Just In
Don't Miss
- News
ಬಿಜೆಪಿ ವಿರುದ್ಧ ಗರಂ; ಪದ್ಮಶ್ರೀ ವಾಪಸ್ ಕೊಡುವೆ ಎಂದ ಮೊಗುಲಯ್ಯ
- Sports
ಮುಂಬೈ ಗೆದ್ದರೆ ಆರ್ಸಿಬಿ ಪ್ಲೇಆಫ್ಗೆ; ಡೆಲ್ಲಿ ಸೋಲಿಸಿ ಎಂದು ರೋಹಿತ್ ಪಡೆಗೆ ಮನವಿ ಇಟ್ಟ ಕೊಹ್ಲಿ!
- Technology
ಜಿಯೋ ಫೈಬರ್ ಕನೆಕ್ಷನ್ಗಾಗಿ ಆನ್ಲೈನ್ ಮೂಲಕ ಅರ್ಜಿ ಸಲ್ಲಿಸಲು ಹೀಗೆ ಮಾಡಿ!
- Automobiles
ಐಷಾರಾಮಿ ಬಿಎಂಡಬ್ಲ್ಯು 6-ಸೀರಿಸ್ ಕಾರು ಖರೀದಿಸಿದ ಕ್ರಿಕೆಟಿಗ ಅಜಿಂಕ್ಯ ರಹಾನೆ
- Finance
ಆಂಕರ್ ಹೂಡಿಕೆದಾರರಿಂದ 124 ಕೋಟಿ ರೂ. ಪಡೆದ ಇಮುದ್ರಾ!
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Movies
ಬಾಡಿ ಶೇಮಿಂಗ್ ಇದೆ, ಒತ್ತಡ ಬೇಡ: ನಟಿ ಮಯೂರಿ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಕೂದಲಿಗೆ ಗೋರಂಟಿ ಹಚ್ಚುವುದರಿಂದ ಕೂದಲ ಸಕಲ ಸಮಸ್ಯೆಗಳು ನಿವಾರಣೆ!
ಕೂದಲಿಗೆ ಗೋರಂಟಿ ಅಥವಾ ಮೆಹೆಂದಿ ಹಚ್ಚುವುದು ಬಹಳ ಹಿಂದಿನ ವಾಡಿಕೆ. ಇದು ಕೂದಲಿಗೆ ನೈಸರ್ಗಿಕ ಬಣ್ಣ ನೀಡುವುದಷ್ಟೇ ಅಲ್ಲ, ತಲೆಹೊಟ್ಟು, ಕೂದಲು ತೆಳುವಾಗುವುದು ಸೇರಿದಂತೆ ವಿವಿಧ ಕೂದಲಿನ ಸಮಸ್ಯೆಗಳಿಗೂ ಪ್ರಯೋಜನಕಾರಿಯಾಗಿದೆ. ಅದಕ್ಕಾಗಿಯೇ ಇದು ಬಹಳ ವರ್ಷಗಳಿಂದ ನಮ್ಮ ಸೌಂದರ್ಯದ ದಿನಚರಿಯ ಭಾಗವಾಗಿದೆ.
ಗೋರಂಟಿ ಪುಡಿ ಮತ್ತು ಪೇಸ್ಟ್ ಇಂದು ಮಾರುಕಟ್ಟೆಯಲ್ಲಿ ಸುಲಭವಾಗಿ ಲಭ್ಯವಿದ್ದರೂ, ನೀವೇ ಸ್ವಂತ ಗೋರಂಟಿ ಪುಡಿ ಅಥವಾ ಪೇಸ್ಟ್ ಅನ್ನು ಮನೆಯಲ್ಲಿಯೇ ತಯಾರಿಸಿದರೆ, ಮತ್ತಷ್ಟು ಪರಿಣಾಮಕಾರಿ. ಏಕೆಂದರೆ ಮನೆಯಲ್ಲಿಯೇ ತಯಾರಿಸುವುದರಿಂದ ರಾಸಾಯನಿಕಗಳಿಂದ ಮುಕ್ತಗೊಳಿಸಬಹುದು. ಆದ್ದರಿಂದ ನಾವಿಂದು, ಗೋರಂಟಿ ಪುಡಿ ತಯಾರಿಸುವುದು ಹೇಗೆ? ಅದರ ಪ್ರಯೋಜನವೇನು? ಅದರ ಬಳಕೆ ಹೇಗೆ? ಈ ಎಲ್ಲದರ ಕುರಿತು ಸಂಕ್ಷಿಪ್ತ ಮಾಹಿತಿ ನೀಡಲಿದ್ದೇವೆ.

