For Quick Alerts
ALLOW NOTIFICATIONS  
For Daily Alerts

ಈ ವಿಧಾನ ಅನುಸರಿಸಿದರೆ ಕೂದಲು ಸೊಂಪಾಗಿ ಬೆಳೆಯುವಂತೆ ಮಾಡುತ್ತೆ

|

ಹೌದು, ಎಲ್ಲರೂ ಬೆರಗಾಗುವ ರೀತಿಯಲ್ಲಿ ನಿಮ್ಮ ಕೇಶರಾಶಿಯನ್ನ ಸುಂದರವಾಗಿ, ಅತ್ಯಾಕರ್ಷಕವಾಗಿ ಇರಿಸಿಕೊಳ್ಳುವುದೆಂದರೆ ಅದು ನಿಜಕ್ಕೂ ಕಷ್ಟದ ಕೆಲಸವೇ ಸರಿ. ಕಣ್ಣುಗಳು ಕೂರೈಸುವಂತಹ ಕಡುಗಪ್ಪು ವರ್ಣದ ದಟ್ಟ ಕೇಶರಾಶಿಯು ಎಲ್ಲರನ್ನೂ ಆಕರ್ಷಿಸುತ್ತದೆ, ನಾವು ಇನ್ನಷ್ಟು ಸುಂದರವಾಗಿ ಕಾಣುವಂತೆ ಮಾಡುತ್ತದೆ ಹಾಗೂ ನಾವು ಆರೋಗ್ಯವಾಗಿದ್ದೇವೆಂದು ತೋರಿಸುತ್ತದೆ ಎಂಬ ಈ ಸಂಗತಿಗಳು ಎಲ್ಲರಿಗೂ ಗೊತ್ತಿರುವವೇ ಆಗಿವೆ. ಹಾಗೆ ಸುಂದರವಾದ ದಟ್ಟ ಕೇಶರಾಶಿಯವರನ್ನು ನೋಡಿದಾಗ ಕೂದಲು ಕಡಿಮೆ ಇರುವವರಿಗೆ ಅಯ್ಯೋ ಆ ಕೂದಲು ನನಗೆ ಇದ್ದಿದ್ದರೆ ಎಂದು ಅನಿಸದೆ ಇರಲ್ಲ.

ದಟ್ಟ ಕೇಶರಾಶಿಯನ್ನು ನಮ್ಮದಾಗಿಸಿಕೊಳ್ಳೋಕೆ ಸಾಕಷ್ಟು ಕಾಲಾವಕಾಶ ಬೇಕು, ದೃಢವಾದ ಮನೋಸಂಕಲ್ಪ ಇರಬೇಕು, ಮತ್ತು ಆ ಕುರಿತು ನಮ್ಮ ಪ್ರಯತ್ನಗಳು ನಿರಂತರವಾಗಿರಬೇಕು. ನೀವು ಈ ವಿಧಾನ ಅನುಸರಿಸಿದರೆ ಸೊಂಪಾದ ಕೇಶರಾಶಿಯು ನಿಮ್ಮದಾಗುವುದು, ಬನ್ನಿ ಆ ವಿಧಾನಗಳಾವುವು ಎಂದು ನೋಡೋಣ:

1. ಸರಿಯಾದ ಶ್ಯಾಂಪೂವನ್ನು ಆಯ್ದುಕೊಳ್ಳಿರಿ

1. ಸರಿಯಾದ ಶ್ಯಾಂಪೂವನ್ನು ಆಯ್ದುಕೊಳ್ಳಿರಿ

ಬಟ್ಟೆಗಳ ವಿಚಾರದಲ್ಲಿ ಡಿಟರ್ಜೆಂಟ್ ಹೇಗೋ ಹಾಗೇನೇ ನಿಮ್ಮ ಕೇಶರಾಶಿಯ ವಿಚಾರದಲ್ಲಿ ಈ ಶ್ಯಾಂಪೂ ಕೂಡ!! ಶ್ಯಾಂಪೂ ನಿಮ್ಮ ಕೇಶರಾಶಿಯನ್ನು ನಯವಾಗಿ ರೇಷ್ಮೆಯ ಹಾಗೆ ಕಾಣುವಂತೇನೂ ಮಾಡಲ್ಲ!! (ಜಾಹೀರಾತಿನಲ್ಲಿ ಅದೆಷ್ಟೇ ಹೊಡ್ಕೋಂಡ್ರೂ ಕೂಡ). ಶ್ಯಾಂಪೂನಲ್ಲಿರೋ ಸಕ್ರಿಯ ಅಂಶಗಳು ನಿಮ್ಮ ಕೇಶರಾಶಿಯನ್ನ ಕ್ಲೋರಿನ್ ಯುಕ್ತ ನೀರಿನಿಂದಾಗಬಹುದಾದ ಹಾನಿಕಾರಕ ಪರಿಣಾಮಗಳಿಂದ ರಕ್ಷಿಸಬಲ್ಲದು ಅಷ್ಟೇ!! ಶ್ಯಾಂಪೂವಿನ ಬಳಕೆಯ ಮೂಲಭೂತ ಉದ್ದೇಶವೇನಂದ್ರೆ, ಕಳೆದ ಬಾರಿ ನೀವು ಕೇಶರಾಶಿಯನ್ನ ತೊಳೆದುಕೊಂಡಂದಿನಿಂದ ಇಂದಿನವರೆಗೆ ನಿಮ್ಮ ಕೇಶರಾಶಿಯಲ್ಲಿ ಸಂಚಯವಾಗಿರಬಹುದಾದ ಧೂಳು ಮತ್ತು ಜಿಡ್ಡಿನ ಅಂಶವನ್ನ ನಿವಾರಿಸೋದು.

2. ಹೇರ್ ಬಾಮ್ ಮತ್ತು ಕಂಡೀಶನರ್

2. ಹೇರ್ ಬಾಮ್ ಮತ್ತು ಕಂಡೀಶನರ್

ಬಾಮ್ ಮತ್ತು ಕಂಡೀಶನರ್ ನಿಮ್ಮ ಕೇಶರಾಶಿಯನ್ನ ನುಣುಪಾಗಿಸುತ್ತವೆ ಮತ್ತು ಶುಷ್ಕತೆಯನ್ನ ನಿವಾರಿಸುತ್ತದೆ. ಹೇರ್ ಬಾಮ್ ಮತ್ತು ಕಂಡೀಶನರ್ ಬಳಕೆಯ ನಂತರ ಈಗ ನಿಮ್ಮ ಕೇಶರಾಶಿಯನ್ನ ಬಾಚಿಕೊಂಡು ಓರಣವಾಗಿರಿಸಿಕೊಳ್ಳೋದು ಹಾಗೂ ಸ್ಟೈಲಿಶ್ ಆಗಿ ಕಾಣುವಂತೆ ಮಾಡೋದು ಎಷ್ಟು ಸುಲಭ ಆಗುತ್ತೆ ನೋಡಿ. ಇವುಗಳಲ್ಲಿರೋ ಪ್ರಯೋಜನಕಾರೀ ಘಟಕಗಳು ನಿಮ್ಮ ಕೇಶರಾಶಿಯ ಸಣ್ಣಪುಟ್ಟ ಹಾನಿಯನ್ನ ದುರಸ್ತಿ ಮಾಡುತ್ವೆ, ಹಾಗೂ ಪರಿಸರದ ಹಾನಿಕರ ಅಂಶಗಳ ವಿರುದ್ಧ ನಿಮ್ಮ ಕೇಶರಾಶಿಗೊಂದು ರಕ್ಷಣಾತ್ಮಕ ಕವಚದ ರೀತಿಯಲ್ಲಿ ಕೆಲಸ ಮಾಡುತ್ವೆ. ಜೊತೆಗೆ ಅವು ನಿಮ್ಮ ಕೇಶರಾಶಿಗೆ ಹೊಳಪನ್ನು, ರೇಷ್ಮೆಯಂತಹ ನಾಜೂಕನ್ನೂ ಕೊಡುತ್ತವೆ.

