For Quick Alerts
ALLOW NOTIFICATIONS  
For Daily Alerts

ನಿಮ್ಮ ಹೇರ್‌ ಕಲರ್‌ ಡಲ್‌ ಆಗಿ ಕಾಣಿಸ್ತಿದ್ಯಾ..? ಮನೆಯಲ್ಲೇ ಈ ಟಿಪ್ಸ್‌ ಟ್ರೈ ಮಾಡಿ ನೋಡಿ..

|

ಹೇರ್‌ ಕಲರಿಂಗ್‌ ಕೂದಲಿನ ಹೊಳಪನ್ನು ಹೆಚ್ಚಿಸುವುದಲ್ಲದೇ ಗುಂಪಿನಲ್ಲಿ ನಿಮ್ಮನ್ನು ಎದ್ದು ಕಾಣುವಂತೆ ಮಾಡುತ್ತೆ. ಹಸಿರು, ನೀಲಿ, ಕೆಂಪು ಹೀಗೆ ನಾನಾ ರೀತಿಯ ಹೇರ್ ಕಲರ್ಸ್‌ ಕೂದಲಿನ ಸೌಂದರ್ಯವನ್ನು ಹೆಚ್ಚಿಸುತ್ತದೆ. ಇಷ್ಟಪಟ್ಟು ಹೇರ್‌ ಕಲರ್ಸ್‌ ಹಾಕಿಸಿಕೊಂಡು ತಿಂಗಳು ಕಳೆಯುವಷ್ಟರಲ್ಲಿ ಶೈನ್‌ ಆಗಬೇಕಿದ್ದ ಕೂದಲು, ಬಣ್ಣ ಮಸುಕಾಗಿ ಕಳೆಯಿಲ್ಲದಂತೆ ಕಂಡರೆ, ಅಯ್ಯೋ ಸುಮ್ಮನೇ ದುಡ್ಡು ಖರ್ಚು ಮಾಡಿದೆನಾ ಅನಿಸಿಬಿಡುತ್ತದೆ. ನಿಮ್ಮ ಕೂದಲಿನ ಬಣ್ಣವನ್ನು ದೀರ್ಘಕಾಲದವರಗೆ ರಿಫ್ರೆಶ್‌ ಆಗಿ ನಿರ್ವಹಿಸಬೇಕೆಂದರೆ ಈ ಟಿಪ್ಸ್‌ಗಳನ್ನು ತಪ್ಪದೇ ಫಾಲೋ ಮಾಡಿ.

123

ಹೇರ್‌ ಕಲರ್‌ ಎಷ್ಟು ಕಾಲ ಉಳಿಯುತ್ತೆ..?

ಹೇರ್‌ ಕಲರ್‌ ಎಷ್ಟು ಕಾಲ ಉಳಿಯುತ್ತೆ..?

ಸಾಮಾನ್ಯವಾಗಿ ಹೇರ್‌ಕಲರ್‌ ಎಷ್ಟು ಸಮಯ ಇರುತ್ತೆ ಎನ್ನುವ ಪ್ರಶ್ನೆ ನಿಮ್ಮದಾದರೆ, ಅದು ನೀವು ಬಳಸಿದ ಬಣ್ಣ ಮತ್ತು ನಿಮ್ಮ ಕೂದಲನ್ನು ಅವಲಂಬಿಸಿರುತ್ತದೆ. ನೀವು ಸೆಮಿ ಪರ್ಮನೆಂಟ್‌ ಹೇರ್‌ ಕಲರ್‌ ಬಳಸಿದರೆ ಸುಮಾರು ಒಂದೂವರೆ ತಿಂಗಳವರೆಗೆ ಇರಬಹುದು. ಆದರೆ ಕೂದಲು ಸೀಳಬಿಟ್ಟರೆ ಅಥವಾ ಹಾನಿಗೊಳಗಾದರೆ ಕಡಿಮೆ ಸಮಯದವರೆಗೂ ಇರುತ್ತದೆ. ನೀವು ಪರ್ಮನೆಂಟ್‌ ಹೇರ್‌ ಕಲರ್‌ ಬಳಸಿದರೆ ಸುಮಾರು ಆರು ತಿಂಗಳವರೆಗೂ ಇರುತ್ತದೆ.