ಮನೆಯಲ್ಲಿ ಮೆಹೆಂದಿ ಪೌಡರ್ ಮಾಡುವುದು ಹೇಗೆ?:
- ಗೋರಂಟಿ ಎಲೆಗಳನ್ನು ತೊಳೆದು ನೆರಳಿನಲ್ಲಿ ಒಣಗಿಸಿ. ನೀವು ಅವುಗಳನ್ನು ಬಿಸಿಲಿನಲ್ಲಿ ಒಣಗಿಸಿದರೆ, ಅವುಗಳು ತಮ್ಮ ಬಣ್ಣವನ್ನು ಕಳೆದುಕೊಳ್ಳುತ್ತವೆ.
- ಸಂಪೂರ್ಣವಾಗಿ ಒಣಗಿದ ನಂತರ, ಗ್ರೈಂಡರ್ಗೆ ಹಾಕಿ, ಪುಡಿ ಮಾಡಿ.
- ಉತ್ತಮವಾದ ಪುಡಿಯನ್ನು ಪಡೆಯಲು ಗೋರಂಟಿ ಪುಡಿಯನ್ನು ಜರಡಿ ಅಥವಾ ಮಸ್ಲಿನ್ ಬಟ್ಟೆಯ ಮೂಲಕ ಜರಡಿ ಹಿಡಿಯಿರಿ.
- ಇದನ್ನು ತಂಪಾದ, ಕತ್ತಲು ಮತ್ತು ಶುಷ್ಕ ಸ್ಥಳದಲ್ಲಿ ಪ್ಲಾಸ್ಟಿಕ್ ಚೀಲದಲ್ಲಿ ಸಂಗ್ರಹಿಸಿ.
- ಗೋರಂಟಿ ಪುಡಿಯನ್ನು ಸಿದ್ಧಪಡಿಸಿದ ನಂತರ, ಅದರ ಪೇಸ್ಟ್ತಯಾರಿಸುವುದು ಮತ್ತು ಅದನ್ನು ನಿಮ್ಮ ಕೂದಲಿಗೆ ಬಣ್ಣ ಮಾಡಲು ಬಳಸುವುದು ಸುಲಭ.
- ಹೆಚ್ಚುವರಿ ಬಣ್ಣಕ್ಕಾಗಿ ಗೋರಂಟಿ ಪುಡಿಯನ್ನು ಕಬ್ಬಿಣದ ಬಾಣಲೆಯಲ್ಲಿ ನೀರು ಅಥವಾ ಚಹಾ ಅಥವಾ ಕಾಫಿ ನೀರಿನಲ್ಲಿ ನೆನೆಸಿಡಿ. ಗೋರಂಟಿ ಪುಡಿಗೆ ಚಹಾ ಅಥವಾ ಕಾಫಿ ನೀರನ್ನು ಸೇರಿಸುವುದರಿಂದ ಅದರ ಬಣ್ಣವು ಹೆಚ್ಚಾಗುತ್ತದೆ.
- ನಿಮ್ಮ ಕೂದಲಿನ ಅವಶ್ಯಕತೆಗೆ ಅನುಗುಣವಾಗಿ ಮೊಸರು ಅಥವಾ ಮೊಟ್ಟೆಯನ್ನು ಸೇರಿಸಿ.
- ನಿಮಗೆ ತಲೆಹೊಟ್ಟು ಅಥವಾ ನೆತ್ತಿಯಲ್ಲಿ ತುರಿಕೆ ಸಮಸ್ಯೆ ಇದ್ದರೆ ಸ್ವಲ್ಪ ನಿಂಬೆ ರಸವನ್ನು ಹಿಂಡಿ.