3. ಅಲಂಕಾರಿಕ ಮಾಸ್ಕ್ ಗಳು

3. ಅಲಂಕಾರಿಕ ಮಾಸ್ಕ್ ಗಳು

ಮಾಸ್ಕ್ ನಲ್ಲಿ ಪೋಷಕಾಂಶಗಳ ಸಾಂದ್ರತೆಯು ಬಾಮ್ ಗಿಂತ ಎರಡು ಪಟ್ಟು, ಕೆಲವೊಮ್ಮೆ ಮೂರು ಪಟ್ಟು ಜಾಸ್ತಿ ಇರುತ್ತದೆ. ಕೇಶರಾಶಿಯನ್ನು ಚೆನ್ನಾಗಿ ಮಾಯಿಶ್ಚರೈಸ್ಡ್ ಆಗಿ ಇರಿಸಿಕೊಳ್ಳಲು ಮಾಸ್ಕ್ ಅನ್ನು ವಾರಕ್ಕೊಮ್ಮೆ ಬಳಸಬೇಕು. ಸ್ವಚ್ಛವಾದ, ಟವೆಲ್ ನಿಂದ ಒರೆಸಿ ಒಣಗಿಸಿಕೊಂಡ ಕೇಶರಾಶಿಯ ಮೇಲೆ ಮಾಸ್ಕ್ ಅನ್ನು ಹಚ್ಚಿಕೊಳ್ಳಬೇಕು. ಮಾಸ್ಕ್ ನ ತಯಾರಕರು "3 ನಿಮಿಷಗಳವರೆಗೆ ಹಚ್ಚಿಕೊಳ್ಳಿರಿ" ಅಂತಾ ಹೇಳಿದ್ದರೂ ಅದನ್ನು ಕನಿಷ್ಟ 15 ನಿಮಿಷಗಳವರೆಗಾದರೂ ಕೇಶರಾಶಿಯ ಮೇಲೆ ಹಾಗೆಯೇ ಬಿಡಬೇಕು. ನಿಮ್ಮ ತಲೆಗೆ ಬಾತ್ ಟವೆಲ್ ಅನ್ನು ಸುತ್ತಿಕೊಂಡು ಅದರಲ್ಲಿ ನಿಮ್ಮ ಕೇಶರಾಶಿಯನ್ನು ಬಿಗಿದಿಟ್ಟುಕೊಳ್ಳಿರಿ. ಹೀಗೆ ಮಾಡಿದಾಗ ಬೆಚ್ಚಗಿನ ಪರಿಸ್ಥಿತಿಯಲ್ಲಿ ಮಾಸ್ಕ್ ನ ಘಟಕಗಳು ನಿಮ್ಮ ಕೇಶರಾಶಿಯನ್ನು ಇನ್ನಷ್ಟು ಸಕ್ರಿಯವಾಗಿ ಪ್ರವೇಶಿಸುತ್ತವೆ.

4. ಶಾಖದ ರಕ್ಷಣೆ

4. ಶಾಖದ ರಕ್ಷಣೆ

ಸ್ಟೈಲರ್ ಗಳು, ಐಯರ್ನ್ ಗಳು, ಹೇರ್ ಡ್ರೈಯರ್ ಗಳು - ಕೇಶರಾಶಿಯ ಸೌಂದರ್ಯ ಹಾಗೂ ಆರೋಗ್ಯಕ್ಕಾಗಿಯೇ ವಿಶೇಷವಾಗಿ ಮಾಡಲಾಗಿರುವ ಭಯಾನಕ ಆಯುಧಗಳಂತೆ ಇವು ಕಾಣುತ್ತವೆ. ಇವು ಕೇಶರಾಶಿಯ ಎಲ್ಲ ತೇವಾಂಶವನ್ನೂ ಹೀರಿ, ಅದನ್ನು ಶುಷ್ಕವಾಗಿ ಹಾಗೂ ಕಳಾಹೀನವನ್ನಾಗಿ ಮಾಡಿಬಿಡುತ್ತವೆ. ಆದರೂ ಕೂಡ, ಕೇಶರಾಶಿಯನ್ನು ಸ್ಟೈಲಿಶ್ ಆಗಿ ಕಾಣುವಂತೆ ಮಾಡುವ ಈ ಸಲಕರಣೆಗಳನ್ನ ದೂರವಿಡುವಂತೆಯೂ ಇಲ್ಲ!!

