For Quick Alerts
ALLOW NOTIFICATIONS  
For Daily Alerts

ಚಳಿಗಾಲದಲ್ಲಿ ಕೂದಲಿನ ಆರೈಕೆ ಹೀಗೆ ಮಾಡಿದರೆ ಒಳ್ಳೆಯದು

|

ಚಳಿಗಾಲ ಕಾಲಿಡುತ್ತಿರುವುದರಿಂದ, ಹವಾಮಾನವು ನಿಧಾನವಾಗಿ ತಂಪಾಗುತ್ತಿದೆ. ಈ ಋತುವಿನಲ್ಲಿ ಕೂದಲಿನ ಬಗ್ಗೆ ಹೆಚ್ಚಿನ ಕಾಳಜಿ ಬೇಕಾಗುತ್ತದೆ. ಏಕೆಂದರೆ, ಚಳಿಗಾಲದಲ್ಲಿ ಕೂದಲು, ಸಾಕಷ್ಟು ಶುಷ್ಕತೆ ಅನುಭವಿಸಿ, ಒಡೆದು, ಉದುರುಲು ಪ್ರಾರಂಭವಾಗುತ್ತದೆ. ಆದ್ದರಿಂದ ಇತರ ಯಾವುದೇ ಋತುವಿಗಿಂತಲೂ, ಈ ಕಾಲದಲ್ಲಿ ಆರೈಕೆ ತುಸು ಹೆಚ್ಚೇ ಅವಶ್ಯವಿರುತ್ತದೆ.

Winter Hair Care

ಅಲ್ಲದೆ, ಚಳಿಗಾಲವು ಸೋಮಾರಿತನವನ್ನು ಸೃಷ್ಟಿಸುವುದರಿಂದ, ಕೂದಲ ಆರೈಕೆ ಸರಿಯಾಗಿ ಆಗುವುದಿಲ್ಲ. ಅದಕ್ಕಾಗಿ, ನಾವಿಂದು, ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿರಿಸಿಕೊಳ್ಳಲು ಕೆಲವೊಂದು ಸಲಹೆಗಳನ್ನು ನೀಡಲಿದ್ದೇವೆ. ಈ ಮೂಲಕ ನಿಮ್ಮ ಕೂದಲನ್ನು ಆರೋಗ್ಯಕರವಾಗಿರಿಸಿಕೊಳ್ಳಬಹುದು.

ಚಳಿಗಾಲದಲ್ಲಿ ನಿಮ್ಮ ಕೂದಲನ್ನು ಸ್ವಚ್ಛವಾಗಿ ಮತ್ತು ಸುಂದರವಾಗಿರಿಸಿಕೊಳ್ಳಲು ಸಲಹೆಗಳನ್ನು ಈ ಕೆಳಗೆ ನೀಡಲಾಗಿದೆ:

ಕೂದಲಿನ ಕಾಳಜಿ ಈ ರೀತಿಯಿರಲಿ

ಕೂದಲಿನ ಕಾಳಜಿ ಈ ರೀತಿಯಿರಲಿ

* ಕೂದಲು ಮತ್ತು ನೆತ್ತಿಯನ್ನು ಆಗಾಗ್ಗೆ ಸ್ಪರ್ಶಿಸುವುದನ್ನು ತಪ್ಪಿಸಿ.

* ಕೂದಲಿಗೆ ಎಣ್ಣೆಯನ್ನು ಮತ್ತೆ ಮತ್ತೆ ಹಚ್ಚಬೇಡಿ, ತಿಂಗಳಿಗೊಮ್ಮೆ ಮಾತ್ರ ಸಾಕು.

* ಲೀವ್-ಇನ್-ಕಂಡಿಷನರ್ ಅನ್ನು ಬಳಸಬೇಡಿ.

* ಹೇರ್ ಬ್ಲೋ ನೆತ್ತಿಗೆ ಮಾತ್ರ ಬಳಸಿ, ಕೂದಲಿಗೆ ಬೇಡ. ಇದು ಶುಷ್ಕತೆಗೆ ಕಾರಣವಾಗುತ್ತದೆ.

* ಕೂದಲು ಮತ್ತು ನೆತ್ತಿಗೆ ಹೇರ್ ಸ್ಪ್ರೇ ಬಳಸಿ.

