For Quick Alerts
ALLOW NOTIFICATIONS  
For Daily Alerts

ಆರೋಗ್ಯಕರ ಕೇಶರಾಶಿ ಬೇಕೇ? ಹಾಗಾದ್ರೆ ಈ ಆಹಾರಗಳನ್ನು ಸೇವಿಸಿ..

|

ಆರೋಗ್ಯಕರ ಕೂದಲನ್ನು ಪಡೆಯಬೇಕೆಂದು ಸಾಕಷ್ಟು ದುಬಾರಿ ಉತ್ಪನ್ನಗಳನ್ನು ಬಳಕೆ ಮಾಡಿ, ಬಹುಮುಖ್ಯವಾದುದನ್ನೇ ಮರೆತು ಬಿಡುತ್ತೇವೆ. ಹೌದು, ಉದ್ದ ಹಾಗೂ ದಟ್ಟವಾಸ ಕೂದಲಿಗೆ ವಿವಿಧ ಉತ್ಪನ್ನಗಳ ಜೊತೆಗೆ ನಾವು ಸೇವಿಸುವ ಆಹಾರವು ಮುಖ್ಯ ಪಾತ್ರ ವಹಿಸುತ್ತದೆ. ಪೋಷಕಾಂಶಯುಕ್ತ ಆಹಾರಗಳ ನಮ್ಮ ದೇಹ ಸೇರಿ, ಅದು ಕೂದಲನ್ನು ತಲುಪುತ್ತದೆ ಎಂಬುದನ್ನು ಮರೆಯಬಾರದು.

ಆರೋಗ್ಯಕರ ಕೂದಲಿಗೆ ಆಹಾರವನ್ನು ನಿರ್ಧರಿಸುವ ಮೊದಲು, ಕೂದಲು ಬೆಳವಣಿಗೆಗೆ ಯಾವ ವಿಟಮಿನ್ ಮತ್ತು ಪೋಷಕಾಂಶಗಳು ಬೇಕಾಗುತ್ತವೆ ಎಂಬುದನ್ನು ತಿಳಿದುಕೊಳ್ಳುವುದು ಮುಖ್ಯವಾಗಿದೆ. ವಿಟಮಿನ್ ಡಿ, ಸಿ, ಇ, ಬಯೋಟಿನ್ ಮತ್ತು ಸತುವು ಅಧಿಕವಾಗಿರುವ ಆಹಾರವನ್ನು ಸೇವಿಸುವುದರಿಂದ ನಿಮ್ಮ ಕೂದಲು ಆರೋಗ್ಯವಾಗಿರುತ್ತದೆ.

ಆರೋಗ್ಯಕರ ಕೂದಲಿಗಾಗಿ ಸೇವಿಸಬೇಕಾದ ಆಹಾರಗಳ ಬಗ್ಗೆ ಈ ಕೆಳಗೆ ನೀಡಲಾಗಿದೆ:

ಆರೋಗ್ಯಕರ ಕೂದಲಿಗೆ ಆವಕಾಡೊ:

ಆರೋಗ್ಯಕರ ಕೂದಲಿಗೆ ಆವಕಾಡೊ:

ಆವಕಾಡೊಗಳು ಪೋಷಣೆ ಮತ್ತು ಆರೋಗ್ಯಕರ ಕೊಬ್ಬುಗಳಿಗೆ ಉತ್ತಮ ಮೂಲವಾಗಿದೆ. ನಮ್ಮ ದೇಹವು ಒಮೆಗಾ -3 ಕೊಬ್ಬಿನಾಮ್ಲಗಳನ್ನು ಸ್ವಂತವಾಗಿ ಉತ್ಪಾದಿಸಲು ಸಾಧ್ಯವಿಲ್ಲ, ಆದ್ದರಿಂದ ಈ ಕೊಬ್ಬನ್ನು ನಮ್ಮ ಆಹಾರದ ಮೂಲಕ ಪಡೆಯುವುದು ಮುಖ್ಯ. ಒಮೆಗಾ -3 ಕೊಬ್ಬಿನಾಮ್ಲಗಳು ನಿಮ್ಮ ಕೂದಲು ಎಳೆಗಳನ್ನು ಬಲವಾಗುವಂತೆ ಮಾಡುತ್ತವೆ ಜೊತೆಗೆ ಕೂದಲಿಗೆ ಹೊಳಪು ನೀಡಲು ಕೂದಲಿನ ಕಿರುಚೀಲಗಳನ್ನು ಪೋಷಿಸುತ್ತದೆ. ಅಷ್ಟೇ ಅಲ್ಲ, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ವಿಟಮಿನ್ ಇ ಯ ಉತ್ತಮ ಮೂಲವಾಗಿದೆ. ಒಂದು ಅವಕಾಡೋ ನಿಮ್ಮ ದೈನಂದಿನವಾಗಿ ಅಗತ್ಯವಿರುವ ವಿಟಮಿನ್ ಇಯಲ್ಲಿ ಸುಮಾರು 21% ಅನ್ನು ಒದಗಿಸುತ್ತದೆ. ವಿಟಮಿನ್ ಇ ನೆತ್ತಿಯನ್ನು ರಕ್ಷಿಸಿ, ಕೂದಲು ಉದುರುವುದನ್ನು ತಡೆಯಲು ಸಹಾಯವಾಗುತ್ತದೆ.

