For Quick Alerts
ALLOW NOTIFICATIONS  
For Daily Alerts

ಹೆರಿಗೆಯ ನಂತರ ಕೂದಲ ಆರೈಕೆಗೆ ಕರೀನಾ ಕಪೂರ್ ಏನು ಮಾಡಿದ್ದರು ಗೊತ್ತಾ?

|

ತಾಯಿಯಾಗುವುದು ಪ್ರತಿ ಹೆಣ್ಣಿನ ಪ್ರಮುಖ ಘಟ್ಟ. ಡೆಲಿವರಿಯ ನಂತರ ಮಗುವಿನ ಆರೈಕೆ, ಮಗುವಿನ ನಗು, ಅಳು, ಆಟ, ಪಾಠ ಹೀಗೆ ಮಗುವಿನ ಬಗೆಗಿನ ಕಾಳಜಿಯಲ್ಲಿ ತಮ್ಮ ಬಗ್ಗೆ ಕಾಳಜಿ ತೆಗೆದುಕೊಳ್ಳುವುದಕ್ಕೆ ತಾಯಿಯಾದವಳು ಮರೆತೇ ಬಿಡುತ್ತಾಳೆ. ಹಾರ್ಮೋನುಗಳ ಬದಲಾವಣೆ ಮತ್ತು ಇತ್ಯಾದಿ ಕಾರಣಗಳಿಂದಾಗಿ ಹೆಣ್ಣಿನ ದೇಹಸ್ಥಿತಿಯಲ್ಲಿ ಗರ್ಭಾವಸ್ಥೆಯ ನಂತರ ಹಲವು ಬದಲಾವಣೆಗಳಾಗುತ್ತದೆ.

 Kareena Kapoor

ಕೂದಲುದುರುವಿಕೆ ಸಮಸ್ಯೆ ಕೂಡ ಅದರಲ್ಲೊಂದು. ಸ್ವಲ್ಪ ಸಮಯದ ನಂತರ ಕೆಲವರಿಗೆ ಇದು ಸರಿಯಾಗಬಹುದು. ಆದರೆ ಕೆಲವರಿಗೆ ಹೆಚ್ಚಿನ ಕಾಳಜಿಯ ಅಗತ್ಯವಿರುತ್ತದೆ. ಅದಕ್ಕೆ ಸೆಲೆಬ್ರಿಟಿಗಳೂ ಕೂಡ ಹೊರತಾಗಿಲ್ಲ. ಕರಿನಾ ಕಪೂರ್ ಕೂಡ ತನ್ನ ಹೆರಿಗೆಯ ನಂತರ ಕೂದಲುದುರುವಿಕೆ ತಡೆಗಾಗಿ ವಿಶೇಷ ಕಾಳಜಿ ತೆಗೆದುಕೊಂಡಿದ್ದಾನೆ. ಅವರು ಬಳಸಿ ಬ್ಯೂಟಿ ಟಿಪ್ಸ್ ಗಳನ್ನು ನಾವು ನಿಮಗೂ ತಿಳಿಸುತ್ತಿದ್ದೇವೆ. ಒಂದು ವೇಳೆ ನೀವು ಕೂಡ ಹೆರಿಗೆಯ ನಂತರ ಕೂದಲುದುರುವಿಕೆ ಸಮಸ್ಯೆ ಎದುರಿಸುತ್ತಿದ್ದರೆ ಖಂಡಿತ ಈ ಟಿಪ್ಸ್ ನಿಮ್ಮ ಸಹಾಯಕ್ಕೆ ಬರುತ್ತದೆ ಎಂದು ಭಾವಿಸುತ್ತೇವೆ.

ಆಹಾರದಲ್ಲಿ ತೆಂಗಿನಕಾಯಿ ಬಳಕೆ

ಆಹಾರದಲ್ಲಿ ತೆಂಗಿನಕಾಯಿ ಬಳಕೆ

ತೆಂಗಿನ ಎಣ್ಣೆಯನ್ನು ಕೂದಲಿಗೆ ಹಚ್ಚಿಕೊಳ್ಳುವುದು ಮಾತ್ರವಲ್ಲ. ಯಾವುದೇ ರೂಪದಲ್ಲಿಯಾದರೂ ತೆಂಗಿನ ಕಾಯಿಯ ಸೇವನೆಯೂ ಕೂಡ ಕೂದಲಿನ ಆರೋಗ್ಯಕ್ಕೆ ನೆರವು ನೀಡುತ್ತದೆ. ಇದು ಬಿಳಿಕೂದಲಾಗುವುದನ್ನು ತಡೆಯುತ್ತದೆ. ಕರೀನಾ ಕೂಡ ಹುಣಸೆ ಹಣ್ಣು ಬಳಸಿ ತೆಂಗಿನಕಾಯಿಯ ಚಟ್ನಿ ಮಾಡಿ ತುಪ್ಪದ ಒಗ್ಗರಣೆ ಹಾಕಿ ಸೇವಿಸುತ್ತಿದ್ದರಂತೆ.