ನಿಮ್ಮ ಕೂದಲಿನ ವಿನ್ಯಾಸ ಮತ್ತು ಕೂದಲಿನ ನೈಸರ್ಗಿಕ ಬಣ್ಣ ಹೇರ್‌ಕಲರ್‌ ಎಷ್ಟು ಸಮಯದವರೆಗೆ ಇರುತ್ತದೆ ಎನ್ನುವುದನ್ನು ಅವಲಂಬಿಸಿರುತ್ತದೆ. ನೀವು ಸೀಳು ಕೂದಲನ್ನು ಹೊಂದಿದ್ದರೆ ಬಣ್ಣ ಬೇಗನೇ ಮಸುಕಾಗುತ್ತದೆ. ಕೆಲವರ ಕೂದಲಿನ ಪಿಗ್ಮೆಂಟ್‌ ಅವುಗಳ ಅಣುವಿನ ಗಾತ್ರದಿಂದಾಗಿ ಬೇಗನೆ ಮಸುಕಾಗುತ್ತೆ. ಕೆಂಪು ಹೇರ್‌ಕಲರ್‌ ಬೇಗನೇ ಹೋಗಿಬಿಡುತ್ತೆ. ಗುಲಾಬಿ ಬಣ್ಣ ಮಸುಕಾಗಿ ತಿಳಿ, ಹೊಂಬಣ್ಣದ ಕೂದಲಿನ ಮೇಲೆ ಕಿತ್ತಳೆ ಬಣ್ಣವನ್ನುಂಟು ಮಾಡಬಹುದು.ಹಾಗಾಗಿ ನೀವು ಯಾವುದೇ ಹೇರ್‌ಕಲರ್‌ ಹಾಕಿದ್ದರೂ ನಿಮ್ಮ ಕೂದಲಿನ ಬಣ್ಣವನ್ನು ರಿಫ್ರೆಶ್‌ ಮಾಡುವುದರಿಂದ ಕೂದಲಿಗೆ ಹಾಕಿದ ಬಣ್ಣ ದೀರ್ಘಕಾಲದವರೆಗೂ ಉಳಿಯುತ್ತೆ. ಹಾಗಾದರೆ ಕೂದಲಿನ ಬಣ್ಣವನ್ನು ಹೆಚ್ಚು ಕಾಲ ಉಳಿಯುವಂತೆ ಏನು ಮಾಡೋದು ಎನ್ನುವ ಟಿಪ್ಸ್‌ ಈ ಕೆಳಗಿದೆ.

1.ಕೂದಲಿಗೆ ಹೊಳಪು ಚಿಕಿತ್ಸೆ ನೀಡಿ

1.ಕೂದಲಿಗೆ ಹೊಳಪು ಚಿಕಿತ್ಸೆ ನೀಡಿ

ಕೂದಲಿಗೆ ಗ್ಲೋಸಿ ಲುಕ್‌ ನೀಡಬೇಕೆಂದರೆ ಸೆಮಿ ಪರ್ಮನೆಂಟ್, ಕ್ಲಿಯರ್‌ ಕೋಟಿಂಗ್‌ ಕಲರ್‌ಗಳನ್ನು ಹಾಕಬೇಕು. ಇದು ಕೂದಲನ್ನು ಹೊಳೆಯುವಂತೆ ಮಾಡುವುದರ ಜೊತೆಗೆ ಮೊದಲೇ ಹಾಕಿರುವ ಪರ್ಮನೆಂಟ್‌ ಕಲರ್‌ ಅನ್ನು ಲಾಕ್‌ ಮಾಡುತ್ತದೆ. ಇದು ನಿಮ್ಮ ಕೂದಲಿನ ಬಣ್ಣವನ್ನು ರಿಫ್ರೆಶ್‌ ಮಾಡುವ ಚಿಕಿತ್ಸಾ ವಿಧಾನವಾಗಿದೆ. ಇದು ಅಮೋನಿಯಾ ಹೊಂದಿರುವುದಿಲ್ಲ ಮತ್ತು ಕೆಲವು ಹೇರ್‌ ಕಲರ್‌ಗಿಂತ ಭಿನ್ನವಾಗಿದ್ದು ಆಗ್ಗಾಗ್ಗೆ ಬಳಕೆ ಮಾಡಲೂ ಸುರಕ್ಷಿತ. ನೀವು ಮನೆಯಲ್ಲಿಯೇ ಇದನ್ನು ಮಾಡಬಹುದು. ಇದು ನಿಮ್ಮ ಕೂದಲಿನ ಹೊಳಪನ್ನು ಹೆಚ್ಚಿಸುತ್ತದೆ. ಕೂದಲು ಡಲ್‌ ಆಗಿ ಕಾಣುವುದಿಲ್ಲ.

