For Quick Alerts
ALLOW NOTIFICATIONS  
For Daily Alerts

ನಿಮ್ಮ ಕೂದಲನ್ನು ಎಷ್ಟು ದಿನಗಳಿಗೊಮ್ಮೆ ತೊಳೆಯಬೇಕು ಗೊತ್ತಾ?

|

ಹೆಂಗಸರೆಲ್ಲಾ ಒಟ್ಟಿಗೆ ಕೂತು ಮಾತನಾಡುವಾಗ ಕೂದಲಿನ ಆರೈಕೆಯ ಬಗ್ಗೆ ಒಂದಲ್ಲ ಒಂದು ರೀತಿಯಲ್ಲಿ ಚರ್ಚೆ ನಡೆದೇ ನಡೆಯುತ್ತದೆ. ಅಯ್ಯೋ ನನ್ ಕೂದಲಾ ಎಷ್ಟು ಉದುರುತ್ತೆ ಗೊತ್ತಾ? ಸಿಕ್ಕಾಪಟ್ಟೆ ಡ್ರ್ಯಾಂಡ್ರಫ್ ಆಗುತ್ತೆ. ಅದಿಕ್ಕೆ ದಿನಾ ವಾಷ್ ಮಾಡ್ತೀನಿ ಅನ್ನೋರು ಕೆಲವರು. ಮಾರ್ಕೆಟ್ ನಲ್ಲಿ ಸಿಗೋ ಯಾವ ಶಾಂಪೂ ನಮ್ ಕೂದಲಿಗೆ ಒಳ್ಳೇದು ಅನ್ನೋ ಕನ್ಫ್ಯೂಷನ್ ಇನ್ನೊಂದಿಷ್ಟು ಮಹಿಳೆಯರದ್ದು. ಒಟ್ಟಿನಲ್ಲಿ ಒಬ್ಬರ ಕೂದಲು ಇನ್ನೊಬ್ಬರ ಕೂದಲಿನ ರೀತಿ ಇರುವುದೇ ಇಲ್ಲ. ಪ್ರತಿಯೊಬ್ಬರಿಗೂ ಅವರದ್ದೇ ಆದ ರೀತಿಯ ವಿಭಿನ್ನ ರೀತಿಯ ಕೂದಲಿನ ಗುಣ ಸ್ವಭಾವಗಳಿರುತ್ತದೆ.

ಕೆಲವರದ್ದು ನುಣುಪಾದ ಸಿಲ್ಕೀ ಕೂದಲಾದರೆ, ಕೆಲವರದ್ದು ಕರ್ಲಿ ಹೇರ್. ಕೆಲವರಿಗೆ ದಪ್ಪನೆಯ ಕೂದಲಿದ್ದರೆ, ಇನ್ನೂ ಕೆಲವರಿಗೆ ತೆಳುವಾದ ಕೂದಲು. ಕೆಲವರಿಗೆ ಉದ್ದ ಕೂದಲಾದರೆ ಕೆಲವರಿಗೆ ಕುಳ್ಳ ಕೂದಲು. ಹೀಗಿರುವಾಗ ಎಲ್ಲರ ಕೂದಲಿಗೂ ಒಂದೇ ರೀತಿಯ ಆರೈಕೆ ಮಾಡುವುದು ಸರಿಯೇ?

Wash Your Hair

ಖಂಡಿತ ಇಲ್ಲ. ತಲೆಸ್ನಾನ ಮಾಡುವುದಕ್ಕೂ ನಿಮ್ಮ ಕೂದಲಿನ ರೀತಿಗೂ ಒಂದು ನಂಟಿದೆ. ಹೌದು ನಿಮ್ಮ ಕೂದಲು ಯಾವ ಪ್ರಕಾರದ್ದು ಎಂಬ ಆಧಾರದಲ್ಲಿ ನೀವು ಎಷ್ಟು ದಿನಗಳಿಗೊಮ್ಮೆ ತಲೆಸ್ನಾನ ಮಾಡುವುದು ಒಳ್ಳೆಯದು ಎಂಬ ಬಗ್ಗೆ ನಾವಿಲ್ಲಿ ನಿಮಗೆ ಮಾಹಿತಿ ನೀಡುತ್ತಿದ್ದೇವೆ.

