Just In
Don't Miss
- News
Breaking: ಬಿಬಿಎಂಪಿ ಚುನಾವಣೆಗೆ ಬಿಜೆಪಿ ಸಿದ್ಧ: ಸಿಎಂ ಬೊಮ್ಮಾಯಿ
- Movies
ವಿಚ್ಛೇದನಕ್ಕೆ ಅರ್ಜಿ ಸಲ್ಲಿಸಿದ ಬಳಿಕ ಖಾನ್ ಹೆಸರು ಕೈಬಿಟ್ಟ ಸೀಮಾ
- Finance
Gold Rate Today: ಚಿನ್ನ 400 ರೂ ಏರಿಕೆ : ಪ್ರಮುಖ ನಗರಗಳ ಮೇ 20ರ ದರ ಎಷ್ಟಿದೆ?
- Sports
CSK vs RR: ಎರಡನೇ ಸ್ಥಾನದ ಮೇಲೆ ರಾಜಸ್ಥಾನ್ ಕಣ್ಣು; ಪಂದ್ಯದ ಟಾಸ್ ವರದಿ ಮತ್ತು ಪ್ಲೇಯಿಂಗ್ ಇಲೆವೆನ್ ಮಾಹಿತಿ
- Technology
ಭಾರತದಲ್ಲಿ ಇನ್ಫಿನಿಕ್ಸ್ ನೋಟ್ 12 ಸರಣಿ ಬಿಡುಗಡೆ! ಬೆಲೆ ಎಷ್ಟು?
- Automobiles
ರೈಲಿನ ಹಾರ್ನ್ ಬಗ್ಗೆ ನಿಮಗೆಷ್ಟು ಗೊತ್ತು?: ಈ 11 ಬಗೆಯ ಹಾರ್ನ್ ಟ್ಯೂನ್ಗಳಿಗಿವೆ ವಿವಿಧ ಸಂಕೇತಗಳು!
- Education
ESIC Karnataka Recruitment 2022 : 5 ಸಹಪ್ರಾಧ್ಯಾಪಕ ಮತ್ತು ಸಹಾಯಕ ಪ್ರಾಧ್ಯಾಪಕ ಹುದ್ದೆಗಳಿಗೆ ನೇರ ಸಂದರ್ಶನ
- Travel
ಭಾರತದಲ್ಲಿ ಜೂನ್ 1 ರಿಂದ ಚಲಿಸಲಿರುವ ರೈಲುಗಳ ಸಂಪೂರ್ಣ ಪಟ್ಟಿ
ಆಯುರ್ವೇದದ ಪ್ರಕಾರ, ಕೂದಲಿನ ಆರೈಕೆ ಹೇಗಿದ್ದರೆ ಚೆನ್ನ?
ಕೂದಲು ಉದುರುವುದು, ತಲೆಹೊಟ್ಟು, ಒಡೆದ ಮತ್ತು ಸಿಕ್ಕುಗಟ್ಟಿದ ಕೂದಲು, ಮತ್ತು ಬೋಳು ಇವುಗಳು ಜನರು ದಿನನಿತ್ಯ ಎದುರಿಸುತ್ತಿರುವ ಕೆಲವು ಸಾಮಾನ್ಯ ಸಮಸ್ಯೆಗಳಾಗಿವೆ. ಈ ಎಲ್ಲಾ ಸಮಸ್ಯೆಗಳಿಗೆ ಆಯುರ್ವೇದದಲ್ಲಿ ಪರಿಹಾರವಿದೆ. ಇದು ಆಧುನಿಕ ಪರಿಹಾರಗಳಂತೆ, ಆಯುರ್ವೇದ ಪರಿಹಾರಗಳು ಯಾವುದೇ ಅಡ್ಡ ಪರಿಣಾಮಗಳನ್ನು ಉಂಟುಮಾಡುವುದಿಲ್ಲ. ಹಾಗಾದರೆ, ಆಯುರ್ವೇದದ ಪ್ರಕಾರ, ಕೂದಲ ರಕ್ಷಣೆಗೆ ಕಾಳಜಿವಹಿಸಬೇಕಾದ ಮೂಲಭೂತ ಅಂಶಗಳೇಣು ನೋಡೋಣ.