೨. ಪದೇ ಪದೇ ಸ್ನಾನ

೨. ಪದೇ ಪದೇ ಸ್ನಾನ

ಕೆಲವರು ವಾರದಲ್ಲಿ ಮೂರ್ನಾಲ್ಕು ಬಾರಿ ತಲೆಸ್ನಾನ ಮಾಡುವುದಿದೆ. ಆದರೆ ನೀವು ಹೇರ್‌ ಕಲರಿಂಗ್‌ ಮಾಡಿಸಿದ ಮೇಲೆ ಪದೇ ಪದೇ ತಲೆ ಸ್ನಾನ ಮಾಡುತ್ತಿದ್ದಲ್ಲಿ ಕೂದಲಿಗೆ ಹಾಕಿದ ಬಣ್ಣ ಬೇಗನೇ ಮಸುಕಾಗುತ್ತೆ. ಅಲ್ಲದೇ ಕೂದಲನ್ನು ಆಗಾಗ್ಗೆ ತೊಳೆಯುವುದರಿಂದ ಕೂದಲು ಹಿಗ್ಗಿಕೊಳ್ಳುತ್ತದೆ, ಇದು ಸೀಳು ಕೂದಲಿಗೆ ಕಾರಣವಾಗುತ್ತದೆ, ಇದು ಬಣ್ಣವನ್ನು ಹೊರಹಾಕುತ್ತದೆ. ಹಾಗಾಗೊ ಬಣ್ಣ ಮಾಸದಂತೆ ವಾರಕ್ಕೆ ಎರಡು ಬಾರಿ ತಲೆಸ್ನಾನ ಮಾಡಿದರೆ ಉತ್ತಮ.

೩. ಕೂದಲಿನ ಬುಡದಲ್ಲಿ ಕನ್ಸೀಲರ್‌ ಬಳಸಿ

೩. ಕೂದಲಿನ ಬುಡದಲ್ಲಿ ಕನ್ಸೀಲರ್‌ ಬಳಸಿ

ಈಗೀಗ ಮಾರುಕಟ್ಟೆಯಲ್ಲಿ ಅನೇಕ ವಿಧಧ ಹೇರ್‌ ಕನ್ಸೀಲರ್‌ಗಳೂ ಲಭ್ಯವಿದೆ. ಅದು ಕೆಲವೊಮ್ಮೆ ಅಗತ್ಯದ ಸಂದರ್ಭಗಳಲ್ಲಿ ನಿಮ್ಮನ್ನು ಪಾರು ಮಾಡುತ್ತದೆ. ಬೆಳೆಯುತ್ತಿರುವ ಕೂದಲಿಗೆ ಮತ್ತೆ ಡೈ ಮಾಡುವ ಬದಲಾಗಿ ಹೇರ್‌ ಕನ್ಸೀಲರ್ಗಳನ್ನು ನೀವು ಬಳಸಬಹುದು. ಆದರೆ ಇದು ಪರ್ಮನೆಂಟ್‌ ಅಲ್ಲ, ಶ್ಯಾಂಪೂ ಅಥವಾ ನೀರು ಹಾಕಿದಾಗ ಬಣ್ಣ ಹೋಗಿಬಿಡುತ್ತದೆ.

