For Quick Alerts
ALLOW NOTIFICATIONS  
For Daily Alerts

ನೈಸರ್ಗಿಕವಾಗಿ ಕೂದಲು ಬೆಳೆಯಬೇಕೇ? ಈ ಬಾಲಾಯಾಮ ಪದ್ದತಿಯನ್ನು ರೂಢಿಸಿಕೊಳ್ಳಿ

|

ಯಾವಾಗಲೂ ನಮ್ಮ ತಲೆ ತುಂಬಾ ಕೂದಲಿರಬೇಕು, ನಮ್ಮ ತಲೆ ಕೂದಲು ಬೆಳ್ಳಗಾಗಬಾರದು ಎಂದು ಪುರುಷರು ಆಸೆಪಟ್ಟರೆ, ಸೊಂಪಾದ ತಲೆ ಕೂದಲಿನ ಬೆಳವಣಿಗೆ ನಮ್ಮದಾಗಬೇಕು, ಇತರರ ಮುಂದೆ ಕಿರಿಕಿರಿ ಉಂಟು ಮಾಡುವ ಹಾಗೆ ತಲೆ ಹೊಟ್ಟಿನ ಸಮಸ್ಯೆ ಇರಬಾರದು ಎಂದು ಮಹಿಳೆಯರು ಆಸೆ ಪಡುತ್ತಾರೆ. ಆದರೆ ಇಂದಿನ ಆಧುನಿಕ ಜೀವನ ಶೈಲಿ ಮತ್ತು ಆಹಾರ ಪದ್ಧತಿ ಎಲ್ಲರ ಈ ಆಸೆಗಳಿಗೆ ತಣ್ಣೀರೆರಚಿದೆ. ನಮ್ಮ ಊಹೆಗೂ ಮೀರಿ ತಲೆ ಕೂದಲಿನ ಸಮಸ್ಯೆಗಳು ಇಂದು ನಮ್ಮನ್ನು ಕಾಡುತ್ತಿವೆ. ಕೇವಲ ನಮ್ಮಿಂದ ಕೂದಲಿನ ಉತ್ಪನ್ನಗಳ ತಯಾರಿಕಾ ಕಂಪನಿಗಳು ಲಾಭ ಹೊಂದುತ್ತಿವೆ ಹೊರತು ಅವುಗಳಿಂದ ನಮಗೆ ಸಿಗುತ್ತಿರುವ ಪ್ರಯೋಜನಗಳು ಅಷ್ಟಕಷ್ಟೆ! ಇದನ್ನೆಲ್ಲಾ ನೋಡಿ ನೋಡಿ ಇನ್ನು ತಲೆಕೂದಲಿನ ವಿಚಾರದಲ್ಲಿ ನಮಗೆ ಬೇರೆ ಮಾರ್ಗಗಳೇ ಇಲ್ಲ ಎಂಬ ಆಲೋಚನೆ ನಮ್ಮ ಮನಸ್ಸಿನಲ್ಲಿ ಬಂದು ಕುಳಿತುಬಿಟ್ಟಿದೆ. ಆದರೆ ಬಾಲಾಯಾಮ ಎನ್ನುವ ಯೋಗಾಭ್ಯಾಸ ಪದ್ಧತಿಯಿಂದ ನಾವೆಲ್ಲರೂ ಅನುಭವಿಸುತ್ತಿರುವ ತಲೆಕೂದಲಿನ ಸಮಸ್ಯೆಗಳು ಇಲ್ಲವಾಗುತ್ತವೆ ಎಂದು ಹೇಳುತ್ತಾರೆ.

ಬನ್ನಿ ಈ ಲೇಖನದಲ್ಲಿ ಬಾಲಾಯಾಮ ಪದ್ಧತಿ ಎಂದರೇನು, ಅದರ ಪ್ರಯೋಗ ಹೇಗೆ, ಅದರಿಂದ ಸಿಗುವ ಲಾಭಗಳು ಯಾವ ರೀತಿ ಇರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ಬನ್ನಿ ಈ ಲೇಖನದಲ್ಲಿ ಬಾಲಾಯಾಮ ಪದ್ಧತಿ ಎಂದರೇನು, ಅದರ ಪ್ರಯೋಗ ಹೇಗೆ, ಅದರಿಂದ ಸಿಗುವ ಲಾಭಗಳು ಯಾವ ರೀತಿ ಇರುತ್ತವೆ ಎಂಬುದರ ಬಗ್ಗೆ ತಿಳಿದುಕೊಳ್ಳೋಣ.