ಇಂತಹ ಪರಿಸ್ಥಿತಿಯಲ್ಲಿ ಶಾಖವು ನಮಗೆ ಆಪದ್ಭಾಂದವನಂತೆ ಒದಗಿಬರುತ್ತದೆ, ಅರ್ಥಾತ್ ಹೀಟ್ ಪ್ರೊಟೆಕ್ಷನ್ ಸ್ಪ್ರೇ. ಕೇಶರಾಶಿಯೊಳಗೆ ತೇವಾಂಶವು ಉಳಿದುಕೊಳ್ಳುವಂತೆ ಮಾಡುವ ಕ್ರಿಯಾಶೀಲ ವಸ್ತುಗಳು ಈ ಸ್ಪ್ರೇಯಲ್ಲಿವೆ. ಇವು ನಿಮ್ಮ ಕೇಶರಾಶಿಯು ಶುಷ್ಕತೆಗೊಳ್ಳದಂತೆ ಮತ್ತು ಸುಲಭವಾಗಿ ತುಂಡಾಗದಂತೆ ರಕ್ಷಿಸುತ್ತವೆ. ನಿಮ್ಮ ಅಮೂಲ್ಯವಾದ ಕೇಶರಾಶಿಯ ಉದ್ದಕ್ಕೂ ಪ್ರತಿಬಾರಿಯೂ ಹೀಟ್ ಪ್ರೊಟೆಕ್ಷನ್ ಹೇರ್ ಸ್ಪ್ರೇ ಯನ್ನು ಲೇಪಿಸಿಕೊಳ್ಳಿರಿ.

5. ಕೂದಲನ್ನು ಬಾಚುವ ಸರಿಯಾದ ಬ್ರಶ್ ಗಳನ್ನು ಆಯ್ದುಕೊಳ್ಳಿರಿ

5. ಕೂದಲನ್ನು ಬಾಚುವ ಸರಿಯಾದ ಬ್ರಶ್ ಗಳನ್ನು ಆಯ್ದುಕೊಳ್ಳಿರಿ

ನೇರವಾಗಿ ಹೇಳಬೇಕೆಂದರೆ, ಲೋಹದ ಹಲ್ಲುಗಳಿರುವ ಬ್ರಶ್ ಗಳು ನಿಮ್ಮ ಕೇಶರಾಶಿಯನ್ನು ಹರಿದುಹಾಕುತ್ತವೆ. ಹಾಗಾಗಿ, ನಿಮ್ಮ ಕೂದಲಾಣೆಗೂ ನೀವು ಅಂತಹ ಬ್ರಶ್ ಗಳನ್ನು ಬಳಸಬೇಡಿರಿ. ಸ್ಟೈಲಿಸ್ಟ್ ಗಳು ಪ್ಲಾಸ್ಟಿಕ್ ಮತ್ತು ಮರದ ಬ್ರಶ್ ಗಳಿಗೆ ಆದ್ಯತೆ ನೀಡುತ್ತಾರೆ. ಉರುಟಾದ ಹಲ್ಲುಗಳಿರುವ ಬ್ರಶ್ ಗಳನ್ನು ಬಳಸಬೇಕು. ಮರದ ಬ್ರಶ್ ಒಳ್ಳೆಯದು ಏಕೆಂದರೆ ಅದಕ್ಕೆ ಆ್ಯಂಟಿ-ಸ್ಟಾಟಿಕ್ ಪರಿಣಾಮವಿದೆ, ಆದರೆ ಪ್ಲಾಸ್ಟಿಕ್ ಬಾಚಣಿಗೆಗಳು ಅಗ್ಗವಾದವು. ಒಂದೊಮ್ಮೆ ನಿಮ್ಮ ಕೇಶರಾಶಿಯು ಗೋಜಲುಗೋಜಲಾಗಿದ್ದರೆ, ಬ್ರಶ್ ಮಾಡಿಕೊಳ್ಳುವುದರ ಮೂಲಕ ಅದನ್ನು ಹಿಂಸಿಸಬೇಡಿ, ಬದಲಿಗೆ ನಿಮ್ಮ ಬೆರಳುಗಳನ್ನೇ ಉಪಯೋಗಿಸಿ. ಒದ್ದೆಯಾಗಿರುವ ಕೇಶರಾಶಿಯನ್ನು ಬಾಚಿಕೊಳ್ಳುವುದು ಸೂಕ್ತವಲ್ಲ ಎಂಬ ಸಲಹೆಯನ್ನೂ ನೆನಪಿನಲ್ಲಿಟ್ಟುಕೊಳ್ಳಬೇಕು; ಕೇಶರಾಶಿಗೆ ಹಾನಿಯಾಗುವುದನ್ನು ತಪ್ಪಿಸಲು ಅದು ಒಂದಿಷ್ಟು ಒಣಗುವವರೆಗೆ ಕಾಯಿರಿ. ಗೋಜಲುಗೋಜಲಾಗಿರುವ ಕೇಶರಾಶಿಯು ನಿಮಗೆ ಕಿರಿಕಿರಿಯನ್ನುಂಟು ಮಾಡುತ್ತಿದ್ದಲ್ಲಿ, ನಿಮಗೆ ನೆರವಾಗಬಲ್ಲಂತಹ ಜಾಣ ಆಯ್ಕೆಯೊಂದು ಮಾರುಕಟ್ಟೆಯಲ್ಲಿ ಲಭ್ಯವಿದೆ. ಅದರ ಹೆಸರು "ಟ್ಯಾಂಗಲ್ ಟೀಸರ್" ಎಂದು. ನಿಮ್ಮ ಕೇಶರಾಶಿಯು ಹರಿಯದ ರೀತಿಯಲ್ಲಿ ಬ್ರಶ್ ಮಾಡಲು ಅತ್ಯುತ್ತಮ ಸಲಕರಣೆಯೆಂದು ಈ ಬ್ರಶ್ ಸಾಬೀತಾಗಿದೆ.

