For Quick Alerts
ALLOW NOTIFICATIONS  
For Daily Alerts

ಕಹಿಬೇವನನ್ನು ಈ ರೀತಿ ಬಳಸಿದರೆ, ನಿಮ್ಮ ತಲೆಹೊಟ್ಟು ಸಮಸ್ಯೆ ಮಾಯಾವಾಗುವುದು!

|

ಗಂಡು-ಹೆಣ್ಣು ಎಂಬ ಭೇದಭಾವವಿಲ್ಲದೇ ಎಲ್ಲರನ್ನೂ ಕಾಡುವ ಸಮಸ್ಯೆ ಎಂದರೆ ಅದು ತಲೆಹೊಟ್ಟು. ಇದರ ನಿವಾರಣೆಗಾಗಿ ಹೆಚ್ಚಿನವರು ಮಾರುಕಟ್ಟೆಯಲ್ಲಿ ದೊರಯುವ ಎಲ್ಲಾ ಉತ್ಪನ್ನಗಳನ್ನು ಬಳಸುತ್ತಾರೆ. ಆದರೆ ಅದರಿಂದ ಯಾವುದೇ ಪ್ರಯೋಜನ ಸಿಗದೇ ಒದ್ದಾಡುತ್ತಿರುತ್ತಾರೆ. ಈ ಸಮಸ್ಯೆಗೆ ಕಹಿಬೇವು ಉತ್ತಮ ಪರಿಹಾರವಾಗಿದೆ ಎಂಬುದು ನಿಮಗೆ ತಿಳಿದಿದೆಯೇ?
ಕಹಿಬೇವು ಆಯುರ್ವೇದದ ಒಂದು ಪ್ರಮುಖ ಭಾಗವಾಗಿದ್ದು, ಪ್ರಾಚೀನ ಕಾಲದಿಂದಲೂ ಬಳಸಲಾಗುತ್ತಿದೆ. ತಲೆಹೊಟ್ಟು ನಿವಾರಣೆಗಾಗಿ ಈ ಕಹಿಬೇವನ್ನು ಹೇಗೆ ಬಳಸಬೇಕು ಎಂಬುದರ ಮಾಹಿತಿ ನಿಮಗಾಗಿ.

dandruff
ತಲೆಹೊಟ್ಟಿಗೆ ಕಹಿಬೇವೇ ಯಾಕೆ?:

ತಲೆಹೊಟ್ಟಿಗೆ ಕಹಿಬೇವೇ ಯಾಕೆ?:

ತಲೆ ಹೊಟ್ಟಿನ ಸಮಸ್ಯೆ ಇರುವವರಿಗೆ ಕೂದಲು ಉದುರುವಿಕೆ ಮುಂಬರುವ ದಿನಗಳಲ್ಲಿ ಹೆಚ್ಚಾಗುತ್ತದೆ ಎಂದು ಹೇಳುತ್ತಾರೆ. ತಲೆ ಹೊಟ್ಟು ಉಂಟಾಗಲು ನೆತ್ತಿಯ ಭಾಗದ ಚರ್ಮ ಒಣಗುವಿಕೆ ಮುಖ್ಯ ಕಾರಣ ಎನ್ನಲಾಗುತ್ತದೆ. ಇದರ ಜೊತೆಗೆ ಬೆಳವಣಿಗೆ ಆಗುವ ಫಂಗಸ್ ಕೂಡ ವಿಪರೀತವಾದ ತಲೆ ಹೊಟ್ಟಿಗೆ ಕಾರಣವಾಗುತ್ತದೆ. ಬೇವಿನ ಸೊಪ್ಪಿನಲ್ಲಿ ಆಂಟಿ - ಫಂಗಲ್, ಆಂಟಿ - ಇಂಪ್ಲಾಮೇಟರಿ ಮತ್ತು ಆಂಟಿ - ಆಕ್ಸಿಡೆಂಟ್ ಗುಣ ಲಕ್ಷಣಗಳು ಹೇರಳವಾಗಿದ್ದು, ನೆತ್ತಿಯ ಚರ್ಮದ ಮೇಲೆ ಉಂಟಾಗುವ ಫಂಗಲ್ ಸೋಂಕುಗಳನ್ನು ನಿವಾರಣೆ ಮಾಡಿ ಕೂದಲಿನ ಬೇರುಗಳಿಗೆ ಯಾವುದೇ ಅಡ್ಡ ಪರಿಣಾಮಗಳು ಉಂಟಾಗದಂತೆ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸುತ್ತದೆ.

