For Quick Alerts
ALLOW NOTIFICATIONS  
For Daily Alerts

ಆಯುರ್ವೇದದ ಪ್ರಕಾರ ತಲೆಗೆ ಎಣ್ಣೆ ಹೀಗೆ ಹಚ್ಚಿದರೆ ಒಳ್ಳೆಯದು

|

ಆಯುರ್ವೇದವು ತುಂಬಾ ಪುರಾತನ ವೈದ್ಯಕೀಯ ಚಿಕಿತ್ಸಾ ಪದ್ಧತಿಯಾಗಿದ್ದು, ಸಾವಿರಾರು ವರ್ಷಗಳಿಂದಲೂ ಭಾರತದಲ್ಲಿ ಬಳಸಿಕೊಂಡು ಬರಲಾಗುತ್ತಾ ಇದೆ. ಆಯುರ್ವೇದವು ಕೇವಲ ರೋಗಕ್ಕೆ ಮದ್ಧು ನೀಡದೆ ಸಂಪೂರ್ಣವಾಗಿ ದೇಹವು ಆ ದೇಹದ ವಿರುದ್ಧ ಹೋರಾಡುವಂತಹ ಶಕ್ತಿ ಪಡೆಯುವಂತೆ ಮಾಡುವುದು. ಹೀಗಾಗಿ ಆಯುರ್ವೇದವು ಫಲಿತಾಂಶ ನೀಡುವುದು ಸ್ವಲ್ಪ ನಿಧಾನವಾದರೂ ಅದು ತುಂಬಾ ಪರಿಣಾಮಕಾರಿ ಆಗಿರುವುದು. ಆಯುರ್ವೇದದ ಪ್ರಕಾರ ನಮ್ಮ ನಿತ್ಯ ಆಹಾರ ಪದ್ಧತಿ ಇತ್ಯಾದಿಗಳ ಬಗ್ಗೆಯೂ ಹೇಳಲಾಗಿದೆ. ಪ್ರಮುಖವಾಗಿ ಕೂದಲಿಗೆ ಹಾಗೂ ದೇಹಕ್ಕೆ ಯಾವಾಗ ಎಣ್ಣೆ ಹಚ್ಚಿಕೊಳ್ಳಬೇಕು ಎಂದು ಆಯುರ್ವೇದದಲ್ಲಿ ಸ್ಪಷ್ಟವಾಗಿ ಹೇಳಲಾಗಿದೆ.

ನಿಯಮಿತವಾಗಿ ಎಣ್ಣೆಯ ಮಸಾಜ್ ಪಡೆಯುವಂತಹ ದೇಹದ ಮೇಲೆ ಹೆಚ್ಚಿನ ಪರಿಣಾಮ ಆಗುವುದಿಲ್ಲ. ಅಪಘಾತ ಅಥವಾ ಇತರ ಗಂಭೀರ ಸಮಸ್ಯೆಯ ವೇಳೆಯು ಇದು ಹೆಚ್ಚು ಹಾನಿಯಾಗದಂತೆ ತಡೆಯುವುದು. ಎಣ್ಣೆ ಮಸಾಜ್ ಮಾಡಿಕೊಳ್ಳುವ ವ್ಯಕ್ತಿಯ ದೇಹವು ತುಂಬಾ ಆಹ್ಲಾದಕರ, ಕಟ್ಟುಮಸ್ತಾದ ಅಂಗಾಂಗಗಳು ಮತ್ತು ವಯಸ್ಸಾಗುತ್ತಿದ್ದರೂ ಇದು ತುಂಬಾ ಬಲಿಷ್ಠ ಹಾಗೂ ಕಾಂತಿಯುತವಾಗಿರುವುದು.'' ಹೀಗೆಂದು ಚರಕ ಸಂಹಿತ: ಸುತ್ರಸ್ಥಾನ: ವಿ:88-89ನಲ್ಲಿ ಬರೆಯಲಾಗಿದೆ.

ತಲೆಬುರುಡೆ ಮತ್ತು ಕೂದಲಿಗೆ ಎಣ್ಣೆ ಹಚ್ಚುವುದು ಪುರಾತನ ಮತ್ತು ಸಾಂಪ್ರದಾಯಿಕ ವಿಧಾನವಾಗಿದೆ. ಇದು ಕೂದಲಿನ ಗುಣಮಟ್ಟ ಹಾಗೂ ಬಲ ಹೆಚ್ಚಿಸುವುದು. ತಲೆಬುರುಡೆಗೆ ಎಣ್ಣೆ ಹಚ್ಚಿಕೊಳ್ಳುವ ವೇಳೆ ಸಿಗುವ ಲಾಭಗಳು.