ರಕ್ತದ ಮತ್ತು ಪೋಷಕಾಂಶಗಳ ಸುಧಾರಿತ ಪೂರೈಕೆಗಾಗಿ, ಕೇಶರಾಶಿಯನ್ನು ದಿನಕ್ಕೆ ಕನಿಷ್ಟ 4 ಬಾರಿ ಬಾಚಿಕೊಳ್ಳಬೇಕು. ಹಾಗೂ ಪ್ರತಿ ಬಾರಿಯೂ ಆ ಕೆಲಸವನ್ನು ದೃಢವಾಗಿ 3 ರಿಂದ 5 ನಿಮಿಷಗಳವರೆಗೆ ಮಾಡಬೇಕು.

6. ಮಾನಸಿಕ ಒತ್ತಡಗಳನ್ನು ದೂರವಿರಿಸಿರಿ

6. ಮಾನಸಿಕ ಒತ್ತಡಗಳನ್ನು ದೂರವಿರಿಸಿರಿ

ಬಹುತೇಕ ಪ್ರಕರಣಗಳಲ್ಲಿ, ಕೇಶನಷ್ಟದ ಹಾಗೂ ಇತರ ಆರೋಗ್ಯ ತೊಂದರೆಗಳ ಕಾರಣವು ಆಗಾಗ್ಗೆ ಉಂಟಾಗುವ ಮಾನಸಿಕ ಒತ್ತಡವಾಗಿರುತ್ತದೆ. ಸಾಧ್ಯವಾದಷ್ಟು ಯಾವಾಗಲೂ ಮನಸ್ಸನ್ನು ಪ್ರಫುಲ್ಲವಾಗಿರಿಸಿಕೊಳ್ಳಲು ಪ್ರಯತ್ನಿಸಿರಿ. ನಿದ್ದೆಗೆಂದು ನೀವು ವ್ಯಯಿಸುವ ಸಮಯದತ್ತ ಗಮನವಿರಲಿ. ಪ್ರತಿದಿನ ಕನಿಷ್ಟ 7 ಘಂಟೆಗಳಷ್ಟಾದರೂ ನೀವು ನಿದ್ರಿಸಲೇಬೇಕು. ಏಕೆಂದರೆ, ಗಾಢನಿದ್ರೆಯ ಅವಧಿಯಲ್ಲೇ ಕೂದಲು ಅತ್ಯಂತ ಸೊಂಪಾಗಿ ಬೆಳೆಯುವುದು! ಹೆಚ್ಚು ನಡಿಗೆಯನ್ನು ಕೈಗೊಳ್ಳಿ ಹಾಗೂ ತಾಜಾ ಹವೆಯನ್ನು ಆನಂದಿಸಿರಿ. ಈ ಎಲ್ಲ ಅಂಶಗಳು ಕೇವಲ ನಿಮ್ಮ ಕೇಶರಾಶಿಯ ಆರೋಗ್ಯಕ್ಕಷ್ಟೇ ತಮ್ಮ ಕೊಡುಗೆಯನ್ನು ಸಲ್ಲಿಸುವುದಲ್ಲ, ಬದಲಿಗೆ ನಿಮ್ಮ ಸಂಪೂರ್ಣ ಶರೀರದ ಸ್ವಾಸ್ಥ್ಯಕ್ಕೆ ಕಾಣಿಕೆ ನೀಡಬಲ್ಲವು.