೪. ಕೊಳೆಯನ್ನು ತೆಗೆಯಿರಿ

೪. ಕೊಳೆಯನ್ನು ತೆಗೆಯಿರಿ

ನಿಮ್ಮ ಕೂದಲು ಮತ್ತು ನೆತ್ತಿಯ ಮೇಲೆ ಉಳಿದುಕೊಳ್ಳುವ ಕೊಳೆ, ಡ್ಯಾಂಡ್ರಫ್‌, ರಾಸಾಯನಿಕಗಳ ಸಂಗ್ರಹವು ನಿಮ್ಮ ಹೇರ್‌ಕಲರ್‌ಗಳು ಮಂದವಾಗಲು ಕಾರಣವಾಗಬಹುದು. ಹಾಗಾಗಿ ಇದನ್ನು ನಿವಾರಿಸಲು ಮತ್ತು ಕೂದಲಿನ ಬಣ್ಣವನ್ನು ಹೊಳೆಯುವಂತೆ ಮಾಡಲು ಉತ್ತಮ ಶ್ಯಾಂಪೂ ಅಥವಾ ಡಿಟಾಕ್ಸ್‌ ಉತ್ಪನ್ನವನ್ನು ಬಳಸಿ. ಕೂದಲು, ನೆತ್ತಿಯಲ್ಲಿನ ಕೊಳೆಯನ್ನು ತೆಗೆಯಲು, ಆಪಲ್‌ ಸೈಡರ್‌ ವಿನೆಗರ್‌ಗೆ ಅಷ್ಟೇ ಪ್ರಮಾಣದ ನೀರು ಬೆರೆಸಿಯೂ ಕೂದಲನ್ನು ತೊಳೆಯಬಹುದು. ಆದರೆ ಆಗತಾನೇ ಬಣ್ಣ ಹಾಕಿದ ಕೂದಲಿಗೆ ಕ್ಲಾರಿಫೈ ಶಾಂಪೂ ಬಳಸಬೇಡಿ, ಇದು ಬೇಗನೇ ಬಣ್ಣ ಮಸುಕಾಗುವಂತೆ ಮಾಡುತ್ತದೆ.

೫.ಕ್ಯಾನ್ಬೆರಿ ಜ್ಯೂಸ್‌ ಬಳಸಿ

೫.ಕ್ಯಾನ್ಬೆರಿ ಜ್ಯೂಸ್‌ ಬಳಸಿ

ಮನೆಯಲ್ಲೇ ನಿಮ್ಮ ಕೂದಲಿನ ಬಣ್ಣವನ್ನು ಹೊಳೆಯುವಂತೆ ಮಾಡಲು ಕ್ಯಾನ್ಬೆರಿ ಜ್ಯೂಸ್‌ ಬಳಸಬಹುದು. ಕ್ಯಾನ್ಬೆರಿ ಜ್ಯೂಸ್‌ನಲ್ಲಿ ಕೂದಲನ್ನು ತೊಳೆಯಿರಿ. ನೀವು ಕೆಂಪು ಬಣ್ಣದ ಹೇರ್‌ ಕಲರ್‌ ಹಾಕಿದ್ದರಂತೂ ಇದು ನಿಮ್ಮ ಕೂದಲನ್ನು ಆಕರ್ಷಕ ಹಾಗೂ ಹೊಳೆಯುವಂತೆ ಮಾಡುತ್ತೆ.

೬. ಕೂದಲಿಗೂ ಕಾಫಿ..!

೬. ಕೂದಲಿಗೂ ಕಾಫಿ..!

ನಿಮ್ಮ ಕೂದಲಿಗೆ ಯಾವುದೇ ರಾಸಾಯನಿಕವನ್ನು ಬಳಸಬಾರದು ಎಂದು ನೀವಂದುಕೊಂಡಿದ್ದಲ್ಲಿ ನಿಮ್ಮ ಕಂದು ಬಣ್ಣದ ಕೂದಲು ರಿಫ್ರೆಶ್‌ ಆಗಿರಲು ಕಾಫಿ ಬಳಸಿ. ಬ್ಲಾಕ್‌ ಕಾಫಿಯಿಂದ ನಿಮ್ಮ ಕೂದಲನ್ನು ನೆನೆಸಿ. ಕಾಫಿಯು ಸ್ಟ್ರಾಂಗ್‌ ಆಗಿದ್ದಷ್ಟೂ, ಕೂದಲಿನ ಬಣ್ಣ ಗಾಢವಾಗುತ್ತದೆ.