ತಲೆಬುರುಡೆ(ಮುದ್ರಾ ತೈಲ) ಹಚ್ಚಿಕೊಳ್ಳುವ ಲಾಭಗಳು

ತಲೆಬುರುಡೆ(ಮುದ್ರಾ ತೈಲ) ಹಚ್ಚಿಕೊಳ್ಳುವ ಲಾಭಗಳು

ಕೂದಲು ತುಂಬಾ ದಪ್ಪ, ಮೃಧು ಮತ್ತು ಕಾಂತಿಯುತವಾಗಿ ಬೆಳೆಯಲು ನೆರವಾಗುವುದು.

ಸ್ಪರ್ಶದ ಅಂಗಾಂಗಳನ್ನು ಇದು ಶಮನ ಮತ್ತು ಉತ್ತೇಜಿಸಲು ನೆರವಾಗುವುದು.

ಮುಖದ ಮೇಲಿನ ನೆರಿಗೆ ನಿವಾರಣೆ ಮಾಡುವುದು.

ಭೃಂಗರಾಜ ತೈಲ, ಬ್ರಾಹ್ಮಿ ತೈಲ ಮತ್ತು ಆರೋಗ್ಯಕಾರಿ ಕೂದಲಿನ ತೈಲಗಳು ತಲೆಬುರುಡೆಯ ಮಸಾಜ್ ಗೆ ತುಂಬಾ ಒಳ್ಳೆಯದು.

ತಲೆಬುರುಡೆ ಮೇಲೆ ತೈಲದ ಮಸಾಜ್ ಮಾಡುವುದರಿಂದ ಅತ್ಯಧಿಕ ಲಾಭ ಪಡೆಯಲು ಸರಿಯಾದ ಕ್ರಮ ಹಾಗೂ ಸಮಯದಲ್ಲಿ ಇದನ್ನು ಹಚ್ಚಬೇಕು. ಯಾವ ರೀತಿಯ ಲಾಭ ಪಡೆಯಲು ಬಯಸುತ್ತೀರಿ ಎನ್ನುವುದರ ಮೇಲೆ ಯಾವ ವಿಧಾನ ಮತ್ತು ಹೇಗೆ ಹಚ್ಚಿಕೊಳ್ಳುವಿರಿ ಎನ್ನುವುದು ಅವಲಂಬಿಸಿರುವುದು. ಇಲ್ಲಿ ತೈಲ ಹಚ್ಚುವ

ವಿಧಾನಗಳು ಮತ್ತು ಅದರ ಕೆಲವೊಂದು ಲಾಭಗಳ ಬಗ್ಗೆ ತಿಳಿಸಿಕೊಡಲಿದ್ದೇವೆ.

ಕೂದಲಿನ ಗುಣಮಟ್ಟ ಸುಧಾರಿಸಲು

ಕೂದಲಿನ ಗುಣಮಟ್ಟ ಸುಧಾರಿಸಲು

ಕೂದಲಿನ ಬೆಳವಣಿಗೆಯು ಸರಿಯಾಗಿದ್ದ ವೇಳೆ, ತುದಿಗಳು ಸೀಳದೆ ಇರುವಾಗ, ನಯ ಹಾಗೂ ಕಾಂತಿಯುತ ಕೂದಲು, ಅಕಾಲಿಕ ಬಿಳಿಯಾಗುವಿಕೆ ಸಮಸ್ಯೆ ಇಲ್ಲದೆ ಇದ್ದರೆ ಆಗ ಕೂದಲಿನ ಗುಣಮಟ್ಟವು ಸುಧಾರಣೆ ಆಗುತ್ತಿದೆ ಎಂದು ಹೇಳಬಹುದು. ರಾತ್ರಿ ಮಲಗುವ ಮೊದಲು ಕೂದಲು ಮತ್ತು ತಲೆಬುರುಡೆಗೆ ಸರಿಯಾಗಿ ಎಣ್ಣೆ ಹಚ್ಚಿಕೊಳ್ಳಬೇಕು. ರಾತ್ರಿಯಿಡಿ ಹಾಗೆ ಬಿಡಬೇಕು ಮತ್ತು ಬೆಳಗ್ಗೆ ಎದ್ದು ಉಗುರುಬೆಚ್ಚಗಿನ ನೀರಿನಲ್ಲಿ ಸ್ನಾನ ಮಾಡಿ ಕೂದಲು ತೊಳೆಯಬೇಕು.