7. ವಾರಕ್ಕೆ 3 ಬಾರಿಗಿಂತಲೂ ಹೆಚ್ಚಿಗೆ ಕೇಶರಾಶಿಯನ್ನು ತೊಳೆಯುವುದು ಬೇಡ

7. ವಾರಕ್ಕೆ 3 ಬಾರಿಗಿಂತಲೂ ಹೆಚ್ಚಿಗೆ ಕೇಶರಾಶಿಯನ್ನು ತೊಳೆಯುವುದು ಬೇಡ

ನಿಮ್ಮ ಕೇಶರಾಶಿಯಲ್ಲಿ ತೈಲಾಂಶವು ಅಧಿಕವಾಗಿದ್ದರೂ ಕೂಡ, ವಾರಕ್ಕೆ 3 ಬಾರಿಗಿಂತಲೂ ಹೆಚ್ಚಿಗೆ ಅದನ್ನು ತೊಳೆಯಲು ಪ್ರಯತ್ನಿಸುವುದು ಬೇಡ. ಪ್ರತಿದಿನವಂತೂ ಕೇಶರಾಶಿಯನ್ನು ತೊಳೆಯುವುದೇ ಬೇಡ. ಹಾಗೆ ಮಾಡಿದಲ್ಲಿ ಕೂದಲು ಒಣಕಲಾಗುತ್ತದೆ ಹಾಗೂ ದುರ್ಬಲಗೊಳ್ಳುತ್ತದೆ. ಒಂದೊಮ್ಮೆ ನೀವು ಜಿಮ್ ಗೆ ಹೋಗುವವರಾಗಿದ್ದು, ನಿಮ್ಮ ಕೂದಲು ಧೂಳುಮಯವಾಗುತ್ತದೆಯೆಂದಾದಲ್ಲಿ, ಶುಷ್ಕ ಶ್ಯಾಂಪೂವನ್ನು ಬಳಸಿರಿ. ಕೇಶರಾಶಿಯನ್ನು ಸ್ಟೈಲಿಶ್ ಆಗಿ ಇರಿಸಿಕೊಳ್ಳುವುದಕ್ಕಾಗಿಯೂ ನಿಜ ಅರ್ಥದಲ್ಲಿ ಇದು ತಾಂತ್ರಿಕ ಸಂಪತ್ತು. ಶುಷ್ಕ ಶ್ಯಾಂಪೂ ನಿಮ್ಮ ಕೇಶರಾಶಿಯನ್ನು ತ್ವರಿತವಾಗಿ ಸ್ವಚ್ಛಗೊಳಿಸುವುದಷ್ಟೇ ಅಲ್ಲ, ಜೊತೆಗೆ ಅದು ನಿಮ್ಮ ಕೇಶರಾಶಿಯನ್ನು ಇನ್ನಷ್ಟು ಸೊಂಪಾಗಿಸಿ ಅದನ್ನು ಸ್ಥಿರವಾಗಿರಿಸುತ್ತದೆ.