- ಎಲ್ಲಾ ಪದಾರ್ಥಗಳನ್ನು ಚೆನ್ನಾಗಿ ಮಿಶ್ರಣ ಮಾಡಿ.
- ಮರುದಿನ ಬೆಳಿಗ್ಗೆ, ಪದಾರ್ಥಗಳನ್ನು ಮತ್ತೆ ಮಿಶ್ರಣ ಮಾಡಿ ಹಚ್ಚಿ.
- ಕೂದಲಿಗೆ ಗೋರಂಟಿ ಹಚ್ಚುವ ಮೊದಲು, ನಿಮ್ಮ ಕೂದಲನ್ನು ಸೌಮ್ಯವಾದ ಶಾಂಪೂ ಬಳಸಿ ತೊಳೆಯಿರಿ. ನಿಮ್ಮ ನೆತ್ತಿ ಸ್ವಚ್ಛವಾಗಿರಬೇಕು. ಗೋರಂಟಿ ನಿಮ್ಮ ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿರುವುದರಿಂದ, ಕಂಡೀಷನರ್ ಬಳಸದೇ ಇರಬಹುದು.
- ನಿಮ್ಮ ಕುತ್ತಿಗೆ, ಕಿವಿಗಳು ಗೋರಂಟಿಯಿಂದ ಕಲೆಯಾಗದಂತೆ ತಡೆಯಲು, ಸ್ವಲ್ಪ ತೆಂಗಿನ ಎಣ್ಣೆಯನ್ನು ಮುಂಚಿತವಾಗಿ ಹಚ್ಚಿಕೊಳ್ಳಬಹುದು.
- ಮೊದಲಿಗೆ ಅಗಲವಾದ ಹಲ್ಲಿನ ಬಾಚಣಿಗೆಯನ್ನು ಬಳಸಿ, ನಿಮ್ಮ ಕೂದಲನ್ನು ಎರಡು ಭಾಗವಾಗಿ ಬೇರ್ಪಡಿಸಿ.
- ಕೈಗವಸುಗಳನ್ನು ಧರಿಸಿ ಮತ್ತು ಬ್ರಷ್ ಬಳಸಿ, ಗೋರಂಟಿ ಹಚ್ಚಿಕೊಳ್ಳಲು ಪ್ರಾರಂಭಿಸಿ.
- ನಿಮ್ಮ ಕೂದಲನ್ನು ಸಣ್ಣ ಭಾಗಗಳಾಗಿ ವಿಂಗಡಿಸಿ, ಬೇರುಗಳಿಂದ ತುದಿಗಳಿಗೆ ಗೋರಂಟಿ ಹಚ್ಚಿ.
- ಎಲ್ಲಾ ಭಾಗಗಳಿಗೂ ಹಚ್ಚಿದ ನಂತರ, ಶವರ್ ಕ್ಯಾಪ್ ಅಥವಾ ಪ್ಲಾಸ್ಟಿಕ್ ಕ್ಯಾಪ್ ಬಳಸಿ, ನಿಮ್ಮ ಕೂದಲನ್ನು ಮುಚ್ಚಿ.
- ಸುಮಾರು 2-3 ಗಂಟೆಗಳ ಕಾಲ ನಂತರ, ಕೇವಲ ನೀರಿನಿಂದ ತೊಳೆಯಿರಿ.
- ಗೋರಂಟಿ ಬಣ್ಣ ಸರಿಯಾಗಿ ಗೋಚರವಾಗಲು ಸುಮಾರು 1-2 ದಿನಗಳನ್ನು ತೆಗೆದುಕೊಳ್ಳುತ್ತದೆ ಎಂಬುದನ್ನು ನೆನಪಿಡಿ.
- ಗೋರಂಟಿ ನೆತ್ತಿಗೆ ಉತ್ತಮವಾಗಿದ್ದು, ತಲೆಹೊಟ್ಟು, ತುರಿಕೆ ಮುಂತಾದ ಯಾವುದೇ ನೆತ್ತಿಯ ಸಮಸ್ಯೆಗಳ ವಿರುದ್ಧ ಹೋರಾಡಲು ಇದು ಸಹಾಯ ಮಾಡುತ್ತದೆ. ಗೋರಂಟಿಯಲ್ಲಿರುವ ಆಂಟಿಮೈಕ್ರೊಬಿಯಲ್ ಮತ್ತು ಆಂಟಿಫಂಗಲ್ ಗುಣಲಕ್ಷಣಗಳು ನೆತ್ತಿಯ ವಿವಿಧ ಸಮಸ್ಯೆಗಳ ವಿರುದ್ಧ ಹೋರಾಡುತ್ತವೆ.