ಕೂದಲು ಯಾವಾಗ ತೊಳೆಯಬೇಕು ಎಂದು ಇಚ್ಛಿಸುವಿರೋ ಆಗ ನೀವು ಎಣ್ಣೆ ಹಚ್ಚಿಕೊಳ್ಳಬಹುದು. ಪ್ರತಿನಿತ್ಯವೂ ಕೂದಲು ತೊಳೆಯಬಾರದು. ಅದರಲ್ಲೂ ಉದ್ದ ಕೂದಲು ಇರುವವರು ಪ್ರತಿನಿತ್ಯ ಕೂದಲು ತೊಳೆಯಬಾರದು. ವಾರದಲ್ಲಿ ಎರಡು ಅಥವಾ ಮೂರು ದಿನಗಳ ಕಾಲ ಮಾತ್ರ ಕೂದಲು ತೊಳೆಯಿರಿ.

ಕೆಲವು ಜನರು ಕೂದಲು ತೊಳೆದ ಬಳಿಕ ಕೂಡ ತೈಲ ಹಚ್ಚಿಕೊಳ್ಳುವರು. ಆದರೆ ಹೀಗೆ ಮಾಡುವುದು ಸರಿಯಲ್ಲ. ಯಾಕೆಂದರೆ ಕೂದಲು ಧೂಳು ಮತ್ತು ಕಲುಷಿತ ವಾತಾವರಣದ ಕಣಗಳನ್ನು ಸೆಳೆಯಬಹುದು. ಮನೆಯಲ್ಲೇ ಇದ್ದರೆ ಆಗ ನೀವು ಕೂದಲಿಗೆ ಸ್ವಲ್ಪ ಎಣ್ಣೆ ಹಚ್ಚಿಕೊಳ್ಳಬಹುದು. ಕೂದಲು ಬೆಳವಣಿಗೆ ಆಗಬೇಕಿದ್ದರೆ ಆಗ ನೀವು ತಲೆಬುರುಡೆ, ಕೂದಲಿನ ಬುಡ ಹಾಗೂ ಸಂಪೂರ್ಣ ಕೂದಲಿಗೆ ತೈಲ ಹಚ್ಚಿ. ತಲೆಬುರುಡೆಗೆ ತೈಲ ಹಚ್ಚುವ ಮೊದಲು ನೀವು ಸ್ವಲ್ಪ ಬಿಸಿ ಮಾಡಿ. ಆದರೆ ಪಿತ್ತ ಅಸಮತೋಲನ, ತಲೆನೋವು ಅಥವಾ ತಲೆಬುರುಡೆಯಲ್ಲಿ ದದ್ದು ಇದ್ದರೆ ಆಗ ನೀವು ತೈಲದ ಚಿಕಿತ್ಸೆ ಕಡೆಗಣಿಸಿ.

ತಲೆಹೊಟ್ಟು ನಿವಾರಣೆ ಮಾಡಲು

ತಲೆಹೊಟ್ಟು ನಿವಾರಣೆ ಮಾಡಲು

ತಲೆಬುರುಡೆಯಲ್ಲಿ ತಲೆಹೊಟ್ಟಿನಿಂದಾಗಿ ನಿಮಗೆ ತುಂಬಾ ಕಿರಿಕಿರಿ ಆಗುತ್ತಲಿದ್ದರೆ, ಆಗ ನೀವು ನಿಯಮಿತವಾಗಿ ತೈಲ ಹಚ್ಚಿಕೊಂಡರೆ ತಲೆಹೊಟ್ಟಿನ ಸಮಸ್ಯೆ ನಿವಾರಣೆ ಮಾಡಬಹುದು.

ಇದಕ್ಕಾಗಿ ನೀವು ಬೇವಿನ ಎಣ್ಣೆ ಮತ್ತು ಸ್ವಲ್ಪ ಕಹಿ ಸುವಾಸನೆ ನೀಡುವಂತಹ ಸಾರಭೂತ ತೈಲಗಳನ್ನು ಬಳಸಬಹುದು. ಸ್ನಾನಕ್ಕೆ ಒಂದು ಗಂಟೆಗೆ ಮೊದಲು ತಲೆಬುರುಡೆ ಮತ್ತು ಕೂದಲಿಗೆ ಈ ಎಣ್ಣೆ ಹಚ್ಚಿಕೊಳ್ಳಿ. ಇದರ ಬಳಿಕ ಬಿಸಿ ನೀರಿನಿಂದ ಕೂದಲು ತೊಳೆಯಿರಿ.

ತಲೆನೋವು ನಿವಾರಿಸಲು

ತಲೆನೋವು ನಿವಾರಿಸಲು

ತಲೆನೋವು ನಿವಾರಣೆ ಮಾಡಲು ಆಯುರ್ವೇದ ತೈಲ ಬಳಸಬಹುದು ಅಥವಾ ವೈದ್ಯರ ಸಲಹೆ ಪಡೆದು ನೀವು ಇದನ್ನು ಬಳಸಬಹುದು.