ಪದೇ ಪದೇ ಕೂದಲು ತೊಳೆಯುವುದು, ತೊಳೆಯದೇ ಇರುವುದು ಅಪಾಯವೇ!

ಪದೇ ಪದೇ ಕೂದಲು ತೊಳೆಯುವುದು, ತೊಳೆಯದೇ ಇರುವುದು ಅಪಾಯವೇ!

ಪದೇ ಪದೇ ಕೂದಲು ತೊಳೆಯುವುದರಿಂದಾಗಿ ಶುಷ್ಕತೆ, ಕೂದಲು ಒಡೆಯುವುದು, ಸ್ಪ್ಲಿಟ್ ಎಂಡ್ ಇತ್ಯಾದಿ ರೀತಿಯ ಸಮಸ್ಯೆಗಳು ಬರುವ ಸಾಧ್ಯತೆಯೂ ಇರುತ್ತದೆ. ಒಂದು ವೇಳೆ ಸರಿಯಾಗಿ ಕೂದಲನ್ನು ತೊಳೆಯದೇ ಇದ್ದಲ್ಲಿ ಕೂದಲುದುರುವಿಕೆ, ತುರಿಕೆ, ನೆವೆ, ಕೂದಲಿನ ರಂಧ್ರಗಳು ಮುಚ್ಚಿಹೋಗುವುದು ಇತ್ಯಾದಿ ರೀತಿಯ ಸಮಸ್ಯೆಗಳು ಎದುರಾಗಿ ಕೂದಲು ಕಳೆಗುಂದುವ ಸಾಧ್ಯತೆಯೂ ಇರುತ್ತದೆ.

ಹೀಗೆ ಹೇಳಿದ ಮಾತ್ರಕ್ಕೆ ನೀವು ಭಯ ಪಡುವ ಅಗತ್ಯವಿಲ್ಲ. ನಿಮ್ಮ ಕೂದಲಿನ ಪ್ರಕಾರದ ಆಧಾರದಲ್ಲಿ ನೀವು ವಾರಕ್ಕೆ ಎಷ್ಟು ಬಾರಿ ಕೂದಲು ತೊಳೆಯುವುದು ಸೂಕ್ತ ಎಂಬ ಬಗ್ಗೆ ನಾವು ತಜ್ಞರ ಬಳಿ ಮಾಹಿತಿ ಪಡೆದು ನಿಮಗೆ ನೀಡುತ್ತಿದ್ದೇವೆ. ಈ ಕೆಳಗೆ ತಿಳಿಸಿರುವ ಪ್ರಕಾರದಲ್ಲಿ ನಿಮ್ಮದು ಯಾವ ರೀತಿಯ ಕೂದಲು ಎಂಬ ಆಧಾರದಲ್ಲಿ ಮುಂದಿನ ದಿನಗಳಲ್ಲಿ ತಲೆಸ್ನಾನ ಮಾಡಿದರೆ ವರ್ಷಪೂರ್ತಿ ನಿಮ್ಮ ಕೂದಲು ಆರೋಗ್ಯಪೂರ್ಣವಾಗಿ ಇರುವಂತೆ ನೋಡಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