ಅಕ್ಕಿ

ಅಕ್ಕಿ

ನಮ್ಮ ದೇಹಕ್ಕೆ ಡೆಲಿವರಿಯ ನಂತರ ಹೆಚ್ಚಿನ ಕಾರ್ಬೋಹೈಡ್ರೇಟ್ಸ್ ಗಳ ಅಗತ್ಯವಿರುತ್ತದೆ. ಅಗತ್ಯ ಜೀವಸತ್ವಗಳು ಕೂಡ ಬೇಕಾಗುತ್ತದೆ. ಹಾಗಾಗಿ ಅಕ್ಕಿಯ ಸೇವನೆ ಅಂದರೆ ಉತ್ತಮ ಗುಣಮಟ್ಟದ ಅಕ್ಕಿಯನ್ನು ಅನ್ನ ಮಾಡಿ ಸೇವಿಸುವುದು. ಇದರಿಂದಾಗಿ ಕೂದಲು ಬೆಳೆಯುವುದು ಹೆಚ್ಚಾಗುತ್ತದೆ ಮತ್ತು ಕೂದಲು ಉದುರುವಿಕೆ ನಿಲ್ಲುತ್ತದೆ.

ಕಪ್ಪು ಎಳ್ಳು

ಕಪ್ಪು ಎಳ್ಳು

ಮಾಗಿದ ಕಪ್ಪು ಎಳ್ಳು ಕೂದಲಿನ ಆರೋಗ್ಯಕ್ಕೆ ಬಹಳ ಒಳ್ಳೆಯದು. ಇದರಲ್ಲಿ ಮೆಗ್ನೀಷಿಯಂ ಮತ್ತು ಕ್ಯಾಲ್ಸಿಯಂ ಅಧಿಕವಾಗಿರುತ್ತದೆ. ನಿಮ್ಮ ಆಹಾರದಲ್ಲಿ ಕಪ್ಪು ಎಳ್ಳಿನ ಬಳಕೆ ಯಾವಾಗಲೂ ಇರಲಿ. ಕೇವಲ ತಾಯಿಯಾದವರಿಗೆ ಮಾತ್ರವಲ್ಲ ಇದು ಸರ್ವರಿಗೂ ಅನ್ವಯಿಸುತ್ತದೆ.

ಗೋಡಂಬಿ ಬೀಜಗಳು

ಗೋಡಂಬಿ ಬೀಜಗಳು

ಹೆರಿಗೆಯ ನಂತರವೂ ಕರೀನಾ ಕಪೂರ್ ಅವರ ಹೊಳೆಯುವ ಕೂದಲಿನ ರಹಸ್ಯಗಳಲ್ಲಿ ಗೋಡಂಬಿ ಕೂಡ ಪ್ರಮುಖ ಪಾತ್ರ ವಹಿಸುತ್ತದೆ. ಕಬ್ಬಿಣಾಂಶದ ಕೊರತೆಯಿಂದ ಕೂದಲುದುರುವಿಕೆ ಹೆರಿಗೆ ನಂತರ ಅಧಿಕವಾಗಿರುತ್ತದೆ. ಈ ಕೊರತೆಯನ್ನು ನೀಗಿಸುವುದಕ್ಕೆ ಗೋಡಂಬಿ ಬೀಜಗಳು ನೆರವು ನೀಡುತ್ತವೆ. ಹಾಗಾಗಿ ಪ್ರತಿ ದಿನ ಗೋಡಂಬಿ ಬೀಜಗಳನ್ನು ಸೇವಿಸಿ.

