For Quick Alerts
ALLOW NOTIFICATIONS  
For Daily Alerts

ಹೇರ್‌ ಸ್ಪಾ ಮನೆಯಲ್ಲಿಯೇ ಮಾಡುವಾಗ ಈ ಸ್ಟೆಪ್ಸ್ ಅನುಸರಿಸಿ

|

ಕೂದಲು ನೋಡಲು ತುಂಬಾ ಚೆನ್ನಾಗಿರಬೇಕು, ಕೂದಲು ಉದುರುವ ಸಮಸ್ಯೆ ಇರಬಾರದು, ಕೂದಲಿನ ಬುಡ ಬಲವಾಗಿರಬೇಕೆಂದರೆ ಕೂದಲಿನ ಆರೈಕೆ ಕಡೆಗೆ ಗಮನ ಹರಿಸಲೇಬೇಕು.

ಇನ್ನು ಸ್ಪಾಗಳಿಗೆ ಹೋಗಿ ಹೇರ್‌ ಕೇರ್ ಮಾಡಲು ಕೈಯಲ್ಲಿ ಅಧಿಕ ಕಾಸು ಇರಬೇಕು. ಆದರೆ ಸ್ಪಾಗಳಲ್ಲಿ ಮಾಡುವಂತೆಯೇ ನೀವು ಮನೆಯಲ್ಲಿಯೇ ಹೇರ್‌ ಕೇರ್‌ ಮಾಡಬಹುದು. ಮನೆಯಲ್ಲಿ ಮಾಡುವ ಹೇರ್‌ ಸ್ಪಾ ರಿಸಲ್ಟ್‌ಗೂ ಸ್ಪಾಗಳಿಗೆ ಹೋಗಿ ಹೇರ್‌ ಸ್ಪಾ ಮಾಡಿಸಿದಾಗ ಉಂಟಾಗುವ ರಿಸಲ್ಟ್‌ಗೂ ಏನೇ ವ್ಯತ್ಯಾಸವಿರಲ್ಲ. ಎರಡೂ ಕೂಡ ನಿಮ್ಮ ಕೂದಲಿನ ಮೇಲೆ ತುಂಬಾ ಒಳ್ಳೆಯ ಪರಿಣಾಮ ಬೀರುವುದು. ಹಾಗಾಗಿ ನೀವು ಮನೆಯಲ್ಲಿಯೇ ಹೇರ್‌ ಕೇರ್ ಮಾಡಬಹುದಾಗಿದೆ.

ಮನೆಯಲ್ಲಿಯೇ ಹೇರ್ ಸ್ಪಾ ಮಾಡುವುದರಿಂದ ಕೂದಲಿನ ಆರೈಕೆಗೆ ಯಾವೆಲ್ಲಾ ವಸ್ತುಗಳನ್ನು ಸೇರಿಸಬೇಕು ಎಂಬುವುದನ್ನು ನೀವೇ ನಿರ್ಧರಿಸಬಹುದು, ಇದರಿಂದ ಕೂದಲಿಗೆ ಯಾವುದೇ ಅಡ್ಡ ಪರಿಣಾಮ ಉಂಟಾಗುವುದಿಲ್ಲ. ಕೂದಲು ಕೂಡ ತುಂಬಾ ಚೆನ್ನಾಗಿರುತ್ತದೆ.

ಹಾಗಾದರೆ ಬನ್ನಿ, ಮನೆಯಲ್ಲಿ ಹೇರ್‌ ಸ್ಪಾ ಮಾಡುವುದು ಹೇಗೆ ಎಂದು ನೋಡೋಣ:

ಸ್ಟೆಪ್‌ 1 : ಎಣ್ಣೆ ಹಚ್ಚುವುದು

ಸ್ಟೆಪ್‌ 1 : ಎಣ್ಣೆ ಹಚ್ಚುವುದು

ಕೂದಲನ್ನು ಹೈಡ್ರೇಟ್‌ ಮಾಡಲು, ಮೃದುವಾಗಿಸಲು ಎಣ್ನೆ ಹಾಕಬೇಕು. ತಲೆಗೆ ಎಣ್ಣೆ ಹಚ್ಚುವುದರಿಂದ ತಲೆ ಹೊಟ್ಟು, ಹೇನು ಇವುಗಳನ್ನು ತಡೆಗಟ್ಟಬಹುದು. ಕೂದಲಿನ ಬುಡ ಬಲವಾಗಿರುತ್ತೆ. ಎಣ್ಣೆಯಲ್ಲಿಯರುವ ವಿಟಮಿನ್ಸ್ ಕೂದಲಿಗೆ ದೊರೆಯುವುದು.