ಬೇವಿನ ನೀರು:

ಬೇವಿನ ನೀರು:

ಈ ಬೇವಿನ ನೀರನ್ನು ಬಳಸುವುದರಿಂದ ತಲೆಹೊಟ್ಟುನಿಂದ ಉಂಟಾಗುವ ತುರಿಕೆ ಮತ್ತು ಅಸ್ವಸ್ಥತೆ ಕಡಿಮೆಯಾಗುತ್ತದೆ. ಇದಕ್ಕಾಗಿ ಒಂದು ಲೀಟರ್ ನೀರು ಕುದಿಸಿ, ಅದಕ್ಕೆ 35-40 ಬೇವಿನ ಎಲೆಗಳನ್ನು ಹಾಕಿ ರಾತ್ರಿಯಿಡೀ ಬಿಡಿ. ಬೆಳಿಗ್ಗೆ ಈ ನೀರಿನಿಂದ ನಿಮ್ಮ ಕೂದಲನ್ನು ತೊಳೆಯಿರಿ. ತಲೆಹೊಟ್ಟು ಸಮಸ್ಯೆಯನ್ನು ಸಂಪೂರ್ಣವಾಗಿ ತೆಗದುಹಾಕಲು ಇದನ್ನು ವಾರದಲ್ಲಿ ಎರಡು ಅಥವಾ ಮೂರು ಬಾರಿ ಬಳಸಿ.

ಬೇವಿನ ಹೇರ್ ಮಾಸ್ಕ್:

ಬೇವಿನ ಹೇರ್ ಮಾಸ್ಕ್:

ಈ ಹೇರ್ ಮಾಸ್ಕ್ ನ್ನು ಮಾಡಿಕೊಂಡರೆ ನಿಮ್ಮ ತಲೆಹೊಟ್ಟು ಸಮಸ್ಯೆ ನಿವಾರಣೆಯಾಗುವುದು. ಇದಕ್ಕಾಗಿ ನೀರನ್ನು ಕುದಿಸಿ, ಅದಕ್ಕೆ ಕಹಿಬೇವಿನ ಎಲೆಗಳನ್ನು ಹಾಕಿ, ರಾತ್ರಿಯಿಡೀ ಬಿಡಿ. ಬೆಳಗ್ಗೆ ಈ ನೀರಿನಿಂದ ಎಲೆಗಳನ್ನು ತೆಗೆದು, ಪೇಸ್ಟ್ ತಯಾರಿಸಿ. ಈ ಪೇಸ್ಟ್ಗೆ ಜೇನುತುಪ್ಪವನ್ನು ಸೇರಿಸಿ. ಈ ಮಿಶ್ರಣವನ್ನು ಕೂದಲಿನ ಬೇರುಗಳು ಮತ್ತು ಕೂದಲಿಗೆ ಹಚ್ಚಿ. ಇದನ್ನು 25-30 ನಿಮಿಷ ಬಿಟ್ಟು ನಂತರ ತೊಳೆಯಿರಿ. ಉಳಿದ ಬೇವಿನ ನೀರಿಂದ ಮತ್ತೆ ತಲೆಗೂದಲು ತೊಳೆದುಕೊಳ್ಳಬಹುದು. ವಾರಕ್ಕೊಮ್ಮೆ ಇದನ್ನು ಮಾಡುವುದರಿಂದ ಯಾವುದೇ ಸಮಯದಲ್ಲಿ ತಲೆಹೊಟ್ಟು ಕಡಿಮೆಯಾಗುತ್ತದೆ.

ಬೇವು ಮತ್ತು ತೆಂಗಿನ ಎಣ್ಣೆ:

ಬೇವು ಮತ್ತು ತೆಂಗಿನ ಎಣ್ಣೆ:

ಕಹಿಬೇವು ಮತ್ತು ತೆಂಗಿನೆಣ್ಣೆ ಎರಡೂ ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಹೊಟ್ಟು ನಿವಾರಣೆಗಾಗಿ ನಿವು ½ ಕಪ್ ತೆಂಗಿನ ಎಣ್ಣೆಯನ್ನು ಬಿಸಿ ಮಾಡಿ ನಂತರ ಬೇವಿನ ಎಲೆಗಳನ್ನು ಸೇರಿಸಿ. 10-15 ನಿಮಿಷಗಳ ಕಾಲ ಕುದಿಸಿದ ಆಫ್ ಮಾಡಿ. ಎಣ್ಣೆ ತಣ್ಣಗಾದ ನಂತರ ಹರಳೆಣ್ಣೆ ಮತ್ತು ನಿಂಬೆ ರಸವನ್ನು ಸೇರಿಸಿ. ಈ ಮಿಶ್ರಣವನ್ನು ಬಾಟಲಿಯಲ್ಲಿ ಸಂಗ್ರಹಿಸಿಡಿ. ವಾರಕ್ಕೆ 2 ಬಾರಿಯಾದರೂ ಇದನ್ನು ಹಚ್ಚಿ. ನೀವು ಅದನ್ನು ತೊಳೆಯುವ ಮೊದಲು ಒಂದು ಗಂಟೆ ಕಾಲ ಬಿಡಿ.

English summary

How to use Neem for Dandruff Problem in Kannada

Here we talking about How to use Neem for Dandruff Problem in Kannada, read on
Story first published: Monday, July 19, 2021, 11:00 [IST]
X
Desktop Bottom Promotion