8. ನಿಮ್ಮ ಕೇಶವಿನ್ಯಾಸಕರನ್ನು ನಿಯಮಿತವಾಗಿ ಭೇಟಿಯಾಗುತ್ತಿರಿ

8. ನಿಮ್ಮ ಕೇಶವಿನ್ಯಾಸಕರನ್ನು ನಿಯಮಿತವಾಗಿ ಭೇಟಿಯಾಗುತ್ತಿರಿ

ಕೇಶರಾಶಿಯ ಆರೋಗ್ಯವನ್ನು ಕಾಪಾಡಿಕೊಳ್ಳಲು, ಕೂದಲ ತುದಿಗಳನ್ನು ಪ್ರತೀ ಮೂರು ತಿಂಗಳುಗಳಿಗೊಮ್ಮೆ ಓರಣಗೊಳಿಸಿಕೊಳ್ಳುತ್ತಿರಬೇಕು: ತುದಿಭಾಗವನ್ನು 1 ಇಂಚಿನಷ್ಟು ಕತ್ತರಿಸಿಕೊಳ್ಳುತ್ತಿದ್ದಲ್ಲಿ, ಅದು ಆರೋಗ್ಯಪೂರ್ಣ ಕೇಶರಾಶಿಯ ಬೆಳವಣಿಗೆಯನ್ನು ವೃದ್ಧಿಸುತ್ತದೆ, ಹಾಗೂ ಕೇಶರಾಶಿಯು ಒಡನೆಯೇ ಓರಣವಾಗಿ ಕಾಣಿಸಿಕೊಳ್ಳುವಂತೆ ಮಾಡುತ್ತದೆ. ನಿಮ್ಮ ಕೇಶವಿನ್ಯಾಸಕರನ್ನು ಬದಲಾಯಿಸಲು ಹೋಗಬೇಡಿ. ನೀವು ನಂಬುತ್ತೀರೋ ಇಲ್ಲವೋ, ಕೇಶರಾಶಿಯು ಒಬ್ಬರೇ ವಿನ್ಯಾಸಕರಿಗೆ ಒಗ್ಗಿಕೊಂಡು ಬಿಡುತ್ತದೆ ಹಾಗೂ ಒಂದೊಮ್ಮೆ ನೀವು ನಿಮ್ಮ ಕೇಶಗುರುವನ್ನು ವಂಚಿಸಿದರೆ ಅದು ಕೆಟ್ಟದಾಗಿ ನಡೆದುಕೊಳ್ಳಲಾರಂಭಿಸುತ್ತದೆ!

9. ನಿಮ್ಮ ಕೇಶರಾಶಿಗೆ ಒಂದಿಷ್ಟು ವಿಶ್ರಾಂತಿಯನ್ನು ಕೊಡಿ

9. ನಿಮ್ಮ ಕೇಶರಾಶಿಗೆ ಒಂದಿಷ್ಟು ವಿಶ್ರಾಂತಿಯನ್ನು ಕೊಡಿ

ಡೈಯಿಂಗ್ ಮಾಡಿಕೊಳ್ಳುವಲ್ಲಿಂದ, ಪರ್ಮಿಂಗ್ ನಿಂದ, ಹೇರ್ ಡ್ರೈಯರ್ ಗಳಿಂದ, ಮತ್ತು ಹಾಗೆ ಸುಮ್ಮನೇ ತೀರಾ ಬಿಗಿಯಾದ ಕೇಶವಿನ್ಯಾಸಗಳಿಂದ: ಆಗಾಗ್ಗೆ ಕೈಗೊಳ್ಳುವ ಪೋನಿ ಟೈಲ್ ಗಳು ಅಥವಾ ಬನ್ ಗಳು ಅಥವಾ ಬ್ರೇಯಿಡ್ ಗಳು ನಿಮ್ಮ ಕೂದಲ ಎಳೆಗಳನ್ನು ದುರ್ಬಲಗೊಳಿಸಬಲ್ಲವು ಹಾಗೂ ನೆತ್ತಿಗೆ ರಕ್ತದ ಪೂರೈಕೆಯನ್ನು ಕುಂಠಿತಗೊಳಿಸಬಲ್ಲವು, ಹಾಗೂ ಇದರ ಪರಿಣಾಮ, - ಕೇಶರಾಶಿಯು ಇನ್ನಷ್ಟು ತೀವ್ರವಾಗಿ ಹಾನಿಗೀಡಾಗಬಲ್ಲದು. ಕೇಶರಾಶಿಯು ಸಹಜವಾಗಿಯೇ ಶುಷ್ಕಗೊಂಡಾಗಲೇ ಅತ್ಯುತ್ತಮವಾಗಿರುತ್ತದೆ ಎಂಬುದನ್ನು ನೆನಪಿಟ್ಟುಕೊಳ್ಳಿ.

10. ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಇಮ್ಮಡಿ ರಕ್ಷಣೆ

10. ಚಳಿಗಾಲದಲ್ಲಿ ಮತ್ತು ಬೇಸಿಗೆಯಲ್ಲಿ ಇಮ್ಮಡಿ ರಕ್ಷಣೆ

ಕೇಶರಾಶಿಯು ಹೆಚ್ಚು ಹಾನಿಗೀಡಾಗುವುದು ಬೇಸಿಗೆ ಮತ್ತು ಚಳಿಗಾಲಗಳಲ್ಲಿ. ಮಂಜಿನಿಂದ ಹಾಗೂ ಬಿಸಿಲಿನಿಂದ ಅದು ಸುಲಭವಾಗಿ ಹಾನಿಗೊಳಗಾಗುತ್ತದೆ. ವಿಪರೀತ ಬಿಸಿಲಿಗೆ ಒಡ್ಡಿಕೊಂಡಾಗ ಅದು ಹೊಳಪನ್ನು ಕಳೆದುಕೊಳ್ಳುವುದಷ್ಟೇ ಅಲ್ಲ, ಜೊತೆಗೆ ಇನ್ನಷ್ಟು ಒಣಕಲಾಗುತ್ತದೆ; ಆ ಮೂಲಕ ಅದರ ವಿನ್ಯಾಸವು ಹಾಳಾಗುತ್ತದೆ. ವಿಶೇಷವಾಗಿ ಡೈ ಲೇಪಿತ ಕೇಶರಾಶಿಯು ಅನಿಷ್ಟಕರ ರೀತಿಯಲ್ಲಿ ಪ್ರಭಾವಿತವಾಗುತ್ತದೆ. ಆದ್ದರಿಂದ, ನೀವು ಉಪಯೋಗಿಸುವ ಕೇಶರಾಶಿಯ ಆರೈಕೆಗೆ ಸಂಬಂಧಿಸಿದ ಉತ್ಪನ್ನಗಳು ಪ್ರಬಲ ಎಸ್.ಪಿ.ಎಫ಼್. ರೇಟಿಂಗ್ ಅನ್ನು ಹೊಂದಿರುವುದನ್ನು ಖಚಿತಪಡಿಸಿಕೊಳ್ಳಿ ಇಲ್ಲವೇ ಹೆಚ್ಚುವರಿಯಾಗಿ ಹೀಟ್ ಪ್ರೊಟೆಕ್ಷನ್ ಸ್ಪ್ರೇ ಅನ್ನು ಬಳಸಿರಿ. ನೇರಳಾತೀತ ವಿಕಿರಣಗಳಿಗೆ ಕೇಶರಾಶಿಯನ್ನು ಅತಿಯಾಗಿ ಒಡ್ಡಿಕೊಳ್ಳುವುದರಿಂದ ಅವಧಿಗೆ ಮುನ್ನವೇ ಕೇಶರಾಶಿಯು ನೆರೆಯತೊಡಗುತ್ತದೆ ಎಂತಲೂ ಕೆಲವು ವಿಜ್ಞಾನಿಗಳು ನಂಬುತ್ತಾರೆ. ಹಾಗಾಗಿ, ಚಳಿಗಾಲದಲ್ಲಿ ಟೋಪಿಯನ್ನು ಧರಿಸಿಕೊಳ್ಳಿರಿ, ಬೇಸಿಗೆಯಲ್ಲಿ ಸ್ಪ್ರೇಗಳನ್ನು ಬಳಸಿರಿ ಹಾಗೂ ಕೇಶರಾಶಿಯನ್ನು ನೆರಳಲ್ಲಿ ಅಡಗಿಸಿಕೊಳ್ಳಿರಿ.

English summary

How to Get Healthy Hair Naturally in Kannada

How to get healthy hair naturally , read on..
X