ನಿಮಗೆ ಗೊತ್ತಿರಲಿ, ಬಾಲಾಯಾಮ ಎನ್ನುವುದು ಎರಡು ಪದಗಳ ಮಿಶ್ರಣ. 'ಬಾಲ್' ಮತ್ತು 'ವ್ಯಾಯಾಮ'. ಬಾಲ್ ಎಂದರೆ ತಲೆ ಕೂದಲು. ತಲೆ ಕೂದಲಿಗೆ ನಾವು ಒದಗಿಸುವ ವ್ಯಾಯಾಮ ಕೂದಲಿನ ಆರೋಗ್ಯಕರವಾದ ಬೆಳವಣಿಗೆಯಲ್ಲಿ ಕೆಲಸ ಮಾಡಲಿದೆ. ನಿಮಗೆ ಗೊತ್ತಿರಬಹುದು. ಯೋಗಾಭ್ಯಾಸ ಮಾಡಲು ಸ್ವಲ್ಪ ಕಷ್ಟ ಎನಿಸಿದರೂ ಸಹ ಮನುಷ್ಯನ ದೇಹದ ಮೇಲೆ ಕೇವಲ ಒಳ್ಳೆಯ ಪ್ರಭಾವಗಳನ್ನು ಮಾತ್ರ ಉಂಟು ಮಾಡುತ್ತದೆ. ಇದರಿಂದ ಯಾವುದೇ ಅಡ್ಡ ಪರಿಣಾಮಗಳು ಇರುವುದಿಲ್ಲ.

ಅದೇ ರೀತಿ ನಾವು ನಮ್ಮ ತಲೆ ಕೂದಲಿಗೆ ಮಾಡಿಕೊಳ್ಳಲು ಮುಂದಾಗುವ ಬಾಲಾಯಾಮ ಯೋಗ ಪದ್ಧತಿ ಅಷ್ಟೇನೂ ಕಷ್ಟಕರವಲ್ಲ. ತುಂಬಾ ಸುಲಭವಾದ ರೀತಿಯಲ್ಲಿ ನಮ್ಮ ಕೈಬೆರಳುಗಳಲ್ಲಿರುವ ಉಗುರುಗಳನ್ನು ಒಂದರ ವಿರುದ್ಧ ಮತ್ತೊಂದನ್ನು ಅತ್ಯಂತ ಸಣ್ಣ ಬಲಪ್ರಯೋಗದೊಂದಿಗೆ ಉಜ್ಜುವ ಮೂಲಕ ತಲೆ ಕೂದಲಿನ ಸಾಕಷ್ಟು ಸಮಸ್ಯೆಗಳಿಗೆ ಪರಿಹಾರವನ್ನು ಕಂಡುಕೊಳ್ಳಬಹುದು. ಇದು ಕೇಳಲು ನಿಮಗೆ ಸ್ವಲ್ಪ ಆಶ್ಚರ್ಯ ಎನಿಸಿದರೂ ಸಹ ಈ ಪ್ರಯೋಗ ಮಾಡಿ ಕೂದಲಿನ ತೊಂದರೆಗಳನ್ನು ಸರಿ ಪಡಿಸಿಕೊಂಡಿರುವ ಸಾಕಷ್ಟು ಜನರ ಉದಾಹರಣೆ ನಮ್ಮ ಕಣ್ಣಮುಂದಿದೆ. ಮುಖ್ಯವಾಗಿ ಇದರಿಂದ ನೆತ್ತಿಯ ಭಾಗಕ್ಕೆ ರಕ್ತ ಸಂಚಾರ ಹೆಚ್ಚಾಗಿ ಆಮ್ಲಜನಕದ ಮಟ್ಟ ಕೂದಲಿನ ಬೇರುಗಳಿಗೆ ತಲುಪುತ್ತದೆ.