ಆಯುರ್ವೇದದ ಪ್ರಕಾರ, ಕೂದಲಿನ ಆರೈಕೆಯ ಮೂಲಭೂತ ಅಂಶಗಳು:
ಆಯುರ್ವೇದ ಪ್ರಕಾರ, ಪ್ರತಿಯೊಬ್ಬರೂ ವಿಭಿನ್ನ ದೋಷಗಳನ್ನು ಹೊಂದಿದ್ದು, ಇದರ ಪರಿಣಾಮವಾಗಿ, ಪ್ರತಿಯೊಬ್ಬರಿಗೂ ವೈಯಕ್ತಿಕಗೊಳಿಸಿದ ಚಿಕಿತ್ಸೆಯ ಅಗತ್ಯವಿದೆ. ಆದಾಗ್ಯೂ, ಎಲ್ಲರೂ ಅನುಸರಿಸಬೇಕಾದ ಕೆಲವು ಮೂಲಭೂತ ತತ್ವಗಳಿವೆ. ಅವುಗಳೆಂದರೆ:
ಮನಸ್ಸನ್ನು ಆರೋಗ್ಯವಾಗಿಡುವುದು :
ಆಯುರ್ವೇದವು ಎಲ್ಲಾ ರೋಗಗಳು ಮನಸ್ಸಿನೊಳಗೆ ಹುಟ್ಟಿಕೊಳ್ಳುತ್ತವೆ ಎಂದು ಪ್ರತಿಪಾದಿಸುತ್ತದೆ. ನಮ್ಮ ಮಾನಸಿಕ ಸ್ಥಿತಿ ಮತ್ತು ಭಾವನೆಗಳಲ್ಲಿನ ಅಸಮತೋಲನದಿಂದಾಗಿ ದೋಷದ ಅಸಮತೋಲನ ಉಂಟಾಗುತ್ತದೆ. ಅನೇಕ ಅಧ್ಯಯನಗಳು ಈ ಊಹೆಯನ್ನು ನಿಜವೆಂದು ಸಾಬೀತುಪಡಿಸಿವೆ. 2019 ರ ಅಧ್ಯಯನವು ಕೂದಲಿನ ಅಸ್ವಸ್ಥತೆಗಳು ಮನೋವೈದ್ಯಕೀಯ ಮತ್ತು ಮಾನಸಿಕ ಸಾಮಾಜಿಕ ಅಂಶಗಳನ್ನು ಹೊಂದಿರಬಹುದು ಎಂದು ಸೂಚಿಸಿದೆ. ಕೂದಲಿನ ಬೆಳವಣಿಗೆಗೆ ಬಂದಾಗಲೂ ನಿಮ್ಮ ಮಾನಸಿಕ ಆರೋಗ್ಯದ ಬಗ್ಗೆ ಕಾಳಜಿ ವಹಿಸುವುದು ಆರೋಗ್ಯಕರವಾಗಿರಲು ಮೊದಲ ಹೆಜ್ಜೆಯಾಗಿದೆ.

ಆರೋಗ್ಯಕರ ಆಹಾರ ಸೇವನೆ:
ನಿಮ್ಮ ಕೂದಲನ್ನು ಗಟ್ಟಿಯಾಗಿ ಮತ್ತು ದೀರ್ಘಕಾಲ ಬಾಳಿಕೆ ಬರುವಂತೆ ಮಾಡಲು ಬಯಸಿದರೆ ಆರೋಗ್ಯಕರ ಆಹಾರ ಸೇವನೆ ಅಗತ್ಯ. ಆರೋಗ್ಯಕರ ಆಹಾರಗಳು ಕೂದಲಿನ ಕಿರುಚೀಲಗಳನ್ನು ಒಳಗಿನಿಂದ ಪೋಷಿಸುತ್ತವೆ ಮತ್ತು ಅವುಗಳನ್ನು ಹೆಚ್ಚು ಸ್ಥಿತಿಸ್ಥಾಪಕವಾಗಿಸುತ್ತದೆ.