1. ನುಣುಪಾದ ಕೂದಲು- ದಿನ ಬಿಟ್ಟು ದಿನ ತಲೆಸ್ನಾನ

1. ನುಣುಪಾದ ಕೂದಲು- ದಿನ ಬಿಟ್ಟು ದಿನ ತಲೆಸ್ನಾನ

ಇತರೆ ಕೂದಲಿನ ಪ್ರಕಾರಕ್ಕಿಂತ ನುಣುಪಾಗಿರುವ ಕೂದಲು ಹೊಂದಿರುವವರಲ್ಲಿ ಎಣ್ಣೆಯುಕ್ತ ಪಸೆಯಂಶ ಹೆಚ್ಚು ಗೋಚರಿಸುತ್ತದೆ. ಅದೇ ಕಾರಣಕ್ಕೆ ಪ್ರತಿದಿನ ತಲೆಸ್ನಾನ ಮಾಡಬೇಕು ಎಂದೆನಿಸಬಹುದು, ಆದರೆ ಹಾಗೆ ಮಾಡಬೇಡಿ. ಯಾಕೆಂದರೆ ಪ್ರತಿದಿನ ತಲೆಸ್ನಾನ ಮಾಡುವುದರಿಂದಾಗಿ ಪರಿಸ್ಥಿತಿ ಇನ್ನೂ ಕ್ಲಿಷ್ಟವಾಗಬಹುದು. ಬದಲಾಗಿ ದಿನಬಿಟ್ಟು ದಿನ ನಿಮ್ಮ ಕೂದಲನ್ನು ಸೌಮ್ಯವಾಗಿ ಡ್ರೈ ಶಾಂಪೂ ಬಳಸಿ ಸ್ವಚ್ಛಗೊಳಿಸಿ. ಹೀಗೆ ಮಾಡುವುದರಿಂದಾಗಿ ನಿಮ್ಮ ಕೂದಲಿನ ಆರೋಗ್ಯವನ್ನು ಅಧಿಕಗೊಳಿಸಿಕೊಳ್ಳುವುದಕ್ಕೆ ಸಾಧ್ಯವಾಗುತ್ತದೆ.

2. ದಟ್ಟನೆಯ ಕೂದಲು-ವಾರಕ್ಕೆ ಒಂದು ಬಾರಿ ತಲೆಸ್ನಾನ

2. ದಟ್ಟನೆಯ ಕೂದಲು-ವಾರಕ್ಕೆ ಒಂದು ಬಾರಿ ತಲೆಸ್ನಾನ

ದಟ್ಟವಾದ ಕೂದಲು ಹೊಂದಿರುವವರು ಪದೇ ಪದೇ ಕೂದಲನ್ನು ತೊಳೆಯುತ್ತಲೇ ಇರಬೇಕು ಎಂದೇನಿಲ್ಲ. ದಟ್ಟವಾಗಿರುವ ಕೂದಲಿನ ಕಿರುಚೀಲಗಳು ವಿಸ್ತರಿಸುತ್ತವೆ ಮತ್ತು ತೆಳು ಕೂದಲಿನವರಿಗಿಂತ ಎಣ್ಣೆಯಂಶ ಉತ್ತಮವಾಗಿರುತ್ತದೆ. ಒಂದು ವೇಳೆ ನಿಮ್ಮ ಕೂದಲು ಹೆಚ್ಚು ಎಣ್ಣೆ ಜಿಡ್ಡು ಎಂದು ಅನ್ನಿಸದೇ ಇದ್ದಲ್ಲಿ ಈ ರೀತಿಯ ಕೂದಲಿರುವವರು ವಾರಕ್ಕೆ ಒಮ್ಮೆ ತಲೆಸ್ನಾನ ಮಾಡಿದರೂ ಸಾಕಾಗುತ್ತದೆ ಎನ್ನುತ್ತಾರೆ ಪ್ರಸಿದ್ಧ ಕೇಶ ವಿನ್ಯಾಸಕಿ ಸ್ಯಾಟ್ಸ್ ಮೈಲ್ಸ್ ಜೆಫ್ರಿಸ್. ಉರಿಯೂತ ಶಾಂತಗೊಳಿಸುವ ಚಹಾ ಮರದ ಎಣ್ಣೆಯಿಂದ(ಟೀ ಟ್ರೀ ಆಯಿಲ್) ತಯಾರಿಸಿದ ಶಾಂಪೂ ಬಳಕೆಯು ನಿಮ್ಮ ಕೂದಲಿನ ಆರೋಗ್ಯವನ್ನು ಅಧಿಕಗೊಳಿಸುತ್ತದೆ.