ಇದರಿಂದ ಸೊಂಪಾದ, ದಟ್ಟವಾದ ಮತ್ತು ಆರೋಗ್ಯಕರವಾದ ತಲೆಕೂದಲಿನ ಬೆಳವಣಿಗೆ ಕ್ರಮೇಣವಾಗಿ ಕಂಡು ಬರಲು ಪ್ರಾರಂಭವಾಗುತ್ತದೆ. ಆದರೆ ಯಾವುದೇ ಕಾರಣಕ್ಕೂ ಬಾಲಾಯಾಮ ಯೋಗಾಭ್ಯಾಸವನ್ನು ಇನ್ನಿತರ ಯೋಗದ ಭಂಗಿಗಳ ಜೊತೆಗೆ ಮಾಡಬಾರದು. ಇದರಿಂದ ದೇಹದಲ್ಲಿ ಹಾರ್ಮೋನ್ ಗಳ ಅಸಮತೋಲನ ಉಂಟಾಗಿ ಕೂದಲಿನ ಅನಾರೋಗ್ಯ ಮತ್ತಷ್ಟು ಹೆಚ್ಚಾಗುವ ಸಾಧ್ಯತೆ ಇರುತ್ತದೆ.

ಸಾಂಪ್ರದಾಯಿಕವಾಗಿ ಹಲವು ವರ್ಷಗಳಿಂದ ಚಾಲ್ತಿಯಲ್ಲಿರುವ ಆಯುರ್ವೇದ ಶಾಸ್ತ್ರದ ಪ್ರಕಾರ, ನಮ್ಮ ತಲೆ ಕೂದಲು ಮತ್ತು ನಮ್ಮ ಬೆರಳುಗಳಲ್ಲಿರುವ ಉಗುರುಗಳು ನಮ್ಮ ಅಸ್ಥಿ ಪಂಜರದ ರೂಪುಗೊಳ್ಳುವಿಕೆಯಲ್ಲಿ ಉಂಟಾದ ಮಲದ ಪ್ರಕಾರಗಳು ಎಂದು ಹೇಳುತ್ತಾರೆ. ಮೆಟಬಾಲಿಸಂ ಪ್ರಕ್ರಿಯೆ ನಡೆದ ನಂತರ ದೇಹದಲ್ಲಿ ಕಂಡು ಬರುವ ತ್ಯಾಜ್ಯಗಳ ಪ್ರಭಾವಗಳು ವಾತ ಮತ್ತು ಪಿತ್ತ ದೋಷದ ಅಸಮತೋಲನದಿಂದ ನೇರವಾಗಿ ನಮ್ಮ ತಲೆ ಕೂದಲು ಮತ್ತು ಉಗುರುಗಳ ಮೇಲೆ ಪ್ರಭಾವ ಬೀರುತ್ತವೆ. ಅತಿ ಹೆಚ್ಚಿನ ವಾತ ಮತ್ತು ಪಿತ್ತ ದೋಷ ಉಂಟಾದರೆ ಅದರಿಂದ ತಲೆ ಕೂದಲು ಉದುರುವಿಕೆ ಹೆಚ್ಚಾಗಿ, ತಲೆ ಹೊಟ್ಟಿನ ಸಮಸ್ಯೆ ಕಂಡು ಬಂದು, ಚಿಕ್ಕ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಾಧ್ಯತೆ ಸಹ ಇರುತ್ತದೆ. ಆದರೆ ಬಾಲಾಯಾಮ ನಮ್ಮ ದೇಹದ ಇಂತಹ ದೋಷಗಳನ್ನು ಸರಿಪಡಿಸಿ ಅತ್ಯುತ್ತಮವಾದ ಕೂದಲಿನ ಬೆಳವಣಿಗೆಯಲ್ಲಿ ಸಹಕರಿಸುತ್ತದೆ.