ಸಂಜೆ ವೇಳೆ ಅಂದರೆ 6 ಗಂಟೆಗೆ ತೈಲ ಹಚ್ಚಿಕೊಳ್ಳಬೇಕು. ಯಾಕೆಂದರೆ ತಲೆನೋವು ಸಾಮಾನ್ಯವಾಗಿ ವಾತದಿಂದ ಬರುವುದು ಮತ್ತು ಈ ಸಮಯವು ವಾತದ ಸಮಯವಾಗಿರುವುದು. ಇದರಿಂದ ಈ ಸಮಯದಲ್ಲಿ ಸರಿಯಾಗಿ ತೈಲ ಹಚ್ಚಿಕೊಳ್ಳಿ.

ಸರಿಯಾಗಿ ನಿದ್ರೆ ಬರಲು

ಸರಿಯಾಗಿ ನಿದ್ರೆ ಬರಲು

ಮಲಗುವ ಅರ್ಧ ಗಂಟೆಗೆ ಮೊದಲು ತೈಲದಿಂದ ತಲೆಗೆ ಮಸಾಜ್ ಮಾಡಿಕೊಂಡರೆ ಆಗ ಖಂಡಿತವಾಗಿಯೂ ಒಳ್ಳೆಯ ನಿದ್ರೆ ಬರುವುದು. ಪರಿಣಾಮಕಾರಿ ಆಗಿರಲು ನೀವು ಎಳ್ಳೆಣ್ಣೆ ಬಳಸಿ. ಎಳ್ಳೆಣ್ಣೆ ಬಳಸಿದರೆ ಆಗ ತಲೆ ಬೋಳು ಆಗುವುದನ್ನು ತಡೆಯಲು, ಅಕಾಲಿಕ ಕೂದಲು ಬಿಳಿಯಾಗುವುದು ಮತ್ತು ತಲೆನೋವು ತಡೆಯುತ್ತದೆ ಎಂದು ಆಯುರ್ವೇದವು ಹೇಳುತ್ತದೆ.

ಕೇರಳದಲ್ಲಿನ ಹೆಚ್ಚಿನ ಆಯುರ್ವೇದ ಥೆರಪಿ ಕೇಂದ್ರಗಳು ಎಳ್ಳೆಣ್ಣೆ ಬಳಸುತ್ತವೆ.

ಎಳ್ಳೆಣ್ಣೆಗೆ ಪರ್ಯಾಯವೆಂದರೆ ಅದು ತೆಂಗಿನ ಎಣ್ಣೆ. ತೆಂಗಿನ ಎಣ್ಣೆಯನ್ನು ಹದವಾಗಿ ಬಿಸಿ ಮಾಡಿಕೊಂಡು, ಕೂದಲು ಹಾಗೂ ತಲೆಬುರುಡೆಗೆ ಹಚ್ಚಿಕೊಳ್ಳಬೇಕು. ಹೀಗೆ ಮಾಡಿದರೆ ಶೀತ ದೂರವಾಗುವುದು ಮತ್ತು ಸೈನಟಿಸ್ ದೂರವಾಗುವುದು.

ಈಗ ಕೂದಲು ಹಾಗೂ ತಲೆಬುರುಡೆಗೆ ತೈಲ ಹಚ್ಚಿಕೊಳ್ಳುವ ಸರಿಯಾದ ವಿಧಾನ ನಿಮಗೆ ತಿಳಿದಿದೆ ಎಂದು ನಾವು ಭಾವಿಸುತ್ತೇವೆ. ನಿಮ್ಮ ಅಭಿಪ್ರಾಯಗಳನ್ನು ಕಮೆಂಟ್ ಬಾಕ್ಸ್ ನಲ್ಲಿ ಬರೆಯಲು ಮರೆಯಬೇಡಿ.

English summary

How To Apply Oil For Head Accodring To Ayurveda

Accodring to ayruveda there is rules apply oil for body and hair, Here We have given tips to apply oil asper ayurveda, Take a look.
Story first published: Tuesday, December 17, 2019, 11:30 [IST]
We use cookies to ensure that we give you the best experience on our website. This includes cookies from third party social media websites and ad networks. Such third party cookies may track your use on Boldsky sites for better rendering. Our partners use cookies to ensure we show you advertising that is relevant to you. If you continue without changing your settings, we'll assume that you are happy to receive all cookies on Boldsky website. However, you can change your cookie settings at any time. Learn more
X