ಕೂದಲು ಉದುರುವಿಕೆ ನಿಯಂತ್ರಿಸಲು ಬೆರ್ರಿ ಹಣ್ಣುಗಳು:

ಕೂದಲು ಉದುರುವಿಕೆ ನಿಯಂತ್ರಿಸಲು ಬೆರ್ರಿ ಹಣ್ಣುಗಳು:

ಬೆರ್ರಿ ಹಣ್ಣುಗಳು ಕೂದಲು ಬೆಳವಣಿಗೆಗೆ ಉತ್ತಮ ಪೂರಕವಾಗಿದೆ. ಇವು ವಿಟಮಿನ್ ಸಿ ಯಂತಹ ಉತ್ಕರ್ಷಣ ನಿರೋಧಕ ಗುಣಗಳನ್ನು ಹೊಂದಿರುವುದರಿಂದ ಕೂದಲು ಕಿರುಚೀಲಗಳಿಗೆ ರಕ್ತವನ್ನು ಪೂರೈಸಲು ಸಹಾಯ ಮಾಡುತ್ತದೆ. ಜೊತೆಗೆ ಫ್ರೀ ರಾಡಿಕಲ್ ಎಂಬ ಹಾನಿಕಾರಕ ಅಣುಗಳಿಂದ ಕೂದಲು ಕಿರುಚೀಲಗಳನ್ನು ರಕ್ಷಿಸುವಲ್ಲಿ ಸಹಾಯ ಮಾಡುತ್ತದೆ. ಇದಲ್ಲದೆ, ವಿಟಮಿನ್ ಸಿ ನಮ್ಮ ಕೂದಲನ್ನು ಬಲಪಡಿಸುವ ಪ್ರೋಟೀನ್ ವಿಧವಾದ ಕಾಲಜನ್ ಉತ್ಪಾದನೆಗೆ ಸಹಾಯ ಮಾಡುತ್ತದೆ . ಬೆರಿ ಹಣ್ಣುಗಳು ವಿಶೇಷವಾಗಿ ಹಿರಿಯರ ಸಂಧಿವಾತ, ಅಲ್ಪಾವಧಿಯ ನೆನಪಿನ ಶಕ್ತಿ, ​​ಕರುಳಿನ ಚಲನೆಗಳಿಗೆ ಸಹಾಯ ಮಾಡುತ್ತವೆ. ವಿಟಮಿನ್ ಸಿ ದೇಹವು ನಮ್ಮ ಆಹಾರದಿಂದ ಕಬ್ಬಿಣವನ್ನು ಹೀರಿಕೊಳ್ಳಲು ಸಹಾಯ ಮಾಡುತ್ತದೆ. ಕಡಿಮೆ ಕಬ್ಬಿಣದ ಮಟ್ಟವು ರಕ್ತಹೀನತೆಗೆ ಕಾರಣವಾಗಬಹುದು, ಇದು ಕೂದಲು ಉದುರುವಿಕೆಗೆ ಸಂಬಂಧ ಹೊಂದಿದೆ.

ಬಲವಾದ ಕೂದಲಿಗೆ ಮೊಟ್ಟೆ:

ಬಲವಾದ ಕೂದಲಿಗೆ ಮೊಟ್ಟೆ:

ಮೊಟ್ಟೆಗಳು ತ್ವರಿತ ಕೂದಲು ಬೆಳವಣಿಗೆಗೆ ಸಹಾಯ ಮಾಡುವ ಎರಡು ಪ್ರಮುಖ ಪೋಷಕಾಂಶಗಳಾದ ಬಯೋಟಿನ್ ಮತ್ತು ಪ್ರೋಟೀನ್ ಸಮೃದ್ಧವಾಗಿವೆ. ಕೂದಲ ಕಿರುಚೀಲಗಳು ಪ್ರೋಟೀನ್‌ಗಳಿಂದ ಮಾಡಲ್ಪಟ್ಟಿರುವುದರಿಂದ, ಅವುಗಳನ್ನು ನಿಮ್ಮ ಆಹಾರದಲ್ಲಿ ಸೇರಿಸುವುದು ಮುಖ್ಯ ಜೊತೆಗೆ ಕೆರಾಟಿನ್ ಎಂಬ ಕೂದಲಿನ ಪ್ರೋಟೀನ್ ಉತ್ಪಾದಿಸಲು ಬಯೋಟಿನ್ ಅಗತ್ಯವಿದೆ. ಅದಕ್ಕಾಗಿಯೇ, ಬಯೋಟಿನ್ ಕೂದಲು ಬೆಳವಣಿಗೆಯ ಪೂರಕಗಳು ಮತ್ತು ಶ್ಯಾಂಪೂಗಳ ಪ್ರಮುಖ ಅಂಶವಾಗಿದೆ. ಮೊಟ್ಟೆಗಳು ಸತು, ಸೆಲೆನಿಯಮ್ ಮತ್ತು ಇತರ ಕೂದಲಿನ ಆರೋಗ್ಯ ಪೋಷಕಾಂಶಗಳ ಉತ್ತಮ ಮೂಲವಾಗಿದ್ದು, ಆರೋಗ್ಯಕರ ಕಪ್ಪು ಕೂದಲಿಗೆ ಅತ್ಯುತ್ತಮ ಆಹಾರ. ಇವು ನಿಮ್ಮ ಕೂದಲಿಗೆ ಪ್ರಯೋಜನವನ್ನು ನೀಡುವುದಲ್ಲದೆ ಮೂಳೆಗಳು ಮತ್ತು ಸ್ನಾಯುಗಳನ್ನು ಬಲಪಡಿಸುತ್ತದೆ.

ಕೂದಲ ಹೊಳಪಿಗಾಗಿ ಪಾಲಕ್ ಸೊಪ್ಪು:

ಕೂದಲ ಹೊಳಪಿಗಾಗಿ ಪಾಲಕ್ ಸೊಪ್ಪು:

ಸಸ್ಯಹಾರಿಗಳಿಗೆ ಪಾಲಕ್ ಆರೋಗ್ಯಕರ ಕೂದಲಿಗೆ ಅತ್ಯುತ್ತಮ ಆಹಾರ ಆಯ್ಕೆಯಾಗಿದೆ. ಕಬ್ಬಿಣ, ಮೆಗ್ನೀಸಿಯಮ್, ವಿಟಮಿನ್ ಎ ಮತ್ತು ಸಿ ಯಂತಹ ಪೋಷಕಾಂಶಗಳು ಅಧಿಕವಾಗಿದ್ದು, ಕೂದಲನ್ನು ಹೊಳೆಯುವಂತೆ ಮಾಡುತ್ತದೆ. ಒಂದು ಕಪ್ ಪಾಲಕ್ ನಿಮ್ಮ ದೈನಂದಿನ ಅವಶ್ಯಕವಾಗಿರುವ ವಿಟಮಿನ್ ಎ ಯಲ್ಲಿ 54% ಒದಗಿಸುತ್ತದೆ. ಇದು ಮೇದೋಗ್ರಂಥಿಗಳನ್ನು ಉತ್ಪಾದಿಸುವುದಲ್ಲದೇ, ಪಾಲಕ್ ಕಬ್ಬಿಣ ಇರುವ ಅತ್ಯುತ್ತಮ ಆಹಾರವಾಗಿದೆ. ಇದು ಕೆಂಪು ರಕ್ತ ಕಣಗಳ ಮೂಲಕ ದೇಹದಾದ್ಯಂತ ಆಮ್ಲಜನಕವನ್ನು ಸಾಗಿಸಲು ಸಹಾಯ ಮಾಡುತ್ತದೆ.

ಆರೋಗ್ಯಕರ ಕೂದಲಿಗೆ ಸಮುದ್ರಾಹಾರ:

ಆರೋಗ್ಯಕರ ಕೂದಲಿಗೆ ಸಮುದ್ರಾಹಾರ:

ಸಾಲ್ಮನ್, ಮ್ಯಾಕೆರೆಲ್ ಮತ್ತು ಹೆರಿಂಗ್ ನಂತಹ ಮೀನು, ಸೀಗಡಿಗಳು ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುವ ಪೋಷಕಾಂಶಗಳನ್ನು ಹೊಂದಿವೆ. ಸಮುದ್ರಾಹಾರ ಕೂಡ ಸತುವಿನ ಉತ್ತಮ ಮೂಲವಾಗಿದ್ದು, ಕೂದಲಿನ ಬೆಳವಣಿಗೆ ಮತ್ತು ಪುನರ್ ಸ್ಥಾಪನೆಯನ್ನು ಬೆಂಬಲಿಸುವ ಖನಿಜವಾಗಿದೆ. ಆಹಾರದಲ್ಲಿ ಸತುವಿನ ಕೊರತೆಯು ಟೆಲೋಜೆನ್ ಎಫ್ಲುವಿಯಂ ಗೆ ಕಾರಣವಾಗುತ್ತದೆ. ಇದು ಆಹಾರದಲ್ಲಿನ ಪೋಷಕಾಂಶಗಳ ಕೊರತೆಯಿಂದ ಉಂಟಾಗುವ ಕೂದಲು ಉದುರುವಿಕೆಯ ಸಾಮಾನ್ಯ ಸಮಸ್ಯೆಯಾಗಿದೆ. ಇದಕ್ಕಿಂತ ಹೆಚ್ಚಾಗಿ, ಸಮುದ್ರಾಹಾರವು ವಿಟಮಿನ್ ಡಿ 3, ಪ್ರೋಟೀನ್, ಸೆಲೆನಿಯಮ್ ಮತ್ತು ಬಿ ವಿಟಮಿನ್ ಗಳ ಅತ್ಯುತ್ತಮ ಮೂಲವಾಗಿದ್ದು, ಬಲವಾದ ಮತ್ತು ಆರೋಗ್ಯಕರ ಕೂದಲನ್ನು ಉತ್ತೇಜಿಸುವುದರ ಜೊತೆಗೆ ಕೂದಲಿನ ದಟ್ಟತೆಯನ್ನು ಹೆಚ್ಚಿಸುತ್ತದೆ.

ಕೂದಲಿನ ಸಾಂದ್ರತೆಗಾಗಿ ಬೀಜಗಳು:

ಕೂದಲಿನ ಸಾಂದ್ರತೆಗಾಗಿ ಬೀಜಗಳು:

ಬೀಜಧಾನ್ಯಗಳು ಟೇಸ್ಟಿ ಮಾತ್ರವಲ್ಲದೆ ಸಾಕಷ್ಟು ಅನುಕೂಲಕರವಾಗಿದ್ದು, ಆರೋಗ್ಯಕರ ಕೂದಲು ಬೆಳವಣಿಗೆಯನ್ನು ಉತ್ತೇಜಿಸುವ ಪೋಷಕಾಂಶಗಳ ಮಿಶ್ರಣದಿಂದ ತುಂಬಿರುತ್ತವೆ. ಅವುಗಳಲ್ಲಿ ಅಗತ್ಯವಾದ ಕೊಬ್ಬಿನಾಮ್ಲಗಳು, ವಿಟಮಿನ್ ಇ, ವಿಟಮಿನ್ ಬಿ ಮತ್ತು ಸತುವಿನಂತಹ ಪೋಷಕಾಂಶಗಳಿದ್ದು, ದಪ್ಪ ಕೂದಲಿಗೆ ಪೋಷಕಾಂಶಗಳನ್ನು ನೀಡುತ್ತದೆ. ಬೀಜಗಳು ಕಡಿಮೆ ಕ್ಯಾಲೋರಿಗಳನ್ನು ಹೊಂದಿರುವುದರಿಂದ ಆರೋಗ್ಯಕರ ಕೂದಲಿನ ಪ್ರಯೋಜನಗಳನ್ನು ಸೇರಿಸುವ ಮೂಲಕ ಅವುಗಳನ್ನು ನಿಮ್ಮ ಆಹಾರಕ್ರಮಕ್ಕೆ ಸೂಕ್ತವಾಗಿಸುತ್ತದೆ. ಉತ್ತಮ ಪ್ರಯೋಜನಗಳನ್ನು ಪಡೆಯಲು ಮುಂಜಾನೆ ಬೀಜಗಳನ್ನು ಸೇವಿಸಬೇಕು. ಬೀಜಗಳು ಉರಿಯೂತವನ್ನು ಕಡಿಮೆ ಮಾಡುವುದು ಮತ್ತು ಮಧುಮೇಹದಿಂದಾಗಿ ತೂಕ-ಸಂಬಂಧಿತ ಸಮಸ್ಯೆಗಳನ್ನು ನಿಯಂತ್ರಿಸುತ್ತವೆ.