3. ಅಲೆಅಲೆಯಾಗಿರುವ ಸಡಿಲ ಸುರುಳಿ ಕೂದಲು- ದಿನಬಿಟ್ಟು ದಿನ ತಲೆಸ್ನಾನ

3. ಅಲೆಅಲೆಯಾಗಿರುವ ಸಡಿಲ ಸುರುಳಿ ಕೂದಲು- ದಿನಬಿಟ್ಟು ದಿನ ತಲೆಸ್ನಾನ

ತೇವಾಂಶದ ಅಗತ್ಯವಿರುವ ಮತ್ತು ತೇವಾಂಶವನ್ನು ಹೆಚ್ಚು ಇಷ್ಟಪಡುವ ಅಲೆಅಲೆಯಾಗಿರುವ ಸಡಿಲ ಸುರುಳಿಯಾಕಾರದ ಕೂದಲು ಭಾರವಾದ ಶಾಂಪೂವನ್ನು ಹೆಚ್ಚು ಇಷ್ಟಪಡುತ್ತದೆ. ಆದರೆ ಈ ಅಲೆಯಾಗಿರುವ ಕೂದಲು ಹೆಚ್ಚು ತೇವಗೊಳ್ಳದಂತೆ ನೋಡಿಕೊಳ್ಳುವುದಕ್ಕಾಗಿ ಜಲಸಂಚಯನದ ಅಗತ್ಯವಿರುತ್ತದೆ. ಹಾಗಾಗಿ ಸಲ್ಫೇಟ್ ಮುಕ್ತವಾಗಿರುವ ಕ್ಲೆನ್ಸರ್ ನ್ನು ದಿನ ಬಿಟ್ಟು ದಿನ ಬಳಕೆ ಮಾಡಿ ತಲೆ ಸ್ನಾನ ಮಾಡುವುದು ಒಳಿತು. ತೇವಾಂಶ ಸ್ಪರ್ಶದಿಂದ ಕೂದಲು ಸುಂದರವಾಗಿ ಫಳಫಳಿಸುವಂತೆ ಮಾಡುವುದಕ್ಕಾಗಿ ಈ ರೀತಿಯ ಆರೈಕೆ ಸಡಿಲ ಸುರಳಿ ಕೂದಲಿರುವವರಿಗೆ ಅಗತ್ಯವಾಗಿರುತ್ತದೆ.

4. ಬಿಗಿಯಾಗಿರುವ ಸುರುಳಿಯಾಕಾರದ ಕೂದಲು- ಮೂರು ದಿನಕ್ಕೆ ಒಂದು ಬಾರಿ ತಲೆಸ್ನಾನ

4. ಬಿಗಿಯಾಗಿರುವ ಸುರುಳಿಯಾಕಾರದ ಕೂದಲು- ಮೂರು ದಿನಕ್ಕೆ ಒಂದು ಬಾರಿ ತಲೆಸ್ನಾನ

ದೊಡ್ಡ ದೊಡ್ಡ ಸುರುಳಿಯಾಕಾರದ ಕೂದಲು ಇರುವವರದ್ದು ಕೂದಲಿನ ವಿಚಾರದಲ್ಲಿ ಒಂದು ರೀತಿಯ ಹೋರಾಟವೆಂದೇ ಹೇಳಬಹುದು. ಗ್ರೀಸ್ ನಂತಾಗಿರುವ ಬೇರುಗಳು, ಶುಷ್ಕವಾಗಿ ಕಾಣುವ ತುದಿಕೂದಲು. ನಿಜಕ್ಕೂ ಇಂತಹ ಕೂದಲನ್ನು ನಿರ್ವಹಿಸುವುದು ಸಾಹಸದ ಕೆಲಸವೇ ಸರಿ. ಸ್ಕ್ಯಾಲ್ಪ್ ನಲ್ಲಿ ಎಣ್ಣೆಯಂಶವು ಇತರೆ ಕೂದಲಿನ ಪ್ರಕಾರದವರಿಗಿಂತ ಈ ರೀತಿಯ ಸುರಳಿ ಕೂದಲಿರುವವರಲ್ಲಿ ಸುಲಭದಲ್ಲಿ ಇಳಿಯದೇ ಇರುವುದರಿಂದಾಗಿ ಶುಷ್ಕತೆಯ ಭಾವನೆ ಇವರದಲ್ಲಿ ಹೆಚ್ಚಿರುತ್ತದೆ. ಹೆಚ್ಚುವರಿ ಸೇರಿಸಲಾಗುವ ತೇವಾಂಶದೊಂದಿಗೆ ಪ್ರತಿ ಮೂರು ದಿನಗಳಿಗೊಮ್ಮೆ ಈ ರೀತಿಯ ಕೂದಲಿರುವವರು ತಲೆಸ್ನಾನ ಮಾಡಬೇಕು. ಸಲ್ಫೇಟ್ ಮುಕ್ತವಾಗಿರುವ ಶಾಂಪೂ ಬಳಕೆ ಮಾಡಬೇಕು. ಪ್ರತಿ ಎರಡು ವಾರಗಳಿಗೊಮ್ಮೆ ಫಾರ್ಮ್ ಕ್ಲಾರಿಫೈಯಿಂಗ್ ನಂತಹ ಶಾಂಪೂ ಬಳಕೆ ಮಾಡಬೇಕು ಎಂಬುದು ಕೂಡ ಇವರ ಸಲಹೆಯಾಗಿದೆ.