ಬಾಲಾಯಾಮ ಪದ್ಧತಿಯ ಅನುಸರಣೆಯಿಂದ ಉಂಟಾಗುವ ಲಾಭಗಳು:

ಬಾಲಾಯಾಮ ಪದ್ಧತಿಯ ಅನುಸರಣೆಯಿಂದ ಉಂಟಾಗುವ ಲಾಭಗಳು:

ತಲೆ ಕೂದಲಿನ ಗುಣಮಟ್ಟ ಹೆಚ್ಚಾಗುತ್ತದೆ. ತಲೆಕೂದಲಿನ ಬೇರುಗಳು ಸದೃಢವಾಗಿ ದಟ್ಟವಾದ ತಲೆಕೂದಲು ನಿಮ್ಮದಾಗುತ್ತದೆ.

ಕೂದಲಿನ ಬೆಳವಣಿಗೆ ಉತ್ತೇಜಿಸಲ್ಪಡುತ್ತದೆ.

ಅನುವಂಶೀಯವಾಗಿ ಕಂಡುಬರುವ ಕೂದಲಿನ ಸಮಸ್ಯೆಗಳಿಗೆ ಮುಕ್ತಿ ಹಾಡುತ್ತದೆ

ತಲೆಹೊಟ್ಟಿನ ಸಮಸ್ಯೆ ನಿವಾರಣೆ ಆಗುವುದರ ಜೊತೆಗೆ ನೆತ್ತಿಯ ಒಣಗುವಿಕೆ ತೊಂದರೆ ಇಲ್ಲವಾಗುತ್ತದೆ

ತುಂಬಾ ಕಡಿಮೆ ವಯಸ್ಸಿಗೆ ತಲೆ ಕೂದಲು ಬೆಳ್ಳಗಾಗುವ ಸಮಸ್ಯೆ ಇರುವುದಿಲ್ಲ

ಸೊಂಪಾದ ಕೂದಲಿನ ಜೊತೆಗೆ ಕೂದಲಿನ ಬಣ್ಣ ಕಪ್ಪು ಬಣ್ಣಕ್ಕೆ ತಿರುಗುವಂತೆ ಮಾಡುತ್ತದೆ.

ಬಾಲಾಯಾಮ ಪದ್ಧತಿಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ.......

ಬಾಲಾಯಾಮ ಪದ್ಧತಿಯನ್ನು ವೈಜ್ಞಾನಿಕ ದೃಷ್ಟಿಯಿಂದ ನೋಡುವುದಾದರೆ.......

ನಮ್ಮ ತಲೆಯಲ್ಲಿ ಕಂಡುಬರುವ ಒಂದೊಂದು ತಲೆ ಕೂದಲು ಸಹ ಕೂದಲಿನ ಕಿರುಚೀಲಗಳಿಂದ ಮೂಡಿಬರುತ್ತದೆ ಎಂದು ಹೇಳುತ್ತಾರೆ. ಕೂದಲಿನ ಬೇರಿನ ಭಾಗದಲ್ಲಿ ಕಂಡುಬರುವ ಜೀವಕೋಶಗಳು ಸಂಪೂರ್ಣ ತಲೆಕೂದಲಿನ ಆರೈಕೆಯನ್ನು ಮಾಡುತ್ತವೆ. ತಲೆಕೂದಲಿನ ಯಾವುದೇ ಭಾಗದಲ್ಲಿ ಹಾನಿಯಾದ ಜೀವಕೋಶಗಳನ್ನು ಅಥವಾ ಅಂಗಾಂಶಗಳನ್ನು ಮರು ಉತ್ಪತ್ತಿ ಮಾಡುವುದು ಅಥವಾ ಬದಲಿಸುವುದು ಇವುಗಳ ಕೆಲಸ.