೭. ಶಾಂಪೇನ್‌ ಬಳಸಿ

೭. ಶಾಂಪೇನ್‌ ಬಳಸಿ

ಅರೆ..! ಕೂದಲಿಗೆ ಶಾಂಪೇನ್‌ ಬಳಸಬಹುದಾ ಎಂದು ಆಶ್ಚರ್ಯಪಡಬಹುದು. ಹೌದು.. ಕೂದಲನ್ನು ಶಾಂಪೇನ್‌ನಲ್ಲಿ ನೆನೆಸಿದರೆ ಹೊನ್ನಿನ ಬಣ್ನದ ಕೂದಲು ಇನ್ನಷ್ಟು ಗೋಲ್ಡನ್‌ ಟೋನ್ಡ್‌ ಆಗಿ ಕಾಣಿಸುತ್ತೆ. ಮಾತ್ರವಲ್ಲ ಶಾಂಪೇನ್‌ ಕೂದಲು ಒರಟಾಗುವುದನ್ನೂ ತಡೆಯುತ್ತದೆ. ಆದರೆ ಹೆಚ್ಚು ಹೊತ್ತು ಕೂದಲಿಗೆ ಶಾಂಪೇನ್‌ ಹಾಕಿ ಬಿಡಬೇಡಿ.ಇದನ್ನು ಬಳಸಿದ ಮೇಲೆ ಲೀವ್ ಇನ್‌ ಕಂಡೀಷನರ್‌ ಹಾಕಿ. ಹೆಚ್ಚು ಹೊತ್ತು ಶಾಂಪೇನ್‌ ಹಾಕಿ ಕೂದಲನ್ನು ಹಾಗೇ ಬಿಟ್ಟರೆ ಆಲ್ಕೋಹಾಲ್‌ನಿಂದ ಕೂದಲು ಡ್ರೈ ಆಗಬಹುದು.

೮. ಹೆನ್ನಾ ಹಾಕಿ

೮. ಹೆನ್ನಾ ಹಾಕಿ

ಕೂದಲಿಗೆ ಹೆನ್ನಾ ಹಾಕುವುದು ಅತ್ಯಂತ ಸುರಕ್ಷಿತ ವಿಧಾನ. ಇದು ನಿಮ್ಮ ಬಿಳಿ ಕೂದಲಿಗೆ ಬಣ್ಣ ಹಾಕಲು ನೈಸರ್ಗಿಕ ವಿಧಾನ. ನೀವು ಕೂದಲಿಗೆ ಕಂದು ಅಥವಾ ಗಾಢ ಕೆಂಪು ಬಣ್ಣವನ್ನು ಹಾಕಿದ್ದಲ್ಲಿ, ಗೋರಂಟಿಯನ್ನು ಬಳಸುವುದರಿಂದ ಆ ಹೇರ್‌ಕಲರ್ ದೀರ್ಘಾವಧಿಯವರಗೂ ಇರುತ್ತದೆ. ಆದರೆ ಗೋರಂಟಿಯು ಮೆಟಾಲಿಕ್‌ ಡೈ ಆಗಿದ್ದು, ಇದು ಇತರ ಬಣ್ಣದೊಂದಿಗೆ ಮಿಶ್ರವಾಗುವುದಿಲ್ಲ, ಅಲ್ಲದೇ ನೀವು ಮೊದಲು ಗೋರಂಟಿ ಹಾಕಿ ನಂತರ ಬೇರೆ ಕಲರ್‌ ಹಾಕಲು ಸಾಧ್ಯವಿಲ್ಲ.