5. ಹಾನಿಗೊಳಗಾಗಿರುವ ಕೂದಲು-ಮೂರು ದಿನಗಳಿಗೊಮ್ಮೆ ತೊಳೆಯಿರಿ

5. ಹಾನಿಗೊಳಗಾಗಿರುವ ಕೂದಲು-ಮೂರು ದಿನಗಳಿಗೊಮ್ಮೆ ತೊಳೆಯಿರಿ

ವಿಶ್ರಾಂತಿ ರಹಿತ ಜೀವನ, ಸರಿಯಾದ ಆರೈಕೆ ಇಲ್ಲದೇ ಇರುವುದು, ಕೂದಲಿಗೆ ಅತಿಯಾಗಿ ಬಣ್ಣಗಳ ಬಳಕೆ ಮಾಡಿರುವುದು, ಕೆರಾಟಿನ್ ಚಿಕಿತ್ಸೆಯ ಪರಿಣಾಮ ಇತ್ಯಾದಿ ಹಲವು ಕಾರಣಗಳಿಂದ ನಿಮ್ಮ ಕೂದಲು ಕಳೆ ಕಳೆದುಕೊಂಡು ಶುಷ್ಕವೆನ್ನಿಸುತ್ತಿರಬಹುದು. ನೋಡುವುದಕ್ಕೆ ಅಸಾಧ್ಯವೆಂಬಷ್ಟು ಹಾಳಾಗಿರಬಹುದು. ಬಣ್ಣ ಸುರಕ್ಷಿತವಾಗಿರುವ ಮತ್ತು ಕಲ್ಮಶಗಳನ್ನು ಹೊರತೆಗೆಯುವ ಶಾಂಪೂ ಬಳಕೆ ಮಾಡುವುದರಿಂದಾಗಿ ಉತ್ಪನ್ನಗಳಿಂದ, ಕಠಿಣ ನೀರಿನ ಪ್ರಭಾವದಿಂದ, ಮಾಲಿನ್ಯದಿಂದ ನಿಮ್ಮ ಕೂದಲಿನ ಮೇಲಾಗಿರುವ ದುಷ್ಪರಿಣಾಮಗಳನ್ನು ಹೋಗಲಾಡಿಸುವುದಕ್ಕೆ ಸಾಧ್ಯವಾಗುತ್ತದೆ. ಮೊದಲಿಗೆ ಒಲಪೆಕ್ಸ್ ಗಳನ್ನು ಬಳಸಿ ಕೂದಲನ್ನು ಒರೆಸುವ ಮೂಲಕ ಮರುಪಾವತಿ ಗುಣಲಕ್ಷಣಗಳನ್ನು ಹೆಚ್ಚಿಸಿಕೊಳ್ಳಬಹುದು. ರಾಸಾಯನಿಕವಾಗಿ ಹಾನಿಗೊಳಗಾಗಿರುವ ಯಾವುದೇ ಕೂದಲನ್ನು ಮರುಸಂಸ್ಕರಿಸುವುದಕ್ಕೆ ಒಲಪೆಕ್ಸ್ ನೆರವಿಗೆ ಬರುತ್ತದೆ. ಇದು ಕೇವಲ ನಿಮ್ಮ ತುಂಡಾಗಿರುವ ಕೂದಲನ್ನು ಸರಿಪಡಿಸುವುದು ಮಾತ್ರವಲ್ಲ ಬದಲಾಗಿ ಕೂದಲು ರೇಷ್ಮೆಯಂತೆ ನುಣುಪಾಗುವುದಕ್ಕೂ ಕೂಡ ಸಹಾಯ ಮಾಡುತ್ತದೆ. ಹೀಗೆ ಹಾನಿಗೊಳಗಾಗಿರುವ ಕೂದಲನ್ನು ಮೂರು ದಿನಗಳಿಗೊಮ್ಮೆ ತೊಳೆಯುವ ಅಭ್ಯಾಸ ಇಟ್ಟುಕೊಳ್ಳಿ. ಆದರೆ ಶಾಂಪೂ ಬಳಕೆಯ ಬಗ್ಗೆ ಹೆಚ್ಚು ಜಾಗೃತೆ ವಹಿಸುವ ಅಗತ್ಯವಿರುತ್ತದೆ.