ದೋಷ-ನಿರ್ದಿಷ್ಟ, ಕಾಲೋಚಿತವಾಗಿ ಲಭ್ಯವಿರುವ ಹಣ್ಣುಗಳು ಮತ್ತು ತರಕಾರಿಗಳನ್ನು ತಿನ್ನಲು ಖಚಿತಪಡಿಸಿಕೊಳ್ಳಿ.ಇವುಗಳು ದೇಹವನ್ನು ಆರೋಗ್ಯಕರವಾಗಿ ಮತ್ತು ಬಲವಾಗಿಡುತ್ತವೆ. ಜೊತೆಗೆ ವಿಭಿನ್ನ ದೋಶಗಳ ನಡುವೆ ಉತ್ತಮ ಸಮತೋಲನವನ್ನು ಕಾಪಾಡಿಕೊಳ್ಳಲು ಸಹಾಯ ಮಾಡುತ್ತದೆ.

ಕೂದಲಿಗೆ ಎಣ್ಣೆ ಹಚ್ಚುವುದು ಮತ್ತು ತೊಳೆಯುವುದು:
ಕೂದಲಿನ ಎಣ್ಣೆ ಕಿರುಚೀಲಗಳು ಮತ್ತು ನೆತ್ತಿಯನ್ನು ಪೋಷಿಸುತ್ತದೆ ಮತ್ತು ತೇವಾಂಶವನ್ನು ಉಳಿಸಿಕೊಳ್ಳಲು ಸಹಾಯ ಮಾಡುತ್ತದೆ, ಇದು ಕೂದಲು ಉದುರುವಿಕೆಯನ್ನು ತಡೆಯಲು ಅವಶ್ಯಕವಾಗಿದೆ. ನಿಮ್ಮ ಕೂದಲನ್ನು ತೊಳೆದ ನಂತರ ನೀವು ಯಾವಾಗಲೂ ಎಣ್ಣೆಯನ್ನು ಹಚ್ಚಬೇಕು ಮತ್ತು ಈ ಚಟುವಟಿಕೆಯನ್ನು ನಿಮ್ಮ ಕೂದಲ ರಕ್ಷಣೆಯ ದಿನಚರಿಯ ಭಾಗವಾಗಿ ಮಾಡಿಕೊಳ್ಳಬೇಕು. ಇದಕ್ಕಾಗಿ ನೀವು ತೆಂಗಿನೆಣ್ಣೆ ಅಥವಾ ಎಳ್ಳಿನ ಎಣ್ಣೆಯನ್ನು ಬಳಸಬಹುದು ಅಥವಾ ನೆಲ್ಲಿ, ಗುಲಾಬಿ ದಳಗಳು, ಇತ್ಯಾದಿ ಸೇರಿದಂತೆ ಹಲವಾರು ಆಯುರ್ವೇದ ಗಿಡಮೂಲಿಕೆಗಳ ಮಿಶ್ರಣವನ್ನು ಹೊಂದಿರುವ ಎಣ್ಣೆಯನ್ನು ಖರೀದಿಸಬಹುದು. ನಿಮ್ಮ ಕೂದಲನ್ನು ವಾರಕ್ಕೆ ಎರಡು ಬಾರಿ ತೊಳೆದು, ನಂತರ ಎಣ್ಣೆಯನ್ನು ಹಾಕಲು ಸೂಚಿಸಲಾಗುತ್ತದೆ. ಅದಕ್ಕಿಂತ ಹೆಚ್ಚಾಗಿ ಕೂದಲನ್ನು ತೊಳೆಯುವುದರಿಂದ ನೆತ್ತಿಯ ನೈಸರ್ಗಿಕ ತೈಲಗಳು ಕಡಿಮೆಯಾಗಿ, ಸರಿಯಾದ ಕೂದಲಿನ ಬೆಳವಣಿಗೆಯನ್ನು ನಿರುತ್ಸಾಹಗೊಳಿಸಬಹುದು.