೯. ಕಲರ್‌ ರಿಫ್ರೆಶಿಂಗ್‌ ಹೇರ್‌ ಮಾಸ್ಕ್‌

೯. ಕಲರ್‌ ರಿಫ್ರೆಶಿಂಗ್‌ ಹೇರ್‌ ಮಾಸ್ಕ್‌

ಕೂದಲಿನ ಬಣ್ಣವು ಕಳೆಗುಂದಂತೆ ಇರಲು ಉತ್ತಮ ವಿಧಾನವೆಂದರೆ ಹೇರ್‌ ಮಾಸ್ಕ್‌. ಇದು ಹಲವು ವಿಧಗಳಲ್ಲಿ ಲಭ್ಯವಿರುತ್ತದೆ. ಇದು ನಿಮ್ಮ ಕೂದಲಿನ ಬಣ್ಣವನ್ನು ಮರು ಸ್ಥಾಪಿಸಲು ಮತ್ತು ಬಣ್ಣವನ್ನು ಹೆಚ್ಚಿಸಲು ಸಹಾಯ ಮಾಡುತ್ತದೆ. ಇದು ರಾಸಾಯನಿಕ ಬಣ್ಣಗಳಿಗಿಂತ ಕಡಿಮೆ ಹಾನಿಕಾರಕ.

ಕೂದಲಿನ ಬಣ್ಣವನ್ನು ರಿಫ್ರೆಶ್‌ ಆಗಿಡುವುದರ ಜೊತೆಗೆ ಬಣ್ಣ ಹಾಕಿದ ಕೂದಲನ್ನು ಹೇಗೆ ನಿರ್ವಹಿಸುವುದು ಎನ್ನುವುದು ಹೆಚ್ಚಿನವರಿಗೆ ತಿಳಿದಿರುವುದಿಲ್ಲ. ಕೂದಲಿಗೆ ಹಾಕಿದ ಕಲರ್‌ ಹೆಚ್ಚು ಕಾಲ ಉಳಿಯುವಂತೆ ಮಾಡಲು ಕೂದಲಿನ ಆರೈಕೆಯ ಬಗ್ಗೆಯೂ ಗಮನ ಹರಿಸಬೇಕು. ಇದನ್ನು ಸುಲಭವಾಗಿ ನಿರ್ವಹಿಸುವುದು ಹೇಗೆಂದರೆ,

ಬಣ್ಣದ ಕೂದಲನ್ನು ನಿರ್ವಹಿಸುವುದು ಹೇಗೆ?

ಬಣ್ಣದ ಕೂದಲನ್ನು ನಿರ್ವಹಿಸುವುದು ಹೇಗೆ?

೧, ಮೊದಲನೆಯದಾಗಿ ಕೂದಲನ್ನು ಯಾವತ್ತಿಗೂ ಹೆಚ್ಚು ಬಿಸಿ ನೀರಿನಲ್ಲಿ ತೊಳೆಯಬೇಡಿ, ಬಿಸಿ ನೀರು ಕೂದಲಿನ ಪೊರೆ ಸೀಳುವಂತೆ ಮಾಡುತ್ತದೆ. ಇದರಿಂದ ಕೂದಲಿನ ಬಣ್ಣ ಮಂಕಾಗಬಹುದು. ಆದ್ದರಿಂದ ಕೂದಲನ್ನು ತೊಳೆಯಲು ತಣ್ಣೀರು ಬಳಸಿ.

೨. ಈ ಮೊದಲು ವಿವರಿಸಿದಂತೆ ಆಗಾಗ ತಲೆಸ್ನಾನ ಮಾಡಬೇಡಿ, ವಾರಕ್ಕೆರಡು ಬಾರಿ ತಲೆಸ್ನಾನ ಮಾಡಿದರೆ ಕೂದಲಿನ ಬಣ್ಣ ಮಾಸದು, ಅಲ್ಲದೇ ಕೂದಲು ಹೆಚ್ಚು ಒರಟಾಗದು.

೩. ಹೇರ್‌ ಕಲರ್‌ ಮಾಡಿಸಿದ ನಂತರ ತಲೆಕೂದಲಿಗೆ ಸಲ್ಫೇಟ್‌ ರಹಿತ ಶ್ಯಾಂಪೂ ಬಳಸಿ ಅಥವಾ ಹೇರ್‌ ಕಲರ್‌ ಮಾಡಿಸಿದ ಕೂದಲಿಗೆಂದೇ ಇರುವ ಶ್ಯಾಂಪೂ ಉತ್ಪನ್ನಗಳನ್ನು ಬಳಸಿ. ಈ ಉತ್ಪನ್ನಗಳಲ್ಲಿ 'ಕಲರ್‌ ಸೇಫ್‌'ಎನ್ನುವ ಲೇಬಲ್‌ ಇರುತ್ತದೆ.