6. ಎಣ್ಣೆಯುಕ್ತ ಕೂದಲು- ದಿನಬಿಟ್ಟು ದಿನ ತಲೆಸ್ನಾನ

6. ಎಣ್ಣೆಯುಕ್ತ ಕೂದಲು- ದಿನಬಿಟ್ಟು ದಿನ ತಲೆಸ್ನಾನ

ನಿಮ್ಮ ಎಣ್ಣೆಯುಕ್ತ ನೆತ್ತಿಯ ಬೇರುಗಳನ್ನು ಹೆಚ್ಚೆಚ್ಚು ಎದುರಿಸುವುದಕ್ಕೆ ನೀವು ಪ್ರಯತ್ನಿಸಿದಂತೆ ನಿಮ್ಮ ನೆತ್ತಿಯು ಹೆಚ್ಚು ತೈಲವನ್ನು ಉತ್ಪತ್ತಿ ಮಾಡುತ್ತದೆ. ಯಾಕೆ ಗೊತ್ತಾ? ಈ ಸಂಗತಿ ನಿಮಗೆ ಆಶ್ಚರ್ಯವೆನ್ನಿಸಬಹುದು. ನಿಮ್ಮ ನೆತ್ತಿಯು ನಿರ್ಜಲೀಕರಣಗೊಂಡಾಗ ಕಳೆದು ಹೋಗಿರುವ ತೈಲಾಂಶವನ್ನು ಸರಿದೂಗಿಸಿಕೊಳ್ಳಲು ತೈಲ ಉತ್ಪಾದನೆಯನ್ನು ನೆತ್ತಿಯು ಅಧಿಕಗೊಳಿಸುತ್ತದೆ.ವಾರಕ್ಕೆ ನಾಲ್ಕಕ್ಕಿಂತ ಹೆಚ್ಚು ಬಾರಿ ಕೂದಲು ತೊಳೆಯುವುದನ್ನು ಆದಷ್ಟು ತಪ್ಪಿಸುವುದು ಒಳಿತು. ಡ್ರೈ ಶಾಂಪೂ ಬಳಕೆ ನಿಮ್ಮ ಕೂದಲಿನ ಹೊಸ ಸಂಗಾತಿಯಾದರೆ ಒಳ್ಳೆಯದು ಯಾಕೆಂದರೆ ಇವು ಕೇವಲ ಗ್ರೀಸಿಯಾಗಿರುವ ಬೇರುಗಳನ್ನು ಮರೆಮಾಚುವುದು ಮಾತ್ರವಲ್ಲ ಬದಲಾಗಿ ಹೊಸ ಕೂದಲು ಹುಟ್ಟಿ ನಿಮ್ಮ ಕೂದಲು ದಪ್ಪವಾಗುವಂತೆಯೂ ಮಾಡುತ್ತದೆ. ದಿನಬಿಟ್ಟು ದಿನ ತಲೆಸ್ನಾನ ಮಾಡಿ ಕೂದಲಿನ ಆರೈಕೆಯನ್ನು ಮಾಡುವುದು ಈ ರೀತಿಯ ಕೂದಲಿನ ಪ್ರಕಾರದವರಿಗೆ ಒಳ್ಳೆಯದು.