- ನಿಮ್ಮ ನೆತ್ತಿಯ ಮೇಲೆ pH ಮಟ್ಟವನ್ನು ಸಮತೋಲನಗೊಳಿಸುವ ಮೂಲಕ ಮತ್ತು ರಂಧ್ರಗಳನ್ನು ಮುಚ್ಚುವ ಮೂಲಕ, ಗೋರಂಟಿ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಸಹಾಯ ಮಾಡುತ್ತದೆ.
- ಮೆಹೆಂದಿ ನಿಮ್ಮ ಕೂದಲಿಗೆ ನೈಸರ್ಗಿಕ ಕಂಡಿಷನರ್ ಆಗಿದ್ದು, ಅದರಲ್ಲಿರುವ ಹೈಡ್ರೇಟಿಂಗ್ ಗುಣಲಕ್ಷಣಗಳು ನಿಮ್ಮ ಕೂದಲನ್ನು ಹೆಚ್ಚು ಕಾಲ ಮೃದುವಾಗಿರಿಸುತ್ತದೆ.
- ಕೂದಲು ತೆಳುವಾಗುತ್ತಿರುವವರು ಗೋರಂಟಿ ಬಳಸಬೇಕು ಏಕೆಂದರೆ ಇದು ಕೂದಲಿನ ಬೇರುಗಳನ್ನು ಬಲಪಡಿಸಲು ಮತ್ತು ಸ್ಥಿತಿಸ್ಥಾಪಕತ್ವವನ್ನು ಸುಧಾರಿಸಲು ಸಹಾಯ ಮಾಡುತ್ತದೆ.
- ಗೋರಂಟಿ ನಿಮ್ಮ ನೆತ್ತಿಯ ಮೇಲಿನ ಹೆಚ್ಚುವರಿ ಎಣ್ಣೆಯನ್ನು ತೆಗೆದುಹಾಕಿ, ಕಿರುಚೀಲಗಳನ್ನು ಮುಚ್ಚುತ್ತದೆ ಮತ್ತು ಹೊಸ ಕೂದಲಿನ ಬೆಳವಣಿಗೆಗೆ ಕಾರಣವಾಗುತ್ತದೆ.

ಮನೆಯಲ್ಲಿ ಮೆಹೆಂದಿ ಅಥವಾ ಗೋರಂಟಿ ಪೇಸ್ಟ್ ಮಾಡುವುದು ಹೇಗೆ?:

ಕೂದಲಿಗೆ ಗೋರಂಟಿ ಹಚ್ಚಲು ಸರಿಯಾದ ಮಾರ್ಗ ಯಾವುದು?:

ಕೂದಲಿಗೆ ಗೋರಂಟಿ ಹಚ್ಚುವುದರಿಂದ ಆಗುವ ಪ್ರಯೋಜನಗಳೇನು?:
ಗಮನಿಸಿ: ಗೋರಂಟಿ ಒಂದು ನೈಸರ್ಗಿಕ ಕೂದಲು ಬಣ್ಣವಾಗಿದ್ದು, ನಿಮ್ಮ ಕೂದಲಿಗೆ ಹಲವು ವಿಧಗಳಲ್ಲಿ ಪ್ರಯೋಜನವನ್ನು ನೀಡುತ್ತದೆ. ಆದಾಗ್ಯೂ, ಇದು ಎಲ್ಲರಿಗೂ ಒಂದೇ ರೀತಿ ಕೆಲಸ ಮಾಡದಿರಬಹುದು. ಆದ್ದರಿಂದ ಮೊದಲು ಕೂದಲಿನ ಮೇಲೆ ಪ್ಯಾಚ್ ಪರೀಕ್ಷೆಯನ್ನು ಮಾಡಿಕೊಳ್ಳವುದು ಒಳಿತು.