ಕೇಶವಿನ್ಯಾಸ ಹೇಗಿರಬೇಕು

ಕೇಶವಿನ್ಯಾಸ ಹೇಗಿರಬೇಕು

ನಿಮ್ಮ ಕೇಶಗಳನ್ನು ಆದಷ್ಟು ಸರಳವಾಗಿ ವಿನ್ಯಾಸ ಮಾಡಿ. ಹೇರ್ ಡ್ರೈಯರ್ ಬಳಸಬೇಡಿ. ಹೆರಿಗೆಯ ನಂತರ ಕೂದಲಿನ ಸ್ನಾಯುಗಳು ದುರ್ಬಲವಾಗಿರುತ್ತದೆ. ಅವುಗಳಿಗೆ ಮತ್ತಷ್ಟು ಹಿಂಸೆ ನೀಡಿ ಬಿಗಿಯಾಗಿ ಕಟ್ಟಿಕೊಂಡರೆ ಕೂದಲುದುರುವುದು ಗ್ಯಾರೆಂಟಿ. ಹೆರಿಗೆಯ ನಂತರ ಕೇಶವಿನ್ಯಾಸದಲ್ಲಿ ಬದಲಾವಣೆ ಮಾಡಿಕೊಳ್ಳುವುದು ಬಹಳ ಒಳ್ಳೆಯದು.

ತಲೆಯ ಮಸಾಜ್

ತಲೆಯ ಮಸಾಜ್

ಹಾರ್ಮೋನುಗಳ ಬದಲಾವಣೆಯಿಂದಾಗಿ ಕೂದಲಿನ ಕಿರುಚೀಲಗಳು ಸ್ವಲ್ಪಮಟ್ಟಿಗೆ ನಿಷ್ಕ್ರಿಯವಾಗಿರುತ್ತದೆ. ಹಾಗಾಗಿ ನೆತ್ತಿಯ ಭಾಗಕ್ಕೆ ಶಕ್ತಿ ತುಂಬಿ ಕೂದಲಿನ ಆರೋಗ್ಯ ಹೆಚ್ಚಿಸುವುದಕ್ಕಾಗಿ ಮಸಾಜ್ ಮಾಡಿಕೊಳ್ಳುವುದು ಅಥವಾ ಮಾಡಿಸಿಕೊಳ್ಳುವುದು ಬಹಳ ಒಳ್ಳೆಯದು. ಗಿಡಮೂಲಿಕೆಯ ಎಣ್ಣೆ ಬಳಸಿ ಕೂದಲಿಗೆ ವಾರಕ್ಕೊಮ್ಮೆಯಾದರೂ ಮಸಾಜ್ ಮಾಡಿಕೊಳ್ಳಿ.

ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಒತ್ತಡವನ್ನು ಕಡಿಮೆ ಮಾಡಿಕೊಳ್ಳಿ

ಕೂದಲು ಉದುರುವಿಕೆಗೆ ಒತ್ತಡವೂ ಪ್ರಮುಖ ಕಾರಣವಾಗಿರುತ್ತದೆ. ಹೆರಿಗೆಯ ನಂತರ ಒತ್ತಡವಿರುವುದು ಸರ್ವೇಸಾಮಾನ್ಯ. ಯೋಗ, ಧ್ಯಾನ ಇತ್ಯಾದಿಗಳು ಒತ್ತಡದ ನಿವಾರಣೆಗೆ ನೆರವು ನೀಡುತ್ತದೆ. ಹೆರಿಗೆಯ ನಂತರ ಮಗುವಿನ ಜವಾಬ್ದಾರಿಯ ಜೊತೆಗೆ ನಿಮ್ಮ ಜವಾಬ್ದಾರಿಯನ್ನೂ ನೋಡಿಕೊಂಡರೆ ಸುಂದರವಾಗಿರುವುದಕ್ಕೆ ಸಾಧ್ಯವಾಗಿರುತ್ತದೆ. ನಿಮ್ಮ ಆರೋಗ್ಯ ಮತ್ತು ಸೌಂದರ್ಯದ ಆರೈಕೆಗಾಗಿ ಸ್ವಲ್ಪ ಸಮಯವನ್ನು ಮೀಸಲಿಡುವುದು ಬಹಳ ಮುಖ್ಯ.

English summary

How Kareena Kapoor Khan Survived Hair Fall Post Pregnancy

All through her pregnancy, Kareena Kapoor Khan has been setting maternity style goals and now the proud mother of the adorable new baby is making another statement by looking flawless post pregnancy. She has already lost oodles of kilos, her skin looks gorgeous and her hair flawless. While Kareena firmly keeps her beauty secrets under wraps. here Kareena discussed at length about what she did during her pregnancy and what she is doing after pregnancy to look her best.
X
Desktop Bottom Promotion