ಕೂದಲು ಬೆಳವಣಿಗೆಗೆ ದೊಣ್ಣೆಮೆಣಸು:

ಕೂದಲು ಬೆಳವಣಿಗೆಗೆ ದೊಣ್ಣೆಮೆಣಸು:

ದೊಣ್ಣೆ ಮೆಣಸು ವಿಟಮಿನ್ ಸಿ ಯ ಅತ್ಯುತ್ತಮ ಮೂಲವಾಗಿದ್ದು, ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ. ಜೊತೆಗೆ ವಿಟಮಿನ್ C ಸಮೃದ್ಧವಾಗಿದ್ದು, ಕಿತ್ತಳೆಗಿಂತ ಮೂರು ಪಟ್ಟು ಹೆಚ್ಚಾಗಿರುತ್ತದೆ. ಈ ವಿಟಮಿನ್ ಸಿ ಕಾಲಜನ್ ಉತ್ಪಾದನೆಯನ್ನು ಉತ್ತೇಜಿಸಿ, ಕೂದಲಿನ ಎಳೆಗಳನ್ನು ಬಲಪಡಿಸಲು ಸಹಾಯ ಮಾಡುತ್ತದೆ. ಇದಕ್ಕಿಂತ ಹೆಚ್ಚಾಗಿ, ದೊಣ್ಣೆ ಮೆಣಸು ಕೂಡ ವಿಟಮಿನ್ ಎ ಯ ಉತ್ತಮ ಮೂಲವಾಗಿದ್ದು, ಕೂದಲು ಬೆಳವಣಿಗೆಯನ್ನು ವೇಗಗೊಳಿಸಲು ಸಹಾಯ ಮಾಡುತ್ತದೆ. ಜೊತೆಗೆ ಮೇದೋಗ್ರಂಥಿಗಳ ಉತ್ಪಾದನೆಯನ್ನು ಉತ್ತೇಜಿಸಿ, ಕೂದಲನ್ನು ಆರೋಗ್ಯವಾಗಿಡಲು ಸಹಾಯ ಮಾಡುತ್ತದೆ.

FAQ's
  • ಪ್ರ. ವಾರಕ್ಕೆ ಎಷ್ಟು ಸಲ ಕೂದಲನ್ನು ತೊಳೆಯಬೇಕು?

    ಎ. ಇದು ಕೂದಲಿನ ಮೇಲೆ ಅವಲಂಬಿತವಾಗಿರುತ್ತದೆ, ಜಿಡ್ಡಿನ ನೆತ್ತಿಯನ್ನು ಹೊಂದಿದ್ದರೆ, ಎರಡು ದಿನಕ್ಕೊಮ್ಮೆ ತೊಳೆಯಬೇಕು. ಇಲ್ಲವಾದಲ್ಲಿ ವಾರಕ್ಕೊಮ್ಮೆ ತೊಳೆಯಬಹುದು .

  • ಪ್ರ. ನಿಮ್ಮ ಕೂದಲನ್ನು ವೇಗವಾಗಿ ಬೆಳೆಯುವಂತೆ ಮಾಡುವುದು ಹೇಗೆ?

    ಎ. ಮೊದಲು ಸಂಪೂರ್ಣವಾದ ಕೂದಲ ರಕ್ಷಣೆಯ ದಿನಚರಿಯನ್ನು ಅನುಸರಿಸಬೇಕು, ಇದರಲ್ಲಿ ಆರೋಗ್ಯಕರ ಆಹಾರ, ನಿಯಮಿತ ಟ್ರಿಮ್ಮಿಂಗ್, ವಾರಕ್ಕೊಮ್ಮೆ ಎಣ್ಣೆ ಅಥವಾ ಹೇರ್ ಮಾಸ್ಕ್ ಗಳನ್ನು ಹಾಕಬೇಕು.

  • ಪ್ರ. ನೆತ್ತಿ ಏಕೆ ಆಗಾಗ್ಗೆ ಜಿಡ್ಡಾಗುತ್ತದೆ?

    ಎ ಕೆಲವೊಮ್ಮೆ ಕೂದಲು ನೆತ್ತಿ ಸ್ರವಿಸುವ ತೈಲಗಳು ಇತರರಿಗಿಂತ ಹೆಚ್ಚಾಗಿರುತ್ತದೆ. ಇದು ಎಣ್ಣೆಯುಕ್ತ ಕೂದಲು ಆರೈಕೆ ಉತ್ಪನ್ನಗಳನ್ನು ಬಳಸುವುದರ ಪರಿಣಾಮವಾಗಿರಬಹುದು.

English summary

List of Foods For Healthy Hair in Kannada

Here we talking about List of Foods For Healthy Hair in Kannada, read on
Story first published: Saturday, August 14, 2021, 17:16 [IST]
X
Desktop Bottom Promotion