ಎಣ್ಣೆಯನ್ನು ಸ್ವಲ್ಪ ಬಿಸಿ ಮಾಡಿ ತಲೆಗೆ ಹಚ್ಚಿದರೆ ತುಂಬ ಒಳ್ಳೆಯದು. ತಲೆಗೆ ಎಣ್ಣೆ ಹಚ್ಚಿ 20 ನಿಮಿಷ ಮಸಾಜ್‌ ಮಾಡಿ. ನೀವು ಎಣ್ಣೆ ಜೊತೆಗೆ ನೆಲ್ಲಿಕಾಯಿ, ಬೃಂಗ ರಾಜ ಮುಂತಾದವುಗಳನ್ನು ಸೇರಿಸಿದರೆ ಮತ್ತಷ್ಟು ಒಳ್ಳೆಯದು.

ಸ್ಟೆಪ್ 2

ಸ್ಟೆಪ್ 2

ಸ್ಟೀಮಿಂಗ್‌

ಕೂದಲಿಗೆ ಎಣ್ಣೆ ಹಚ್ಚಿದ ಬಳಿಕ ಸ್ಟೀಮಿಂಗ್‌ ಮಾಡಬೇಕು. ಕನಿಷ್ಠ 15 ನಿಮಿಷ ಸ್ಟೀಮಿಂಗ್ ಮಾಡಿ. ಸ್ಟೀಮಿಂಗ್‌ ಮಾಡುವುದರಿಂದ ಕೂದಲಿನ ಬುಡದ ರಂಧ್ರಗಳು ಓಪನ್ ಆಗುತ್ತವೆ, ಹೀಗಾಗಿ ಎಣ್ಣೆಯಲ್ಲಿರುವ ಖನಿಜಾಂಶಗಳು, ವಿಟಮಿನ್‌ಗಳನ್ನು ಕೂದಲಿನ ಬುಡ ಚೆನ್ನಾಗಿ ಹೀರಿಕೊಳ್ಳುತ್ತದೆ. ಕೂದಲಿನ ಬುಡದಲ್ಲಿ ರಕ್ತ ಸಂಚಾರ ಚೆನ್ನಾಗಿರುತ್ತದೆ.

ನಿಮಗೆ ಸ್ಟೀಮಿಂಗ್ ಮಾಡುವ ಸಾಧನವಿಲ್ಲದಿದ್ದರೆ ಒಂದು ಟವಲ್‌ ಅನ್ನು ಬಿಸಿ ನೀರಿನಲ್ಲಿ ಅದ್ದಿ ಹಿಂಡಿ ಅದನ್ನು ತಲೆಗೆ ಸುತ್ತಿದರೂ ಸಾಕು.

ಸ್ಟೆಪ್ 3

ಸ್ಟೆಪ್ 3

ಕೂದಲನ್ನು ತೊಳೆಯಿರಿ

ಅಕ್ಕಿ ತೊಳೆದ ನೀರಿನಿಂದ ಕೂದಲನ್ನು ತೊಳೆಯಿರಿ. ಇದಕ್ಕೆ ಬೇಕಿದ್ದರೆ ಸ್ವಲ್ಪ ಆ್ಯಪಲ್ ಸಿಡರ್ ವಿನೆಗರ್‌ ಹಾಕಿದರೂ ಇನ್ನೂ ಒಳ್ಳೆಯದು.

ಸ್ಟೆಪ್ 4

ಸ್ಟೆಪ್ 4

ಹೇರ್‌ ಮಾಸ್ಕ್‌ ಹಾಕಿ

ಈಗ ಕೂದಲಿನ ಬುಡದಿಂದ ತುದಿಯವರೆಗೆ ಹೇರ್‌ ಮಾಸ್ಕ್‌ ಹಾಕಿ. ಇದಕ್ಕೆ ನೀವು ನೈಸರ್ಗಿಕವಾದ ವಸ್ತುಗಳನ್ನೇ ಬಳಸಿ. ಮೆಹಂದಿ ಹಾಕಬಹುದು, ಮೆಂತೆ ಕಾಳನ್ನು ನೆನೆಹಾಕಿ ಅರಿದು ಪೇಸ್ಟ್ ಮಾಡಿ ಹಚ್ಚಬಹುದು, ಬಾಳೆ ಹಣ್ಣಿನ ಹೇರ್ ಮಾಸ್ಕ್‌, ಮೊಟ್ಟೆ ಮಾಸ್ಕ್‌ ಹೀಗೆ ನಿಮಗೆ ಯಾವುದು ಸೂಕ್ತ ಅನಿಸುವುದೋ ಆ ಹೇರ್ ಮಾಸ್ಕ್ ಹಚ್ಚಿ 15 ನಿಮಿಷ ಬಿಡಿ.

ಸ್ಟೆಪ್ 5

ಸ್ಟೆಪ್ 5

ಮೈಲ್ಡ್‌ ಶ್ಯಾಂಪೂ ಹಚ್ಚಿ ತೊಳೆಯಿರಿ

ಕೊನೆಯದಾಗಿ ಕೂದಲಿಗೆ ಮೈಲ್ಡ್ ಶ್ಯಾಂಪೂ ಹಚ್ಚಿ ತೊಳೆಯಿರಿ. ಹದ ಬಿಸಿ ನೀರಿನಲ್ಲಿ ತೊಳೆಯಿರಿ. ಕೂದಲು ತೊಳೆಯರು ಸೀಗೆ ಕಾಯಿ ಪುಡಿ ಅಥವಾ ನೀವು ಬಳಸುವ ಶ್ಯಾಂಪೂ ಹಾಕಬಹುದು.