೪. ಕೂದಲಿನ ಬಣ್ಣ ಮಸುಕಾಗಲು ಇನ್ನೊಂದು ಕಾರಣವೆಂದರೆ ಹೀಟ್‌ ಸ್ಟೈಲಿಂಗ್‌. ಕೂದಲು ಸ್ಟೈಲಿಂಗ್‌ ಮಾಡುವಾಗ ಅದರಿಂದ ಹೊರಬರುವ ಶಾಖದಿಂದಾಗಿ ಕೂದಲು ಕಳೆಗುಂದಬಹುದು ಮಾತ್ರವಲ್ಲ, ಕೂದಲಿನ ಎಳೆಯಿಂದ ಬಣ್ಣವು ಹೊರಬರಬಹುದು, ಮಸುಕಾಗಬಹುದು. ಹಾಗಾಗಿ ಬ್ಲೋಡ್ರೈಯಿಂಗ್‌, ಬಿಸಿ ಉಪಕರಣಗಳಿಂದ ಸ್ಟೈಲಿಂಗ್‌ ಮಾಡೋ ವಿಧಾನಗಳ ಬದಲು ಕೋಲ್ಡ್‌ ಏರ್‌ ಡ್ರೈಯರ್‌ ಬಳಸಿ. ಅಗತ್ಯವಿದ್ದಾಗ ಮಾತ್ರ ಕರ್ಲರ್‌ ಮತ್ತು ಸ್ಟ್ರೈಟ್‌ನರ್‌ ನಂತಹ ಹಿಟ್‌ ಸ್ಟೈಲಿಂಗ್‌ ಟೂಲ್ಸ್‌ ಬಳಸಿ.

೫. ಆದಷ್ಟು ಈಜುಕೊಳಗಳನ್ನು ತಪ್ಪಿಸಿ, ಕ್ಲೋರಿನ್‌ಯುಕ್ತ ನೀರಿನಿಂದಲೂ ಹೇರ್‌ ಕಲರ್‌ ಮಸುಕಾಗಬಹುದು.

೬. ನಿಮ್ಮ ಕೂದಲಿಗೆ ರೀ ಹೇರ್‌ಕಲರ್‌ ಮಾಡುವ ಬದಲಾಗಿ ಕಲರ್‌ ಡಿಪೋಸಿಟಿಂಗ್‌ ಪ್ರಾಡಕ್ಟ್‌ ಬಳಸಿ. ಇದು ಡೈಯನ್ನು ಒಳಗೊಂಡಿರುತ್ತದೆ. ಇದರಿಂದಾಗಿ ಕೂದಲು ತೊಳೆಯುವಾಗ ಬಣ್ಣ ಹೋಗುವ ಬದಲು, ಡೈನಿಂದಾಗಿ ಬಣ್ಣ ಗಾಢವಾಗುತ್ತದೆ.

೬. ಸೂರ್ಯನ ತೀಕ್ಷ್ಣವಾದ ಕಿರಣಗಳು ಸ್ಕಿನ್‌ ಮಾತ್ರವಲ್ಲ ಕೂದಲನ್ನೂ ಹಾನಿ ಮಾಡುತ್ತೆ. ಹಾಗಾಗಿ ಬಿಸಿಲಿನಿಂದ ನಿಮ್ಮ ಕೂದಲನ್ನು ರಕ್ಷಿಸಿಕೊಳ್ಳಿ. ಇಲ್ಲವಾದರೆ ಸೂರ್ಯನ ಕಿರಣಗಳಿಂದ ನಿಮ್ಮ ಕೂದಲು ಡ್ರೈ ಆಗಬಹುದು ಹಾಗೂ ಕಳೆಗುಂದಬಹುದು. ಹೊರಗೆ ಬಿಸಿಲಿನಲ್ಲಿ ಓಡಾಡುವುದಾದರೆ ಸ್ಕಾರ್ಫ್‌, ಕ್ಯಾಪ್‌ ಧರಿಸಿ.

English summary

How To Refresh Your Faded Hair Color At Home in Kannada

here are the tips to refresh your colored dull hair in kannada. Read more.
X
Desktop Bottom Promotion