ಹಾಲಿನ ಸ್ಪ್ರೇ ಬಳಸಿ

ಹಾಲಿನ ಸ್ಪ್ರೇ ಬಳಸಿ

ನಿಮಗೆ ಬಿಡುವಿರುವ ದಿನಗಳಲ್ಲಿ ಈ ವಿಧಾನವನ್ನು ಬಳಸಬಹುದು. ಒಂದು ಸ್ಪ್ರೇ ಬಾಟಲಿಯನ್ನು ತೆಗೆದುಕೊಂಡು ಅದರಲ್ಲಿ ಹಸಿ ಹಾಲನ್ನು ಹಾಕಿ ಫ್ರಿಜ್ ನಲ್ಲಿಡಿ. ಈ ಹಾಲನ್ನು ನೆತ್ತಿ ಮತ್ತು ಕೂದಲಿಗೆ ಚೆನ್ನಾಗಿ ಸ್ಪ್ರೇ ಮಾಡಿ. ನಂತರ, ಸಿಕ್ಕನ್ನು, ಗಂಟನ್ನು ತೆಗೆದುಹಾಕಲು ಕೂದಲನ್ನು ಬಾಚಿಕೊಳ್ಳಿ. ಈಗ 45 ನಿಮಿಷ ಕಾದು, ಕೂದಲನ್ನು ತೊಳೆಯಿರಿ. ಹಾಲಿನಲ್ಲಿರುವ ಪ್ರೊಟೀನ್ ಸುಕ್ಕುಗಟ್ಟಿದ ಕೂದಲಿನ ವಿರುದ್ಧ ಹೋರಾಡುತ್ತದೆ ಮತ್ತು ಅದರಲ್ಲಿರುವ ಕ್ಯಾಲ್ಸಿಯಂ ಕೂದಲನ್ನು ಬಲಪಡಿಸುತ್ತದೆ.

ಮೊಸರು ಮತ್ತು ನಿಂಬೆ ರಸ:

ಮೊಸರು ಮತ್ತು ನಿಂಬೆ ರಸ:

ನೈಸರ್ಗಿಕ ನೇರ ಕೂದಲಿಗೆ ನೀವು ಈ ಸಲಹೆಯನ್ನು ಬಳಸಬಹುದು. ಇದಕ್ಕಾಗಿ, 4 ಚಮಚ ತಣ್ಣನೆಯ ಮೊಸರನ್ನು ತೆಗೆದುಕೊಂಡು ಅದಕ್ಕೆ ಅರ್ಧ ನಿಂಬೆಹಣ್ಣಿನ ರಸವನ್ನು ಬೆರೆಸಿ ಪೇಸ್ಟ್ ಮಾಡಿ. ಈಗ ಇದನ್ನು ನೆತ್ತಿ ಮತ್ತು ಕೂದಲಿಗೆ ಹಚ್ಚಿ , 45 ನಿಮಿಷಗಳ ಕಾಲ ಬಿಡಿ. ಇದನ್ನು ವಾರಕ್ಕೆ ಕನಿಷ್ಠ ಮೂರು ಬಾರಿ ಹಚ್ಚಿ. ಒಂದು ತಿಂಗಳಲ್ಲಿ ನಿಮ್ಮ ಕೂದಲು ಮೃದು ಮತ್ತು ನೇರವಾಗುವುದನ್ನು ನೀವೇ ಕಾಣುತ್ತೀರಿ.

ಲೋಳೆಸರ(ಅಲೋವೆರಾ):

ಲೋಳೆಸರ(ಅಲೋವೆರಾ):

ಇದು ಮಾರುಕಟ್ಟೆಯಲ್ಲಿ ಸಿಗುವ ಅಲೋವೆರಾ ಜೆಲ್ ಅಥವಾ ಶಾಂಪೂ ಅಲ್ಲ. ಬದಲಾಗಿ, ನೀವು ಬೆಳೆದ ಅಥವಾ ಮಾರುಕಟ್ಟೆಯಿಂದ ತಂದ ಫ್ರೆಶ್ ಅಲೋವೆರಾ ಎಲೆಗಳು. ಅಲೋವೆರಾ ಎಲೆಯನ್ನು ಮಧ್ಯದಿಂದ ಕತ್ತರಿಸಿ ಕೂದಲು ಮತ್ತು ನೆತ್ತಿಯ ಮೇಲೆ ಉಜ್ಜಿಕೊಳ್ಳಿ. 30 ನಿಮಿಷಗಳ ಕಾಲ ಅದನ್ನು ಬಿಡಿ. ನಂತರ ಉಗುರು ಬೆಚ್ಚಗಿನ ನೀರಿನಿಂದ ಕೂದಲನ್ನು ತೊಳೆದು ಒಣಗಲು ಬಿಡಿ. ಇದರಿಂದ ಕೂದಲು ಮೃದುವಾಗಿ ಹಾಗೂ ಆರೋಗ್ಯಕರವಾಗಿ ಬೆಳೆಯುತ್ತದೆ.

English summary

How to make your hair smell good in winter in Kannada

Here we talking about Winter Hair Care: How to make your hair smell good in winter in Kannada, read on
Story first published: Thursday, November 25, 2021, 10:00 [IST]
X
Desktop Bottom Promotion