ನಮ್ಮ ಇಡೀ ದೇಹ ಕಾರ್ಯನಿರ್ವಹಣೆ ಆಗುವುದು ನಮ್ಮ ಮೆದುಳು ಕೊಡುವ ಸಂಕೇತಗಳಿಂದ. ನಾವು ಉಗುರುಗಳನ್ನು ಒಂದಕ್ಕೊಂದು ಉಜ್ಜಲು ಪ್ರಾರಂಭ ಮಾಡಿದ ಕ್ಷಣದಲ್ಲಿ ಇದಕ್ಕೆ ಸಂಬಂಧಪಟ್ಟಂತೆ ಮೆದುಳಿಗೆ ಕೂದಲಿನ ಕಿರುಚೀಲಗಳಲ್ಲಿ ಕಂಡುಬರುವ ಜೀವಕೋಶಗಳಿಗೆ ಸಂಕೇತಗಳನ್ನು ಕಳುಹಿಸಲು ತಾಕೀತು ಮಾಡಿದ ಸಂದರ್ಭದಲ್ಲಿ, ಮೆದುಳು ತಕ್ಷಣವೇ ಕಾರ್ಯಪ್ರವೃತ್ತವಾಗಿ ಸಂಕೇತಗಳನ್ನು ಕಳುಹಿಸಿ ಕೂದಲಿನ ಬೆಳವಣಿಗೆಗೆ ಮತ್ತು ಹಾನಿಯಾದ ಜೀವಕೋಶಗಳನ್ನು ಸರಿಪಡಿಸುವಂತೆ ಸೂಚಿಸುತ್ತದೆ.

ಇನ್ನೊಂದು ಅಚ್ಚರಿಯ ವಿಚಾರವೆಂದರೆ ನಮ್ಮ ತಲೆಯಲ್ಲಿ ಕಂಡುಬರುವ ಅಷ್ಟು ಪ್ರಮಾಣದ ದಟ್ಟ ಕೂದಲಿನ ಕಿರುಚೀಲಗಳು ನಮ್ಮ ಉಗುರುಗಳ ಹಿಂಬದಿಯ ನರಗಳ ಅಂಚುಗಳ ಜೊತೆ ಸಂಪರ್ಕವನ್ನು ಸಾಧಿಸಿರುತ್ತವೆ. ಹೀಗಾಗಿ ಉಗುರುಗಳನ್ನು ಉಜ್ಜುವ ಮೂಲಕ ನೆತ್ತಿಯ ಭಾಗಕ್ಕೆ ರಕ್ತಸಂಚಾರವನ್ನು ಹೆಚ್ಚು ಮಾಡಿ ಕೂದಲಿನ ಮರು ಬೆಳವಣಿಗೆಯಲ್ಲಿ ಪ್ರೇರೇಪಿಸಿದಂತೆ ಆಗುತ್ತದೆ.

ಬಾಲಾಯಾಮ ಪದ್ಧತಿಯ ಅನುಸರಣೆ ಹೇಗೆ?

ಬಾಲಾಯಾಮ ಪದ್ಧತಿಯ ಅನುಸರಣೆ ಹೇಗೆ?

ಯಾವುದೇ ಒಂದು ಪ್ರಕಾರದಿಂದ ನಮಗೆ ಅಂದುಕೊಂಡ ಮಟ್ಟಿಗೆ ಗುಣಮಟ್ಟದ ಲಾಭಗಳು ಮತ್ತು ಪ್ರಯೋಜನಗಳು ಸಿಗಬೇಕು ಅಂದರೆ ನಮ್ಮ ಅನುಸರಣೆ ಅಚ್ಚುಕಟ್ಟಾಗಿರಬೇಕು. ಬಾಲಾಯಾಮ ಯೋಗ ಪದ್ಧತಿಯನ್ನು ಸರಿಯಾಗಿ ಅನುಸರಣೆ ಮಾಡುವುದರಿಂದ ಒಳ್ಳೆಯ ಗುಣಮಟ್ಟದ ತಲೆಕೂದಲನ್ನು ಪಡೆಯಬಹುದು.

ಬಾಲಾಯಾಮ ಪದ್ಧತಿಯ ಅನುಸರಣೆಗಾಗಿ ಹೀಗೆ ಮಾಡಿ:

ಬಾಲಾಯಾಮ ಪದ್ಧತಿಯ ಅನುಸರಣೆಗಾಗಿ ಹೀಗೆ ಮಾಡಿ:

ನಿಮ್ಮ ಎರಡೂ ಕೈಗಳನ್ನು ಎದೆಯ ಮಟ್ಟಕ್ಕೆ ತಂದು ಕೇವಲ ನಿಮ್ಮ ಹೆಬ್ಬೆರಳುಗಳನ್ನು ಹೊರಗೆ ಬಿಟ್ಟು ಉಳಿದ ಎಲ್ಲಾ ಬೆರಳುಗಳನ್ನು ಮುಷ್ಟಿ ಕಟ್ಟಿ ಹಿಡಿದುಕೊಳ್ಳಿ. ಈಗ ನಿಮ್ಮ ಎರಡೂ ಕೈಗಳನ್ನು ಮೇಲೆ ಕೆಳಗೆ ಆಡಿಸುತ್ತಾ, ನಿಮ್ಮ ಉಗುರುಗಳನ್ನು ಸುಮಾರು 5 ರಿಂದ 10 ನಿಮಿಷಗಳ ಕಾಲ ಉಜ್ಜುತ್ತಾ ಇರಿ. ಇನ್ನು ಈ ಪದ್ಧತಿಯನ್ನು ಅನುಸರಣೆ ಮಾಡುವ ಸಮಯ ಎಂದರೆ ಬೆಳಗ್ಗೆ ಮತ್ತು ಸಂಜೆ ತಿಂಡಿ ಮತ್ತು ಊಟ ಮಾಡುವ ಮುಂಚೆ ಖಾಲಿ ಹೊಟ್ಟೆಯಲ್ಲಿ ಮಾಡಬೇಕು. ಇದರಿಂದ ಹೆಚ್ಚಿನ ಮಟ್ಟದ ಲಾಭಗಳು ನಿಮಗೆ ಸಿಗುತ್ತವೆ. ನಿರಂತರವಾಗಿ ಪ್ರತಿ ದಿನ ಯಾರು ಈ ಪದ್ಧತಿಯನ್ನು ಇಲ್ಲಿ ಹೇಳಿದ ಹಾಗೆ ಅನುಸರಿಸುತ್ತಾರೆ ಅವರಿಗೆ ತಲೆ ಕೂದಲಿನ ಸೊಂಪಾದ ಮತ್ತು ಆರೋಗ್ಯಕರವಾದ ಬೆಳವಣಿಗೆ ಇರುತ್ತದೆ ಎಂಬುದು ಸಾಬೀತಾಗಿದೆ. ಒಂದು ವೇಳೆ ನಿಮಗೆ ತಲೆ ಕೂದಲಿನ ಸಮಸ್ಯೆಗಳು ಈಗಾಗಲೇ ಹೆಚ್ಚಾಗಿದ್ದರೆ, ನೀವು ಬಾಲಾಯಾಮ ಪದ್ಧತಿಯನ್ನು 15 ರಿಂದ 20 ನಿಮಿಷಗಳ ಕಾಲ ಮುಂದುವರೆಸಿ. ಆದರೆ ಇದು ತುಂಬಾ ನಿಧಾನಗತಿಯಲ್ಲಿ ನಿಮಗೆ ಫಲಿತಾಂಶಗಳನ್ನು ಒದಗಿಸುವುದರಿಂದ ನಿಮ್ಮಲ್ಲಿ ತಾಳ್ಮೆ ಇರಬೇಕು.

ಗಮನಿಸಬೇಕಾದ ಒಂದು ಅಂಶ

ಗಮನಿಸಬೇಕಾದ ಒಂದು ಅಂಶ

ಬಾಲಾಯಾಮ ಪದ್ಧತಿಯಿಂದ ದೇಹದಲ್ಲಿ ರಕ್ತ ಸಂಚಾರ ವೃದ್ಧಿಸುವುದರಿಂದ ಗರ್ಭಿಣಿ ಮಹಿಳೆಯರು ಮತ್ತು ಈಗಾಗಲೇ ಅಧಿಕ ರಕ್ತದ ಒತ್ತಡದ ಸಮಸ್ಯೆಯನ್ನು ಹೊಂದಿರುವವರು ಇದನ್ನು ಅನುಸರಿಸುವ ಮುಂಚೆ ಒಮ್ಮೆ ವೈದ್ಯರನ್ನು ಕೇಳಿ ಮಾಹಿತಿ ಪಡೆದುಕೊಳ್ಳಿ.


English summary

How Balayam Yoga Works for Natural Hair Growth in Kannada

Here we talking about How Balayam yoga works for natural hair growth in Kannada, read on
Story first published: Wednesday, May 5, 2021, 17:32 [IST]
X
Desktop Bottom Promotion