತ್ತದೆ.

ಮೃದುವಾಗಿ ತೊಳೆಯದೇ ಇರುವುದು:

ಮೃದುವಾಗಿ ತೊಳೆಯದೇ ಇರುವುದು:

ಶಾಂಪೂ ಹಚ್ಚುವಾಗ ಹೆಚ್ಚಿನವರು ಮಾಡುವ ಸಾಮಾನ್ಯ ತಪ್ಪು ಎಂದರೆ ಮೃದುವಾಗಿ ತೊಳೆಯದೇ ಇರುವುದು. ಆ ಕೂದಲನ್ನು ಕೊಳಕು ಬಟ್ಟೆಗಿಂತ ಕೆಟ್ಟದಾಗಿ ಉಜ್ಜುವುದು. ಇದು ಸರಿಯಲ್ಲ, ಈ ರೀತಿ ಕೂದಲನ್ನು ತಿಕ್ಕುವುದರಿಂದ ಹಾನಿಯಾಗುವುದು ಏಕೆಂದರೆ ಕೂದಲು ಬಹಳ ಸೂಕ್ಷ್ಮ, ಅದರ ಸ್ವಚ್ಛತೆಯೂ ಹಾಗೇಯೇ ಇರಬೇಕು. ಜೊತೆಗೆ ಕೂದಲು ಒದ್ದೆಯಾದಾಗ 5 ಪಟ್ಟು ಹೆಚ್ಚು ದುರ್ಬಲವಾಗಿರುತ್ತದೆ. ಆದ್ದರಿಂದ ಶಾಂಪೂ ಮಾಡುವಾಗ ಎಚ್ಚರಿಕೆಯಿಂದಿರಿ.

English summary

Mistakes to Avoid While Selecting Shampoo in Kannada

Here we talking about Hair Care: Mistakes to avoid while selecting shampoo in kannada, read on
Story first published: Wednesday, August 11, 2021, 12:08 [IST]
X
Desktop Bottom Promotion