ನಂತರ ಕೂದಲನ್ನು ಒರೆಸಿ, ಕೂದಲನ್ನು ಹರಡಿ ಬಿಟ್ಟು ಒಣಗಿಸಿ. ಕೂದಲು ಒಣಗಿಸಲು ಫ್ಯಾನ್ ಅಥವಾ ಹೇರ್ ಡ್ರೈಯರ್ ಬಳಸಬೇಡಿ.

ಈ ರೀತಿ ವಾರಕ್ಕೊಮ್ಮೆ ಮೊದ-ಮೊದಲು ಮಾಡಿ, ಕೂದಲು ನುಣಪಾದ ಮೇಲೆ 15 ದಿನಕ್ಕೊಮ್ಮೆ ಮಾಡಿದರೂ ಸಾಕು.

FAQ's
  • ಹೇರ್ ಸ್ಪಾ ಎಂದರೇನು?

    ಇತರ ಸ್ಪಾ ಟ್ರೀಟ್ಮೆಂಟ್‌ಗಳಂತೆ ಹೇರ್‌ ಸ್ಪಾದಿಂದ ನಿಮ್ಮ ಕೂದಲಿಗೆ ತುಂಬಾ ಪ್ರಯೋಜನಕಾರಿಯಾಗಿದೆ. ಇದು ಕೂದಲನ್ನು ಮೃದುವಾಗಿಸುವುದು ಜೊತೆಗೆ ಬಲವಾಗಿಸುವುದು. ದೂಳು, ಮಾಲಿನ್ಯ, ಸೂರ್ಯ ಕಿರನಗಳು ಇವುಗಳಿಂದ ಕೂದಲಿನ ರಕ್ಷಣೆ ಮಾಡುವಲ್ಲಿ ಈ ಹೇರ್ ಸ್ಪಾ ಪ್ರಯೋಜನಕಾರಿಯಾಗಿದೆ. ಹೇರ್ ಸ್ಪಾ ಮಾಡುವುದರಿಂದ ಕೂದಲಿನ ಸೌಂದರ್ಯ ಹೆಚ್ಚುವುದು.

  • ಹೇರ್‌ ಸ್ಪಾ ಮಾಡಿ ಕೂದಲು ಉದುರುವುದನ್ನು ತಡೆಗಟ್ಟಬಹುದೇ?

    ಹೇರ್‌ ಸ್ಪಾ ಕೂದಲಿನ ಆರೈಕೆಗೆ ಅತ್ಯುತ್ತಮವಾದ ವಿಧಾನವಾಗಿದ್ದು, ಇದರಲ್ಲಿ ಕೂದಲನ್ನು ಬುಡದಿಂದ ಆರೈಕೆ ಮಾಡುವುದರಿಂದ ಕೂದಲಿನ ಬುಡ ಬಲವಾಗುವುದು. ಹೀಗಾಗಿ ಕೂದಲು ಉದುರುವ ಸಮಸ್ಯೆ ತಡೆಗಟ್ಟಲು ಈ ವಿಧಾನ ಸಹಕಾರಿವಾಗಿದೆ. ಹೇರ್ ಸ್ಪಾದಲ್ಲಿ ಕೂದಲಿಗೆ ಎಣ್ಣೆ ಹಚ್ಚಿ ನಂತರ ಸ್ಟೀಮಿಂಗ್ ಮಾಡುವುದರಿಂದ ಕೂದಲಿನ ಬುಡ ಎಣ್ಣೆಯಂಶ ಚೆನ್ನಾಗಿ ಹೀರಿಕೊಳ್ಳುವುದು, ಇದರಿಂದ ಕೂದಲಿನ ಬುಡ ಬಲವಾಗುವುದು.

  • ಹೇರ್‌ ಸ್ಪಾಗೆ ಎಷ್ಟು ವೆಚ್ಚ ತಗುಲಬಹುದು?

    ಸಲೂನ್‌ಗಳಲ್ಲಿ ಹೇರ್ ಸ್ಪಾ ಮಾಡಲು ಕನಿಷ್ಠ 450ರಿಂದ 500ರೂ ಬೇಕಾಗುವುದು. ಇನ್ನು ದೊಡ್ಡ-ದೊಡ್ಡ ಸಲೂನ್‌ಗಳಿಗೆ ಹೋದರೆ ಹೇರ್ ಸ್ಪಾ ದುಬಾರಿಯಾಗುವುದು. ಅದೇ ಮನೆಯಲ್ಲಿಯೇ ಹೇರ್ ಸ್ಪಾ ಮಾಡುವುದಾದರೆ 100 ರುಪಾಯಿ ಕೂಡ ಬೇಕಾಗಿಲ್ಲ.

English summary

How To Do Hair Spa At Home: Steps in Kannada

How To Do Hair Spa At Home: Steps in Kannada, read on...
X
Desktop Bottom Promotion