ನೆತ್ತಿಯ ಮಸಾಜ್:
ಆಯುರ್ವೇದವು ನಿಮ್ಮ ನೆತ್ತಿಯನ್ನು ತೊಳೆಯುವ ಮೊದಲು ಬೆಚ್ಚಗಿನ ಎಣ್ಣೆಯಿಂದ ಯಾವಾಗಲೂ ಮಸಾಜ್ ಮಾಡಬೇಕು ಎಂದು ಶಿಫಾರಸು ಮಾಡುತ್ತದೆ. ಗಿಡಮೂಲಿಕೆಗಳ ಎಣ್ಣೆಯಿಂದ ನೆತ್ತಿಯನ್ನು ಮೃದುವಾಗಿ ಮಸಾಜ್ ಮಾಡುವುದರಿಂದ ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಬಹುದು ಮತ್ತು ಬೇರುಗಳಿಂದ ತುದಿಯವರೆಗೆ ಕೂದಲನ್ನು ಬಲಪಡಿಸಬಹುದು.

ಗಿಡಮೂಲಿಕೆಗಳಿಂದ ಕೂದಲಿನ ಆರೈಕೆ:
ಅಂಟುವಾಳ (ಸಪಿಂಡಸ್ ಮುಕೊರೊಸ್ಸಿ) ಮತ್ತು ಶೀಗೆಕಾಯಿ (ಸೆನೆಗಾಲಿಯಾ ರುಗಾಟಾ) ಕೂದಲಿನ ಬೆಳವಣಿಗೆಯನ್ನು ಉತ್ತೇಜಿಸಲು ಮತ್ತು ಕೂದಲು ಉದುರುವಿಕೆಯನ್ನು ತಡೆಯಲು ಆಯುರ್ವೇದದಲ್ಲಿ ಎರಡು ಜನಪ್ರಿಯ ಗಿಡಮೂಲಿಕೆಗಳಾಗಿವೆ. ಈ ಸಸ್ಯಗಳ ಹಣ್ಣುಗಳನ್ನು ಬೆಚ್ಚಗಿನ ನೀರಿಗೆ ಸೇರಿಸಿದಾಗ, ಅವು ನೊರೆ, ಸಾಬೂನು, ಶಾಂಪೂ ತರಹದ ಉತ್ಪನ್ನವಾಗಿ ಬದಲಾಗುತ್ತವೆ. ಆದರೆ ಈ ವಿಧಾನದ ಮೂಲಕ ಹೋಗಲು ಬಯಸದಿದ್ದರೆ, ಈ ಅಂಶಗಳನ್ನು ಒಳಗೊಂಡಿರುವ ಆಯುರ್ವೇದ ಶಾಂಪೂವನ್ನು ನೀವು ಸುಲಭವಾಗಿ ಬಳಸಬಹುದು.
ಈ ಸರಳ ಸಲಹೆಗಳನ್ನು ಅನುಸರಿಸಿ ಮತ್ತು ನಿಮ್ಮ ಕೂದಲ ರಕ್ಷಣೆಯ ಕಟ್ಟುಪಾಡು ನಿಮ್ಮ ಕೂದಲಿನ ಆರೋಗ್ಯಕ್ಕೆ ವ್ಯತ್ಯಾಸವನ್ನುಂಟುಮಾಡುತ್ತದೆ. ಆದಾಗ್ಯೂ, ಈ ಎಲ್ಲಾ ಪರಿಹಾರಗಳನ್ನು ಮಾಡುವುದರ ಜೊತೆಗೆ ನೀವು ವ್ಯಾಯಾಮ ಮತ್ತು ಆರೋಗ್ಯಕರ ಆಹಾರವನ್ನು ನಿರ್ವಹಿಸುತ್ತೀರಿ ಎಂದು ಖಚಿತಪಡಿಸಿಕೊಳ್ಳಿ.