7. ಸಹಜ ಕೂದಲು- ದಿನಬಿಟ್ಟು ದಿನ ತಲೆಸ್ನಾನ

7. ಸಹಜ ಕೂದಲು- ದಿನಬಿಟ್ಟು ದಿನ ತಲೆಸ್ನಾನ

ನಿಮ್ಮ ಕೂದಲು ದಪ್ಪನೆಯದ್ದೂ ಅಲ್ಲ, ಕರ್ಲಿಯಾಗಿಯೂ ಇಲ್ಲ, ದಪ್ಪವಾಗಿಯೂ ಇಲ್ಲ, ಎಣ್ಣೆ ಜಿಡ್ಡಿನಿಂದಲೂ ಕೂಡಿಲ್ಲ, ತೀರಾ ನುಣುಪಾದ ಕೂದಲೂ ಅಲ್ಲ ಎಂದರೆ ನಿಮ್ಮ ಕೂದಲು ಮಧ್ಯಮ ಪ್ರಕಾರ ಸಹಜ ಕೂದಲು ಎಂದು ಪರಿಗಣಿಸಲ್ಪಡುತ್ತದೆ. ಅಂದರೆ ನೀವು ನಿಮ್ಮ ಕೂದಲಿಗೆ ಮಧ್ಯಮ ಪ್ರಕಾರದ ಶಾಂಪೂವನ್ನೇ ಬಳಕೆ ಮಾಡಬೇಕಾಗುತ್ತದೆ. ಕಠಿಣವಾಗಿರುವ ಸಲ್ಫೇಟ್ ಅಥವಾ ಘಾಸಿಗೊಳಿಸುವ ರಾಸಾಯನಿಕ ಇಲ್ಲದ ಶಾಂಪೂ ಬಳಕೆ ಮಾಡಿ ದಿನ ಬಿಟ್ಟು ದಿನ ನಿಮ್ಮ ಕೂದಲನ್ನು ತೊಳೆಯುವುದು ಈ ರೀತಿಯ ಕೂದಲಿನ ಪ್ರಕಾರದವರಿಗೆ ಒಳಿತು. ಟು-ಇನ್-ಒನ್ ಸೂತ್ರ ಎಂದು ಹೇಳುವುದಿಲ್ಲವೇ ಹಾಗೆ ಎರಡೂ ಗುಣಗಳು ಒಂದರಲ್ಲೇ ಇರುವಂತ ಶಾಂಪೂ ಬಳಕೆ ಮಾಡಬೇಕಾಗುತ್ತದೆ. ಆ ಕಡೆ ಕೂದಲು ಅತಿಯಾದ ಶುಷ್ಕತೆಗೂ ಒಳಗಾಗಬಾರದು,ಈ ಕಡೆ ಎಣ್ಣೆ ಜಿಡ್ಡಿನಂತೆಯೂ ಆಗಬಾರದು. ಸಹಜವಾಗಿರುವ ಕೂದಲನ್ನು ಸಹಜವಾಗಿರುವಂತೆಯೇ ನೋಡಿಕೊಳ್ಳಬೇಕು ಎಂದರೆ ಆರೈಕೆ ಬಹಳ ಮುಖ್ಯವಾಗಿರುತ್ತದೆ.

ಈ ಮೇಲಿನವುಗಳಲ್ಲಿ ನಿಮ್ಮದು ಯಾವ ಪ್ರಕಾರದ ಕೂದಲು ಎಂಬುದನ್ನು ಗಮನಿಸಿ ಮತ್ತು ಅದಕ್ಕೆ ಸರಿಹೊಂದುವಂತೆ ತಲೆಸ್ನಾನ ಮಾಡುವ ಅಭ್ಯಾಸ ರೂಢಿಸಿಕೊಂಡರೆ ಕೂದಲಿನ ಆರೋಗ್ಯವನ್ನು ಇನ್ನಷ್ಟು ಹೆಚ್ಚಿಸಿಕೊಳ್ಳುವುದಕ್ಕೆ ಖಂಡಿತ ಸಾಧ್ಯವಾಗುತ್ತದೆ.

English summary

How Often Should You Really Wash Your Hair, Based on Your Hair Type

By this point in your life, you've probably heard that when it comes to washing your hair, the less frequent, the better. But honestly, WTF does that even mean? My hair texture isn't the same as your hair texture, and you can't tell me that, say, dense coils should be treated the same way as flat, fine waves. Here's why the differences matter, though: If you wash your hair too frequently, you could be stuck dealing with dryness, breakage, and split ends. On the flip side, not washing your hair enough could lead to clogged pores, inflammation, and even hair loss.
X
Desktop Bottom Promotion